ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕಿಂಗ್ಸ್

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಇತ್ತೀಚಿಗೆ ಬಿಡುಗಡೆ ಮಾಡಿದ ತನ್ನ ಎರಡು SUV ಗಳಿಗೆ ಭಾರೀ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಸುಮಾರು ಒಂದು ಲಕ್ಷ ಬುಕಿಂಗ್‌ಗಳನ್ನು ಪಡೆದುಕೊಂಡಿವೆ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ವೇಗವಾಗಿ ಬೆಳೆಯುತ್ತಿರುವ SUV ಮಾರುಕಟ್ಟೆಯಲ್ಲಿ ತನ್ನ ಉಪಸ್ಥಿತಿ ಮತ್ತು ಮಾರುಕಟ್ಟೆ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳವ ಕಂಪನಿಯ ಯೋಜನೆಗೆ ಇದು ದೊಡ್ಡ ಉತ್ತೇಜನವೆಂದೇ ಹೇಳಬಹುದು. ಹೊಸ ಬ್ರೆಝಾಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಕಡಿಮೆ ಅವಧಿಯಲ್ಲಿ ಸುಮಾರು 70,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ ಎಂದು MSIL ನ ಮುಖ್ಯ ಹಣಕಾಸು ಅಧಿಕಾರಿ ಅಜಯ್ ಸೇಠ್ ತಿಳಿಸಿದರು.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಬ್ರೆಜಾದ ಮೊದಲ ಎರಡು ಪ್ರೀಮಿಯಂ ರೂಪಾಂತರಗಳಿಗೆ ಶೇ50 ಕ್ಕಿಂತ ಹೆಚ್ಚು ಬುಕಿಂಗ್‌ಗಳು ದಾಖಲಾಗಿವೆ. ಇವು ಎಲೆಕ್ಟ್ರಿಕ್ ಸನ್‌ರೂಫ್, ಟೆಲಿಮ್ಯಾಟಿಕ್ಸ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸುಧಾರಿತ ಟೆಕ್ ವೈಶಿಷ್ಟ್ಯಗಳು ಖರೀದಿದಾರರ ಆಸಕ್ತಿಯನ್ನು ಹೆಚ್ಚಿಸಿವೆ. ಅಲ್ಲದೇ ಹಳೆಯ ಬ್ರೆಝಾಗಿಂತ ಸುಧಾರಿತ ಪರ್ಫಾಮೆನ್ಸ್‌ ಅನ್ನು ಹೊಸ ಬ್ರೆಝಾದಲ್ಲಿ ಕಾಣಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಇಂಧನ ದಕ್ಷತೆ

ಗ್ರ್ಯಾಂಡ್ ವಿಟಾರಾ ಕಂಪನಿಯ ಹೊಸ ಮಧ್ಯಮ-ವಿಭಾಗದ SUV ಆಗಿದ್ದು, ಇದರ ಪರಿಕಲ್ಪನೆ, ವಿನ್ಯಾಸವನ್ನು ಸುಜುಕಿಯಿಂದ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಬೆಂಗಳೂರಿನ ಟೊಯೋಟಾ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುವುದು. ಹೈಬ್ರಿಡ್ ಪವರ್‌ಟ್ರೇನ್ ಸೇರಿದಂತೆ ವಿವಿಧ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬಹು ರೂಪಾಂತರಗಳೊಂದಿಗೆ ಬರಲಿದೆ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಇದರ ಬುಕಿಂಗ್ ವಿಷಯಕ್ಕೆ ಬಂದರೆ 20,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಗಳಿಸಿದೆ. ಈ ಮೂಲಕ ಶೇ 50ರಷ್ಟು ಬುಕಿಂಗ್‌ಗಳನ್ನು 1.5L ಇಂಟಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ರೂಪಾಂತರ (ಆನ್-ರೋಡ್ ಬೆಲೆ ಇನ್ನೂ ತಿಳಿದಿಲ್ಲ) ಪಡೆದುಕೊಂಡಿದೆ. ಇದು ಡ್ಯುಯಲ್ ಪವರ್ ಸಿಸ್ಟಮ್ - ಎಲೆಕ್ಟ್ರಿಕ್ ಮೋಟಾರ್ ಮತ್ತು ಆಂತರಿಕ ದಹನಕಾರಿ ಎಂಜಿನ್‌ನೊಂದಿಗೆ ಬರುತ್ತದೆ. ಸುಮಾರು 28 ಕಿ.ಮೀ ಮೈಲೇಜ್ ನೀಡುವ ನಿರೀಕ್ಷೆಯಿದೆ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಗ್ರ್ಯಾಂಡ್ ವಿಟಾರಾ ಮಾರುಕಟ್ಟೆಯಲ್ಲಿ ಹೆಚ್ಚು ಇಂಧನ-ಸಮರ್ಥ SUV ಆಗಿರುವುದರಿಂದ ಕಂಪನಿಯು ಈ ಹೈಬ್ರಿಡ್ ಮಾದರಿಯ ಮೇಲೆ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದೆ. ಈ ಹೈಬ್ರಿಡ್ ರೂಪಾಂತರವು ಹೆಚ್ಚಿನ ಸಮಯದವರೆಗೆ ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಬ್ಯಾಟರಿ ಚಾರ್ಜ್ ಆಗುವ ಉಳಿದ ಸಮಯಕ್ಕೆ ಗ್ಯಾಸೋಲಿನ್‌ಗೆ ಬದಲಾಯಿಸಬಹುದು, ಇದರಿಂದಾಗಿ ಚಾರ್ಜಿಂಗ್ ಸ್ಟೇಷನ್ ಅನ್ನು ಹುಡುಕುವ ಅಗತ್ಯವಿರುವುದಿಲ್ಲ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಇದೇ ಕಾರಣಕ್ಕೆ ಗ್ರ್ಯಾಂಡ್ ವಿಟಾರಾ ಹೊರ ದೇಶಗಳಲ್ಲೂ ಭಾರೀ ಬೇಡಿಕೆ ಪಡೆಯುವ ನಿರೀಕ್ಷೆಯಿದ್ದು, ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುವುದು.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

"ಮುಂದಕ್ಕೆ ಕಂಪನಿಯು ಎಲ್ಲಾ ಇತರ ವಿಭಾಗಗಳಂತೆ ಈ ವಿಭಾಗದಲ್ಲೂ ತನ್ನ ಪ್ರಾಬಲ್ಯ ಸಾಧಿಸಲು SUV ಪೋರ್ಟ್ಫೋಲಿಯೊವನ್ನು ಬಲಪಡಿಸಲು ಶ್ರಮಿಸುತ್ತದೆ" ಎಂದು ಸೇಥ್ ಹೇಳಿದರು. ಮಾರ್ಚ್ 2022 ರ ಹೊತ್ತಿಗೆ ಕಂಪನಿಯ ಒಟ್ಟು ಆರ್ಡರ್ ಪುಸ್ತಕವು 2.28 ಲಕ್ಷ ಯುನಿಟ್‌ಗಳಿದ್ದರೇ ಜೂನ್ 2022 ರ ಹೊತ್ತಿಗೆ ಸುಮಾರು 3.5 ಲಕ್ಷ ಯುನಿಟ್‌ಗಳಿಗೆ ಏರಿಕೆಯಾಗಿದೆ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಉತ್ಪಾದನಾ ಪರಿಮಾಣಗಳು

ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯು ಕಂಪನಿಯ ಉತ್ಪಾದನೆಯ ಪ್ರಮಾಣವನ್ನು ಸೀಮಿತಗೊಳಿಸಿದೆ. ಇದರ ಪರಿಣಾಮವಾಗಿ, ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸುಮಾರು 51,000 ಯುನಿಟ್‌ಗಳ ಉತ್ಪಾದನೆಯನ್ನು ಕಳೆದುಕೊಂಡಿದೆ. ಪೂರೈಕೆ ಪರಿಸ್ಥಿತಿಯು ಅನಿರೀಕ್ಷಿತವಾಗಿ ಮುಂದುವರಿದಿರುವ ಕಾರಣ ಲಭ್ಯವಿರುವ ಸೆಮಿಕಂಡಕ್ಟರ್‌ಗಳೊಂದಿಗೆ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಕಂಪನಿಯ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಕಂಪನಿಯು ಹರಿಯಾಣದಲ್ಲಿ ಉತ್ಪಾದನೆಗಾಗಿ 800 ಎಕರೆ ಸ್ಥಳವನ್ನು ಗುರುತಿಸಿದೆ. 2.5 ಲಕ್ಷ ಯೂನಿಟ್ ಸಾಮರ್ಥ್ಯದ ಮೊದಲ ಕಾರ್ಖಾನೆ 2025ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ₹11,000 ಕೋಟಿಗೂ ಹೆಚ್ಚು ಹೂಡಿಕೆಯಾಗಲಿದೆ. ಇನ್ನು ರಫ್ತುಗಳನ್ನು ನೋಡುವುದಾದರೆ ಜೂನ್ 2022 ತ್ರೈಮಾಸಿಕವು 69,437 ವಾಹನಗಳ ಸಾಗಣೆಯೊಂದಿಗೆ ಕಂಪನಿಯ ಅತ್ಯಧಿಕ ತ್ರೈಮಾಸಿಕ ರಫ್ತುಗಳನ್ನು ಕಂಡಿದೆ.

ಅತಿ ಕಡಿಮೆ ಅವಧಿಯಲ್ಲಿ ಮಾರುತಿ ಸುಜುಕಿಯ ಎರಡು ಹೊಸ ಎಸ್‌ಯುವಿಗಳಿಗೆ ದಾಖಲೆಯ ಬುಕ್ಕಿಂಗ್ಸ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಹಾಗೂ ಬ್ರೆಝಾವನ್ನು ಹಲವು ಹೊಸ ಫೀಚರ್ಸ್‌ಗಳೊಂದಿಗೆ ಸಜ್ಜುಗೊಳಿಸಿದ್ದು, ಗ್ರಾಹಕರ ಉತ್ತಮ ಪ್ರತಿಕ್ರಿಯೆಗೆ ಕಾರಣವಾಗಿದೆ. ಇನ್ನು ವಿತರಣೆ ಬಳಿಕ ಗ್ರಾಹಕರಿಂದ ಯಾವ ರೀತಿ ಪ್ರತಿಕ್ರಿಯೆ ವ್ಯಾಕ್ತವಾಗಲಿದೆ ಕಾದುನೋಡಬೇಕಿದೆ.

Most Read Articles

Kannada
English summary
Record bookings for Maruti Suzukis two new SUVs in shortest period
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X