ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಇಂಡಿಯಾ(Renault India) ಕಂಪನಿಯು ಹೊಸ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಕಂಪನಿಯು ವರ್ಷದ ಆರಂಭದಲ್ಲಿ ವಿವಿಧ ಆಫರ್‌ಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಕೋವಿಡ್‌ ಪರಿಣಾಮ ಎದುರಾಗುತ್ತಿರುವ ಆರ್ಥಿಕ ಸಂಕಷ್ಟದ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಏರಿಳಿತ ಕಾಣುತ್ತಿದೆ. ಹೊಸ ವಾಹನಗಳ ಬೇಡಿಕೆಯಲ್ಲಿ ಸ್ಥಿರತೆಗಾಗಿ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್‌ ಘೋಷಣೆ ಮಾಡಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಣೆ ಮಾಡಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯು ಕ್ವಿಡ್(Kwid) ಹ್ಯಾಚ್‌‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ, ಡಸ್ಟರ್(Duster) ಎಸ್‌ಯುವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿಯ ಮೇಲೆ ರೂ.35 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಡಸ್ಟರ್ ಎಸ್‌ಯುವಿ ಕಾರಿನ ಮೇಲೆ ರೂ.1.30 ಲಕ್ಷದ ತನಕ ಆಫರ್ ಪಡೆಯಬಹುದಾಗಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲಿನ ರೂ. 35 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ. 15 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 10 ಸಾವಿರ ತನಕ ಕಾರ್ಪೊರೆಟ್ ಅಥವಾ ರೂರಲ್ ಡಿಸ್ಕೌಂಟ್ ನೀಡುತ್ತಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಕ್ವಿಡ್ ಕಾರಿನ ಮೇಲೆ ಕಂಪನಿಯು ಆಯ್ದ ರಾಜ್ಯಗಳಲ್ಲಿ ಸಾಮಾನ್ಯ ಆಫರ್‌ಗಳಿಂತಲೂ ಕೆಲವು ಹೆಚ್ಚಿನ ಕೊಡುಗೆಗಳನ್ನು ಕೂಡಾ ಪ್ರಕಟಿಸಿದ್ದು, ಹೊಸ ಕಾರು ಖರೀದಿಗೆ ಸಹಕಾರಿಯಾಗುವಂತೆ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿ ರೂ.10 ಸಾವಿರ ತನಕ ಡಿಸ್ಕೌಂಟ್ ಪಡೆದುಕೊಳ್ಳಬಹುದು.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಹೊಸ ಆಫರ್‌ಗಳಲ್ಲಿ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಡಿಸ್ಕೌಂಟ್ ಲಭ್ಯವಿದ್ದು, ಗರಿಷ್ಠ ರೂ.40 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ಎಕ್ಸ್‌ಚೆಂಜ್ ಆಫರ್, ಲೊಯಾಲಿಟಿ ಆಫರ್ ಮತ್ತು ರೂರಲ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯ ಹೊಸ ಕಿಗರ್ ಕಾರು ಖರೀದಿಯ ಮೇಲೂ ವಿವಿಧ ಆಫರ್‌ಗಳು ಲಭ್ಯವಿದ್ದು, ನವೆಂಬರ್ ಅವಧಿಯಲ್ಲಿ ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ರೂ. 55 ಸಾವಿರ ತನಕ ಲೊಯಾಲಿಟಿ ಆಫರ್ ಮತ್ತು ರೂ.10 ಸಾವಿರದಷ್ಟು ಕಾರ್ಪೊರೇಟ್ ಡಿಸ್ಕೌಂಟ್‌ ಅಥವಾ ರೂರಲ್ ಡಿಸ್ಕೌಂಟ್ ಪಡೆದುಕೊಳ್ಳಬಹುದು.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಇನ್ನುಳಿದಂತೆ ಡಸ್ಟರ್ ಎಸ್‌ಯುವಿ ಕಾರಿನ ಪ್ರಮುಖ ವೆರಿಯೆಂಟ್‌ಗಳ ಖರೀದಿಯ ಮೇಲೆ ರೆನಾಲ್ಟ್ ಕಂಪನಿಯು ರೂ. 1.30 ಲಕ್ಷ ಮೌಲ್ಯದ ಆಫರ್ ನೀಡುತ್ತಿದ್ದು, ಇದರಲ್ಲಿ ರೂ.50 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.50 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ರೂ.30 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಅಥವಾ ರೂರಲ್ ಡಿಸ್ಕೌಂಟ್ ಲಭ್ಯವಿರಲಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ರೆನಾಲ್ಟ್ ಕಂಪನಿಯು ಡಸ್ಟರ್ ಕಾರಿನ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಖರೀದಿಸುವ ಗ್ರಾಹಕರಿಗೆ ಗರಿಷ್ಠ ಡಿಸ್ಕೌಂಟ್ ನೀಡುತ್ತಿದ್ದು, ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿಯಲ್ಲೂ ರೂ.10 ಸಾವಿರ ತನಕ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕಾರು ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್ ನೀಡಿರುವ ರೆನಾಲ್ಟ್ ಕಂಪನಿಯು ಕ್ವಿಡ್, ಟ್ರೈಬರ್ ಮತ್ತು ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಇಎಂಐ ಮರುಪಾವತಿ ಆಯ್ಕೆಯನ್ನು ಸಹ ನೀಡಿದೆ.

ಪ್ರಮುಖ ಕಾರುಗಳ ಖರೀದಿ ಮೇಲೆ ಫೆಬ್ರವರಿ ತಿಂಗಳ ಆಫರ್ ಘೋಷಿಸಿದ ರೆನಾಲ್ಟ್ ಇಂಡಿಯಾ

ಇದರೊಂದಿಗೆ ರೆನಾಲ್ಟ್ ಕಂಪನಿಯ ಹೊಸ ವಾಹನಗಳ ಖರೀದಿಯನ್ನು ಉತ್ತೇಜಿಸಲು ತನ್ನ ಎಲ್ಲಾ ಕಾರು ಮಾದರಿಗಳ ಮೇಲೂ ರೂ. 10 ಸಾವಿರದಷ್ಟು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಅಡಿ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಗ್ರಾಹಕರಿಗೆ ಪ್ರೋತ್ಸಾಹಿಸುತ್ತಿದ್ದು, ಹಳೆಯ ವಾಹನಗಳನ್ನು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯಡಿ ಅಳವಡಿಸಿಕೊಳ್ಳಲು ನೆರವಾಗುವಂತೆ ಹೊಸ ಆಫರ್ ನೀಡುತ್ತಿವೆ.

Article Published On: Saturday, February 5, 2022, 16:21 [IST]
English summary
Renault cars offers february 2022 discounts benefits on all models
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+