ರಿಕಾಲ್ ಆಗುತ್ತಿದೆ ದೋಷಪೂರಿತ 5 ಸಾವಿರಕ್ಕೂ ಹೆಚ್ಚು ಮಾರುತಿ ಸೂಪರ್ ಕ್ಯಾರಿ
ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಸೂಪರ್ ಕ್ಯಾರಿ(Maruti Suzuki Super Carry) ಮಿನಿ ಟ್ರಕ್ ಮಾದರಿಯಲ್ಲಿ ಕೆಲವು ದೋಷ ಕಂಡು ಬಂದ ಹಿನ್ನಲೆಯಲ್ಲಿ 5,002 ಯುನಿಟ್ ಗಳನ್ನು ಹಿಂಪಡೆಯುವುದಾಗಿ ಘೋಷಿಸಿದೆ.

ಹಿಂಪಡೆಯಲಾದ ವಾಹನಗಳನ್ನು 2022ರ ಮೇ 4 ಮತ್ತು 30 ಜುಲೈ 2022 ರ ನಡುವೆ ತಯಾರಿಸಲಾಗಿದೆ. ದೋಷಪೂರಿತ ಸೀಟ್ ಬೆಲ್ಟ್‌ಗಳನ್ನು ಸರಿಪಡಿಸಲು ರಿಕಾಲ್ ಮಾಡಲಾಗುತ್ತಿದೆ, ಸಹ-ಚಾಲಕ ಸೀಟಿನ ಸೀಟ್ ಬೆಲ್ಟ್ ಬಕಲ್ ಬ್ರಾಕೆಟ್‌ಗೆ ಜೋಡಿಸಲಾದ ಬೋಲ್ಟ್‌ನ ತಪಾಸಣೆ ಮತ್ತು ಟಾರ್ಕ್ ಮಾಡಲು ಹಿಂಪಡೆಯುವಿಕೆಯನ್ನು ಕೈಗೊಳ್ಳಲಾಗುತ್ತಿದೆ. ಬೋಲ್ಟ್ ಟಾರ್ಕಿಂಗ್‌ನಲ್ಲಿ ಸಂಭವನೀಯ ದೋಷವಿದೆ ಎಂದು ಶಂಕಿಸಲಾಗಿದೆ, ಇದು ಅಪರೂಪದ ಸಂದರ್ಭದಲ್ಲಿ, ದೀರ್ಘಾವಧಿಯಲ್ಲಿ ಸಡಿಲಗೊಳ್ಳಬಹುದು" ಎಂದು ಕಂಪನಿ ತಿಳಿಸಿದೆ.

ದೋಷ ಪೋರಿತ ವಾಹನ ಮಾಲೀಕರು ಮಾರುತಿ ಸುಜುಕಿ ಅಧಿಕೃತ ಸರ್ವಿಸ್ ಸೆಂಟರ್ ಗಳಲ್ಲಿ ತಪಾಸಣೆ ಮತ್ತು ಉಚಿತವಾಗಿ ಸರಿಪಡಿಸಿಕೊಳ್ಳಬಹುದು. 2016 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಸೂಪರ್ ಕ್ಯಾರಿಯು ಸಬ್-ಒನ್-ಟನ್ ಲೈಟ್ ಕಮರ್ಷಿಯಲ್ ವೆಹಿಕಲ್ (LCV) ಆಗಿದ್ದು, ಇದನ್ನು ಪೆಟ್ರೋಲ್ ಮತ್ತು CNG ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಿನಿ ಟ್ರಕ್ ಅನ್ನು ಭಾರತದಾದ್ಯಂತ 335 ಮಾರುತಿ ಸುಜುಕಿ ವಾಣಿಜ್ಯ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸೂಪರ್ ಕ್ಯಾರಿ ಜೊತೆಗೆ, ವಾಣಿಜ್ಯ ಚಾನೆಲ್ ಇಕೋ ಕಾರ್ಗೋ ಮತ್ತು ಟೂರ್ ರೇಂಜ್ (ಟೂರ್ ಹೆಚ್1, ಟೂರ್ ಎಸ್, ಟೂರ್ ಎಂ ಮತ್ತು ಟೂರ್ ವಿ) ಅನ್ನು ಸಹ ಮಾರಾಟ ಮಾಡುತ್ತಿದೆ.

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಸೂಪರ್ ಕ್ಯಾರಿ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಸೂಪರ್ ಕ್ಯಾರಿ ಮಾದರಿಯನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಾದರಿಯು ರಿವರ್ಸ್ ಪಾರ್ಕಿಂಗ್ ಅಸಿಸ್ಟ್ (ಆರ್‌ಪಿಎಎಸ್) ಸಿಸ್ಟಂ ಅನ್ನು ಪಡೆದುಕೊಂಡಿದೆ.

ಈ ಹೊಸ ಸುರಕ್ಷತಾ ವೈಶಿಷ್ಟ್ಯವು ಈಗ ವಾಹನದ ಮೇಲೆ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಆಗಿ ಲಭ್ಯವಿರುತ್ತದೆ. ಈ ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಾದರಿಯ ಎಲ್ಲಾ ರೂಪಾಂತರಗಳು ಆರ್‌ಪಿಎಎಸ್ ಸಿಸ್ಟಂ ಅನ್ನು ಹೊಂದಿರುತ್ತದೆ. ಈ ಹೊಸ ಫೀಚರ್ ಮತ್ತು ಇದರ ಬೆಲೆಯ ಬದಲಾವಣೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಮಾರುತಿ ಸುಜುಕಿ 2016ರಲ್ಲಿ ಸೂಪರ್ ಕ್ಯಾರಿಯೊಂದಿಗೆ ಕಮರ್ಷಿಯಲ್ ವಾಹನಗಳ ವಿಭಾಗಕ್ಕೆ ಕಾಲಿಟ್ಟಿತ್ತು. ಮಾರುತಿ ಸುಜುಕಿ ಸೂಪರ್ ಕ್ಯಾರಿ ಕಮರ್ಷಿಯಲ್ ವಾಹನಗಳ ವಿಭಾಗದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಮಿನಿ-ಟ್ರಕ್ ಆಗಿದೆ. ಈ ಸೂಪರ್ ಕ್ಯಾರಿ ಸಿಎನ್‌ಜಿಯು ಸ್ಮಾರ್ಟ್ ಹೈಬ್ರಿಡ್ ವಾಹನಗಳನ್ನು ಒಳಗೊಂಡಿರುವ ಬ್ರ್ಯಾಂಡ್‌ನ 'ಮಿಷನ್ ಗ್ರೀನ್ ಮಿಲಿಯನ್' ಭಾಗವಾಗಿದೆ.

ವಿಶೇಷವಾಗಿ ಈ ಮಿನಿ ಲೈಟ್ ಕಮರ್ಷಿಯಲ್ ವೆಹಿಕಲ್ ವಿಭಾಗದ ವಾಹನಗಳ ಬಳೆಕೆದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸೂಪರ್ ಕ್ಯಾರಿಯು ಹೆಚ್ಚು ಪವರ್, ವಿಶಾಲವಾದ ಸ್ಪೇಸ್, ಉತ್ತಮ ಗುಣಮಟ್ಟ ಮತ್ತು ಬಹುಮುಖ ಡೆಕ್ ಅನ್ನು ಹೊಂದಿರುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಸೂಪರ್ ಕ್ಯಾರಿ ವ್ಯಾನ್ - ಸ್ಟ್ಯಾಂಡರ್ಡ್, ಎಸ್-ಸಿಎನ್‌ಜಿ ಹಾಗೂ ಕ್ಯಾಪ್ ಚಾಸಿಸ್ ಮಾದರಿಗಳಲ್ಲಿ ಮಾರಾಟವಾಗುತ್ತದೆ.

ಸ್ಟ್ಯಾಂಡರ್ಡ್ ಮಾದರಿಯಲ್ಲಿ 1.2 ಲೀಟರಿನ, 4 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, ಎಸ್-ಸಿಎನ್‌ಜಿ ಮಾದರಿಯಲ್ಲಿ 1.2 ಲೀಟರಿನ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಎಂಜಿನ್ ಅನ್ನು ಕ್ಯಾಪ್ ಚಾಸಿಸ್ ಮಾದರಿಯಲ್ಲಿಯೂ ಅಳವಡಿಸಲಾಗಿದೆ.

ಈ ಸೂಪರ್ ಕ್ಯಾರಿ ಮಿನಿಟ್ರಕ್ 2183 ಎಂಎಂ ಉದ್ದ ಮತ್ತು 1488 ಎಂಎಂ ಅಗಲದ ಡೆಕ್ ಅನ್ನು ಹೊಂದಿದೆ, ಇದು ಸರಕು ಸಾಮಾನುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಇದು 740 ಕೆಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಮಿನಿಟ್ರಕ್ 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ವಾಹನದಲ್ಲಿ ಹಲವಾರು ಫೀಚರ್ ಗಳನ್ನು ಹೊಂದಿದೆ. ಇದರಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್-ಬೆಲ್ಟ್ ರಿಮೈಂಡರ್, ಲಾಕ್ ಮಾಡಬಹುದಾದ ಗ್ಲೋವ್‌ಬಾಕ್ಸ್, ದೊಡ್ಡ ಲೋಡಿಂಗ್ ಡೆಕ್ ಮತ್ತು ಇನ್ನು ಹಲವು ಫೀಚರ್ ಗಳನ್ನು ಒಳಗೊಂಡಿದೆ,

ಸೂಪರ್ ಕ್ಯಾರಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಆಗಿದೆ. ಮಾರುತಿ ಸುಜುಕಿ ಸೂಪರ್ ಕ್ಯಾರಿ ಎಲ್‌ಸಿವಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಏಸ್ ಗೆ ಪೈಪೋಟಿಯನ್ನು ನೀಡುತ್ತಿದೆ. ಮಾರುತಿ ಸುಜುಕಿ ಸೂಪರ್ ಕ್ಯಾರಿಯು ದೇಶದ ಮೊದಲ 4 ಸಿಲಿಂಡರ್ ಚಾಲಿತ ಮಿನಿ ಟ್ರಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ವಿಶೇಷತೆಗಳನ್ನು ಕೂಡ ಒಳಗೊಂಡಿವೆ. ಇನ್ನು ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕಳೆದ ತಿಂಗಳ ಮಾರಾಟದಲ್ಲಿಯು ಪಾರುಪತ್ಯ ಮುಂದುವರೆಸಿದೆ. ಮಾರುತಿ ಸುಜುಕಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರತಿ ಮಾಸಿಕ ಪ್ರಯಾಣಿಕ ಕಾರು ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ತನ್ನ ಸರಣಿಯಲ್ಲಿ ಹಲವು ವೈವಿಧ್ಯಮಯ ಮಾದರಿಗಳನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯ ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿ ಯಶ್ವಸಿಯಾಗಿದೆ. ಇಂಡೋ-ಜಪಾನೀಸ್ ವಾಹನ ತಯಾರಕರು ಕಳೆದ ತಿಂಗಳು ಮಾರಾಟದ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದರು, ಅದೂ ಸಹ ಎಲ್ಲಾ ಪ್ರತಿಸ್ಪರ್ಧಿ ಕಾರು ತಯಾರಕರಿಗಿಂತ ಆರಾಮದಾಯಕ ಮುನ್ನಡೆ ಸಾಧಿಸಿದೆ.


Click it and Unblock the Notifications