ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಮಾರುತಿ ಸುಜುಕಿ(Maruti Suzuki) ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಎಂಪಿವಿ ಮಾದರಿಯಾದ ಎಕ್ಸ್ಎಲ್6 ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೊಸ ಎಕ್ಸ್ಎಲ್6 ಮಾದರಿಯು ಎರ್ಟಿಗಾ ಪ್ರೀಮಿಯಂ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ನೆಕ್ಸಾ ಡೀಲರ್ಸ್ ಮೂಲಕ ಮಾರಾಟಗೊಳ್ಳುತ್ತಿರುವ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಈ ಬಾರಿ ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.29 ಲಕ್ಷ ಬೆಲೆ ಹೊಂದಿದ್ದು, ಹೊಸ ಬದಲಾವಣೆಗಳು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

2022ರ ಎಕ್ಸ್ಎಲ್6 ಮಾದರಿಯು ಅಲ್ಫಾ, ಜೆಟಾ, ಅಲ್ಫಾ ಪ್ಲಸ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ರೂ. 11.29 ಲಕ್ಷದಿಂದ ಆರಂಭಗೊಂಡ ಟಾಪ್ ಎಂಡ್ ಮಾದರಿಗೆ ರೂ. 14.55 ಲಕ್ಷ ಬೆಲೆ ಹೊಂದಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಇದರ ಜೊತೆಗೆ ಕಂಪನಿಯು ಹೊಸ ಕಾರಿನ ಮಾಲೀಕತ್ವಕ್ಕಾಗಿ ಎರಡು ಆಯ್ಕೆಗಳನ್ನು ನೀಡಿದ್ದು, ಒಂದು ಸ್ವಂತಕ್ಕಾಗಿ ಖರೀದಿ ಮಾಡುವುದು ಮತ್ತು ಮತ್ತೊಂದು ಚಂದಾದಾರಿಕೆಯ ಮೇಲೂ ಕಾರು ಮಾಲೀಕತ್ವಕ್ಕೆ ಅವಕಾಶ ನೀಡಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಮಾರತಿ ಸುಜುಕಿ ಕಂಪನಿಯು ಈಗಾಗಲೇ ತನ್ನ ಪ್ರಮುಖ ಕಾರುಗಳನ್ನು ಚಂದಾದಾರಿಕೆ ಯೋಜನೆ ಅಡಿ ಆಸಕ್ತ ಗ್ರಾಹಕರಿಗೆ ಮಾಲೀಕತ್ವ ನೀಡುತ್ತಿದ್ದು, ಇದೀಗ ಹೊಸ ಎಕ್ಸ್ಎಲ್6 ಮಾದರಿಯು ಸಹ ಚಂದಾದಾರಿಕೆ ಯೋಜನೆ ಅಡಿ ಆಯ್ಕೆ ಲಭ್ಯವಿದೆ. ಹೊಸ ಕಾರಿನ ಚಂದಾದಾರಿಕೆಯು ಪ್ರತಿ ತಿಂಗಳು ರೂ.24,499 ರಿಂದ ಆರಂಭಗೊಳ್ಳಲಿದ್ದು, ಆಸಕ್ತ ಗ್ರಾಹಕರನ್ನು ಹೊಸ ಕಾರನ್ನು ಬೇಡಿಕೆಗೆ ಅನುಗುಣವಾಗಿ 12 ತಿಂಗಳು, 24 ತಿಂಗಳು, 36 ತಿಂಗಳು, 48 ತಿಂಗಳು ಆಯ್ಕೆ ಮಾಡಬಹುದು.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಚಂದಾದಾರಿಕೆ ಯೋಜನೆ ಅಡಿ ಖರೀದಿಸುವ ಕಾರುಗಳ ದರ, ನೋಂದಣಿ, ರಸ್ತೆ ತೆರಿಗೆ, ಇನ್ಸುರೆನ್ಸ್ ಮತ್ತು ನಿರ್ವಹಣೆಯ ವೆಚ್ಚಗಳನ್ನು ಒಳಗೊಂಡಿರಲಿದ್ದು, ಚಂದಾದಾರಿಕೆ ಯೋಜನೆ ಅಡಿ ಆಯ್ಕೆ ಮಾಡುವ ಪ್ರತಿ ಕಾರು ಮಾದರಿಯು ಸಹ ಹೊಸ ಮಾದರಿಗಳನ್ನೇ ನೀಡಲಾಗುತ್ತದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೀಗಾಗಿ ಹೊಸ ಕಾರು ಮಾಲೀಕತ್ವಕ್ಕೆ ಇದೀಗ ಚಂದಾದಾರಿಕೆ ಕೂಡಾ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಕಾರು ಅವಶ್ಯವಿದ್ದಾಗ ಮಾಲೀಕತ್ವ ಪಡೆದುಕೊಂಡು ಅವಶ್ಯವಿಲ್ಲವೆನಿಸಿದಾಗ ಹಿಂದಿರುಗಿಸಬಹುದಾಗಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಇನ್ನು ಹೊಸ ಕಾರು ಮಾದರಿಯು ಈ ಬಾರಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನಲ್ಲಿ ಉನ್ನತೀಕರಿಸಿದ ಕ್ರೋಮ್ ಗ್ರಿಲ್ ಮತ್ತು ಟೈಲ್ ಗೇಟ್, 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಮತ್ತು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು ಪ್ರಮುಖವಾಗಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೊಸ ಕಾರಿನಲ್ಲಿ ಹೊಸ ಎರ್ಟಿಗಾ ಮಾದರಿಯಲ್ಲಿ ನೀಡಲಾಗಿರುವ ನವೀಕೃತ ಪೆಟ್ರೋಲ್ ಎಂಜಿನ್ ಮಾದರಿಯನ್ನೇ ಇದರಲ್ಲೂ ಅಳವಡಿಸಲಾಗಿದ್ದು, ಈ ಹಿಂದಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸಲಾಗಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚು ಇಂಧನ ದಕ್ಷತೆ ಹೊಂದಿದ್ದು, ಹೊಸ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 103 ಬಿಎಚ್‌ಪಿ ಮತ್ತು 136.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೊಸ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್ಎಲ್6 ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ ಮ್ಯಾನುವಲ್ ಮಾದರಿಯು 20.97 ಕಿ.ಮೀ ಮತ್ತು ಆಟೋಮ್ಯಾಟಿಕ್ ಮಾದರಿಯು 20.27 ಕಿ.ಮೀ ಮೈಲೇಜ್ ನೀಡಲಿದ್ದು, ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟರ್ ಬಳಕೆ ಮಾಡಲಾಗಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸುಜುಕಿ ಕಾರ್ ಕೆನೆಕ್ಟ್, ಟೆಲಿಸ್ಕೋಫಿಕ್ ಅಡ್ಜೆಸ್ಮೆಂಟ್ ಹೊಂದಿರುವ ಸ್ಟೀರಿಂಗ್ ವ್ಹೀಲ್, ಆ್ಯಂಬಿಯೆಂಟ್ ಲೈಟಿಂಗ್ಸ್, ಹೊಸದಾಗಿ ಫ್ರಂಟ್ ಡೋರ್ ಲ್ಯಾಂಪ್ಸ್, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್, ಆಟೋಮ್ಯಾಟಿಕ್ ಎಸಿ ಮತ್ತು ಮುಂಭಾಗದಲ್ಲಿ ವೆಂಟಿಲೆಟೆಡ್ ಸೀಟ್ ಹೊಂದಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ 4 ಏರ್‌ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇಎಸ್‌ಪಿ ಮತ್ತು ಹಿಲ್ ಹೋಲ್ಡ್ ಅಸಿಸ್ಟ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಪ್ರಮುಖ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಅತ್ಯತ್ತಮ ಪ್ರೀಮಿಯಂ ಫೀಚರ್ಸ್ ಒಳಗೊಂಡ 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಬಿಡುಗಡೆ

ಹೊಸ ಕಾರಿನಲ್ಲಿ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಹೊಸ ಕಾರಿನಲ್ಲಿ ಈ ಬಾರಿ ಸಿಲ್ವರ್, ಬ್ರೌನ್ ಮತ್ತು ರೆಡ್ ಬಣ್ಣಗಳಿಗೆ ಬ್ಲ್ಯಾಕ್ ರೂಫ್ ಡ್ಯುಯಲ್ ಟೋನ್ ಆಯ್ಕೆ ನೀಡಲಾಗಿದ್ದು, ಹೊಸ ಕಾರು ನಿಕಟ ಪ್ರತಿಸ್ಪರ್ಧಿಯಾದ ಕಿಯಾ ಕಾರೆನ್ಸ್ ಮಾದರಿಗೆ ಪೈಪೋಟಿಯಾಗಿ ಹೊಸ ಫೀಚರ್ಸ್ ಪಡೆದುಕೊಂಡಿದೆ.

Most Read Articles

Kannada
English summary
New maruti suzuki xl6 launched in india at rs 11 29 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X