ಪಿಕ್ಚರ್ ಅಭಿ ಬಾಕಿ ಹೈ: ಹೊಸ ಇವಿ ಕಾರಿನ ಟೀಸರ್ ಪ್ರಕಟಸಿದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಉತ್ಪಾದನಾ ಘಟಕದೊಂದಿಗೆ ವಿಶ್ವದ ಅತಿ ದೊಡ್ಡಇವಿ ವಾಹನ ಕಂಪನಿಯಾಗಿ ಹೊರಹೊಮ್ಮುವ ತವಕದಲ್ಲಿದ್ದು, ಕಂಪನಿಯು ಇವಿ ಸ್ಕೂಟರ್ ನಂತರ ಇವಿ ಕಾರು ಮಾದರಿಯನ್ನು ಸಹ ಬಿಡುಗಡೆ ಮಾಡುವ ಸಿದ್ದತೆ ನಡೆಸುತ್ತಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಮೂಲಕ ಇವಿ ಆಟೋ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದ್ದು, ಕಂಪನಿಯು ಇದೀಗ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಂದು ಹೊಸ ಇವಿ ಕಾರು ಅನಾವರಣಗೊಳಿಸುತ್ತಿದೆ.

ಹೊಸ ಕಾರಿನ ಕುರಿತಾಗಿ ಯಾವುದೇ ತಾಂತ್ರಿಕ ಸೌಲಭ್ಯಗಳ ಮಾಹಿತಿ ಹಂಚಿಕೊಂಡಿಲ್ಲವಾದರೂ ಹೊಸ ಇವಿ ಕಾರಿನ ಸೈಡ್ ಪ್ರೊಫೈಲ್ ಚಿತ್ರ ಹಂಚಿಕೊಂಡಿದ್ದು, ಹೊಸ ಕಾರು ಅನಾವರಣಕ್ಕಾಗಿ ಕಂಪನಿಯ ಅಧ್ಯಕ್ಷ ಭಾವೀಶ್ ಅಗರವಾಲ್ ಅವರು ಪಿಕ್ಚರ್ ಅಭಿ ಬಾಕಿ ಹೈ ಎನ್ನುವ ಟ್ವಿಟ್ ಮಾಡಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಇವಿ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ವಾಹನಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದ್ದು, ಓಲಾ ಎಲೆಕ್ಟ್ರಿಕ್ ಕಂಪನಿಯು ಸಹ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಇವಿ ಕಾರು ಮಾದರಿಯನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ.

ಕಳೆದ ವರ್ಷದ ಅಗಸ್ಟ್ 15ರಂದು ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿ ಬಿಡುಗಡೆ ಮಾಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ ಅಗಸ್ಟ್ 15ರಂದು ಮತ್ತೊಂದು ಇವಿ ಉತ್ಪನ್ನವೊಂದನ್ನು ಅನಾವರಣಗೊಳಿಸುತ್ತಿದೆ.

ಹೊಸ ಉತ್ಪನ್ನದ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲವಾದರೂ ಹೊಸ ಉತ್ಪನ್ನದ ಕುರಿತಾಗಿ ಭಾರೀ ನೀರಿಕ್ಷೆ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿಯೇ ಹೊಸ ಉತ್ಪನ್ನದೊಂದಿಗೆ ಕಂಪನಿಯು ಜಾಗತಿಕ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದೆ.

ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಓಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಿಭಾಗಕ್ಕೂ ಲಗ್ಗೆಯಿಡುತ್ತಿದ್ದು, ಭಾರತೀಯ ಗ್ರಾಹಕರ ಬೇಡಿಕೆ ಅನುಸಾರವಾಗಿ ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಜೊತೆಗೆ ಸ್ಪೋರ್ಟಿ ವಿನ್ಯಾಸದ ಹೊಸ ಇವಿ ಕಾರು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

2030ರ ವೇಳೆಗೆ ದೇಶಾದ್ಯಂತ ಶೇ.50ಕ್ಕಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಮಾರಾಟ ಗುರಿಹೊಂದಲಾಗಿದ್ದು, ಕೇಂದ್ರ ಸರ್ಕಾರದ ನಿರ್ಣಯದಂತೆ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಇವಿ ವಾಹನಗಳ ಉತ್ಪಾದನೆಯತ್ತ ವಿಶೇಷ ಗಮನಹರಿಸುತ್ತಿವೆ. ಮಾರುಕಟ್ಟೆಗೆ ಈಗಾಗಲೇ ಹಲವು ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆ ಪ್ರವೇಶಿಸಿದ್ದು, ಓಲಾ ಕಂಪನಿಯು ತನ್ನ ಸಹ ಹೊಸ ಎಸ್ ಸರಣಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

ಬಜೆಟ್ ಬೆಲೆಯಲ್ಲಿಯೇ ಅತ್ಯುತ್ತಮ ಡಿಸೈನ್ ಪ್ರೇರಿತ, ಧೀರ್ಘಕಾಲಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಓಲಾ ಕಂಪನಿಯು ಭವಿಷ್ಯದಲ್ಲಿ ಮತ್ತಷ್ಟು ಬೃಹತ್ ಯೋಜನೆಗಳೊಂದಿಗೆ ಆಟೋ ಉತ್ಪಾದನಾ ವಲಯದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಇವಿ ವಾಹನ ಉದ್ಯಮಕ್ಕೆ ಲಗ್ಗೆಯಿಟ್ಟ ಮೊದಲ ಹಂತದಲ್ಲೇ ಬಜೆಟ್ ಬೆಲೆಯೊಂದಿಗೆ ಅತ್ಯಧಿಕ ಬ್ಯಾಟರಿ ರೇಂಜ್ ಹೊಂದಿರುವ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿರ್ ಕಂಪನಿಯು ಇದೀಗ ಪ್ರಯಾಣಿಕ ಕಾರು ವಿಭಾಗಕ್ಕೂ ಪ್ರವೇಶಿಸುವ ಯೋಜನೆಯಲ್ಲಿದ್ದು, ಹೊಸ ಇವಿ ಕಾರಿನ ಹಲವಾರು ಟೀಸರ್ ಚಿತ್ರವನ್ನು ಈಗಾಗಲೇ ಹಂಚಿಕೊಳ್ಳಲಾಗಿದೆ.

ವಿದ್ಯುದ್ದೀಕರಣದ ವಿಶ್ವ ಭೂಪಟದಲ್ಲಿ ಭಾರತವನ್ನು ಸೇರಿಸುವುದು ಮತ್ತು ತನ್ನನ್ನು ವಿಶ್ವದರ್ಜೆಯ ಕಂಪನಿಯನ್ನಾಗಿ ಮಾಡುವುದು ಕಂಪನಿಯ ಉದ್ದೇಶವಾಗಿದೆ ಎಂದು ಹೇಳಿಕೊಂಡಿರುವ ಓಲಾ ಸಂಸ್ಥಾಪಕ ಅಧ್ಯಕ್ಷ ಭಾವಿಶ್ ಅಗರ್‌ವಾಲ್ ಅಗಸ್ಟ್ 15ರಂದು ಹೊಸ ಯೋಜನೆಯ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ತವಕದಲ್ಲಿದ್ದಾರೆ.

ಜೊತೆಗೆ ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಾಗಿ ಬ್ಯಾಟರಿ ಸೆಲ್‌ಗಳಲ್ಲಿ ಕೋರ್ ತಂತ್ರಜ್ಞಾನವನ್ನು ನಿರ್ಮಿಸುತ್ತಿದ್ದೇವೆ ಎಂದಿರುವ ಭಾವಿಶ್ ಅಗರ್‌ವಾಲ್ ಅವರು ಓಲಾದ ಎಲ್ಲಾ ಹೊಸ ತಂತ್ರಜ್ಞಾನಗಳು ಭಾರತದಲ್ಲಿ ತಯಾರಿಸಲಾಗಲಿದ್ದು, ಹೊಸ ತಂತ್ರಜ್ಞಾನಗಳನ್ನು ಭಾರತೀಯರೇ ತಯಾರಿಸಿದ್ದಾರೆ ಎಂದಿದ್ದಾರೆ.

ಸದ್ಯಕ್ಕೆ ಓಲಾ ಕಂಪನಿಯು ಬಿಡುಗಡೆ ಮಾಡಲಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಾಗಿ ಮಾರುಕಟ್ಟೆ ಒದಗಿಸುವುದು ಉತ್ಪಾದನಾ ಘಟಕದ ವಿಸ್ತರಣೆ ಮತ್ತು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಹೆಚ್ಚಳದ ಮೇಲೆ ಗಮನಹರಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳೊಂದಿಗೆ ಇವಿ ಕಾರುನ್ನು ಸಹ ನಿರ್ಮಾಣ ಮಾಡುವ ಸಿದ್ದತೆಯಲ್ಲಿದೆ.

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಕುರಿತು ಈಗಾಗಲೇ ವಿವಿಧ ಹಂತದ ಮಾರುಕಟ್ಟೆ ಅಧ್ಯಯನಗಳನ್ನು ಕೈಗೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕಾರುಗಳ ವಿಭಾಗದಲ್ಲಿ ವಾಣಿಜ್ಯ ಬಳಕೆಗಾಗಿ ಮತ್ತು ವ್ಯಯಕ್ತಿಕ ಬಳಕೆ ಮಾದರಿಗಳಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ತೆರೆಯಲಿದೆ.

ಭಾರತದಲ್ಲೇ ಪೂರ್ಣ ಪ್ರಮಾಣದ ಇವಿ ವಾಹನ ಉತ್ಪಾದನೆಯ ಗುರಿಹೊಂದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಭಾರತದಿಂದಲೇ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಇವಿ ವಾಹನಗಳನ್ನು ರಫ್ತು ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಬ್ಯಾಟರಿ ಸೆಲ್‌ಗಳ ಬೇಡಿಕೆಯನ್ನು ಪೂರೈಸಲು ಗಿಗಾ ಫ್ಯಾಕ್ಟರಿಯನ್ನು ಸ್ಥಾಪಿಸಲು ಯೋಜಿಸುತ್ತಿದೆ.


Click it and Unblock the Notifications








