YouTube

ಮಾರುತಿ ಸುಜುಕಿ ಬಲೆನೊದಲ್ಲಿ OTA ಅಪ್‌ಡೇಟ್: ಇಲ್ಲಿದೆ ಮಾಹಿತಿ

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಮಾರುತಿ ಸುಜುಕಿ ಕಂಪನಿ ಕಾರುಗಳನ್ನು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಅದರ ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆ ಖರೀದಿದಾರರನ್ನು ತನ್ನತ್ತ ಸೆಳೆಯುತ್ತದೆ ಎಂದು ಹೇಳಬಹುದು. ಇದೀಗ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಇತ್ತೀಚಿನ ಮಾದರಿಗೆ OTA ಅಪ್‌ಡೇಟ್ ಮಾಡಿದೆ.

ಈ ಇತ್ತೀಚಿನ OTA ಅಪ್‌ಡೇಟ್ ಹೊಸ ಮಾರುತಿ ಸುಜುಕಿ ಬಲೆನೊ ಕಾರು ಮಾಲೀಕರಿಗೆ ಹೆಡ್-ಅಪ್ ಡಿಸ್‌ಪ್ಲೇಯಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ವೈಶಿಷ್ಟ್ಯದ ಜೊತೆಗೆ ವೈರ್‌ಲೆಸ್ Apple CarPlay ಮತ್ತು Android Auto ವೈಶಿಷ್ಟ್ಯಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಬಹುದು. ಇಲ್ಲಿ ಲೇಖನದಲ್ಲಿ ಮಾರುತಿ ಸುಜುಕಿ ಬಲೆನೊದಲ್ಲಿ ದೊರುವ ಇತರೆ ವೈಶಿಷ್ಟ್ಯಗಳು, ಎಂಜಿನ್ ಕಾರ್ಯಕ್ಷಮತೆ ಬೆಲೆ, ಸೇರಿದಂತೆ ಇತರೆ ಪ್ರಮುಖ ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಇತ್ತೀಚಿನ OTA ಅಪ್‌ಡೇಟ್ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳ ಇತ್ತೀಚಿನ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ ಎಂದು ಹೇಳಬಹುದು. ಇದಲ್ಲದೆ, ಕಾರು ಮಾಲೀಕರು, ಸ್ಮಾರ್ಟ್‌ಫೋನ್‌ನಲ್ಲಿ ಇತ್ತೀಚಿನ OTA ಅಪ್‌ಡೇಟ್ ಡೌನ್‌ಲೋಡ್ ಮಾಡುವ ಮೂಲಕ ಪ್ರಸ್ತುತ ವೈಶಿಷ್ಟ್ಯಗಳನ್ನು ಅನ್‌ಲಾಕ್ ಮಾಡಬಹುದು. ಇದು ಗ್ರಾಹಕರಿಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಬಹುದು. ಇದರಿಂದಲೇ ಮಾರುತಿ ಸುಜುಕಿ ಬಲೆನೊ ಕಾರುಗಳು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ.

2022ರಲ್ಲಿ ಮಾರುಕಟ್ಟೆಗೆ ಬಂದ ಬಲೆನೊ ಬಗ್ಗೆ ಹೆಳುವುದಾದರೆ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸಾಕಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದ್ದು, ಇದು ನವೀಕರಿಸಿದ MID ಡಿಸ್ಪ್ಲೇ, ದೊಡ್ಡ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಹೆಡ್ಸ್-ಅಪ್ ಡಿಸ್‌ಪ್ಲೇಯಂತಹ ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಅಲೆಕ್ಸಾ ಹೊಂದಾಣಿಕೆ, ಕ್ರೂಸ್ ಕಂಟ್ರೋಲ್, ಕನೆಕ್ಟ್ದ್ ಕಾರ್ ಟೆಕ್, AC ವೆಂಟ್‌ಗಳು, Arkamys ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ.

ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಹೊಸ ಬಲೆನೊ 1.2-ಲೀಟರ್, 4-ಸಿಲಿಂಡರ್, ನ್ಯಾಚುರಲ್-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 89 bhp ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಹೊರತಾಗಿ, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ ಎಂದು ಹೇಳಬಹುದು.

ಮಾರುತಿ ಸುಜುಕಿ ಭಾರತದಲ್ಲಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ರೂಪಾಂತರವನ್ನು ಪರಿಚಯಿಸಿದ್ದು, ಸಿಎನ್‌ಜಿ ಹ್ಯಾಚ್‌ಬ್ಯಾಕ್‌ನ ಬೇಸ್ 'ಡೆಲ್ಟಾ' ರೂಪಾಂತರದ ಆರಂಭಿಕ ಬೆಲೆ ರೂ.8.28 ಲಕ್ಷ (ಎಕ್ಸ್-ಶೋರೂಮ್, ಭಾರತ) ಇದ್ದು. ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್-ಚಾಲಿತ ರೂಪಾಂತರಗಳಿಗಿಂತ ಹೊಸ ಬಲೆನೊ ಎಸ್-ಸಿಎನ್‌ಜಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ 95,000 ರೂ. ಹೆಚ್ಚಿನ ದರ ಹೊಂದಿದೆ. ಪೆಟೋಲ್, ಡೀಸೆಲ್ ಚಾಲಿತ ಕಾರುಗಳಿಗೆ ಹೋಲಿಕೆ ಮಾಡಿದರೆ ಸಿಎನ್‌ಜಿ ಕಾರುಗಳ ನಿರ್ವಹಣಾ ವೆಚ್ಚ ಕಡಿಮೆ ಇದೆ. ಇದರಿಂದ ಈ ಕಾರುಗಳನ್ನು ಖರೀದಿಸಲು ಗ್ರಾಹಕರು ಲೈಕ್ ಮಾಡುತ್ತಾರೆ.

ಒಟ್ಟಾರೆಯಾಗಿ, ಇತ್ತೀಚಿನ ಅಪ್‌ಡೇಟ್ ಮಾರುತಿ ಸುಜುಕಿ ಬಲೆನೊವನ್ನು ಇನ್ನಷ್ಟು ವೈಶಿಷ್ಟ್ಯ ಪೂರ್ಣವಾಗಿ ಮಾಡಿದೆ. ಇದು ಟೆಕ್-ಪ್ಯಾಕ್ಡ್, ವಿಶಾಲವಾದ, ಆರಾಮದಾಯಕ ಮತ್ತು ಕಡಿಮೆ ಇಂಧನ ಖರ್ಚಿನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಾಗಿ ಹುಡುಕುತ್ತಿರುವ ಯಾರಿಗಾದರೂ ಉತ್ತಮವಾಗಿ ಆಯ್ಕೆ ಹೊಂದಿರುವ ಕಾರಾಗಿರುತ್ತದೆ. ಇದಲ್ಲದೆ, ಇಂಡೋ-ಜಪಾನೀಸ್ ವಾಹನ ತಯಾರಕರು ಭವಿಷ್ಯದಲ್ಲಿ ಇನ್ನೂ ಕೆಲವು ಅಪ್‌ಡೇಟ್ ಮಾಡಲಿದ್ದಾರೆ ಎಂಬುದನ್ನು ಅಂದಾಜಿಸಲಾಗಿದೆ. ಈ ಕಾರಣದಿಂದಲೇ ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಖರೀದಿ ಮಾಡಲು ಗ್ರಾಹಕರು ಆಸಕ್ತಿ ತೋರಿಸುತ್ತಾರೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
Ota update on maruti suzuki baleno here is the information
Story first published: Sunday, December 25, 2022, 9:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X