Just In
- 8 hrs ago
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- 9 hrs ago
2030 ರ ವೇಳೆಗೆ EV ವಾಹನ ಮಾರಾಟ 1 ಕೋಟಿ ಯೂನಿಟ್ಗಳನ್ನು ಮುಟ್ಟಲಿದೆ: ಆರ್ಥಿಕ ಸಮೀಕ್ಷೆ
- 11 hrs ago
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- 12 hrs ago
ಕೈಗೆಟಕುವ ಬೆಲೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್!... ಫೆ. 9 ರಂದು ಓಲಾದಿಂದ ಮಹತ್ವದ ಘೋಷಣೆ
Don't Miss!
- Movies
ಅಪ್ಪು ಆಶಿರ್ವಾದದೊಂದಿಗೆ ದಿನಕರ್ ಸಿನಿಮಾ: ಅಶ್ವಿನಿ ಪುನೀತ್ ರಾಜ್ಕುಮಾರ್ ಟೈಟಲ್ ರಿವೀಲ್
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ತಲೆಮಾರಿನ ಮಾರುತಿ ಆಲ್ಟೊ K10 ನಾಳೆ ಬಿಡುಗಡೆ: ನಿರೀಕ್ಷಿತ ಬೆಲೆ, ವಿಶೇಷತೆ, ವೈಶಿಷ್ಟ್ಯಗಳು
ಹೊಸ 2022 ಮಾರುತಿ ಸುಜುಕಿ ಆಲ್ಟೊ K10 ಭಾರತದಲ್ಲಿ ನಾಳೆ (ಆಗಸ್ಟ್ 18) ಬಿಡುಗಡೆಯಾಗಲಿದೆ.
Recommended Video
ಈ ಮುಂಬರುವ ಫ್ಯಾಮಿಲಿ ಹ್ಯಾಚ್‌ಬ್ಯಾಕ್‌ನ ನಿರೀಕ್ಷಿತ ಬೆಲೆ, ವಿಶೇಷತೆಗಳು ಮತ್ತು ವೈಶಿಷ್ಟ್ಯಗಳ ಕುರಿತ ಒಂದಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಆಲ್ಟೊ ಕೆ10 ನ ಹೊಸ-ಪೀಳಿಗೆಯ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಹೊಸ 2022 ಮಾರುತಿ ಸುಜುಕಿ ಆಲ್ಟೊ ಕೆ10 ಅನ್ನು ಪ್ರವೇಶ ಮಟ್ಟದ ಆಲ್ಟೊ 800 ಜೊತೆಗೆ ಮಾರಾಟ ಮಾಡಲಾಗುತ್ತದೆ. ಇನ್ನು ಈಗಾಗಲೇ ಪ್ರೀ-ಬುಕಿಂಗ್ ಆರಂಭಿಸಿರುವ ಕಂಪನಿಯು ರೂ. 11,000 ಬುಕಿಂಗ್ ಮೊತ್ತವನ್ನು ನಿಗದಿಪಡಿಸಿದೆ.

ಅದರ ಬಣ್ಣಗಳ ಕುರಿತ ಮಾಹಿತಿ ಈಗಾಗಲೇ ಅಂತರ್ಜಾಲದಲ್ಲಿ ಸೋರಿಕೆಯಾಗಿದೆ. ಅಲ್ಲದೇ 2022 ಮಾರುತಿ ಸುಜುಕಿ ಆಲ್ಟೊ ಕೆ10 ನ ವಿಶೇಷತೆಗಳು ಮತ್ತು ರೂಪಾಂತರದ ವಿವರಗಳು ಕೂಡ ಸೋರಿಕೆಯಾಗಿವೆ. ಹಾಗಾದರೆ ಹೊಸ 2022 ಮಾರುತಿ ಸುಜುಕಿ ಆಲ್ಟೊ ಕೆ10 ನಿಂದ ಏನಲ್ಲಾ ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ವಿನ್ಯಾಸ, ಬಣ್ಣ, ವೇರಿಯಂಟ್‌ಗಳು
ಹೊಸ ಮಾರುತಿ ಸುಜುಕಿ ಆಲ್ಟೊ ಕೆ10 ಕಂಪನಿಯ ಮಾಡ್ಯುಲರ್ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ವಿನ್ಯಾಸದ ವಿಷಯದಲ್ಲಿ, ಈ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ಪ್ರಸ್ತುತ ಸೆಲೆರಿಯೊದಿಂದ ಸ್ಫೂರ್ತಿ ಪಡೆದುಕೊಂಡಿದೆ. ಓವಲ್-ಆಕಾರದ ಹೆಡ್‌ಲ್ಯಾಂಪ್‌ಗಳು, ನಯವಾದ ಬಾಡಿ ಲೈನ್‌ಗಳು, ವೀಲ್ ಕ್ಯಾಪ್‌ಗಳೊಂದಿಗೆ ಸ್ಟೀಲ್ ರಿಮ್‌ಗಳು ಇತ್ಯಾದಿಗಳನ್ನು ಪಡೆದುಕೊಂಡಿತ್ತದೆ.

ಬಿಳಿ, ಸಿಲ್ಕಿ ಸಿಲ್ವರ್, ಗ್ರಾನೈಟ್ ಗ್ರೇ, ಸಿಜ್ಲಿಂಗ್ ರೆಡ್, ಸ್ಪೀಡಿ ಬ್ಲೂ ಮತ್ತು ಅರ್ಥ್ ಗೋಲ್ಡ್ ಎಂಬ ಆರು ಬಣ್ಣಗಳಲ್ಲಿ ಆಲ್ಟೊ ಕೆ10 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಜೊತೆಗೆ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ 12 ರೂಪಾಂತರಗಳಲ್ಲಿ ಲಭ್ಯವಿರಲಿದ್ದು, ಮ್ಯಾನುವಲ್ ರೂಪಾಂತರಗಳಲ್ಲಿ STD, STD(O), LXI, LXI(O), VXI, VXI(O), VXI+ ಮತ್ತು VXI+(O) ಸೇರಿವೆ.

ಇನ್ನು ಪ್ರವೇಶ ಮಟ್ಟದಲ್ಲಿ VXI, VXI(O), VXI+ ಮತ್ತು VXI+(O) ಎಂಬ ನಾಲ್ಕು ಮ್ಯಾನುವಲ್ ಹ್ಯಾಚ್‌ಬ್ಯಾಕ್ ರೂಪಾಂತರಗಳನ್ನು ಹೊಂದಿರಲಿದೆ. ಹೊಸ K10 ಮಾರುತಿ ಸುಜುಕಿಯ ಹೊಸ ಹಾರ್ಟೆಕ್ಟ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಗಮನಾರ್ಹವಾಗಿ, ಮಾರಾಟದಲ್ಲಿರುವ ಪ್ರಸ್ತುತ ಮಾದರಿಗೆ ಹೋಲಿಸಿದರೆ ಇದು ಗಾತ್ರದ ವಿಷಯದಲ್ಲಿ ಉತ್ಕೃಷ್ಟವಾಗಿರುತ್ತದೆ.

ಎಂಜಿನ್ ಮತ್ತು ಗೇರ್ ಬಾಕ್ಸ್
ಹೊಸ-ಜೆನರೇಷನ್ ಮಾರುತಿ ಸುಜುಕಿ ಆಲ್ಟೊ ಕೆ10 ಅನ್ನು ನವೀಕರಿಸಿದ ಕೆ-ಸೀರೀಸ್ 1.0-ಲೀಟರ್ ಎಂಜಿನ್ ಅನ್ನು ಹೊಂದಿರಲಿದೆ. ಇದು ತನ್ನ ಹಿರಿಯ ಮಾದರಿಯಾದ ಎಸ್-ಪ್ರೆಸ್ಸೊ ಕಾರಿನಂತೆ ಉತ್ತಮ ಪರ್ಫಾಮೆನ್ಸ್ ತೋರಲಿದೆ. ಇದರಲ್ಲಿ ಬಳಸಲಾದ ಮೋಟಾರ್ 65.7 bhp ಮತ್ತು 89 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು AMT (AGS) ಯೊಂದಿಗೆ ಸಂಯೋಜಿಸಲ್ಪಟ್ಟಿದೆ.

ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ವೈಶಿಷ್ಟ್ಯಗಳ ವಿಷಯದಲ್ಲಿ, ಹೊಸ ಮಾರುತಿ ಸುಜುಕಿ ಆಲ್ಟೊ ಕೆ 10 ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಬಹುದು. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಎರಡಕ್ಕೂ ಹೊಂದಿಕೊಳ್ಳುತ್ತದೆ. ಇದು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹೊಸ 2022 ಮಾರುತಿ ಸುಜುಕಿ ಆಲ್ಟೊ K10 ಭಾರತದಲ್ಲಿ ನಾಳೆ, ಅಂದರೆ ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ. ಬಿಡುಗಡೆ ಬಳಿಕ ಅದರ ಅಧಿಕೃತ ಬೆಲೆಗಳು ತಿಳಿದುಬರಲಿದೆ. ಮಾಹಿತಿಯ ಪ್ರಕಾರ ಈ ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಎಕ್ಸ್ ಶೋ ರೂಂ ಬೆಲೆ 3.99 ಲಕ್ಷ ರೂಪಾಯಿಗಳೆಂದು ನಿರೀಕ್ಷಿಸಲಾಗಿದೆ. ಇದು ಮಾರುತಿ ಸುಜುಕಿ ಎಸ್-ಪ್ರೆಸ್ಸೊ, ರೆನಾಲ್ಟ್ ಕ್ವಿಡ್ ಇತ್ಯಾದಿಗಳೊಂದಿಗೆ ಸ್ಪರ್ಧಿಸಲಿದೆ.

ನಿರಂತರ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಆಧುನಿಕ ವಿನ್ಯಾಸ, ವಿಶಾಲವಾದ ಕ್ಯಾಬಿನ್ ಮತ್ತು ತಂತ್ರಜ್ಞಾನ ಚಾಲಿತ, ಬಳಕೆದಾರ ಸ್ನೇಹಿ ಆಂತರಿಕ ಇಂಟರ್‌ಫೇಸ್ ಅನ್ನು ನೀಡುವಲ್ಲಿ ನಾವು ವಿಶೇಷ ಗಮನವನ್ನು ನೀಡಿದ್ದೇವೆ. ಆಲ್-ನ್ಯೂ ಆಲ್ಟೊ ಕೆ10 ಬುಕಿಂಗ್‌ಗಳು ಈಗ ತೆರೆದಿವೆ ಮತ್ತು ಶೀಘ್ರದಲ್ಲೇ ದೇಶಾದ್ಯಂತ ಮಾರುತಿ ಸುಜುಕಿ ಅರೆನಾ ಶೋರೂಮ್‌ಗಳಿಗೆ ಆಗಮಿಸಲಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮುಖ್ಯ ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) ಸಿವಿ ರಾಮನ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಪ್ರತಿ ತಿಂಗಳು ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಮಾರುತಿ ಸುಜುಕಿ ಆಲ್ಟೊದ ಸಾಧನೆ ಅದ್ಭುತವಾಗಿದ್ದು, ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬಲೆನೊ ನಂತರ ಈ ಬೇಬಿ ಕಾರು ಅಗ್ರ 5 ಹ್ಯಾಚ್‌ಬ್ಯಾಕ್‌ಗಳಲ್ಲಿ ಸ್ಥಾನ ಪಡೆದುಕೊಂಡಿರುವುದು ಗಮನಾರ್ಹ. ಇದೀಗ ಹೊಸ K10 ಆವೃತ್ತಿಯ ಆಗಮನದೊಂದಿಗೆ Renault Kwid ಮಾರುತಿ ಸುಜುಕಿಯಿಂದ ಹೆಚ್ಚು ಸವಾಲನ್ನು ಎದುರಿಸಲಿದೆ. ಒಮ್ಮೆ ಅದು ಮಾರುಕಟ್ಟೆಗೆ ಬಂದರೆ, 2022 ಮಾರುತಿ ಆಲ್ಟೊ ಕೆ10 ನ್ಯೂ ಜೆನ್ ರೆನಾಲ್ಟ್ ಕ್ವಿಡ್ ತನ್ನ ಏಕೈಕ ಪ್ರತಿಸ್ಪರ್ಧಿಯಾಗಲಿದೆ.