Just In
Don't Miss!
- Sports
ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್
- News
ಯುಎಪಿಎ ಅಡಿ ಯಾವುದೇ ವಕ್ತಿಯನ್ನು ವಿಚಾರಣೆಗೊಳಪಡಿಸಬಹುದು-ಹೈಕೋರ್ಟ್ ಆದೇಶ
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ವೆಂಟಿಲೆಟೆಡ್ ಸೀಟ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ ಹೊಸ ಎಕ್ಸ್‌ಎಲ್6
ಹೊಸ ಎರ್ಟಿಗಾ ಬಿಡುಗಡೆಯ ನಂತರ ಮಾರುತಿ ಸುಜುಕಿ ಕಂಪನಿಯು ಶೀಘ್ರದಲ್ಲಿಯೇ ಎರ್ಟಿಗಾ ಪ್ರೀಮಿಯಂ ಮಾದರಿಯಾದ ಎಕ್ಸ್ಎಲ್6 2022ರ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಫೀಚರ್ಸ್ ಹೊಂದಿರುವುದು ಖಚಿತವಾಗಿದೆ.

2022ರ ಎಕ್ಸ್ಎಲ್6 ಮಾದರಿಯು ಎರ್ಟಿಗಾ ಮಾದರಿಯೆಂತೆಯೇ ಹಲವಾರು ಹೊಸ ಸೌಲಭ್ಯಗಳೊಂದಿಗೆ ಹಲವು ಹೊಸ ಪ್ರೀಮಿಯಂ ಫೀಚರ್ಸ್ ಪಡೆದುಕೊಳ್ಳುತ್ತಿದ್ದು, ಎಕ್ಸ್ಎಲ್6 ಮಾದರಿಗಾಗಿ ಕಂಪನಿಯು ಈ ಬಾರಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ಉನ್ನತೀಕರಿಸಿದ ಎಂಜಿನ್ ಸೇರಿದಂತೆ ಮಹತ್ವದ ಬದಲಾವಣೆಯ ಸುಳಿವು ನೀಡಿದೆ.

ಎಕ್ಸ್ಎಲ್6 ಮಾದರಿಗಾಗಿ ಮಾರುತಿ ಸುಜುಕಿ ಕಂಪನಿಯು ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರಿಲ್, ಬಂಪರ್ ಮತ್ತು ಹೆಡ್‌ಲ್ಯಾಂಪ್ ಯುನಿಟ್ ಬದಲಾಯಿಸುತ್ತಿದ್ದು, ಬಾಡಿ ಕ್ಲಾಡಿಂಗ್ ಮತ್ತು ಅಲಾಯ್ ವ್ಹೀಲ್ ವಿನ್ಯಾಸಗಳು ಹೊಸ ಕಾರಿಗೆ ಮೆರಗು ನೀಡಲಿವೆ.

2022ರ ಆವೃತ್ತಿಯಲ್ಲಿ ಕಂಪನಿಯು ವಿವಿಧ ಪ್ರೀಮಿಯಂ ಫೀಚರ್ಸ್ ಜೊತೆ ಎಂಜಿನ್ ಬದಲಾವಣೆಯ ಸುಳಿವು ನೀಡಿದ್ದು, ಹೊರ ಭಾಗದಲ್ಲಿ ಮತ್ತು ಒಳಭಾಗದ ತಾಂತ್ರಿಕ ಸೌಲಭ್ಯದಲ್ಲೂ ಕೆಲವು ಬದಲಾವಣೆಗಳನ್ನು ಮಾಡಬಹುದಾಗಿದೆ.

ಹೊಸ ಕಾರಿನ ಒಳಭಾದಲ್ಲಿ ಈ ಬಾರಿ ಹೊಸ 7 ಇಂಚಿನ ಹೊಸ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಸೌಲಭ್ಯದೊಂದಿಗೆ ಫ್ರಂಟ್ ವೆಂಟಿಲೆಟೆಡ್ ಸೀಟ್‌ಗಳನ್ನು ನೀಡಲಾಗಿದ್ದು, ಆಸನವನ್ನು ಯಾವಗಲೂ ತಂಪಾಗಿಡಲು ಸಹಕಾರಿಯಾಗಿದೆ.

ಜೊತೆಗೆ ಹೊಸ ಕಾರಿನ ಚಾಲನೆಯನ್ನು ಮತ್ತಷ್ಟು ಸರಳವಾಗಿಸಲು ಕಂಪನಿಯು ಹೊಸ ಸುಜುಕಿ ಕನೆಕ್ಟ್ ಸರ್ಪೊಟ್ ಮಾಡುವ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ನೀಡಲಾಗಿದ್ದು, ಹೊಸ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

2022ರ ಎರ್ಟಿಗಾ ಮತ್ತು ಎಕ್ಸ್ಎಲ್6 ಮಾದರಿಯಲ್ಲಿ ಪ್ರಮುಖವಾಗಿ ಎಂಜಿನ್ ವಿಭಾಗದಲ್ಲಿ ಬದಲಾವಣೆಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಪ್ರಸ್ತುತ ಮಾರುಕಟ್ಟೆಯಲ್ಲಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಮಾದರಿಯನ್ನು ಅಳವಡಿಸುತ್ತಿದೆ.

ಹೊಸ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಮಾದರಿಗಿಂತಲೂ ಹೆಚ್ಚುವರಿಯಾಗಿ 10 ಬಿಎಚ್‌ಪಿ ಉತ್ಪಾದನೆಯೊಂದಿಗೆ ಇಂಧನದಲ್ಲೂ ಉತ್ತಮ ದಕ್ಷತೆ ಹೊಂದಿದ್ದು, ಹೊಸ ಎಂಜಿನ್ ಮಾದರಿಯು 113.4 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

103.5 ಬಿಎಚ್‌ಪಿ ಉತ್ಪಾದಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಮಾದರಿಗಿಂತಲೂ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಹೆಚ್ಚು ಶಕ್ತಿಶಾಲಿಯಾಗಿದ್ದು, ಹೊಸ ಎಂಜಿನ್ ಮಾದರಿಯನ್ನು ಕೇವಲ ಎರ್ಟಿಗಾ ಮಾದರಿಯಲ್ಲಿ ಅಲ್ಲದೆ ಮಾರ್ಟಿಗಾ ಮುಂದುವರಿದ ಆವೃತ್ತಿ ಎಕ್ಸ್ಎಲ್6 ಮಾದರಿಯು ಸಹ ಅಳವಡಿಸಲಾಗುತ್ತಿದೆ.

ಇದರ ಜೊತೆಗೆ ಹೊಸ ಕಾರಿನಲ್ಲಿ ಮಾರುತಿ ಸುಜಕಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಪ್ಯಾಡಲ್ ಶಿಫ್ಟರ್ ಹೊಂದಿರುವ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡುತ್ತಿದೆ. ಕಂಪನಿಯು ಈ ಹಿಂದಿನ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮಾದರಿಯನ್ನು ಹಳೆಯ ಮಾದರಿಯಲ್ಲಿ ತೆಗೆದುಹಾಕಿದ್ದು, ಇದಕ್ಕಾಗಿಯೇ ಹೊಸ ಮಾದರಿಯು ಉತ್ತಮ ಎಂಜಿನ್ ದಕ್ಷತೆಯನ್ನು ಖಾತ್ರಿಪಡಿಸಲಿದೆ ಎನ್ನಬಹುದು.

ಮಾರುತಿ ಸುಜುಕಿ ಕಾರುಗಳ ಮಾರಾಟದಲ್ಲಿ ಸದ್ಯ ಉತ್ತಮ ಬೇಡಿಕೆ ಪಡೆದುಕೊಂಡಿರುವ ಎರ್ಟಿಗಾ ಮಾದರಿಯ ಪ್ರಮುಖ ಎರಡು ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಸಾಮಾನ್ಯ ಎರ್ಟಿಗಾ ಮಾದರಿಯು ಮಾರುತಿ ಸುಜುಕಿ ಅರೆನಾ ಮಾರಾಟ ಮಳಿಗೆಯಲ್ಲಿ ಪ್ರೀಮಿಯಂ ಆವತ್ತಿಯಾದ ಎಕ್ಸ್‌ಎಲ್ 6 ಮಾದರಿಯು ಮಾರುತಿ ನೆಕ್ಸಾ ಮಾರಾಟ ಮಳಿಗೆಗಳಲ್ಲಿ ಮಾರಾಟಗೊಳ್ಳುತ್ತಿದೆ.

ಮಾರುತಿ ಸುಜುಕಿ ಕಂಪನಿಯು 2022ರ ಪ್ರಮುಖ ಕಾರು ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಎಕ್ಸ್ಎಲ್6 ಮಾದರಿಯಲ್ಲಿ ಹೈ ಎಂಡ್ ಮಾದರಿಯು 6 ಏರ್‌ಬ್ಯಾಗ್ ಮತ್ತು ಆಲ್‌ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಇನ್ನು ಕೆಲವು ಪ್ರಮುಖ ಸೇಫ್ಟಿ ಫೀಚರ್ಸ್ ಹೊಂದಲಿದೆ.