ಲಾಜಿಸ್ಟಿಕ್ ಸೇವೆಗಳಿಗಾಗಿ 1500 ಓಮೆಗಾ ಸೈಕ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಹನಗಳನ್ನು ಖರೀದಿಸಿದ ಝಿಂಗೊ
ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಓಮೆಗಾ ಸೈಕ್ ಕಂಪನಿಯು ಇವಿ ತ್ರಿ ಚಕ್ರ ವಾಹನಗಳ ಉತ್ಪಾದನೆಯನ್ನು ತೀವ್ರಗೊಳಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ಹೊಸ ಪಾಲುದಾರಿಕೆ ಯೋಜನೆ ಅಡಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಲಾಜಿಸ್ಟಿಕ್ ವಿಭಾಗದಲ್ಲಿ ಬೇಡಿಕೆಗೆ ಅನಗುಣವಾಗಿ ಹೊಸ ಇವಿ ತ್ರಿ ಚಕ್ರ ವಾಹನ ಮಾದರಿಗಳನ್ನು ನಿರ್ಮಾಣಗೊಳಿಸುತ್ತಿರುವ ಓಮೆಗಾ ಸೈಕ್ ಕಂಪನಿಯು ಲಾಜಿಸ್ಟಿಕ್ ಕಂಪನಿಯಾಗಿರುವ ಝಿಂಗೊ ಲಾಜಿಸ್ಟಿಕ್ ಕಂಪನಿಯೊಂದಿಗೆ ಹೊಸ ಪಾಲುದಾರಿಕೆ ಪ್ರಕಟಿಸಿದ್ದು, ಹೊಸ ಪಾಲುದಾರಿಕೆ ಯೋಜನೆ ಅಡಿ ಝಿಂಗೊ ಕಂಪನಿಯು ತನ್ನ ಸರಕು ವಾಹನಗಳ ವಿಭಾಗದಲ್ಲಿ ಹೊಸದಾಗಿ 1500 ಇವಿ ತ್ರಿ ವಾಹನಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.

ಝಿಂಗೊ ಲಾಜಿಸ್ಟಿಕ್ ಕಂಪನಿಯು ಓಮೆಗಾ ಸೈಕ್ ನಿರ್ಮಾಣದ 1500 ರೇಜ್ ಪ್ಲಸ್ ತ್ರಿ ಚಕ್ರ ವಾಹನಗಳನ್ನು ಖರೀದಿಸಿದ್ದು, ಹೊಸ ವಾಹನಗಳನ್ನು ಕಂಪನಿಯು ಮುಂಬರುವ ಏಪ್ರಿಲ್‌ನಲ್ಲಿ ಎರಡು ಹಂತದಲ್ಲಿ ಬೇಡಿಕೆ ಸಲ್ಲಿಸಲಾಗಿರುವ ವಾಹನಗಳನ್ನು ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ಸದ್ಯ ಪ್ರಾಯೋಗಿಕ ಯೋಜನೆ ಭಾಗವಾಗಿ ಓಮೆಗಾ ಸೈಕ್ ನಿರ್ಮಾಣದ 1500 ರೇಜ್ ಪ್ಲಸ್ ತ್ರಿ ಚಕ್ರ ವಾಹನಗಳನ್ನು ಖರೀದಿಸಿರುವ ಝಿಂಗೊ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಇವಿ ಮಾದರಿಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳಿದ್ದು, ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಾರ್ಗೋ ಮಾದರಿಗಳನ್ನು ಪರಿಚಯಿಸುವ ಮೂಲಕ ಓಮೆಗಾ ಸೈಕ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ.

ತೈಲ ಬೆಲೆ ಹೆಚ್ಚಳ ಪರಿಣಾಮ ಸಾಂಪ್ರಾದಾಯಿಕ ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಜೊತೆಗೆ ವ್ಯಯಕ್ತಿಕ ಇವಿ ವಾಹನಗಳ ಜೊತೆಗೆ ಇವಿ ವಾಣಿಜ್ಯ ವಾಹನಗಳಿಗೂ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಓಮೆಗಾ ಸೈಕ್ ಕಂಪನಿಯು ತನ್ನ ಪ್ರಮುಖ ಇವಿ ವಾಹನಗಳ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ವ್ಯಯಕ್ತಿಕ ಇವಿ ವಾಹನ ಮಾದರಿಗಳಲ್ಲದೆ ವಾಣಿಜ್ಯ ಇವಿ ವಾಹನಗಳ ಮಾರಾಟವು ಸಹ ಹೆಚ್ಚಳವಾಗುತ್ತಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಓಮೆಗಾ ಸೈಕ್ ಕಂಪನಿಯು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಮಾರಾಟ ಮಳಿಗೆಗಳನ್ನು ಹೆಚ್ಚಿಸಲು ಹೊಸ ಪಾಲುದಾರಿಕೆ ಪ್ರಕಟಸಿದೆ.

ಓಮೆಗಾ ಸೈಕ್ ಕಂಪನಿಯು ಸದ್ಯ ದೇಶಾದ್ಯಂತ ಕೆಲವೇ ನಗರಗಳಲ್ಲಿ ಮಾರಾಟ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಇದೀಗ ಹೊಸ ಪಾಲುದಾರಿಕೆಯೊಂದಿಗೆ ವಿವಿಧ ನಗರಗಳಲ್ಲಿ 500 ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಾಗುತ್ತಿದೆ.

2023-24 ಹಣಕಾಸು ವರ್ಷದ ವೇಳೆಗೆ ಭಾರತದಾದ್ಯಂತ 500 ಡೀಲರ್‌ಶಿಪ್‌ಗಳನ್ನು ತೆರೆಯುವ ಗುರಿಹೊಂದಿರುವ ಓಮೆಗಾ ಸೈಕ್ ಕಂಪನಿಯು ಗೋಯೆಂಕಾ ಗ್ರೀನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ.

ದೇಶಾದ್ಯಂತ ಈಗಾಗಲೇ ಅತ್ಯುತ್ತಮ ಮಾರಾಟ ಮಳಿಗೆಗಳನ್ನು ಹೊಂದಿರುವ ಗೋಯೆಂಕಾ ಕಂಪನಿಯು ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ಮಾದರಿಗಳಿಗಾಗಿಯೇ ಪ್ರತ್ಯೇಕ ಮಾರಾಟ ಸೌಲಭ್ಯವನ್ನು ತೆರೆದಿದ್ದು, ಎಲೆಕ್ಟ್ರೋ ರೈಡ್ ಮಾರಾಟ ಮಳಿಗೆಗಳ ಮೂಲಕ ಒಂದೇ ಸೂರಿನಡಿ ವಿವಿಧ ಬ್ರಾಂಡ್ ವಾಣಿಜ್ಯ ಇವಿ ಮಾದರಿಗಳನ್ನು ಮಾರಾಟ ಮಾಡಲಿದೆ.

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು (EV) 2030 ರ ವೇಳೆಗೆ 152 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದ್ದು, ಬೆಳೆಯುತ್ತಿರುವ ಮಾರುಕಟ್ಟೆಯ ಲಾಭ ಪಡೆಯಲು ಒಮೆಗಾ ಸೈಕಿ ಮೊಬಿಲಿಟಿಯು ಕಳೆದ ವರ್ಷ ಫ್ಲೀಟ್ ವಿಭಾಗದಡಿಯಲ್ಲಿ 100ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ತೆರೆದಿದೆ.

ಒಮೆಗಾ ಸೈಕಿ ಮೊಬಿಲಿಟಿಯು ಇವಿ ವಾಹನಗಳ ಉತ್ಪಾದನೆ ಸ್ಥಳೀಯ ಬಿಡಿಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೇಂಜ್ ಪ್ಲಸ್ ಬ್ರ್ಯಾಂಡ್ ಅಡಿಯಲ್ಲಿ ತನ್ನದೇ ಆದ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ತಯಾರಿಸುತ್ತದೆ. ಕಂಪನಿಯು ರೇಜ್ ಪ್ಲಸ್ ಫ್ರಾಸ್ಟ್ ಬ್ರಾಂಡ್ ಹೆಸರಿನಲ್ಲಿ ಭಾರತದ ಮೊದಲ ರೆಫ್ರಿಜರೇಟೆಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಸಹ ಬಿಡುಗಡೆ ಮಾಡಿದೆ.

ಜೊತೆಗೆ ಅತ್ಯಾಧುನಿಕ IoT-ಆಧಾರಿತ ಎಂಡ್-ಟು-ಎಂಡ್ ತಂತ್ರಜ್ಞಾನ ಮೂಲಕ ಮೂಲಸೌಕರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದು, ಇವಿ ಉತ್ಪನ್ನ ಪೋರ್ಟ್‌ಫೋಲಿಯೊಗೆ ಹೊಸ ಮೌಲ್ಯವನ್ನು ಸೇರಿಸಲಾಗಿದೆ.

ಇದಲ್ಲದೇ ಓಮೆಗಾ ಸೈಕಿ ಕಂಪನಿಯೊಂದಿಗೆ ಪಾಲುದಾರಿಕೆ ಘೋಷಣೆ ಮಾಡಿರುವ ಚಾರ್ಜರ್ ಕಂಪನಿಯು ಸಹಾ ವಿಶೇಷವಾಗಿ ವಾಣಿಜ್ಯ ವಾಹನಗಳಿಗಾಗಿಯೇ ಪ್ರತ್ಯೇಕ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದೆ.

ಹೆಚ್ಚಿನ ಮಟ್ಟದ ವಾಣಿಜ್ಯ ಚಟುವಟಿಕೆ ಕಂಡುಬರುವ ಮಾರುಕಟ್ಟೆಗಳ ಪಾರ್ಕಿಂಗ್ ನಿಲ್ದಾಣಗಳಲ್ಲಿ, ಉಗ್ರಾಣಗಳ ವಾಹನ ನಿಲುಗಡೆ ಪ್ರದೇಶಗಳಲ್ಲಿ ಮತ್ತು ಸೂಪರ್ ಮಾರ್ಕೆಟ್‌ಗಳ ಆವರಣಗಳಲ್ಲಿ ಚಾರ್ಜರ್ ಕಂಪನಿಯು ಓಮೆಗಾ ಸೈಕಿ ಇವಿ ವಾಣಿಜ್ಯ ವಾಹನಗಳಿಗಾಗಿ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದೆ.

ಚಾರ್ಜರ್ ಕಂಪನಿಯು ಗ್ರಾಹಕರ ಬೇಡಿಕೆ ಆಧಾರದ ಮೇಲೆ 3.3kW ಸಾಮರ್ಥ್ಯದ ಚಾರ್ಜರ್ ಲೈಟ್ ಮತ್ತು 22kW ಸಾಮರ್ಥ್ಯದ ಚಾರ್ಜರ್ ಟೆರಾ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದು, ಇದರಲ್ಲಿ ಚಾರ್ಜರ್ ಲೈಟ್ ಚಾರ್ಜಿಂಗ್ ಸೌಲಭ್ಯವನ್ನು ಇವಿ ವಾಹನ ಮಾಲೀಕರು ವ್ಯಯಕ್ತಿಕ ಬಳಕೆಗಾಗಿ ಅಳವಡಿಸಿಕೊಳ್ಳಬಹುದಾಗಿದೆ.


Click it and Unblock the Notifications








