Just In
- 1 hr ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 15 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 16 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- Movies
ಫೇಸ್ಬುಕ್ ಲೈವ್ ಬಂದು ಪ್ರಪಂಚದ ದೊಡ್ಡ ಪ್ರಾಬ್ಲಂ ಬಗ್ಗೆ ಹೇಳಿದ ಉಪೇಂದ್ರ!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಜೂನ್ ತಿಂಗಳಿನಲ್ಲಿ ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಘೋಷಣೆ ಮಾಡಿದೆ. ಈ ಹೊಸ ಆಫರ್‌ಗಳೊಂದಿಗೆ ರೆನಾಲ್ಟ್ ಕಾರುಗಳಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕೊರೋನಾ ಮತ್ತು ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಏರಿಳಿತ ಕಾಣುತ್ತಿದೆ. ಹೀಗಾಗಿ ಹೊಸ ವಾಹನಗಳ ಬೇಡಿಕೆಯಲ್ಲಿ ಸ್ಥಿರತೆಗಾಗಿ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ಕೂಡ ವಿವಿಧ ಕಾರುಗಳ ಖರೀದಿ ಜೂನ್ ತಿಂಗಳ ಆಫರ್ ಘೋಷಣೆ ಮಾಡಿದೆ.

ಪ್ರಸ್ತುತ ರೆನಾಲ್ಟ್ ಭಾರತದಲ್ಲಿ ಕೇವಲ 3 ಮಾದರಿಗಳನ್ನು ಮಾರಾಟ ಮಾಡುತ್ತದೆ. ಈ 3 ಮಾದರಿಗಳಲ್ಲಿ ರೆನಾಲ್ಟ್ ಕ್ವಿಡ್, ರೆನಾಲ್ಟ್ ಕಿಗರ್ ಮತ್ತು ರೆನಾಲ್ಟ್ ಟ್ರೈಬರ್ ಸೇರಿವೆ. ಈ 3 ಮಾದರಿಗಳಲ್ಲಿ, ರೆನಾಲ್ಟ್ ಕ್ವಿಡ್ ಎಂಟ್ರಿ ಲೆವೆಲ್ ಮಾದರಿಯಾಗಿದೆ.

ರೆನಾಲ್ಟ್ ಕ್ವಿಡ್
ರೆನಾಲ್ಟ್ ಕ್ವಿಡ್ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಫ್ರೆಂಚ್ ವಾಹನ ತಯಾರಕರಿಗೆ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಆಫರ್‌ಗಳಿಗೆ ಸಂಬಂಧಿಸಿದಂತೆ, ರೆನಾಲ್ಟ್ ಕ್ವಿಡ್‌ನ 2021ರ ಮಾದರಿಗೆ ರೂ.35,000 ವರೆಗಿನ ಆಫರ್ ಅನ್ನು ನೀಡಿದ್ದಾರೆ. ಇದರ ಜೊತೆಗೆ 37,000 ರೂ.ವರೆಗಿನ ವಿಶೇಷ ಲಾಯಲ್ಟಿ ಬೋನಸ್ ಕೂಡ ಇದೆ. ಇದರೊಂದಿಗೆ, ಗ್ರಾಹಕರು r.e.li.v.e ಸ್ಕ್ರ್ಯಾಪ್‌ಪೇಜ್ ಪ್ರೋಗ್ರಾಂ ಅಡಿಯಲ್ಲಿ ರೂ 10,000 ವರೆಗೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾದ ವಿನಿಮಯ ಪ್ರಯೋಜನವೂ ಇದೆ.

ಮತ್ತೊಂದೆಡೆ, ಹೊಸ 2022ರ ರೆನಾಲ್ಟ್ ಕ್ವಿಡ್ ಮಾದರಿಗೆ ರೂ.30,000 ವರೆಗೆ ಪ್ರಯೋಜನಗಳನ್ನು ಪಡೆಯುತ್ತವೆ, ಜೊತೆಗೆ ರೂ 37,000 ವರೆಗಿನ ವಿಶೇಷ ಲಾಯಲ್ಟಿ ಪ್ರಯೋಜನಗಳು ಮತ್ತು ರೂ 10,000 ವರೆಗಿನ ವಿನಿಮಯ ಪ್ರಯೋಜನಗಳನ್ನು ಪಡೆಯುತ್ತವೆ.

ಈ 2022ರ ರೆನಾಲ್ಟ್ ಕ್ವಿಡ್ ಹ್ಯಾಚ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ, ಇದರಿಂದ ಹೊಸ ಕ್ವಿಡ್ ಕಾರು ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದೆ. ಕ್ವಿಡ್ ಕಾರಿನ ಎಂಜಿನ್ ಸೆಟಪ್ ಬದಲಾಗದೆ ಉಳಿದಿದೆ. 2022ರ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಹೊಸ RXL(O) ಎಂಬ ರೂಪಾಂತರವನ್ನು ಎರಡೂ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.

ಇದರಲ್ಲಿ 800-ಸಿಸಿ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ..

ಈ 2022ರ ರೆನಾಲ್ಟ್ ಕ್ವಿಡ್ ಕಾರಿನ ಬಣ್ಣಗಳ ಬಗ್ಗೆ ಹೇಳುವುದಾದರೆ, ಇದು ಮೆಟಲ್ ಮಸ್ಟರ್ಡ್ ಮತ್ತು ಐಸ್ ಕೂಲ್ ವೈಟ್ ಜೊತೆಗೆ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ. ಇದರೊಂದಿಗೆ ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕಾರ್ ಬ್ಲೂ ಎಂಬ ಎರಡು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಇದರೊಂದಿಗೆ ಫ್ಲೆಕ್ಸ್ ವ್ಹೀಲ್ ಅನ್ನು ಸಹ ಪಡೆದುಕೊಂಡಿದೆ.

ರೆನಾಲ್ಟ್ ಕಿಗರ್
ರೆನಾಲ್ಟ್ ಕಿಗರ್ ರೆನಾಲ್ಟ್ ಕ್ವಿಡ್‌ಗಿಂತ ಭಿನ್ನವಾಗಿ, ರೆನಾಲ್ಟ್ ಕಿಗರ್ ಸಬ್ -4 ಮೀಟರ್ ಎಸ್‌ಯುವಿಯಾಗಿದೆ ಈ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋ ರೂಂ, ಪ್ರಕಾರ ರೂ.5.99 ಲಕ್ಷದಿಂದ ಪ್ರಾರಂಭವಾಗುತ್ತದೆ.

ಈ ರೆನಾಲ್ಟ್ ಕಿಗರ್ ಕಾರಿನ ಮೇಲೆ ವಿಶೇಷ ಲಾಯಲ್ಟಿ ಪ್ರಯೋಜನವನ್ನು ರೂ 55,000 ವರೆಗೆ ಮತ್ತು ಕೆಲವು ಗ್ರಾಹಕರು ರೂ 10,000 ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯಬಹುದು. ಹೊಸದಾಗಿ ಪರಿಚಯಿಸಲಾದ r.e.li.v.e ಸ್ಕ್ರ್ಯಾಪ್‌ಪೇಜ್ ಪ್ರೋಗ್ರಾಂ ಅಡಿಯಲ್ಲಿ ರೂ 10,000 ವರೆಗೆ ನೀಡುವ ವಿನಿಮಯ ಪ್ರಯೋಜನವಿದೆ.

ಕಿಗರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಹೊಸ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

ರೆನಾಲ್ಟ್ ಟ್ರೈಬರ್
ರೆನಾಲ್ಟ್ ಟ್ರೈಬರ್ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ 7-ಸೀಟುಗಳ ಎಂಪಿವಿ ಆಗಿದ್ದರೂ, ವಯಸ್ಕ ನಿವಾಸಿಗಳ ರಕ್ಷಣೆಗಾಗಿ 4-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಎಲ್ಲಾ 7 ಪ್ರಯಾಣಿಕರು ಎಂಪಿವಿ ಯಲ್ಲಿ ಸುರಕ್ಷಿತವಾಗಿರುವುದನ್ನು ಫ್ರೆಂಚ್ ವಾಹನ ತಯಾರಕರು ಖಚಿತಪಡಿಸಿಕೊಂಡಿದ್ದಾರೆ.

ರೆನಾಲ್ಟ್ ಟ್ರೈಬರ್ 2022ರ ಮಾದರಿಗೆ ರೂ.40,000 ರೂ.ವರೆಗಿನ ವಿಶೇಷ ಪ್ರಯೋಜನಗಳನ್ನು ಒಳಗೊಂಡಿರುತ್ತದೆ, ಆದರೆ 2022ರ ವಿನ್ ಮತ್ತು ಲಿಮಿಟೆಡ್ ಎಡಿಷನ್ (2022) ಮಾಡೆಲ್‌ಗಳಲ್ಲಿ ರೂ.44,000ಗಳ ವಿಶೇಷ ಲಾಯಲ್ಟಿ ಪ್ರಯೋಜನ ಸಾಮಾನ್ಯವಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಈ ಮಾನ್ಸೂನ್ ಅವಧಿಯಲ್ಲಿ ರೆನಾಲ್ಟ್ ತನ್ನ ಸರಣಿಯಲ್ಲಿ ಎಲ್ಲಾ ಕಾರುಗಳ ಮೇಲೆ ಯೋಗ್ಯವಾದ ಆಫರ್ ಪ್ಲಾನ್‌ಗಳನ್ನು ನೀಡಿದೆ. ನೀವು ರೆನಾಲ್ಟ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಬಹುಶಃ ಇದು ಉತ್ತಮ ಸಮಯವಾಗಿರುತ್ತದೆ.