ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಪ್ರೊ ಮೂಲಕ ಇವಿ ಸ್ಕೂಟರ್ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಕಂಪನಿಯು ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ವಾಹನಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಓಲಾ ಎಲೆಕ್ಟ್ರಿಕ್ ಕಂಪನಿಯು ಸಹ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಮತ್ತೊಂದು ಇವಿ ಮಾದರಿಯನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಕಳೆದ ವರ್ಷ ಅಗಸ್ಟ್ 15ರಂದು ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿ ಬಿಡುಗಡೆ ಮಾಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ ಅಗಸ್ಟ್ 15ರಂದು ಮತ್ತೊಂದು ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸುವ ಯೋಜನೆಯಲ್ಲಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಹೊಸ ಉತ್ಪನ್ನದ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲವಾದರೂ ಹೊಸ ಉತ್ಪನ್ನದ ಕುರಿತಾಗಿ ಭಾರೀ ನೀರಿಕ್ಷೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿಯೇ ಹೊಸ ಉತ್ಪನ್ನದೊಂದಿಗೆ ಕಂಪನಿಯು ಜಾಗತಿಕ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಓಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗಕ್ಕೂ ಲಗ್ಗೆಯಿಡುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆ ಅನುಸಾರವಾಗಿ ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಜೊತೆಗೆ ಸ್ಪೋರ್ಟಿ ವಿನ್ಯಾಸದ ಹೊಸ ಇವಿ ಕಾರು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ವಿಶೇಷ ಗಮನಹರಿಸುತ್ತಿವೆ. ಮಾರುಕಟ್ಟೆಗೆ ಈಗಾಗಲೇ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಡಿಸೈನ್ ಪ್ರೇರಿತ, ಧೀರ್ಘಕಾಲಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಓಲಾ ಕಂಪನಿಯು ಭವಿಷ್ಯದಲ್ಲಿ ಮತ್ತಷ್ಟು ಬೃಹತ್ ಯೋಜನೆಗಳೊಂದಿಗೆ ಆಟೋ ಉತ್ಪಾದನಾ ವಲಯದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಇವಿ ವಾಹನ ಉದ್ಯಮಕ್ಕೆ ಲಗ್ಗೆಯಿಟ್ಟ ಮೊದಲ ಹಂತದಲ್ಲೇ ಬಜೆಟ್ ಬೆಲೆಯೊಂದಿಗೆ ಅತ್ಯಧಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿರ್ ಕಂಪನಿಯು ಇದೀಗ ಪ್ರಯಾಣಿಕ ಕಾರು ವಿಭಾಗಕ್ಕೂ ಪ್ರವೇಶಿಸುವ ಯೋಜನೆಯಲ್ಲಿದ್ದು, ಹೊಸ ಇವಿ ಕಾರಿನ ಹಲವಾರು ಟೀಸರ್ ಚಿತ್ರವನ್ನು ಈಗಾಗಲೇ ಹಂಚಿಕೊಳ್ಳಲಾಗಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ವಿದ್ಯುದ್ದೀಕರಣದ ವಿಶ್ವ ಭೂಪಟದಲ್ಲಿ ಭಾರತವನ್ನು ಸೇರಿಸುವುದು ಮತ್ತು ತನ್ನನ್ನು ವಿಶ್ವದರ್ಜೆಯ ಕಂಪನಿಯನ್ನಾಗಿ ಮಾಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಹೇಳಿಕೊಂಡಿರುವ ಓಲಾ ಸಂಸ್ಥಾಪಕ ಅಧ್ಯಕ್ಷ ಭಾವಿಶ್ ಅಗರ್‌ವಾಲ್ ಅಗಸ್ಟ್ 15ರಂದು ಹೊಸ ಯೋಜನೆಯ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ತವಕದಲ್ಲಿದ್ದಾರೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಾಗಿ ಬ್ಯಾಟರಿ ಸೆಲ್‌ಗಳಲ್ಲಿ ಕೋರ್ ತಂತ್ರಜ್ಞಾನವನ್ನು ನಿರ್ಮಿಸುತ್ತಿದ್ದೇವೆ ಎಂದಿರುವ ಭಾವಿಶ್ ಅಗರ್‌ವಾಲ್ ಅವರು ಓಲಾದ ಎಲ್ಲಾ ಹೊಸ ತಂತ್ರಜ್ಞಾನಗಳು ಭಾರತದಲ್ಲಿ ತಯಾರಿಸಲಾಗಲಿದ್ದು, ಹೊಸ ತಂತ್ರಜ್ಞಾನಗಳನ್ನು ಭಾರತೀಯರೇ ತಯಾರಿಸಿದ್ದಾರೆ ಎಂದಿದ್ದಾರೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಸದ್ಯಕ್ಕೆ ಓಲಾ ಕಂಪನಿಯು ಬಿಡುಗಡೆ ಮಾಡಲಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಾಗಿ ಮಾರುಕಟ್ಟೆ ಒದಗಿಸುವುದು ಉತ್ಪಾದನಾ ಘಟಕದ ವಿಸ್ತರಣೆ ಮತ್ತು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳದ ಮೇಲೆ ಗಮನಹರಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳೊಂದಿಗೆ ಇವಿ ಕಾರುನ್ನು ಸಹ ನಿರ್ಮಾಣ ಮಾಡುವ ಸಿದ್ದತೆಯಲ್ಲಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಕುರಿತು ಈಗಾಗಲೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕಾರುಗಳ ವಿಭಾಗದಲ್ಲಿ ವಾಣಿಜ್ಯ ಬಳಕೆಗಾಗಿ ಮತ್ತು ವ್ಯಯಕ್ತಿಕ ಬಳಕೆ ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಭಾರತದಲ್ಲೇ ಪೂರ್ಣ ಪ್ರಮಾಣದ ಇವಿ ವಾಹನ ಉತ್ಪಾದನೆಯ ಗುರಿಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಇವಿ ವಾಹನಗಳನ್ನು ರಫ್ತು ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಬ್ಯಾಟರಿ ಸೆಲ್‌ಗಳ ಬೇಡಿಕೆಯನ್ನು ಪೂರೈಸಲು ಗಿಗಾ ಫ್ಯಾಕ್ಟರಿಯನ್ನು ಸ್ಥಾಪಿಸಲು ಯೋಜಿಸುತ್ತಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಹೊಸ ಯೋಜನೆಗಳ ಪೂರಕವಾಗಿ ಕಂಪನಿಯು ಸುಧಾರಿತ ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಗಾಗಿ ಕಂಪನಿಯ ಜಾಗತಿಕ ಕೇಂದ್ರವಾಗಿ ಓಲಾ ಫ್ಯೂಚರ್‌ಫೌಂಡ್ರಿ ನಿರ್ಮಾಣ ಮಾಡಿದ್ದು, ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕರಿಸಲು ಸೆಂಟರ್ ಯುಕೆಯಲ್ಲಿ ಕಂಪನಿಯು ವಿಶ್ವ ದರ್ಜೆಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಇದರೊಂದಿಗೆ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ 200 ವಾಹನ ವಿನ್ಯಾಸಕರು ಮತ್ತು ಆಟೋಮೋಟಿವ್ ಎಂಜಿನಿಯರ್‌ಗಳನ್ನು ಹೊಂದಿರುವ ಅತ್ಯಾಧುನಿಕ ಕೇಂದ್ರದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೊಸ ಇವಿ ಕಾರುಗಳನ್ನು ಅಭಿವೃದ್ದಿಪಡಿಸಲಿದೆ.

ಅಗಸ್ಟ್ 15ರಂದು ಹೊಸ ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸಲಿದೆ ಓಲಾ ಎಲೆಕ್ಟ್ರಿಕ್

ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಲಿರುವ ಓಲಾ ಹೊಸ ಇವಿ ಕಾರು ಮಾದರಿಯು ಕೇವಲ ಐದು ನಿಮಿಷಗಳಲ್ಲಿ ಸೊನ್ನೆಯಿಂದ ಶೇ.100 ರಷ್ಟು ಚಾರ್ಜ್ ಮಾಡಬಹುದಾದ ಸೂಪರ್ ಚಾರ್ಜಿಂಗ್ ವೈಶಿಷ್ಟ್ಯತೆಯೊಂದಿಗೆ ನಿರ್ಮಾಣಗೊಳ್ಳುತ್ತಿದ್ದು, ಹೊಸ ಕಾರಿನ ಬ್ಯಾಟರಿ ಸಾಮರ್ಥ್ಯ, ಮೈಲೇಜ್, ಅಂದಾಜು ಬೆಲೆ ಕುರಿತು ಅಗಸ್ಟ್ 15ರಂದು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

More from DriveSpark

Article Published On: Friday, August 5, 2022, 16:04 [IST]
English summary
Ola electric reveal new product on 15th august
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+