500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಜನಪ್ರಿಯತೆ ಪಡೆದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ತಯಾರಿ ನಡೆಸಿದೆ. ಇದಕ್ಕಾಗಿ ಓಲಾ ಎಲೆಕ್ಟ್ರಿಕ್ ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲು ಸಜ್ಜಾಗಿದ್ದು, ಮೊದಲ ಬಾರಿಗೆ ತನ್ನ ಹೊಸ ಕಾರಿನ ಟೀಸರ್ ಬಿಡುಗಡೆ ಮಾಡಿದೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದರ ವಿನ್ಯಾಸವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ. ಓಲಾ ಎಲೆಕ್ಟ್ರಿಕ್ ಕಾರನ್ನು ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು. ಇದು ದೇಶದ ಅತ್ಯಂತ ಸ್ಪೋರ್ಟಿ ಕಾರು ಎಂದು ಕಂಪನಿಯ ಸಿಇಒ ಹೇಳಿಕೊಂಡಿದ್ದಾರೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್‌ನಲ್ಲಿ ಇದರ ಹೊರಭಾಗ ಮತ್ತು ಒಳಭಾಗವನ್ನು ನೋಡಬಹುದಾಗಿದೆ. ಒಳಭಾಗವು ಹೊಸ ಡಿಸೈನ್‌ನೊಂದಿಗೆ ಹೆಚ್ಚು ಗಮನವನ್ನು ಸೆಳೆಯುತ್ತದೆ. ಇದು ಹೆಕ್ಸಾಗೊನಲ್ ಸ್ಟೀರಿಂಗ್ ವೀಲ್ ಪಡೆದಿದ್ದು, ಎರಡೂ ಬದಿಗಳಲ್ಲಿ ಕಂಟ್ರೋಲ್ ಬಟನ್‌ಗಳನ್ನು ನೀಡಲಾಗಿದೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಅದರ ಮುಂದೆ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ ನೀಡಲಾಗಿದ್ದು, ಅದರ ಮಾಹಿತಿ ನೀಡಲಿದೆ. ಇದರ ಸ್ಟೀರಿಂಗ್ ವೀಲ್‌ನ ಎಡಭಾಗದಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಕೂಡ ನೀಡಲಾಗಿದೆ. ಈ ಡಿಸ್‌ಪ್ಲೇ ಟ್ಯಾಬ್ಲೆಟ್‌ನಂತೆ ಕಾಣುತ್ತಿದ್ದು, ಇದರಲ್ಲಿ Ola ನ OS ಇರುತ್ತದೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಈ ಕಾರಿನ ಕ್ಯಾಬಿನ್‌ನಲ್ಲಿರುವ ಡ್ಯಾಶ್‌ಬೋರ್ಡ್‌ನಾದ್ಯಂತ ಲೈಟಿಂಗ್ ಸ್ಟ್ರಿಪ್‌ಗಳು ಕಂಡುಬರುತ್ತವೆ, ಹಾಗೆಯೇ ಅದರಲ್ಲಿ ಆಂಬಿಯೆಂಟ್ ಲೈಟಿಂಗ್ ನೀಡಲಾಗಿದೆ. ಬಾಹ್ಯ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಎಲ್ಇಡಿ ಸ್ಟ್ರಿಪ್ ಬಾನೆಟ್ ಉದ್ದಕ್ಕೂ ಕಾಣುತ್ತದೆ, ಎಲ್ಇಡಿ ಹೆಡ್ಲೈಟ್ ಅನ್ನು ಎರಡೂ ಬದಿಗಳಲ್ಲಿ ನೀಡಲಾಗಿದೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಇದು ದೊಡ್ಡ ಬಂಪರ್ ಅನ್ನು ಪಡೆದಿದ್ದು, ಏರೋಡೈನಮಿಕ್ ಆಗಿ ವಿನ್ಯಾಸಗೊಳಿಸಲಾಗಿದೆ. ಕಂಪನಿ ಹೇಳಿದಂತೆ, ಇದು ಸ್ಪೋರ್ಟಿಯಾಗಿರಲಿದ್ದು, ಉತ್ತಮ ಹಿಡಿತಕ್ಕಾಗಿ ವಿಶಾಲವಾಗಿ ಸಿದ್ಧವಾಗಿದೆ. ಕಂಪನಿಯ ಈ ಎಲೆಕ್ಟ್ರಿಕ್ ಕಾರು 500 ಕಿ.ಮೀ ವ್ಯಾಪ್ತಿಯನ್ನು ಒದಗಿಸಲಿದೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಕೇವಲ 4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುವ ಸಾಮರ್ಥ್ಯವನ್ನು ಹೊಂದಿದೆ. ಬ್ಯಾಟರಿ ಮತ್ತು ಚಾರ್ಜಿಂಗ್ ಮಾಹಿತಿಯನ್ನು ಇನ್ನೂ ನೀಡಲಾಗಿಲ್ಲ. ಇದರ ವಿನ್ಯಾಸವು ಸ್ಪೋರ್ಟಿಯಾಗಿದ್ದರೂ, ಭಾರತೀಯ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ಸಾಕಷ್ಟು ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗುವುದು.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಈ ಕಾರನ್ನು 2024 ರಲ್ಲಿ ತರವುದಾಗಿ ಹೇಳಿದ್ದು, ಕಂಪನಿಯು 2026-27 ರ ವೇಳೆಗೆ ಒಂದು ಮಿಲಿಯನ್ (10 ಲಕ್ಷ) ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಇದು ಕಂಪನಿಯ ಪ್ರೀಮಿಯಂ ಕಾರು ಆಗಲಿದ್ದು, ಇದನ್ನು ತಯಾರಿಸಲು 18 ತಿಂಗಳು ಬೇಕಾಗಬಹುದು.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಈ ಎಲೆಕ್ಟ್ರಿಕ್ ಕಾರನ್ನು ಪ್ರೀಮಿಯಂ ವಿಭಾಗದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಓಲಾ ಸಿಇಒ ಭವಿಶ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ, ಇದರಿಂದಾಗಿ ಇದರ ಬೆಲೆ 50 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಇಡೀ ವಿಶ್ವಕ್ಕೆ ಈ ಪ್ರೀಮಿಯಂ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುವುದಾಗಿ ಹೇಳಿದ್ದಾರೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಹೊರತಾಗಿ, ಓಲಾ ಬಜೆಟ್ ಎಲೆಕ್ಟ್ರಿಕ್ ಕಾರುಗಳತ್ತಲೂ ಗಮನ ಹರಿಸುತ್ತಿದೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತರುವುದಾಗಿ ಎಂದು ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಹೇಳಿದ್ದಾರೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಕೈಗೆಟುಕುವ ಬೆಲೆಗೆ ಬಿಡುಗಡೆಯಾಯ್ತು ಓಲಾ ಸ್ಕೂಟರ್

ಓಲಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಕ್ಟೋಬರ್ 24 ರೊಳಗೆ ಬುಕ್ಕಿಂಗ್ ಮಾಡಿಕೊಳ್ಳುವ ಗ್ರಾಹಕರಿಗೆ ಎಕ್ಸ್ ಶೋ ರೂಂ ಪ್ರಕಾರ 79,999 ರೂ. ಬೆಲೆಯಲ್ಲಿ ಲಭ್ಯವಿರಲಿದೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಅಕ್ಟೋಬರ್ 24ರ ನಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.84,999 ಆಗಿರುತ್ತದೆ. ಓಲಾ ಎಸ್1 ಏರ್ ಎಸ್1 ಸರಣಿಯ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರಿಂದ ಸಾಮಾನ್ಯ ಸ್ಕೂಟರ್ ಖರೀದಿಸುವವರು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ 2.5kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಈ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್‌ನಲ್ಲಿ ಸವಾರಿ ಮಾಡುವಾಗ ಸಿಂಗಲ್ ಚಾರ್ಜ್‌ನಲ್ಲಿ 101 ಕಿಲೋಮೀಟರ್ (ARAI) ರೇಂಜ್ ಅನ್ನು ನೀಡುತ್ತದೆ.

500 ಕಿ.ಮೀ ಮೈಲೇಜ್ ನೀಡುವ ಹೊಸ ಓಲಾ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ: ಡಿಸೈನ್, ಫೀಚರ್ಸ್ ಬಹಿರಂಗ

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಸಣ್ಣ ಬ್ಯಾಟರಿ ಪ್ಯಾಕ್ ಫ್ಲಾಟ್ ಫುಟ್‌ಬೋರ್ಡ್ ಅನ್ನು ಹೊಂದಿದೆ ಮತ್ತು ಇದು ಎಲೆಕ್ಟ್ರಿಕ್ ಸ್ಕೂಟರ್‌ನ ತೂಕವನ್ನು ಕೇವಲ 99 ಕಿಲೋಗ್ರಾಂಗಳಿಗೆ ಇಳಿಸಲು ಸಹಾಯ ಮಾಡುತ್ತದೆ. 500W ಪೋರ್ಟಬಲ್ ಚಾರ್ಜರ್ ಬಳಸಿ ಬ್ಯಾಟರಿ ಪ್ಯಾಕ್ ಚಾರ್ಜ್ ಮಾಡಲು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

More from DriveSpark

Article Published On: Monday, October 24, 2022, 13:30 [IST]
English summary
New Ola Electric Car Teaser Released Design Features Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+