ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆಯ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರವಲ್ಲ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಳ್ಳಬೇಕೆಂಬ ಮಹತ್ವದ ಗುರಿಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ಗಮನಹರಿಸಿವೆ. ಮಾರುಕಟ್ಟೆಗೆ ಈಗಾಗಲೇ ವಿವಿಧ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಡಿಸೈನ್ ಪ್ರೇರಿತ, ಧೀರ್ಘಕಾಲಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಓಲಾ ಕಂಪನಿಯು ಭವಿಷ್ಯದಲ್ಲಿ ಬೃಹತ್ ಯೋಜನೆಗಳೊಂದಿಗೆ ಆಟೋ ಉತ್ಪಾದನಾ ವಲಯದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ವಿವಿಧ ವಾಹನ ಉತ್ಪಾದನಾ ಕಂಪನಿಗಳ ಸ್ಪರ್ಧೆಯ ನಡುವೆಯೂ ಮೊದಲ ಹಂತದಲ್ಲೇ ಬಜೆಟ್ ಬೆಲೆಯೊಂದಿಗೆ ಅತ್ಯಧಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮಾಡಿರುವ ಓಲಾ ಕಂಪನಿಯು ಪ್ರಯಾಣಿಕ ಕಾರು ವಿಭಾಗಕ್ಕೂ ಹೊಸ ಎಲೆಕ್ಟ್ರಿಕ್ ಕಾರು ಉತ್ಪನ್ನಗಳೊಂದಿಗೆ ಲಗ್ಗೆಯಿಡುವ ಸುಳಿವು ನೀಡಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಇವಿ ಸ್ಕೂಟರ್ ಬಿಡುಗಡೆಯ ನಂತರ ಮುಂದಿನ ಯೋಜನೆ ಕುರಿತಾಗಿ ಮಹತ್ವದ ಸುಳಿವು ನೀಡಿರುವ ಓಲಾ ಕಂಪನಿಯ ಸಿಇಒ ಭಾವಿಶ್ ಅಗರ್‌ವಾಲ್ ಅವರು ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಕಾರನ್ನು ಸಹ ಬಿಡುಗಡೆಯ ಮಾಹಿತಿ ನೀಡಿದ್ದು, ಗ್ರಾಹಕರೊಬ್ಬರಿಗೆ ಟ್ವಿಟರ್ ಪ್ರಕ್ರಿಯೆಯ ಮೂಲಕ ನಿಮ್ಮ ಮುಂಬರುವ ಇವಿ ಕಾರು ಓಲಾ ನಿರ್ಮಾಣದ್ದೆ ಆಗಿರಲಿ ಎಂದಿದ್ದಾರೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಓಲಾ ಇವಿ ಕಾರು ಬಿಡುಗಡೆಯ ಕುರಿತಂತೆ ಈ ಹಿಂದೆಯೂ ಗ್ರಾಹಕರರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಓಲಾ ಕಂಪನಿಯ ಮುಖ್ಯಸ್ಥರು ಹೊಸ ಯೋಜನೆಗಾಗಿ ಬೃಹತ್ ಪ್ರಮಾಣದ ಯೋಜನೆಯನ್ನೇ ಸಿದ್ದಗೊಳಿಸಲಾಗುತ್ತಿದೆ ಎಂದಿದ್ದರು.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಸದ್ಯಕ್ಕೆ ಓಲಾ ಕಂಪನಿಯು ಬಿಡುಗಡೆ ಮಾಡಲಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಾಗಿ ಮಾರುಕಟ್ಟೆ ಒದಗಿಸುವುದು ಉತ್ಪಾದನಾ ಘಟಕದ ವಿಸ್ತರಣೆ ಮತ್ತು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳದ ಮೇಲೆ ಗಮನಹರಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುವ ಸಿದ್ದತೆಯಲ್ಲಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಕುರಿತು ಈಗಾಗಲೇ ವಿವಿಧ ಹಂತದ ಹಲವು ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿದ್ದು, ಕಾರುಗಳ ವಿಭಾಗದಲ್ಲಿ ವಾಣಿಜ್ಯ ಬಳಕೆಗಾಗಿ ಮತ್ತು ವ್ಯಯಕ್ತಿಕ ಬಳಕೆ ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಭಾರತದಲ್ಲೇ ಪೂರ್ಣ ಪ್ರಮಾಣದ ಇವಿ ವಾಹನ ಉತ್ಪಾದನೆಯ ಗುರಿಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಇವಿ ವಾಹನಗಳನ್ನು ರಫ್ತು ಮಾಡುವ ಯೋಜನೆಯಲ್ಲಿದ್ದು, ಹೊಸ ಯೋಜನೆಗಾಗಿ ಓಲಾ ಕಂಪನಿಯು ಸುಮಾರು ರೂ. 2,400 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಓಲಾ ಕಂಪನಿಯು ಹೊಸ ವಾಹನ ಉತ್ಪಾದನಾ ಘಟಕವನ್ನು ಇಂಡಸ್ಟ್ರಿ 4.0 ತತ್ವದ ಆಧಾರದ ಮೇಲೆ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣ ಮಾಡಿದ್ದು, ಹೊಸ ಘಟಕವು ದೇಶದ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಗಳಲ್ಲಿ ಒಂದಾಗಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಆಧುನಿಕ ವಾಹನ ಉತ್ಪಾದನಾ ಘಟಕದಲ್ಲಿ ಸಾವಿರಾರು ಉದ್ಯೋಗಗಳ ಜೊತೆಗೆ ವಾಹನಗಳ ಬಿಡಿಭಾಗಗಳನ್ನು ಜೋಡಣೆ ಮಾಡಲು ಸುಮಾರು 5 ಸಾವಿರ ರೋಬೋಟ್‌ಗಳನ್ನು ಹೊಸ ಘಟಕದಲ್ಲಿ ನಿಯೋಜಿಸಲಾಗುತ್ತಿದ್ದು, ಬರೋಬ್ಬರಿ 500 ಎಕರೆ ವ್ಯಾಪ್ತಿ ಹೊಂದಿರುವ ಹೊಸ ವಾಹನ ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ಪಾದನೆಯಾಗಲಿವೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಮೇಕ್ ಇನ್ ಇಂಡಿಯಾ ಫಾರ್ ವರ್ಲ್ಡ್ ಅಭಿಯಾನದಡಿ ಭಾರತದಲ್ಲೇ ಉತ್ಪಾದಿಸಿ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡುವ ಯೋಜನೆಗೆ ಚಾಲನೆ ನೀಡಿರುವ ಓಲಾ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯನ್ನು ಲ್ಯಾಟಿನ್ ಅಮೆರಿಕ, ಆಫ್ರಿಕಾ ರಾಷ್ಟ್ರಗಳಲ್ಲೂ ಮಾರಾಟ ಮಾಡಲಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅತ್ಯಧಿಕ ಬ್ಯಾಟರಿ ರೇಂಜ್ ಹೊಂದಿರುವ ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರುಗಳನ್ನು ಬಜೆಟ್ ಬೆಲೆಯಲ್ಲಿ ನಿರ್ಮಣ ಮಾಡಲಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ತ್ರಿ ಚಕ್ರ ವಾಹನಗಳು, ಫ್ಲಿಟ್ ವಾಹನಗಳ ಜೊತೆ ವ್ಯಯಕ್ತಿಕ ಬಳಕೆಯ ಕಾರುಗಳು ಬಿಡುಗಡೆಯಾಗಲಿದ್ದು, 2025ರ ವೇಳೆಗೆ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹಲವು ಕಂಪಂನಿಗಳನ್ನು ಹಿಂದಿಕ್ಕಿ ಮುನ್ನುಗ್ಗುವ ಸಿದ್ದತೆಯಲ್ಲಿದೆ.

ಇವಿ ಸ್ಕೂಟರ್ ನಂತರ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ ಓಲಾ ಎಲೆಕ್ಟ್ರಿಕ್

ಇನ್ನು ಓಲಾ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅತ್ಯುತ್ತಮ ಬ್ಯಾಟರಿ ಪ್ಯಾಕ್, ಅಧಿಕ ಮೈಲೇಜ್ ರೇಂಜ್ ಮತ್ತು ಕೈಗೆಟುಕುವ ಬೆಲೆಗಳಲ್ಲಿ ಬಿಡುಗಡೆಗೊಳಿಸಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಸ್1 ಮತ್ತು ಎಸ್1 ಪ್ರೊ ವೆರಿಯೆಂಟ್‌ಗಳನ್ನು ಖರೀದಿ ಮಾಡಬಹುದಾಗಿದೆ.

Article Published On: Tuesday, January 25, 2022, 12:55 [IST]
English summary
Ola ceo bhavish aggarwal tweets about electric car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+