ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ದೇಶದಲ್ಲಿ ಮಾರಾಟವಾಗುವ ಟೈರ್‌ಗಳಿಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ಸಿದ್ದಪಡಿಸಿದ್ದು, ಹೊಸ ಕ್ರಮದೊಂದಿಗೆ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷಿತ ಟೈರ್‌ಗಳ ಉತ್ಪಾದನೆಗೆ ಅನುವು ಮಾಡಿಕೊಡುತ್ತಿದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಹೊಸ ಟೈರ್ ಉತ್ಪಾದನಾ ಮಾನದಂಡಗಳು ಮುಂಬರುವ ಅಕ್ಟೋಬರ್ 1ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹೊಸ ಮಾನದಂಡಗಳೊಂದಿಗೆ ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಟೈರ್‌ಗಳು ಒಂದು ವಾಹನದ ಪ್ರಮುಖ ಅಂಶವಾಗಿದ್ದು, ಟೈರ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡದಿದ್ದರೆ ವಾಹನವು ಎಷ್ಟೇ ಉತ್ತಮವಾಗಿದ್ದರೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಅದು ಸೂಪರ್‌ಕಾರ್ ಆಗಿರಲಿ ಅಥವಾ ಟ್ರಕ್ ಆಗಿರಲಿ ಅದರ ಟೈರ್‌ಗಳು ರಸ್ತೆಯ ಸಂಪರ್ಕದ ಏಕೈಕ ಬಿಂದುವಾಗಿರುತ್ತದೆ. ಆದ್ದರಿಂದ ವಾಹನಗಳಲ್ಲಿ ಉತ್ತಮ ಟೈರ್‌ಗಳನ್ನು ಹೊಂದಿರುವುದು ಮುಖ್ಯ ಅಂಶವಾಗಿದ್ದು, ಮಾರುಕಟ್ಟೆಯಲ್ಲಿ ಹಲವಾರು ಮಾದರಿಗಳು ಲಭ್ಯವಿವೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಕೆಲವು ಟೈರ್ ಮಾದರಿಗಳು ಉತ್ತಮ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಿರ್ಮಾಣಗೊಂಡಿದ್ದರೆ ಇನ್ನು ಕೆಲವು ಟೈರ್ ಮಾದರಿಗಳು ಕಳಪೆ ಗುಣಮಟ್ಟದೊಂದಿಗೆ ಅಗ್ಗದ ದರದಲ್ಲೂ ಖರೀದಿಗೆ ಲಭ್ಯವಿವೆ. ಕಳಪೆ ಟೈರ್ ಮಾದರಿಗಳು ಕೆಲವೊಮ್ಮೆ ಗುಣಮಟ್ಟದ ಕೊರತೆಯಿಂಗಾಗಿ ಅಪಘಾತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಇದರಿಂದ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಕೇಂದ್ರ ಸರ್ಕಾರವು ಟೈರ್ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಭಾರತದಲ್ಲಿ ಟೈರ್ ಮಾರುಕಟ್ಟೆಯು ಹೆಚ್ಚಾಗಿ ಅಸಂಘಟಿತವಾಗಿದ್ದು, ಅದನ್ನು ನಿಯಂತ್ರಿಸಲಾಗುತ್ತಿಲ್ಲ. ಇದರಿಂದ ಹೊಸ ಮಾನದಂಡಗಳ ಮೂಲಕ ಟೈರ್ ಉತ್ಪಾದನೆಗೆ ಕನಿಷ್ಠ ಗುಣಮಟ್ಟಗಳ ಅಳವಡಿಕೆ ಖಚಿತಪಡಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಟೈರ್ ಉತ್ಪಾದಕರಿಗೆ ಹೊಸ ಮಾನದಂಡಗಳನ್ನು ಪರಿಚಯಿಸುತ್ತಿದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಭಾರತದಲ್ಲಿ ಕೆಲವು ಕಂಪನಿಗಳು ಅತ್ಯುತ್ತಮ ಟೈರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅದೇ ಸಮಯದಲ್ಲಿ ಚೀನಾದಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳುವ ಹಲವಾರು ಕಡಿಮೆ-ಗುಣಮಟ್ಟದ ಟೈರ್‌ಗಳು ಸಹ ಮಾರುಕಟ್ಟೆಯಲ್ಲಿ ಭಾರತದಲ್ಲಿ ಖರೀದಿಗೆ ಲಭ್ಯವಿವೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಆಮದು ಮಾಡಿಕೊಳ್ಳಲಾಗುವ ಕಳಪೆ ಟೈರ್‌ಗಳನ್ನು ಕೆಲವು ಕಂಪನಿಗಳು ನಂಬಲಾಗದಷ್ಟು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು, ಇದು ಆರಂಭದಲ್ಲಿ ಖರೀದಿಗೆ ಕಡಿಮೆ ಬಜೆಟ್ ಅನ್ನಿಸದರೂ ಇವುಗಳ ಅನೇಕ ಅನಾಹುತಗಳಿಗೆ ಎಡೆಮಾಡಿಕೊಡುತ್ತವೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಇದೇ ಕಾರಣಕ್ಕೆ ಟೈರ್‌ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಹೊಸ ಮಾನದಂಡಗಳನ್ನು ಜಾರಿಗೊಳಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಇತ್ತೀಚೆಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಇದು ಮುಂಬರುವ ದಿನಗಳಲ್ಲಿ ಟೈರ್ ಉತ್ಪಾದನೆಯಲ್ಲಿ ಹೊಸ ಬದಲಾವಣೆ ತರುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಹೊಸ ಮಾನದಂಡಗಳ ಪ್ರಕಾರ, ಟೈರ್ ಉತ್ಪಾದನೆಗಾಗಿ ಕಾರು, ಬಸ್ ಮತ್ತು ಟ್ರಕ್ ಟೈರ್ ತಯಾರಕರು ರೋಲಿಂಗ್ ರೆಸಿಸ್ಟೆನ್ಸ್, ರೋಲಿಂಗ್ ಸೌಂಡ್ ಮತ್ತು ವೆಟ್ ಗ್ರಿಪ್ ಮಾನದಂಡಗಳನ್ನು ಟೈರ್‌ನಲ್ಲಿ ಅಳವಡಿಸುವುದು ಕಡ್ಡಾಯವಾಗಲಿದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್ (AMI) 142:2019 ರಲ್ಲಿ ವ್ಯಾಖ್ಯಾನಿಸಲಾದ ಉದ್ಯಮದ ಮಾನದಂಡಗಳು ವಾಹನದ ಟೈರ್ ಗುಣಮಟ್ಟವನ್ನು ವ್ಯಾಖ್ಯಾನಿಸಲಿದ್ದು, ಟೈರ್ ರೆಸಿಸ್ಟೆನ್ಸ್ ಮೂಲಕ ಟೈರ್ ಎಲ್ಲಾ ಭೂಪ್ರದೇಶಗಳಿನ ಹವಾಮಾನವನ್ನು ತಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಹಾಗೆಯೇ ರೋಲಿಂಗ್ ಸೌಂಡ್ ಮೂಲಕ ಟೈರ್ ಮೂಲಕ ಟೈರ್ ಘರ್ಷಣೆಯಿಂದಾಗಿ ಉಂಟಾಗುವ ಶಬ್ದ ಮಾಲಿನ್ಯವನ್ನು ತಗ್ಗಿಸಲಿದ್ದು, ವೆಟ್ ಗ್ರಿಪ್ ಮಾನದಂಡವು ಒದ್ದೆಯಾದ ರಸ್ತೆಗಳಲ್ಲೂ ಟೈರ್‌ನ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಒಟ್ಟಾರೆಯಾಗಿ ಈ ಹೊಸ ಮಾನದಂಡಗಳು ವಾಹನಗಳ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುವುದರ ಜೊತೆಗೆ ಶಬ್ದ ಮಾಲಿನ್ಯವನ್ನು ತಗ್ಗಿಸಲು ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಲಿದ್ದು, ಪ್ರಯಾಣಿಕ ಕಾರುಗಳು, ಲಘು ವಾಣಿಜ್ಯ ವಾಹನಗಳು ಮತ್ತು ಭಾರೀ ವಾಣಿಜ್ಯ ವಾಹನಗಳನ್ನು ಈ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ.

ಗುಣಮಟ್ಟದ ಟೈರ್ ಉತ್ಪಾದನೆಗಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ ಹೊಸ ಮಾನದಂಡ

ಆಕ್ಟೋಬರ್ 1ರಿಂದಲೇ ಹೊಸ ನಿಯಮ ಜಾರಿಗೆ ಬರಲಿದ್ದರೆ 2023ರ ಏಪ್ರಿಲ್ ರಿಂದ ದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಟೈರ್‌ಗಳು ಹೊಸ ಮಾನದಂಡಗಳನ್ನು ಕಡ್ಡಾಯವಾಗಿ ಹೊಂದಿರಬೇಕಿದ್ದು, ಕಳಪೆ ಗುಣಮಟ್ಟದ ಟೈರ್‌ಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.

More from DriveSpark

Article Published On: Saturday, July 2, 2022, 14:05 [IST]
English summary
New standards for tyres sold in the country details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+