ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ವಿವಿಧ ರಾಜ್ಯಗಳು ಹೆಚ್ಚಿನ ಒತ್ತು ನೀಡುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಇದೀಗ ರಾಜಸ್ಥಾನ ಸರ್ಕಾರವು ತನ್ನ ರಾಜ್ಯದ ಜನತೆಗೆ ಇವಿ ವಾಹನ ಖರೀದಿಗಾಗಿ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ರಾಜಸ್ಥಾನ ಸರ್ಕಾರವು ಮಂಗಳವಾರದಂದು ರಾಜ್ಯದಲ್ಲಿ ಹೊಸ ವಿದ್ಯುತ್ ಚಾಲಿತ ವಾಹನಗಳ(ಇವಿ) ನೀತಿಗೆ ಅನುಮೋದನೆ ನೀಡಿದ್ದು, ಹೊಸ ನೀತಿ ಘೋಷಣೆಯ ನಂತರ ಇವಿ ವಾಹನಗಳನ್ನು ಖರೀದಿಸುವವರಿಗೆ ಎಸ್‌ಜಿಎಸ್‌ಟಿ (ಸ್ಟೇಟ್ ಜಿಎಸ್‌ಟಿ) ಮರುಪಾವತಿಗಾಗಿ ರೂ. 40 ಕೋಟಿ ರೂಪಾಯಿಗಳ ಹೆಚ್ಚುವರಿ ಬಜೆಟ್‌ಗೆ ಸರ್ಕಾರ ಅನುಮೋದಿಸಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ರಾಜ್ಯದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ವಿರುದ್ಧ ಪರಿಣಾಮಕಾರಿಯಾದ ನಿರ್ಧಾರ ಪ್ರಕಟಿಸಿರುವ ರಾಜಸ್ಥಾನ ಸರ್ಕಾರವು ಜಿಎಸ್‌ಟಿ ವಿನಾಯ್ತಿಗಾಗಿ ರೂ. 20 ಸಾವಿರ ಕೋಟಿಗಿಂತಲೂ ಹೆಚ್ಚಿನ ಬಜೆಟ್ ಮಂಡನೆ ಮಾಡಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಹೊಸ ಇವಿ ವಾಹನ ನೀತಿಯ ಪ್ರಕಾರ ರಾಜಸ್ಥಾನದಲ್ಲಿ ಇವಿ ದ್ವಿಚಕ್ರ ವಾಹನಗಳ ಖರೀದಿ ಮೇಲೆ ರೂ 5,000 ರಿಂದ ರೂ 10,000 ವರೆಗೆ ಎಸ್‌ಜಿಎಸ್‌ಟಿ ವಿನಾಯ್ತಿ ನೀಡಲಿದ್ದರೆ ಇವಿ ತ್ರಿಚಕ್ರ ವಾಹನಗಳ ಬ್ಯಾಟರಿ ಸಾಮರ್ಥ್ಯದ ಆಧಾರದ ಮೇಲೆ ರೂ. 10 ಸಾವಿರದಿಂದ ರೂ. 20 ಸಾವಿರ ತನಕ ಸ್ಟೇಟ್ ಜಿಎಸ್‌ಟಿ ಮನ್ನಾ ಮಾಡುತ್ತದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಹೊಸ ಇವಿ ನೀತಿಯ ಅಡಿಯಲ್ಲಿ ರಾಜ್ಯದಲ್ಲಿ ಮಾರಾಟವಾಗುವ ಎಲೆಕ್ಟ್ರಿಕ್ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಿಂದಲೂ ಸಹ ವಿನಾಯ್ತಿ ನೀಡಲಾಗಿದ್ದು, ಇ-ವಾಹನದ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಗ್ರಾಹಕರಿಗೆ 5 ಸಾವಿರದಿಂದ ರೂ. 20 ಸಾವಿರ ತನಕ ಸಬ್ಸಿಡಿ ಸಿಗಲಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

2 kWh ನಿಂದ 5 kWh ಬ್ಯಾಟರಿ ಪ್ಯಾಕ್ ಹೊಂದಿರುವ ಇವಿ ದ್ವಿಚಕ್ರ ವಾಹನಗಳಿಗೆ ರೂ. 5 ಸಾವಿರದಿಂದ ರೂ. 10 ಸಾವಿರ ತನಕ ಸಬ್ಸಿಡಿ ಸಿಗಲಿದ್ದು, ಅದೇ ಸಮಯದಲ್ಲಿ 3 kWh ನಿಂದ 5 kWh ಬ್ಯಾಟರಿ ಸಾಮರ್ಥ್ಯದ ತ್ರಿ-ಚಕ್ರದ ಎಲೆಕ್ಟ್ರಿಕ್‌ ವಾಹನಗಳಿಗೆ ರೂ. 10 ಸಾವಿರದಿಂದ ರೂ. 20 ಸಾವಿರ ತನಕ ಸಬ್ಸಡಿ ದೊರಲಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಆದರೆ ಇವಿ ವಾಹನ ನೀತಿ ಅಡಿಯಲ್ಲಿ ಇತರೆ ರಾಜ್ಯಗಳಂತೆ ರಾಜಸ್ಥಾನ ಸರ್ಕಾರವು ಎಲೆಕ್ಟ್ರಿಕ್ ಕಾರುಗಳಿಗೆ ಅಥವಾ ಎಲೆಕ್ಟ್ರಿಕ್ ಬಸ್‌ಗಳಿಗೆ ಯಾವುದೇ ಸಬ್ಸಿಡಿ ಘೋಷಣೆ ಮಾಡಿಲ್ಲ. ಕೇವಲ ಇವಿ ದ್ವಿಚಕ್ರ ವಾಹನಗಳು ಮತ್ತು ಇವಿ ತ್ರಿ-ಚಕ್ರ ವಾಹನಗಳಿಗೆ ಮಾತ್ರ ಸಬ್ಸಡಿ ನೀಡಲಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಇನ್ನು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸಾಕಷ್ಟು ಸಹಕಾರಿಯಾಗಿದ್ದು, ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ.

ಹೊಸ ಇವಿ ನೀತಿ: ರಾಜಸ್ತಾನದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಭರ್ಜರಿ ಸಬ್ಸಡಿ!

ಸದ್ಯ ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಅನುಗುಣವಾಗಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

Article Published On: Wednesday, May 25, 2022, 13:43 [IST]
English summary
Rajasthan government approves new ev policy details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+