ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಫ್ರೆಂಚ್ ಕಾರು ತಯಾರಕ ಕಂಪನಿಯಾದ ರೆನಾಲ್ಟ್ (Renault) ಭಾರತದಲ್ಲಿ ತನ್ನ ಎರಡು ಪ್ರಮುಖ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ರೆನಾಲ್ಟ್ ಕಂಪನಿಯು ಕಿಗರ್ (Kiger) ಸಬ್-ಕಾಂಪ್ಯಾಕ್ಟ್ ಎಸ್‍ಯುವಿ ಮತ್ತು ಟ್ರೈಬರ್ (Triber) ಎಂಪಿವಿಯು ಈ ತಿಂಗಳು ಬೆಲೆ ಏರಿಕೆಯನ್ನು ಪಡೆದಿವೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಇದರಿಂದಾಗಿ ಈ ಎರಡು ಕಾರುಗಳು ಸುಮಾರು ರೂ.30,000 ವರೆಗೆ ದುಬಾರಿಯಾಗಿದೆ. ರೆನಾಲ್ಟ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಕಿಗರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯ ಬೆಲೆಯು ಈಗ ಅದರ ಎಂಟ್ರಿ ಲೆವೆಲ್ RXE ಮ್ಯಾನುವಲ್ ರೂಪಾಂತರಕ್ಕಾಗಿ ದೆಹಲಿ ಎಕ್ಸ್-ಶೋರೂಂ ಪ್ರಕಾರ ರೂ,5.79 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಿಗರ್‌ನ ಮೂಲ ರೂಪಾಂತರವು ಈ ಹಿಂದೆ ರೂ,5.64ಲಕ್ಷ (ಎಕ್ಸ್-ಶೋ ರೂಂ, ದೆಹಲಿ) ಬೆಲೆಯಿತ್ತು, ಇದು ಸುಮಾರು ರೂ.15,000 ರಷ್ಟು ದುಬಾರಿಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ರೆನಾಲ್ಟ್ ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದಲ್ಲಿ ಕಿಗರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯಾಗಿತ್ತು. ಆದರೆ ಇತ್ತೀಚಿನ ಬೆಲೆ ಏರಿಕೆಯ ನಂತರ, ಕಿಗರ್‌ನ ತಾಂತ್ರಿಕ ಸೋದರಸಂಬಂಧಿ ನಿಸ್ಸಾನ್ ಮ್ಯಾಗ್ನೈಟ್ ಅತ್ಯಂತ ಕೈಗೆಟುಕುವ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

1.0-ಲೀಟರ್ RXT EASY-R ಆಟೋಮ್ಯಾಟಿಕ್ ಡ್ಯುಯಲ್ ಟೋನ್ ರೂಪಾಂತರಕ್ಕೆ ಕಿಗರ್ ಬೆಲೆಗಳಲ್ಲಿ ಅತ್ಯಧಿಕ ಏರಿಕೆಯು ರೂ,29,000 ಆಗಿದೆ. ಇದರ ಬೆಲೆ ಈಗ ರೂ.8.01 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಆಗಿದೆ. ಕಿಗರ್ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯ ಬಹುತೇಕ ಎಲ್ಲಾ ರೂಪಾಂತರಗಳು ಬೆಲೆ ಏರಿಕೆಯನ್ನು ಪಡೆದಿವೆ. 1.0-ಲೀಟರ್ RXZ X-TRONIC Turbo ಜೊತೆಗೆ ಸಿವಿಟಿ ರೂಪಾಂತರಕ್ಕೆ ರೂ.10,960 ರಷ್ಟು ದುಬಾರಿಯಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಕಳೆದ ವರ್ಷ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ನಾಲ್ಕು-ಸ್ಟಾರ್ ರೇಟಿಂಗ್ ಗಳಿಸಿದ ನಂತರ ಭಾರತದ ಸುರಕ್ಷಿತ ಏಳು-ಸೀಟುಗಳ ಮಾದರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ರೆನಾಲ್ಟ್ ಟ್ರೈಬರ್ ಎಂಪಿವಿ, ಗಮನಾರ್ಹ ಬೆಲೆ ಏರಿಕೆಗಳನ್ನು ಸಹ ಪಡೆದುಕೊಂಡಿದೆ. ಕೆಲವು ರೂಪಾಂತರಗಳಿಗೆ ಟ್ರೈಬರ್ ಬೆಲೆ ಸುಮಾರು ರೂ.30,000 ಹೆಚ್ಚಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಟ್ರೈಬರ್ ಎಂಪಿವಿಯ ಮೂಲ ರೂಪಾಂತರವಾದ RXE ಟ್ರಿಮ್ ಎಲ್ಲಾ ರೂಪಾಂತರಗಳಲ್ಲಿ ಕಡಿಮೆ ಹೆಚ್ಚಳವನ್ನು ಪಡೆದುಕೊಂಡಿದೆ. ಈ ರೂಪಾಂತರಕ್ಕೆ ರೂ,19,000 ರಷ್ಟು ದುಬಾರಿಯಾಗಿದೆ. ಟ್ರೈಬರ್ ಬೆಲೆಗಳಲ್ಲಿ ಹೆಚ್ಚಿನ ಹೆಚ್ಚಳವು ಅದರ ಆಟೋಮ್ಯಾಟಿಕ್ ರೂಪಾಂತರಗಳಲ್ಲಿದೆ. RXL EASY-R, RXT EASY-R, RXZ EASY-R, RXZ EASY-R ಡ್ಯುಯಲ್ ಟೋನ್ ಆಟೋಮ್ಯಾಟಿಕ್ ಮಾದರಿಗಳು ರೂ.29,800 ರಷ್ಟು ಒಂದೇ ರೀತಿಯ ಏರಿಕೆಯನ್ನು ಪಡೆದಿವೆ

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಇನ್ನು ಕಿಗರ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಎಂಜಿನ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಸಾಮಾನ್ಯ ಪೆಟ್ರೋಲ್ ಎಂಜಿನ್ 72 ಬಿಹೆಚ್‍ಪಿ ಪವರ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್ 100 ಬಿಜೆಚ್‍ಪಿ ಪವರ್ ಅನ್ನು ಉತ್ಪಾಸುತ್ತದೆ. ಈ ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ರೆನಾಲ್ಟ್ ಕಿಗರ್ ಕಾರು ಪ್ರತಿಸ್ಪರ್ಧಿಮಾದರಿಗಳಂತೆ ಹಲವಾರು ಆಕರ್ಷಕ ಫೀಚರ್ಸ್ ಗಳನ್ನು ಹೊಂದಿವೆ. ಈ ಕಿಗರ್ ಕಾರಿನಲ್ಲಿ ಆಕರ್ಷಕವಾದ ಬ್ಯಾನೆಟ್, ಹನಿಕೊಂಬ್ ಆಕಾರದಲ್ಲಿರುವ ಗ್ರಿಲ್ ಕ್ರೋಮ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಸೆಟ್ಅಪ್ ಮತ್ತು ರೂಫ್‌ರೈಲ್ಸ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಇನ್ನು ಈ ಕಾರಿನಲ್ಲಿ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿದ್ದು ಕಾರಿನ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಮತ್ತು 7 ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ ಒಳಗೊಂಡಿದೆ.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಇದರೊಂದಿಗೆ ಈ ಕಾರಿನಲ್ಲಿ ಸೆಂಟರ್ ಕನ್ಸೊಲ್, ಆರ್ಮರೆಸ್ಟ್, ವಾಯ್ಸ್ ಕಮಾಂಡ್ಸ್, 10.5-ಲೀಟರ್ ಸಾಮರ್ಥ್ಯದ ಗ್ಲೊ ಬಾಕ್ಸ್, ಕಿ ಲೆಸ್ ಎಂಟ್ರಿ, ಪುಶ್ ಬಟನ್ ಆನ್/ಆಫ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್ಸ್, 3ಡಿ ಸೌಂಡ್ ಸಿಸ್ಟಂ, ಪಿಎಂ 2.5 ಏರ್ ಫಿಲ್ಟರ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌‌ರೂಫ್ ಅನ್ನು ಹೊಂದಿವೆ

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಇನ್ನು ಬಜೆಟ್ ಬೆಲೆಯಲ್ಲಿಯೇ ಪ್ರಯಾಣಿಕರ ಸುರಕ್ಷತೆಗೆ ಅಗತ್ಯವಿರುವ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿರುವ ಟ್ರೈಬರ್ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಖರೀದಿಗೆ ಉತ್ತಮವಾಗಿದೆ. ಈ ಟ್ರೈಬರ್ ಮಿನಿ ಎಂಪಿವಿ ಕಾರಿನಲ್ಲಿ ಸದ್ಯ ನ್ಯಾಚುರಲಿ ಆಸ್ಪೆರೆಟೆಡ್ ಹೊಂದಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ Renault Kiger, Triber ಕಾರುಗಳು

ಇನ್ನು ರೆನಾಲ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ಕಾಲಿಟ್ಟು 10 ವರ್ಷಗಳು ಪೂರ್ತಿಯಾಗಿವೆ. ಈ ರೆನಾಲ್ಟ್ ಕಿಗರ್ ಬಜೆಟ್ ಬೆಲೆಯೊಂದಿಗೆ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆದುಕೊಂಡಿದೆ. ಇನ್ನು ಭಾರತದಿಂದಲೇ ರೆನಾಲ್ಟ್ ಕಂಪನಿಯು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿವಿಧ ಕಾರು ಮಾದರಿಗಳ ರಫ್ತು ಕೈಗೊಳ್ಳುತ್ತಿದೆ.

Article Published On: Tuesday, January 11, 2022, 10:33 [IST]
English summary
Renault increased the prices of kiger sub compact suv and triber mpv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+