ವಸತಿ ಪ್ರದೇಶಗಳಲ್ಲಿ 1 ಲಕ್ಷ ಇವಿ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗಾಗಿ ನೊಬ್ರೋಕರ್ ಹೊಸ ಪಾಲುದಾರಿಕೆ
ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಬೃಹತ್ ಇವಿ ಚಾರ್ಜಿಂಗ್ ನಿಲ್ದಾಣಗಳ ಜಾಲವನ್ನು ತೆರೆಯಲು ಮುಂದಾಗಿರವ ನೊಬ್ರೋಕರ್ ಕಂಪನಿಯು ಸಹ ಎಲೆಕ್ಟ್ರಿಕ್‌ಪೆ ಕಂಪನಿಯ ಜೊತೆ ಹೊಸ ಪಾಲುದಾರಿಕೆ ಯೋಜನೆಗೆ ಚಾಲನೆ ನೀಡಿದೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನ ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿವೆ.

ಇಂಧನ ಚಾಲಿತ ವಾಹನಗಳ ಬಳಕೆಯನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಹೀಗಾಗಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರ ಸಬ್ಸಡಿ ಯೋಜನೆಗಳನ್ನು ನೀಡದೆ ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಕ್ರಮ ಕೈಗೊಂಡಿದ್ದು, ಇವಿ ನಿಲ್ದಾಣಗಳ ಹೆಚ್ಚಳಕ್ಕೂ ಸಹಕಾರಿಯಾಗುವಂತೆ ಸಬ್ಸಡಿ ಯೋಜನೆಗಳನ್ನು ಪರಿಚಯಿಸಲಾಗಿದೆ.

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

ಇತ್ತೀಚೆಗೆ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ಸೌಲಭ್ಯವನ್ನು ತೆರೆಯಲು ಉದ್ದೇಶದೊಂದಿಗೆ ರಿಯಲ್ ಎಸ್ಟೇಟ್ ವಲಯದಲ್ಲಿ ಮುಂಚೂಣಿ ಹೊಂದಿರುವ ನೊಬ್ರೋಕರ್ ಕಂಪನಿಯು ಸಹ ಚಾರ್ಜಿಂಗ್ ನಿಲ್ದಾಣಗಳ ಹೂಡಿಕೆಗೆ ಸಿದ್ದವಾಗಿದ್ದು, ಹೊಸ ಯೋಜನೆಗಾಗಿ ಕಂಪನಿಯು ಚಾರ್ಜಿಂಗ್ ನಿಲ್ದಾಣಗಳನ್ನು ಸ್ಥಾಪಿಸುವಲ್ಲಿ ಮುಂಚೂಣಿಯಲ್ಲ ಎಲೆಕ್ಟ್ರಿಕ್‌ಪೇ ಕಂಪನಿಯೊಂದಿಗೆ ಕೈಜೋಡಿಸಿದೆ.

ಹೊಸ ಪಾಲುದಾರಿಕೆ ಅಡಿಯಲ್ಲಿ ನೊಬ್ರೋಕರ್ ಕಂಪನಿಯು ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗಾಗಿ ಸಹಕರಿಸಲಿದ್ದು, ಎಲೆಕ್ಟ್ರಿಕ್‌ಪೇ ಕಂಪನಿಯು ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆ ಮತ್ತು ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದೆ.

ರಿಯಲ್ ಎಸ್ಟೇಟ್ ವಲಯದಲ್ಲಿಈಗಾಗಲೇ ಸಾಕಷ್ಟು ಜನಪ್ರಿಯತೆ ಹೊಂದುತ್ತಿರುವ ನೊಬ್ರೋಕರ್ ಕಂಪನಿಯು ವಸತಿ ಪ್ರದೇಶಗಳಲ್ಲಿಯೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ 100,000 ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಗುರಿಹೊಂದಿದ್ದು, ಚಾರ್ಜಿಂಗ್ ನಿಲ್ದಾಣಗಳಲ್ಲಿ ಇವಿ ಬಳಕೆದಾರರಿಗೆ ಸುಲಭ ಪರಿಹಾರಗಳನ್ನು ಒದಗಿಸಲು ನೊಬ್ರೋಕರ್ ಕಂಪನಿಯು ಪ್ರತ್ಯೇಕ ಅಪ್ಲಿಕೇಷನ್ ಸಿದ್ದಪಡಿಸಿದೆ.

ಅಪ್ಲಿಕೇಶನ್ ಮೂಲಕ ಇವಿ ಬಳಕೆದಾರರು ಸುಲಭವಾಗಿ ಇವಿ ನಿಲ್ದಾಣಗಳ ಮಾಹಿತಿ, ನಿಲ್ದಾಣಗಳಲ್ಲಿ ಚಾರ್ಜಿಂಗ್ ಲಭ್ಯತೆ ಮತ್ತು ಚಾರ್ಜಿಂಗ್ ನಂತರದ ದರ ಪಾವತಿಯನ್ನು ಸುಲಭವಾಗಿಸುತ್ತದೆ.

ಹೀಗಾಗಿ ಎಲೆಕ್ಟ್ರಿಕ್‌ಪೇ ಕಂಪನಿಯು ನೊಬ್ರೋಕರ್ ಜೊತೆಗೂಡಿ ಮುಂದಿನ ದಿನಗಳಲ್ಲಿ 1 ಲಕ್ಷ ಚಾರ್ಜಿಂಗ್ ನಿಲ್ದಾಣ ಸ್ಥಾಪನೆಯ ಗುರಿತಲುಪಲು ಮುಂದಾಗಿದ್ದು, ಶೀಘ್ರದಲ್ಲಿ ಹೊಸ ಪಾಲುದಾರಿಕೆಯಲ್ಲಿ ಇವಿ ಚಾರ್ಜಿಂಗ್ ನಿಲ್ದಾಣಗಳು ಕಾರ್ಯನಿರ್ವಹಣೆಯನ್ನು ಆರಂಭಿಸಲಿವೆ.

ಈ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ಕೊನೆಯ ಮೈಲಿ ತನಕವೂ ಚಾರ್ಜಿಂಗ್ ಸೌಲಭ್ಯ ದೊರೆಯುವಂತೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರಮುಖ ಇವಿ ಕಂಪನಿಗಳು ಕೂಡಾ ಸ್ಥಳ ಲಭ್ಯತೆ ಮತ್ತು ವಿದ್ಯುತ್ ಪೂರೈಕೆ ಆಧರಿಸಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಿವೆ.

ಅತಿ ಕಡಿಮೆ ಅವಧಿಯ ಹೆಚ್ಚಿನ ಪ್ರಮಾಣದ ಚಾರ್ಜ್ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ಪರಿಚಯಿಸಲಾಗುತ್ತಿದ್ದು, ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲು ಸಹಕಾರಿಯಾಗುವಂತೆ ಹೊಸ ಯೋಜನೆ ರೂಪಿಸಲಾಗಿದೆ.

ಇದರಿಂದ ಕೇವಲ ನಗರಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಇವಿ ವಾಹನಗಳ ಮೂಲಕ ದೂರದ ಪ್ರಯಾಣಕ್ಕೂ ಅನುಕೂಲಕರವಾಗಲಿದ್ದು, ಹೆಚ್ಚುತ್ತಿರುವ ಇಂಧನ ಬೆಲೆ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ವಿನಾಯ್ತಿಗಳನ್ನು ನೀಡುತ್ತಿದೆ.


Click it and Unblock the Notifications