ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಹೊಸ ವ್ಯಾಗನ್ ಆರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಮಾರುತಿ ವ್ಯಾಗನ್ ಆರ್ ಅನ್ನು ವ್ಯಾಗನ್ಆರ್ ಟೂರ್ ಹೆಚ್ (3 WagonR Tour H3) ಹೆಸರಿನಲ್ಲಿ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ.

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ಜನಪ್ರಿಯ ಟೋಲ್ ಬಾಯ್ ಕಾರ್ "ವ್ಯಾಗನ್ಆರ್"ನ ಹೊಸ ರೂಪಾಂತರವನ್ನು ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು CNG ಇಂಧನ ಆಯ್ಕೆಗಳೊಂದಿಗೆ ಈ ಕಾರನ್ನು ಪರಿಚಯಿಸಿದೆ. ವ್ಯಾಗನ್ಆರ್ ಟೂರ್ ಹೆಚ್3 ಪೆಟ್ರೋಲ್ ಆವೃತ್ತಿಯ ಬೆಲೆ ರೂ 5.39 ಲಕ್ಷ (ಎಕ್ಸ್ ಶೋ ರೂಂ) ಆದರೆ ಸಿಎನ್‌ಜಿ ಆವೃತ್ತಿಯ ಬೆಲೆ 6.34 ಲಕ್ಷ ರೂ. (ಎಕ್ಸ್ ಶೋ ರೂಂ, ದೆಹಲಿ) ಇದೆ.

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ಮಾರುತಿ ಸುಜುಕಿ ವ್ಯಾಗನ್ಆರ್ ಇದುವರೆಗೆ ವೈಯಕ್ತಿಕ ಬಳಕೆಗೆ ಮಾತ್ರ ಲಭ್ಯವಿತ್ತು. ಕಂಪನಿಯು ಈಗ ಫ್ಲೀಟ್ ಆಪರೇಟರ್‌ಗಳಿಗಾಗಿ (ಟ್ಯಾಕ್ಸಿಗಳಂತಹ ವಾಣಿಜ್ಯ ಉದ್ದೇಶಗಳಿಗಾಗಿ) ಟೂರ್ H3ನ ವಾಣಿಜ್ಯ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ವಾಣಿಜ್ಯ ಆವೃತ್ತಿಯಾಗಿರುವುದರಿಂದ ಕಂಪನಿಯು ಹೆಚ್ಚಿನ ರೂಪಾಂತರಗಳನ್ನು ಲಭ್ಯವಾಗುವಂತೆ ಮಾಡಿಲ್ಲ. ಚಾಲಕರಿಗೆ ಅನುಕೂಲವಾಗುವಂತೆ ಕಂಪನಿಯು ಕಡಿಮೆ ವೈಶಿಷ್ಟ್ಯಗಳೊಂದಿಗೆ ಪೆಟ್ರೋಲ್ ಮತ್ತು CNG ಇಂಧನ ಆಯ್ಕೆಗಳೊಂದಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದೆ.

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ವಿನ್ಯಾಸ ಮತ್ತು ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಆವೃತ್ತಿಯ ವ್ಯಾಗನ್ಆರ್ ಮತ್ತು ಈ ಹೊಸ ಟ್ಯಾಕ್ಸಿ ಆವೃತ್ತಿಯ ವ್ಯಾಗನ್ಆರ್ ಟೂರ್ ಎಚ್3 ಮಾದರಿಯ ನಡುವೆ ಯಾವುದೇ ವಿನ್ಯಾಸ ವ್ಯತ್ಯಾಸವಿಲ್ಲ. ಈ ಎರಡು ಮಾದರಿಗಳನ್ನು ಅಕ್ಕಪಕ್ಕದಲ್ಲಿ ನೋಡಿದರೆ, ಇವೆರಡೂ ಒಂದೇ ರೀತಿ ಕಾಣುತ್ತವೆ. ಕಂಪನಿಯು ಟೂರ್ H3 ರೂಪಾಂತರಗಳನ್ನು ಸುಪೀರಿಯರ್ ವೈಟ್ ಮತ್ತು ಸಿಲ್ಕಿ ಸಿಲ್ವರ್ ನಂತಹ ಎರಡು ಬಣ್ಣದ ಆಯ್ಕೆಗಳಲ್ಲಿ ಮಾರಾಟ ಮಾಡುತ್ತಿದೆ. ಇದರ ಬಾಡಿ ಕಲರ್ ಬಂಪರ್‌ಗಳು, ವೀಲ್ ಕ್ಯಾಪ್‌ಗಳೊಂದಿಗೆ ಸ್ಟೀಲ್ ಚಕ್ರಗಳು, ಬ್ಲ್ಯಾಕ್ ಸೈಡ್ ಮಿರರ್‌ಗಳು, ಬ್ಲ್ಯಾಕ್ ಡೋರ್ ಹ್ಯಾಂಡಲ್‌ಗಳು ಮತ್ತು ಬ್ಲ್ಯಾಕ್ -ಔಟ್ ಫ್ರಂಟ್ ಗ್ರಿಲ್‌ನಂತಹ ಬಾಹ್ಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮುಂಭಾಗದ ಬಂಪರ್ ಫಾಗ್ ಲ್ಯಾಂಪ್‌ಗಳನ್ನು ನೀಡಿಲ್ಲ. ಚಾಲಕರು ಬಯಸಿದಲ್ಲಿ ಅದನ್ನು ಆಯ್ಕೆಯಾಗಿ ಖರೀದಿಸಬಹುದು.

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ಇಂಟೀರಿಯರ್ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಇದು ಇಂಟೀರಿಯರ್‌ನಲ್ಲಿ ಸ್ಟ್ಯಾಂಡರ್ಡ್ ವ್ಯಾಗನ್ಆರ್ ಅನ್ನು ಹೋಲುತ್ತದೆ. ಕಂಪನಿಯು ಡ್ಯುಯಲ್ ಟೋನ್ ಇಂಟೀರಿಯರ್ ಥೀಮ್‌ನೊಂದಿಗೆ ಮುಂಭಾಗದ ಕ್ಯಾಬಿನ್ ಲ್ಯಾಂಪ್, ಟಿಕೆಟ್ ಹೋಲ್ಡರ್ ಮತ್ತು ಫ್ರಂಟ್ ಮತ್ತು ರಿಯರ್ ಹೆಡ್‌ರೆಸ್ಟ್‌ಗಳೊಂದಿಗೆ ಡ್ರೈವರ್ ಸೈಡ್ ಸನ್ ವೈಸರ್, ಸೈಡ್ ಆಟೋ ಡೌನ್ ಫಂಕ್ಷನ್‌ನೊಂದಿಗೆ ಫ್ರಂಟ್ ಪವರ್ ವಿಂಡೋಸ್, ಮ್ಯಾನ್ಯುವಲ್ ಎಸಿ, ರಿಯರ್ ಪಾರ್ಸೆಲ್ ಟ್ರೇ, ಫ್ರಂಟ್ ರಿಕ್ಲೈನಿಂಗ್ ಮತ್ತು ಸ್ಲೈಡಿಂಗ್ ಸೀಟ್‌ಗಳನ್ನು ಸಹ ಒಳಗೊಂಡಿದೆ.

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ಸುರಕ್ಷತೆಯ ವಿಷಯಕ್ಕೆ ಬಂದರೆ, ಇದು ಪ್ರವೇಶ ಮಟ್ಟದ ರೂಪಾಂತರವಾಗಿದ್ದರೂ, ಕಂಪನಿಯು ಡ್ಯುಯಲ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಎಸ್) ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಸ್ಪೀಡ್‌ ಲಿಮಿಟಿಂಗ್ ಫಂಕ್ಷನ್, ರಿಯರ್‌ ಪಾರ್ಕಿಂಗ್ ಸೆನ್ಸಾರ್ಸ್‌ ಮತ್ತು ಸೆಂಟ್ರಲ್ ಡೋರ್ ಲಾಕಿಂಗ್ ಅನ್ನು ಸಹ ಪಡೆದುಕೊಂಡಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಟೂರ್ ಹೆಚ್3 ನಲ್ಲಿ ಕಂಪನಿಯು ಎಂಜಿನ್ ವಿಷಯದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಹೊಸ ಟೂರ್ H3 ಮಾದರಿಯು ಸ್ಟ್ಯಾಂಡರ್ಡ್ ವ್ಯಾಗನ್ಆರ್ ಕಾರಿನಲ್ಲಿರುವ ಅದೇ 1.0-ಲೀಟರ್, 3-ಸಿಲಿಂಡರ್, K10C ಪೆಟ್ರೋಲ್ ಎಂಜಿನ್ ಅನ್ನು ಬಳಸಿದೆ.

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ಪೆಟ್ರೋಲ್ ಇಂಧನದೊಂದಿಗೆ ಎಂಜಿನ್ 5,500rpm ನಲ್ಲಿ 64bhp ಗರಿಷ್ಠ ಶಕ್ತಿಯನ್ನು ಮತ್ತು 3,500rpm ನಲ್ಲಿ 89Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಪೆಟ್ರೋಲ್ ಚಾಲಿತ ವ್ಯಾಗನ್ಆರ್ ಟೂರ್ ಪ್ರತಿ ಲೀಟರ್‌ಗೆ 25.40 ಕಿ.ಮೀ ಮೈಲೇಜ್ ನೀಡುತ್ತದೆ. ಕಂಪನಿಯು ಫ್ಯಾಕ್ಟರಿ ಫಿಟ್ಟೆಡ್ ಸಿಎನ್‌ಜಿ ಕಿಟ್‌ನೊಂದಿಗೆ ರೂಪಾಂತರವನ್ನು ಸಹ ಮಾರಾಟ ಮಾಡುತ್ತದೆ. CNG ಇಂಧನದಿಂದ ನಡೆಸಲ್ಪಡುವ ವ್ಯಾಗನ್ಆರ್ ಟೂರ್ H3 5,300 rpm ನಲ್ಲಿ 56 bhp ಮತ್ತು 3,400 rpm ನಲ್ಲಿ ಗರಿಷ್ಠ 82 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಕೂಡ ಲಭ್ಯವಿದೆ. CNG ಮಾದರಿಯು ಪ್ರತಿ ಕೆ.ಜಿ CNG ಇಂಧನಕ್ಕೆ 34.73 ಕಿ.ಮೀ ARAI ಪ್ರಮಾಣೀಕೃತ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಎರಡು ರೂಪಾಂತರಗಳಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ವ್ಯಾಗನ್ ಆರ್ ಟೂರ್ H3

ಸಾಮಾನ್ಯ ಗ್ರಾಹಕರು ತಮ್ಮ ವೈಯಕ್ತಿಕ ಬಳಕೆಗಾಗಿ ಈ ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಟೂರ್ H3 ಅನ್ನು ಖರೀದಿಸಲು ಸಾಧ್ಯವಿದಿಲ್ಲ ಎಂಬುದನ್ನು ಗಮನಿಸಬೇಕು. ಇದು ವಾಣಿಜ್ಯ ಬಳಕೆಗೆ ಮಾತ್ರ ಲಭ್ಯವಿದೆ. ವೈಯಕ್ತಿಕ ಬಳಕೆ ಕಂಪನಿಯು ಹೊಸ 2022 ಮಾಡೆಲ್ ವ್ಯಾಗನ್ಆರ್ ಅನ್ನು ಎರಡು ಎಂಜಿನ್ ಕಾನ್ಫಿಗರೇಶನ್‌ಗಳೊಂದಿಗೆ 11 ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಹೊಸ 2022 ಮಾರುತಿ ಸುಜುಕಿ ವ್ಯಾಗನ್ಆರ್ ಗ್ಯಾಲಂಟ್ ರೆಡ್ ಮತ್ತು ಮ್ಯಾಗ್ಮಾ ಗ್ರೇ ಎಂಬ ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

Most Read Articles

Kannada
English summary
Release of Maruti Suzuki Wagon R Tour H3 in two variants
Story first published: Friday, April 1, 2022, 19:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X