ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ (Renault India) ತನ್ನ ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ಕಾರುಗಳ ರಫ್ತಿನಲ್ಲಿ ಒಂದು ಲಕ್ಷ ಯುನಿಟ್‌ಗಳ ಮೈಲಿಗಲ್ಲನ್ನು ಸಾಧಿಸುವ ಮೂಲಕ 2022ರ ಹೊಸ ವರ್ಷವನ್ನು ನೂತನ ಮೈಲಿಗಲ್ಲು ಹಿಡುತ್ತಾ ಪ್ರಾರಂಭಿಸಿದ್ದಾರೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ರೆನಾಲ್ಟ್ ಇಂಡಿಯಾ ಕಂಪನಿಯು ಸಾರ್ಕ್, ಏಷ್ಯಾ ಪೆಸಿಫಿಕ್, ಇಂಡಿಯನ್ ಓಷಿಯಾನಿಕ್ ಪ್ರದೇಶ, ದಕ್ಷಿಣ ಆಫ್ರಿಕಾ ಮತ್ತು ಪೂರ್ವ ಆಫ್ರಿಕಾದಾದ್ಯಂತ 14 ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಾಹನ ತಯಾರಕರು ಅದರ ಕಾರುಗಳನ್ನು ರಫ್ತು ಮಾಡುತ್ತಾರೆ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ರಫ್ತು ಮಾಡುವ ಭಾರತದಲ್ಲಿ ತಯಾರಿಸಿದ ರೆನಾಲ್ಟ್ ಕಾರುಗಳಾಗಿವೆ, ರೆನಾಲ್ಟ್ ತನ್ನ ಗ್ರೂಪ್ ಪಾಲುದಾರ ನಿಸ್ಸಾನ್ ಸಹಯೋಗದೊಂದಿಗೆ ತನ್ನ ಕಾರುಗಳನ್ನು ಒರಗಡಂ ಮೂಲದ ಉತ್ಪಾದನಾ ಘಟಕದಲ್ಲಿ ಉತ್ಪಾದಿಸುತ್ತದೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಇದೇ ಘಟಕ ರೆನಾಲ್ಟ್ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಮೂರು ಮಾದರಿಗಳಿಗೆ ಜಾಗತಿಕ ಉತ್ಪಾದನಾ ಕೇಂದ್ರವಾಗಿದೆ. ರೆನಾಲ್ಟ್ ಕಂಪನಿಯು ತನ್ನ ರಫ್ತು ಕಾರ್ಯಾಚರಣೆಯನ್ನು 2012 ರಲ್ಲಿ ಡಸ್ಟರ್ ಎಸ್‍ಯುವಿಯೊಂದಿಗೆ ಭಾರತದಿಂದ ಪ್ರಾರಂಭಿಸಿತು.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಈ ಮೈಲಿಗಲ್ಲನ್ನು ಸಾಧಿಸುವ ಕುರಿತು ರೆನಾಲ್ಟ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ವೆಂಕಟರಾಮ್ ಮಾಮಿಲ್ಲಾಪಲ್ಲೆ ಮಾತನಾಡಿ, ಭಾರತವು ರೆನಾಲ್ಟ್ ಗ್ರೂಪ್‌ಗೆ ಬಹಳ ಮುಖ್ಯವಾದ ಮಾರುಕಟ್ಟೆಯಾಗಿದೆ ಮತ್ತು ನಾವು ಯಾವಾಗಲೂ ಸಾಮರ್ಥ್ಯಗಳನ್ನು ನಿರ್ಮಿಸಲು ಮತ್ತು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮಕ್ಕೆ ಬೆಂಬಲಿಸಲು ಏಕೀಕೃತ ಗಮನವನ್ನು ನೀಡಿದ್ದೇವೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಈ 1 ಲಕ್ಷ ರಫ್ತು ಮೈಲಿಗಲ್ಲು ಗಮನಾರ್ಹ ಸಾಧನೆಯಾಗಿದೆ ಏಕೆಂದರೆ ಇದು ನಮ್ಮ ಉತ್ಪನ್ನದ ಗಮನಕ್ಕೆ ಸಾಕ್ಷಿಯಾಗಿದೆ, ಇದು ನಿರಂತರ ನಾವೀನ್ಯತೆ ಮತ್ತು ಗ್ರಾಹಕರ ಅಗತ್ಯತೆಗಳ ಆಳವಾದ ಜ್ಞಾನದಲ್ಲಿ ನಮ್ಮ ಪರಿಣತಿಯನ್ನು ಒಳಗೊಳ್ಳುತ್ತದೆ ಮತ್ತು ಗುಣಮಟ್ಟ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ವಿಶ್ವದಾದ್ಯಂತ ಗ್ರಾಹಕರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಎಲ್ಲಾ ಮೂರು ಮಾದರಿಗಳು ರೆನಾಲ್ಟ್ ಇಂಡಿಯಾಕ್ಕೆ ಜನಪ್ರಿಯ ಮಾರಾಟಗಾರರಾಗಿದ್ದಾರೆ. ರೆನಾಲ್ಟ್ ಕ್ವಿಡ್ ಒಂದು ವಿಭಾಗ-ವಿವರಣೆಯ ಉತ್ಪನ್ನವಾಗಿ ಮಾರ್ಪಟ್ಟಿದೆ, ಆದರೆ ರೆನಾಲ್ಟ್ ಟ್ರೈಬರ್ ಬುದ್ಧಿವಂತಿಕೆಯಿಂದ ವಿನ್ಯಾಸಗೊಳಿಸಲಾದ ಬಹು-ಸೀಟರ್ ಎಂಪಿವಿಯಾಗಿದೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ರೆನಾಲ್ಟ್ ಕಿಗರ್ ಕಾರು ತಯಾರಕರ ಇತ್ತೀಚಿನ ಕೊಡುಗೆಯಾಗಿದೆ ಮತ್ತು ಇದು ಸ್ಪರ್ಧಾತ್ಮಕ ಬೆಲೆಯ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ನೇಪಾಳ ಮತ್ತು ದಕ್ಷಿಣ ಆಫ್ರಿಕಾದಂತಹ ಮಾರುಕಟ್ಟೆಗಳಲ್ಲಿ ಕಿಗರ್ ಅಗಾಧ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ವಾಹನ ತಯಾರಕರು ಘೋಷಿಸಿದರು.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಫ್ರೆಂಚ್ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಭಾರತದಲ್ಲಿ ತನ್ನ ಎರಡು ಪ್ರಮುಖ ಮಾದರಿಗಳ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ. ರೆನಾಲ್ಟ್ ಕಂಪನಿಯು ಕಿಗರ್ (Kiger) ಸಬ್-ಕಾಂಪ್ಯಾಕ್ಟ್ ಎಸ್‍ಯುವಿ ಮತ್ತು ಟ್ರೈಬರ್ (Triber) ಎಂಪಿವಿಯು ಈ ತಿಂಗಳು ಬೆಲೆ ಏರಿಕೆಯನ್ನು ಪಡೆದಿವೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಇದರಿಂದಾಗಿ ಈ ಎರಡು ಕಾರುಗಳು ಸುಮಾರು ರೂ.30,000 ವರೆಗೆ ದುಬಾರಿಯಾಗಿದೆ. ರೆನಾಲ್ಟ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಕಿಗರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯ ಬೆಲೆಯು ಈಗ ಅದರ ಎಂಟ್ರಿ ಲೆವೆಲ್ RXE ಮ್ಯಾನುವಲ್ ರೂಪಾಂತರಕ್ಕಾಗಿ ದೆಹಲಿ ಎಕ್ಸ್-ಶೋರೂಂ ಪ್ರಕಾರ ರೂ,5.79 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಿಗರ್‌ನ ಮೂಲ ರೂಪಾಂತರವು ಈ ಹಿಂದೆ ರೂ,5.64ಲಕ್ಷ (ಎಕ್ಸ್-ಶೋ ರೂಂ, ದೆಹಲಿ) ಬೆಲೆಯಿತ್ತು, ಇದು ಸುಮಾರು ರೂ.15,000 ವರೆಗೆ ಹೆಚ್ಚಿಸಿದೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಇನ್ನು ರೆನಾಲ್ಟ್ ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದಲ್ಲಿ ಕಿಗರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಸಬ್-ಕಾಂಪ್ಯಾಕ್ಟ್ ಎಸ್‌ಯುವಿಯಾಗಿತ್ತು. ಆದರೆ ಇತ್ತೀಚಿನ ಬೆಲೆ ಏರಿಕೆಯ ನಂತರ, ಕಿಗರ್‌ನ ತಾಂತ್ರಿಕ ಸೋದರಸಂಬಂಧಿ ನಿಸ್ಸಾನ್ ಮ್ಯಾಗ್ನೈಟ್ ಅತ್ಯಂತ ಕೈಗೆಟುಕುವ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

1.0-ಲೀಟರ್ RXT EASY-R ಆಟೋಮ್ಯಾಟಿಕ್ ಡ್ಯುಯಲ್ ಟೋನ್ ರೂಪಾಂತರಕ್ಕೆ ಕಿಗರ್ ಬೆಲೆಗಳಲ್ಲಿ ಅತ್ಯಧಿಕ ಏರಿಕೆಯು ರೂ,29,000 ಆಗಿದೆ. ಇದರ ಬೆಲೆ ಈಗ ರೂ.8.01 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಆಗಿದೆ. ಕಿಗರ್ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯ ಬಹುತೇಕ ಎಲ್ಲಾ ರೂಪಾಂತರಗಳು ಬೆಲೆ ಏರಿಕೆಯನ್ನು ಪಡೆದಿವೆ. 1.0-ಲೀಟರ್ RXZ X-TRONIC Turbo ಜೊತೆಗೆ ಸಿವಿಟಿ ರೂಪಾಂತರಕ್ಕೆ ರೂ.10,960 ರಷ್ಟು ದುಬಾರಿಯಾಗಿದೆ. ಕಳೆದ ವರ್ಷ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ ನಾಲ್ಕು-ಸ್ಟಾರ್ ರೇಟಿಂಗ್ ಗಳಿಸಿದ ನಂತರ ಭಾರತದ ಸುರಕ್ಷಿತ ಏಳು-ಸೀಟುಗಳ ಮಾದರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ರೆನಾಲ್ಟ್ ಟ್ರೈಬರ್ ಎಂಪಿವಿ, ಗಮನಾರ್ಹ ಬೆಲೆ ಏರಿಕೆಗಳನ್ನು ಸಹ ಪಡೆದುಕೊಂಡಿದೆ.

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ಕೆಲವು ರೂಪಾಂತರಗಳಿಗೆ ಟ್ರೈಬರ್ ಬೆಲೆ ಸುಮಾರು ರೂ.30,000 ಹೆಚ್ಚಾಗಿದೆ. ಟ್ರೈಬರ್ ಎಂಪಿವಿಯ ಮೂಲ ರೂಪಾಂತರವಾದ RXE ಟ್ರಿಮ್ ಎಲ್ಲಾ ರೂಪಾಂತರಗಳಲ್ಲಿ ಕಡಿಮೆ ಹೆಚ್ಚಳವನ್ನು ಪಡೆದುಕೊಂಡಿದೆ. ಈ ರೂಪಾಂತರಕ್ಕೆ ರೂ,19,000 ರಷ್ಟು ದುಬಾರಿಯಾಗಿದೆ. ಟ್ರೈಬರ್ ಬೆಲೆಗಳಲ್ಲಿ ಹೆಚ್ಚಿನ ಹೆಚ್ಚಳವು ಅದರ ಆಟೋಮ್ಯಾಟಿಕ್ ರೂಪಾಂತರಗಳಲ್ಲಿದೆ. RXL EASY-R, RXT EASY-R, RXZ EASY-R, RXZ EASY-R ಡ್ಯುಯಲ್ ಟೋನ್ ಆಟೋಮ್ಯಾಟಿಕ್ ಮಾದರಿಗಳು ರೂ.29,800 ರಷ್ಟು ಒಂದೇ ರೀತಿಯ ಏರಿಕೆಯನ್ನು ಪಡೆದಿವೆ

ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ Renault

ರೆನಾಲ್ಟ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟು 10 ವರ್ಷಗಳು ಪೂರ್ತಿಯಾಗಿವೆ. ಈ ರೆನಾಲ್ಟ್ ಕಿಗರ್ ಬಜೆಟ್ ಬೆಲೆಯೊಂದಿಗೆ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಗ್ರಾಹಕರನ್ನು ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸಹ ಸೆಳೆದುಕೊಂಡಿದೆ.

Most Read Articles

Kannada
English summary
Renault india 1 lakh export milestone kwid triber kiger details
Story first published: Wednesday, January 12, 2022, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X