ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಮಾರುತಿ ಸುಜುಕಿ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಎರ್ಟಿಗಾ ಮತ್ತು ಎರ್ಟಿಗಾ ಪ್ರೀಮಿಯಂ ಮಾದರಿಯಾದ ಎಕ್ಸ್ಎಲ್6 2022ರ ಆವೃತ್ತಿಯನ್ನು ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರುಗಳ ಬಿಡುಗಡೆಗೂ ಮುನ್ನ ಕಂಪನಿಯು ಎಕ್ಸ್ಎಲ್6 ಮಾದರಿಯ ಹೊಸ ಟೀಸರ್ ಪ್ರಕಟಿಸಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

2022ರ ಎಕ್ಸ್ಎಲ್6 ಮಾದರಿಯು ಎರ್ಟಿಗಾ ಮಾದರಿಯೆಂತೆ ಹಲವಾರು ಹೊಸ ಸೌಲಭ್ಯಗಳೊಂದಿಗೆ ಹಲವು ಹೊಸ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳುತ್ತಿದ್ದು, ಎಕ್ಸ್ಎಲ್6 ಮಾದರಿಗಾಗಿ ಕಂಪನಿಯು ಈ ಬಾರಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸೇರಿದಂತೆ ಎಂಜಿನ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಇದರೊಂದಿಗೆ ಎಕ್ಸ್‌ಎಲ್6 ಮಾದರಿಗಾಗಿ ಕಂಪನಿಯು ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಬಂಪರ್ ಮತ್ತು ಹೆಡ್‌ಲ್ಯಾಂಪ್ ಯುನಿಟ್ ಬದಲಾಯಿಸುತ್ತಿದ್ದು, ಬಾಡಿ ಕ್ಲಾಡಿಂಗ್ ಮತ್ತು ಅಲಾಯ್ ವ್ಹೀಲ್ ವಿನ್ಯಾಸಗಳು ಹೊಸ ಕಾರಿಗೆ ಮೆರಗು ನೀಡಲಿವೆ.

ಇನ್ನು ಹೊಸ ಕಾರುಗಳ ಬಿಡುಗಡೆಗೂ ಮುನ್ನ ಕಂಪನಿಯು ರೂ.11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದ್ದು, 2022ರ ಆವೃತ್ತಿಯಲ್ಲಿ ಕಂಪನಿಯು ವಿವಿಧ ಪ್ರೀಮಿಯಂ ಫೀಚರ್ಸ್ ಜೊತೆ ಎಂಜಿನ್ ಬದಲಾವಣೆಯ ಸುಳಿವು ನೀಡಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

2022ರ ಎರ್ಟಿಗಾ ಮತ್ತು ಎಕ್ಸ್ಎಲ್6 ಮಾದರಿಯಲ್ಲಿ ಪ್ರಮುಖವಾಗಿ ಎಂಜಿನ್ ವಿಭಾಗದಲ್ಲಿ ಬದಲಾವಣೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸುತ್ತಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚುವರಿಯಾಗಿ 10 ಬಿಎಚ್‌ಪಿ ಉತ್ಪಾದನೆಯೊಂದಿಗೆ ಇಂಧನದಲ್ಲೂ ಉತ್ತಮ ದಕ್ಷತೆ ಹೊಂದಿದ್ದು, ಹೊಸ ಎಂಜಿನ್ ಮಾದರಿಯು 113.4 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

103.5 ಬಿಎಚ್‌ಪಿ ಉತ್ಪಾದಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಮಾದರಿಗಿಂತಲೂ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಹೆಚ್ಚು ಶಕ್ತಿಶಾಲಿಯಾಗಿದ್ದು, ಹೊಸ ಎಂಜಿನ್ ಮಾದರಿಯನ್ನು ಕೇವಲ ಎರ್ಟಿಗಾ ಮಾದರಿಯಲ್ಲಿ ಅಲ್ಲದೆ ಮಾರ್ಟಿಗಾ ಮುಂದುವರಿದ ಆವೃತ್ತಿ ಎಕ್ಸ್ಎಲ್6 ಮಾದರಿಯು ಸಹ ಅಳವಡಿಸಲಾಗುತ್ತಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಇದರ ಜೊತೆಗೆ ಹೊಸ ಕಾರಿನಲ್ಲಿ ಮಾರುತಿ ಸುಜಕಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಬಹುದಾಗಿದೆ. ಕಂಪನಿಯು ಈ ಹಿಂದಿನ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮಾದರಿಯನ್ನು ಹಳೆಯ ಮಾದರಿಯಲ್ಲಿ ತೆಗೆದುಹಾಕಿದ್ದು, ಇದಕ್ಕಾಗಿಯೇ ಹೊಸ ಮಾದರಿಯು ಉತ್ತಮ ಎಂಜಿನ್ ದಕ್ಷತೆಯನ್ನು ಖಾತ್ರಿಪಡಿಸಲಿದೆ ಎನ್ನಬಹುದು.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಮಾರುತಿ ಸುಜುಕಿಯು ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಬಿಎಸ್-6 ಜಾರಿ ನಂತರ ಕಂಪನಿಯು ಎಲ್ಲಾ ಕಾರು ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಸದ್ಯಕ್ಕೆ ಪೆಟ್ರೋಲ್, ಪೆಟ್ರೋಲ್ ಮಾದರಿಗಳೊಂದಿಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಮತ್ತು ಸಿಎನ್‌ಜಿ ಆಯ್ಕೆಗಳನ್ನು ನೀಡುತ್ತಿದ್ದು, ಬಿಡುಗಡೆಯಾಗಲಿರುವ ಎರ್ಟಿಗಾ ಹೊಸ ಮಾದರಿಯಲ್ಲೂ ಕಂಪನಿಯು ಪೆಟ್ರೋಲ್ ಮಾದರಿಯ ಜೊತೆ ಸಿಎನ್‌ಜಿ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಎರ್ಟಿಗಾ ಕಾರಿನ ವಿಎಕ್ಸ್ಐ ಮತ್ತು ಜೆಎಕ್ಸ್ಐ ಮಾದರಿಗಳನ್ನು ಆಧರಿಸಿ ಎರ್ಟಿಗಾ ಸಿಎನ್‌ಜಿ ಖರೀದಿಗೆ ಲಭ್ಯವಿರಲಿದ್ದು, ಸಿಎನ್‌ಜಿ ಮಾದರಿಯು ಹೆಚ್ಚಿನ ಮಟ್ಟದ ಮೈಲೇಜ್ ಮೂಲಕ ವ್ಯಯಕ್ತಿಕ ಮತ್ತು ಕ್ಯಾಬ್ ಸೇವಾ ಮಾದರಿಗಳ ಆಯ್ಕೆಗೆ ಸಹಕಾರಿಯಾಗಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

2022ರ ಎರ್ಟಿಗಾ ಮಾದರಿಯಲ್ಲಿ ಕಂಪನಿಯು ಹೊರ ಭಾಗದಲ್ಲಿ ಮತ್ತು ಒಳಭಾಗದ ತಾಂತ್ರಿಕ ಸೌಲಭ್ಯದಲ್ಲೂ ಕೆಲವು ಬದಲಾವಣೆಗಳನ್ನು ಮಾಡಬಹುದಾಗಿದ್ದು, ಹೊಸ ಕಾರಿನ ಒಳಭಾದಲ್ಲಿ ಈ ಬಾರಿ ಹೊಸ 7 ಇಂಚಿನ ಹೊಸ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಸೌಲಭ್ಯವನ್ನು ನೀಡಲಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಹೊಸ ಕಾರಿನ ಚಾಲನೆಯನ್ನು ಮತ್ತಷ್ಟು ಸರಳವಾಗಿಸಲು ಕಂಪನಿಯು ಹೊಸ ಸುಜುಕಿ ಕನೆಕ್ಟ್ ಸರ್ಪೊಟ್ ಮಾಡುವ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ನೀಡಲಾಗಿದ್ದು, ಹೊಸ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಈ ಮೂಲಕ ಎರ್ಟಿಗಾ ಮಾದರಿಯು ಇದುವರೆಗೆ ಭಾರತದಲ್ಲಿ ಸುಮಾರು 7.50 ಲಕ್ಷ ಗ್ರಾಹಕರ ಹೊಂದಿರುವ ಪ್ರಮುಖ ಎಂಪಿವಿ ಮಾದರಿಯಾಗಿ ಹೊರಹೊಮ್ಮಿದ್ದು, ಅದು ವಿನೂತನ ಶೈಲಿ, ಸ್ಥಳಾವಕಾಶ, ತಂತ್ರಜ್ಞಾನ, ಸುರಕ್ಷತೆ, ಸೌಕರ್ಯ ಮತ್ತು ಒಟ್ಟಿಗೆ ಪ್ರಯಾಣಿಸುವ ಅನುಕೂಲತೆಯನ್ನು ಮರು ವ್ಯಾಖ್ಯಾನಿಸುತ್ತದೆ.

ಹಲವಾರು ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2022ರ ಎಕ್ಸ್ಎಲ್6

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಸದ್ಯ ಉತ್ತಮ ಬೇಡಿಕೆ ಪಡೆದುಕೊಂಡಿರುವ ಎರ್ಟಿಗಾ ಮಾದರಿಯ ಪ್ರಮುಖ ಎರಡು ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಸಾಮಾನ್ಯ ಎರ್ಟಿಗಾ ಮಾದರಿಯು ಮಾರುತಿ ಸುಜುಕಿ ಅರೆನಾ ಮಾರಾಟ ಮಳಿಗೆಯಲ್ಲಿ ಪ್ರೀಮಿಯಂ ಆವತ್ತಿಯಾದ ಎಕ್ಸ್‌ಎಲ್ 6 ಮಾದರಿಯು ಮಾರುತಿ ನೆಕ್ಸಾ ಮಾರಾಟ ಮಳಿಗೆಗಳಲ್ಲಿ ಮಾರಾಟಗೊಳ್ಳುತ್ತಿದೆ.

ಮಾರುತಿ ಸುಜುಕಿ ಕಂಪನಿಯು 2022ರ ಪ್ರಮುಖ ಕಾರು ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಎರ್ಟಿಗಾ ಮಾದರಿಯ ಸಹ ಹೈ ಎಂಡ್ ಮಾದರಿಯಲ್ಲಿ 6 ಏರ್‌ಬ್ಯಾಗ್ ಮತ್ತು ಆಲ್‌ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಇನ್ನು ಕೆಲವು ಪ್ರಮುಖ ಸೇಫ್ಟಿ ಫೀಚರ್ಸ್ ಹೊಂದಲಿದೆ.

Article Published On: Monday, April 11, 2022, 11:56 [IST]
English summary
New maruti suzuki xl6 india launch teased details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+