ಎರಡು ವರ್ಷಗಳ ನಂತರ ಮರಳಿ ಮಾರುಕಟ್ಟೆಗೆ ಪ್ರವೇಶಿಸಿದ ಸ್ಕೋಡಾ ಹೊಸ ಕೊಡಿಯಾಕ್ ರಿವ್ಯೂ ವಿಡಿಯೋ
ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಕಂಪನಿಯು ಭಾರತದಲ್ಲಿ ತನ್ನ ಪ್ರಮುಖ ಕಾರುಗಳಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಯಾದ ಕೊಡಿಯಾಕ್ ಆವೃತ್ತಿಯನ್ನು ಸಹ ಭಾರೀ ಬದಲಾವಣಗಳೊಂದಿಗೆ ಬಿಡುಗಡೆ ಮಾಡಿದೆ.
ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ನವೀಕರಣಗೊಂಡಿರುವ 2022ರ ಕೊಡಿಯಾಕ್ ಎಸ್‌ಯುವಿ ಮಾದರಿಯು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಸುಧಾರಿತ ಗೇರ್‌ಬಾಕ್ಸ್ ಜೋಡಣೆ ಹೊಂದಿರುವ ಎಂಜಿನ್ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಬಿಡುಗಡೆಯ ನಂತರ ಸ್ಕೋಡಾ ಕಂಪನಿಯು ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಪರೀಕ್ಷಿಸಲು ಡ್ರೈವ್‌ಸ್ಪಾರ್ಕ್ ತಂಡಕ್ಕೂ ಆಹ್ವಾನ ನೀಡಿತ್ತು. ಕಂಪನಿಯ ಆಹ್ವಾನದ ಮೇರೆಗೆ ಹೊಸ ಕಾರಿನ ಫಸ್ಟ್ ಡ್ರೈವ್ ರಿವ್ಯೂ ಇಲ್ಲಿ ಪ್ರಕಟಿಸಲಾಗಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬದಲಾವಣೆ ಪಡೆದುಕೊಂಡಿರುವುದು ಎಸ್‌ಯುವಿ ಪ್ರಿಯರ ಪ್ರಮುಖ ಆಕರ್ಷಣೆಯಾಗಲಿದೆ.
ಭಾರತದಲ್ಲಿ ಬಿಎಸ್ 6 ಜಾರಿ ನಂತರ ಕೊಡಿಯಾಕ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದ್ದ ಸ್ಕೋಡಾ ಕಂಪನಿಯು ಹೊಸ ಮಾದರಿಯ ಬಿಡುಗಡೆಯನ್ನು ಕೋವಿಡ್ ಹಿನ್ನಲೆಯಲ್ಲಿ ಮುಂದೂಡಿಕೆ ಮಾಡುತ್ತಾ ಇದೀಗ ಬಿಡುಗಡೆ ಮಾಡಿದ್ದು, 2022ರ ಮಾದರಿಯ ವಿನ್ಯಾಸವನ್ನು ಸಾಕಷ್ಟು ಬದಲಾವಣೆಗೊಳಿಸಲಾಗಿದೆ.
ಹಾಗೆಯೇ ಸ್ಕೋಡಾ ಕಂಪನಿಯು ಕೊಡಿಯಾಕ್ ಆವೃತ್ತಿಯಲ್ಲಿ ಈ ಹಿಂದಿನ 2.0-ಲೀಟರ್ ಡೀಸೆಲ್ ಎಂಜಿನ್ ತೆಗೆದುಕಹಾಕಿ ಹೊಸ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದೆ. ಹೊಸ ಪೆಟ್ರೋಲ್ ಎಂಜಿನ್ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಜೋಡಣೆಯೊಂದಿಗೆ 187.5 ಬಿಹೆಚ್‍ಪಿ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಡ್ರೈವಿಂಗ್ ಕಾರ್ಯಕ್ಷಮತೆ ಹೆಚ್ಚಿಸಲು ಇಕೋ, ಕಂಫರ್ಟ್, ನಾರ್ಮಲ್, ಸ್ಪೋರ್ಟ್, ಇಂಡಿವಿಜುವಲ್ ಮತ್ತು ಸ್ನೋ ಮೋಡ್‌ಗಳನ್ನು ನೀಡಲಾಗಿದ್ದು, ಆಫ್ ರೋಡ್ ಪ್ರಿಯರಿಗಾಗಿ 4x4 ಡ್ರೈವ್‌ಟ್ರೇನ್ ನೀಡಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 35.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 37.49 ಲಕ್ಷ ಬೆಲೆ ಹೊಂದಿದೆ.


Click it and Unblock the Notifications








