Just In
Don't Miss!
- Sports
Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್
- Movies
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದ ಆಮಿರ್ ಖಾನ್: 25 ಲಕ್ಷ ರೂ. ದೇಣಿಗೆ!
- News
ಮೊಟ್ಟೆ ಕೊಡಲು ಕಾಸಿಲ್ಲ, ಶಿಕ್ಷಣ ಸಚಿವರ ಜಾಲತಾಣಕ್ಕೆ ಇದೆಯೇ?: ಕಾಂಗ್ರೆಸ್ ಟೀಕೆ
- Finance
ಜೂ.28ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಆಷಾಢ ಮಾಸ 2022: ಆಷಾಢದಲ್ಲಿ ಗರ್ಭವತಿಯಾದರೆ ಅಶುಭ ಎನ್ನಲು ವೈಜ್ಞಾನಿಕ ಕಾರಣ ಇದೇ ನೋಡಿ
- Technology
Reliance Jio: ಮುಖೇಶ್ ಅಂಬಾನಿ ರಾಜೀನಾಮೆ; ಆಕಾಶ್ ಅಂಬಾನಿ ನೂತನ ಸಾರಥಿ!
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಹೊಸ ಪಾಲುದಾರಿಕೆ ಯೋಜನೆ ಅಡಿ 10 ಸಾವಿರ ಇವಿ ವಾಹನ ಅಳವಡಿಸಿಕೊಳ್ಳಲಿವೆ ಒಮೆಗಾ ಸೈಕ್ ಮತ್ತು ಲಾಗ್9
ಹೆಚ್ಚುತ್ತಿರುವ ಇಂಧನ ದರ ಪರಿಣಾಮ ಇವಿ ವಾಹನಗಳ ಬೇಡಿಕೆ ಸಾಕಷ್ಟು ಏರಿಕೆಯಾಗುತ್ತಿದ್ದು, ವ್ಯಯಕ್ತಿಕ ಇವಿ ವಾಹನಗಳಷ್ಟೇ ಅಲ್ಲದೆ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಕೂಡಾ ಇವಿ ವಾಹನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇವಿ ವಾಣಿಜ್ಯ ವಾಹನ ಉತ್ಪಾದನೆಯಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಒಮೆಗಾ ಸೈಕ್ ಕಂಪನಿಯು ವಿವಿಧ ಕಂಪನಿಗಳ ಜೊತೆಗೂಡಿ ಇವಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದು, ಇದೀಗ ಕಂಪನಿಯು ಇವಿ ಬ್ಯಾಟರಿ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿರುವ ಲಾಗ್9 ಕಂಪನಿ ಜೊತೆಗೂಡಿ ಹೊಸ ಪಾಲುದಾರಿಕೆ ಯೋಜನೆಯನ್ನು ಪ್ರಕಟಿಸಿದೆ.

ಹೊಸ ಪಾಲುದಾರಿಕೆ ಯೋಜನೆ ಅಡಿ ಒಮೆಗಾ ಸೈಕ್ ಕಂಪನಿಯು ಮುಂಬರುವ 2024ರ ವೇಳೆಗೆ ಸುಮಾರು 10 ಸಾವಿರ ಇವಿ ತ್ರಿ-ಚಕ್ರ ವಾಹನಗಳನ್ನು ಲಾಜಿಸ್ಟಿಕ್ ವಿಭಾಗದಲ್ಲಿ ಸೇರ್ಪಡೆಗೊಳಿಸುತ್ತಿದ್ದು, ಹೊಸ ಇವಿ ವಾಹನಗಳಿಗೆ ಬ್ಯಾಟರಿ ಅಳವಡಿಕೆ ಮತ್ತು ಚಾರ್ಜಿಂಗ್ ನಿರ್ವಹಣೆಗಾಗಿ ಪಾಲುದಾರಿಕೆ ಪ್ರಕಟಿಸಿವೆ.

ಲಾಗ್9 ಕಂಪನಿಯು ತನ್ನದೆ ಆದ ಹೊಸ ತಂತ್ರಜ್ಞಾನ ಅಭಿವೃದ್ದಿ ಯೋಜನೆ ಅಡಿ ಪ್ರಮುಖ ಇವಿ ವಾಹನ ತಯಾರಕ ಕಂಪನಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಒದಗಿಸುತ್ತಿದ್ದು, ಜೊತೆಗೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸೇವೆಯನ್ನು ಒದಗಿಸುತ್ತಿದೆ.

ಹೀಗಾಗಿ ಲಾಗ್9 ಕಂಪನಿಯ ಜೊತೆ ಕೈಜೋಡಿಸಿರುವ ಒಮೆಗಾ ಸೈಕ್ ಕಂಪನಿಯು ಇನ್ಮುಂದೆ ಹೊಸದಾಗಿ ನಿರ್ಮಾಣಗೊಳ್ಳಲಿರುವ ಇವಿ ತ್ರಿ-ಚಕ್ರ ವಾಹನಗಳಿಗೆ ಲಾಗ್9 ನಿರ್ಮಾಣದ ಬ್ಯಾಟರಿ ಪ್ಯಾಕ್ ಅಳವಡಿಸಿಕೊಳ್ಳಲಿದ್ದು, ಲಾಗ್9 ಚಾರ್ಜಿಂಗ್ ನಿಲ್ದಾಣಗಳಲ್ಲಿಯೇ ಕೇವಲ 35 ನಿಮಿಷಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಮಾಡುವ ಲಾಗ್9 ಇನ್‌ಸ್ಟಾಚಾರ್ಜ್ ಬ್ಯಾಟರಿ ಸೌಲಭ್ಯವು ಸಾಮಾನ್ಯ ಲೀಥಿಯಂ ಅಯಾನ್ ಬ್ಯಾಟರಿಗಿಂತಲೂ 9 ಪಟ್ಟು ಹೆಚ್ಚು ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೊಂದಿದ್ದು, ಹೊಸ ಬ್ಯಾಟರಿಯು -30 ಡಿಗ್ರಿಯಿಂದ 60 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಅಚ್ಚುಕಟ್ಟಾಗಿ ಕಾರ್ಯಾನಿರ್ವಹಿಸುದಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಬ್ಯಾಟರಿ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದೆ.

ಹೀಗಾಗಿ ಲಾಗ್9 ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಮಾದರಿಗಾಗಿ ಪ್ರಮುಖ ಇವಿ ಕಂಪನಿಗಳು ಸಹಭಾಗಿತ್ವ ಪ್ರಕಟಿಸುತ್ತಿದ್ದು, ಇದೀಗ ಒಮೆಗಾ ಸೈಕ್ ಕಂಪನಿಯು ಸಹ ಹೊಸ ಪಾಲುದಾರಿಕೆ ಯೋಜನೆ ಅಡಿ ಭಾರೀ ಪ್ರಮಾಣದ ಇವಿ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದೆ.

ಇನ್ನು ತೈಲ ಬೆಲೆ ಹೆಚ್ಚಳ ಪರಿಣಾಮ ಸಾಂಪ್ರಾದಾಯಿಕ ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಜೊತೆಗೆ ವ್ಯಯಕ್ತಿಕ ಇವಿ ವಾಹನಗಳ ಜೊತೆಗೆ ಇವಿ ವಾಣಿಜ್ಯ ವಾಹನಗಳಿಗೂ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಓಮೆಗಾ ಸೈಕ್ ಕಂಪನಿಯು ತನ್ನ ಪ್ರಮುಖ ಇವಿ ವಾಹನಗಳ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ವ್ಯಯಕ್ತಿಕ ಇವಿ ವಾಹನ ಮಾದರಿಗಳಲ್ಲದೆ ವಾಣಿಜ್ಯ ಇವಿ ವಾಹನಗಳ ಮಾರಾಟವು ಸಹ ಹೆಚ್ಚಳವಾಗುತ್ತಿದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಓಮೆಗಾ ಸೈಕ್ ಕಂಪನಿಯು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದ್ದು, ಮಾರಾಟ ಮಳಿಗೆಗಳನ್ನು ಹೆಚ್ಚಿಸಲು ಹೊಸ ಪಾಲುದಾರಿಕೆ ಪ್ರಕಟಸಿದೆ.

ಓಮೆಗಾ ಸೈಕ್ ಕಂಪನಿಯು ಸದ್ಯ ದೇಶಾದ್ಯಂತ ಕೆಲವೇ ನಗರಗಳಲ್ಲಿ ಮಾರಾಟ ಸೌಲಭ್ಯಕ್ಕೆ ಚಾಲನೆ ನೀಡಿದ್ದು, ಹೊಸ ಪಾಲುದಾರಿಕೆಯೊಂದಿಗೆ ವಿವಿಧ ನಗರಗಳಲ್ಲಿ 500 ಮಾರಾಟ ಮಳಿಗೆಗಳ ಮೂಲಕ ಖರೀದಿಗೆ ಲಭ್ಯವಾಗುತ್ತಿದೆ.

2023-24 ಹಣಕಾಸು ವರ್ಷದ ವೇಳೆಗೆ ಭಾರತದಾದ್ಯಂತ 500 ಡೀಲರ್‌ಶಿಪ್‌ಗಳನ್ನು ತೆರೆಯುವ ಗುರಿಹೊಂದಿರುವ ಓಮೆಗಾ ಸೈಕ್ ಕಂಪನಿಯು ಗೋಯೆಂಕಾ ಗ್ರೀನ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ.

ದೇಶಾದ್ಯಂತ ಈಗಾಗಲೇ ಅತ್ಯುತ್ತಮ ಮಾರಾಟ ಮಳಿಗೆಗಳನ್ನು ಹೊಂದಿರುವ ಗೋಯೆಂಕಾ ಕಂಪನಿಯು ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ಮಾದರಿಗಳಿಗಾಗಿಯೇ ಪ್ರತ್ಯೇಕ ಮಾರಾಟ ಸೌಲಭ್ಯವನ್ನು ತೆರೆದಿದ್ದು, ಎಲೆಕ್ಟ್ರೋ ರೈಡ್ ಮಾರಾಟ ಮಳಿಗೆಗಳ ಮೂಲಕ ಒಂದೇ ಸೂರಿನಡಿ ವಿವಿಧ ಬ್ರಾಂಡ್ ವಾಣಿಜ್ಯ ಇವಿ ಮಾದರಿಗಳನ್ನು ಮಾರಾಟ ಮಾಡಲಿದೆ.

ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು (EV) 2030 ರ ವೇಳೆಗೆ 152 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದ್ದು, ಬೆಳೆಯುತ್ತಿರುವ ಮಾರುಕಟ್ಟೆಯ ಲಾಭ ಪಡೆಯಲು ಒಮೆಗಾ ಸೈಕಿ ಮೊಬಿಲಿಟಿಯು ಕಳೆದ ವರ್ಷ ಫ್ಲೀಟ್ ವಿಭಾಗದಡಿಯಲ್ಲಿ 100ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ತೆರೆದಿದೆ.

ಒಮೆಗಾ ಸೈಕಿ ಮೊಬಿಲಿಟಿಯು ಇವಿ ವಾಹನಗಳ ಉತ್ಪಾದನೆ ಸ್ಥಳೀಯ ಬಿಡಿಭಾಗಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರೇಂಜ್ ಪ್ಲಸ್ ಬ್ರ್ಯಾಂಡ್ ಅಡಿಯಲ್ಲಿ ತನ್ನದೇ ಆದ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ತಯಾರಿಸುತ್ತದೆ. ಕಂಪನಿಯು ರೇಜ್ ಪ್ಲಸ್ ಫ್ರಾಸ್ಟ್ ಬ್ರಾಂಡ್ ಹೆಸರಿನಲ್ಲಿ ಭಾರತದ ಮೊದಲ ರೆಫ್ರಿಜರೇಟೆಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಸಹ ಬಿಡುಗಡೆ ಮಾಡಿದೆ.

ಜೊತೆಗೆ ಅತ್ಯಾಧುನಿಕ IoT-ಆಧಾರಿತ ಎಂಡ್-ಟು-ಎಂಡ್ ತಂತ್ರಜ್ಞಾನ ಮೂಲಕ ಮೂಲಸೌಕರ್ಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಿದ್ದು, ಇವಿ ಉತ್ಪನ್ನ ಪೋರ್ಟ್‌ಫೋಲಿಯೊಗೆ ಹೊಸ ಮೌಲ್ಯವನ್ನು ಸೇರಿಸಲಾಗಿದೆ.