ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಬಹುನಿರೀಕ್ಷಿತ 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಸ್ಕೋಡಾ ಕಂಪನಿಯು ಈ 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ ತಿಂಗಳೊಳಗೆ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿಯ ಮೂರೂ ರೂಪಾಂತರಗಳ ಬೆಲೆಯನ್ನು ರೂ,1 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ತಯಾರಕರು ಕೊಡಿಯಾಕ್ ಅನ್ನು ಪ್ರಿ-ಫೇಸ್‌ಲಿಫ್ಟ್ ಮಾದರಿಯಿಂದ ಪ್ರತ್ಯೇಕಿಸಲು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದ್ದಾರೆ. ಬಿಎಸ್6 ಮಾಲಿನ್ಯ ನಿಯಮದ ಕಾರಣದಿಂದಾಗಿ ಹಿಂದಿನ ಮಾದರಿಯನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಯಿತು. 2022ರ ಆವೃತ್ತಿಯು ಪ್ರಸ್ತುತ ಸುರಕ್ಷತೆ ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಸ್ಕೋಡಾ ಆಟೋ ಇಂಡಿಯಾ ಮುಂದಿನ ನಾಲ್ಕು ತಿಂಗಳುಗಳ ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ. ಇತ್ತೀಚೆಗೆ ಸ್ಕೋಡಾ ಕಂಪನಿಯು ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಗಾಗಿ ಹೊಸ ಟಿವಿಸಿಯನ್ನು ಬಿಡುಗಡೆಗೊಳಿಸಿತ್ತು.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ ಟಿವಿಸಿಯಲ್ಲಿ 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನೀಡಲಾದ ಕೆಲವು ಫೀಚರ್ಸ್ ಗಳನ್ನು ತೋರಿಸುತ್ತದೆ. 7-ಸೀಟುಗಳ ಈ ಎಸ್‍ಯುವಿಯ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಘಟಕವಾಗಿ ನೀಡಲಾಗುತ್ತದೆ ಮತ್ತು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾದ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತಿದೆ,

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 2.0 ಲೀಟರ್, ನಾಲ್ಕು-ಸಿಲಿಂಡರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

2022ರ ಕೊಡಿಯಾಕ್ ಎಸ್‍ಯುವಿಯು ಸ್ಟೈಲ್, ಸ್ಪೋರ್ಟ್‌ಲೈನ್ ಮತ್ತು ಲಾರಿನ್ & ಕ್ಲೆಮೆಂಟ್ ಎಂಬ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಹೊಸ ಎಸ್‍ಯುವಿಯ 4,699 ಎಂಎಂ ಉದ್ದ, 1,882 ಎಂಎಂ ಅಗಲ ಮತ್ತು 1,685 ಎಂಎಂ ಎತ್ತರ ಮತ್ತು 2,791 ಎಂಎಂ ವೀಲ್‌ಬೇಸ್ ಅನ್ನು ಒಳಗೊಂಡಿದೆ. ಈ ಸ್ಕೋಡಾ ಕೊಡಿಯಾಕ್ ಮಾದರಿಯು 7-ಸೀಟರ್ ಎಸ್‍ಯುವಿ ಮಾದರಿಯಾಗಿದೆ

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ ಪ್ರೀಮಿಯಂ ಮೂರು-ಸಾಲಿನ ಎಸ್‍ಯುವಿಯಲ್ಲಿನ ನವೀಕರಣಗಳು ಪ್ರಸ್ತುತ ಮಾದರಿಯಲ್ಲಿ ಕಾಸ್ಮೆಟೀಕ್ ಮತ್ತು ಪೀಚರ್ಸ್ ಗಳ ನವೀಕರಣಗಳನ್ನು ಒಳಗೊಂಡಿದೆ. ಅದರ ಬಾಹ್ಯ ವಿನ್ಯಾಸದಿಂದ ಪ್ರಾರಂಭಿಸಿ, ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಮೊದಲ ಬಾರಿಗೆ ಸಮಗ್ರ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಂಬೆಡ್ ಮಾಡಲಾದ ಪೂರ್ಣ-ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳನ್ನು ಪಡೆದುಕೊಂಡಿದೆ.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ ನವೀಕರಿಸಿದ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗವು ಪರಿಷ್ಕೃತ ಸ್ಕೋಡಾ ಬಟರ್‌ಫ್ಲೈ ರೇಡಿಯೇಟರ್ ಗ್ರಿಲ್ ಮತ್ತು ಮೆಶ್-ಪ್ಯಾಟರ್ನ್ ಏರ್ ಇನ್‌ಟೇಕ್ ವೆಂಟ್‌ಗಳೊಂದಿಗೆ ರಿಪ್ರೊಫೈಲ್ಡ್ ಫ್ರಂಟ್ ಬಂಪರ್ ಅನ್ನು ಪಡೆದಿದೆ, ಎಸ್‍ಯುವಿಯ ಬಾನೆಟ್ ವಿನ್ಯಾಸವನ್ನು ಸಹ ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾಗಿದೆ. ಇದರ ಸೈಡ್ ಪ್ರೊಫೈಲ್ ನಲ್ಲಿ ಹೊಸ 20-ಇಂಚಿನ ಅಲಾಯ್ ವ್ಹೀಲ್ ಗಳನ್ನು ಟಾಪ್-ಎಂಡ್ ರೂಪಾಂತರಕ್ಕಾಗಿ ತೆಗೆಯಬಹುದಾದ ಕವರ್‌ಗಳೊಂದಿಗೆ ಬ್ಲ್ಯಾಕ್ -ಔಟ್ ಪಿಲ್ಲರ್‌ಗಳು ಮತ್ತು ರೂಫ್ ರೈಲ್‌ಗಳನ್ನು ಪಡೆಯುತ್ತದೆ.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಹಿಂಭಾಗದ ವಿಂಡ್‌ಶೀಲ್ಡ್‌ನ ಬದಿಗಳಲ್ಲಿ ವಿಂಗ್ಲೆಟ್‌ಗಳೊಂದಿಗೆ ಹೊಸ ಸ್ಪಾಯ್ಲರ್ ಅನ್ನು ಹೊಂದಿದೆ. ಕೊಡಿಯಾಕ್ ಎಸ್‍ಯುವಿಯ ಏರೋಡೈನಾಮಿಕ್ ಗುಣಲಕ್ಷಣಗಳನ್ನು ಉತ್ತಮಗೊಳಿಸುತ್ತದೆ ಮತ್ತು 0.31 ರ ಕಡಿಮೆ ಡ್ರ್ಯಾಗ್ ಗುಣಾಂಕವನ್ನು ನೀಡುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಸುತ್ತುವ ಎಲ್ಇಡಿ ಟೈಲ್-ಲ್ಯಾಂಪ್ ಗಳು ಮತ್ತು ಪರಿಷ್ಕೃತ ಹಿಂಭಾಗದ ಬಂಪರ್ ಅನ್ನು ಹೊಂದಿದೆ.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ ಹೊಸ ಸ್ಕೋಡಾ ಕೊಡಿಯಾಕ್ ಕ್ಯಾಬಿನ್ ಒಳಗೆ, ಕೊಡಿಯಾಕ್ ಫೇಸ್‌ಲಿಫ್ಟ್ ಅನ್ನು ಐದು ಮತ್ತು ಏಳು-ಆಸನಗಳ ಲೇಔಟ್‌ಗಳಲ್ಲಿ ನೀಡಲಾಗುವುದು, ಮೆಮೊರಿ ಕಾರ್ಯದೊಂದಿಗೆ ಮಲ್ಟಿವೇ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆ, ಮತ್ತು ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್ ಸೇರಿವೆ. ಕ್ಯಾಬಿನ್ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಒಳಗೊಂಡಿದೆ,

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ ಎಸ್‍ಯುವಿಯ ಇನ್ಫೋಟೈನ್‌ಮೆಂಟ್ ಯೂನಿಟ್ ನೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕಾನ್ಸೆಟಿವಿಟಿ ಹೊಂದಿದೆ. ಇದರೊಂದಿಗೆ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು 12-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಮ್ ಸೇರಿವೆ. ಇದರೊಂದಿಗೆ ಮೂರು-ಜೋನ್ ಕ್ಲೈಮೇಂಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್,ಹ್ಯಾಂಡ್ಸ್-ಫ್ರೀ ಪಾರ್ಕಿಂಗ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳನ್ನು ಹೊಂದಿದೆ, ಇನ್ನು ಸ್ಕೋಡಾ ಕಂಪನಿಯು ಕೊಡಿಯಾಕ್ ಎಸ್‍ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಲಾಯಿತು ಮತ್ತು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು.

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಕೊಡಿಯಾಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಇನ್ನು ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಒಂಬತ್ತು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮೆಕ್ಯಾನಿಕಲ್ ಬ್ರೇಕ್ ಅಸಿಸ್ಟ್ (MBA) ಜೊತೆಗೆ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ (HBA), ಆಂಟಿ ಸ್ಲಿಪ್ ರೆಗ್ಯುಲೇಶನ್ (ASR), ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಅನ್ನು ನೀಡಲಾಗಿದೆ,

ದುಬಾರಿಯಾಗಲಿದೆ 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ

ಈ ಹೊಸ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಟಿಗ್ಬಾನ್ ಫೇಸ್‌ಲಿಫ್ಟ್, ಸಿಟ್ರನ್ ಸಿ5 ಏರ್‌ಕ್ರಾಸ್, ಹ್ಯುಂಡೈ ಟ್ಯೂಸಾನ್ ಮತ್ತು ಬಿಡುಗಡೆಯಾಗಲಿರುವ ಜೀಪ್ ಮೆರಿಡಿಯನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ,

More from DriveSpark

Article Published On: Thursday, February 3, 2022, 17:23 [IST]
English summary
New skoda kodiaq facelift suv price to increase from april details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+