Just In
- 13 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 13 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 14 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
- 14 hrs ago
ಅತಿ ಕಡಿಮೆ ಅವಧಿಯಲ್ಲಿ ಕಿಯಾ ಸೆಲ್ಟೋಸ್ ಹೊಸ ಮೈಲಿಗಲ್ಲು: ದೇಶದಲ್ಲಿ ದಾಖಲೆಯ ಮಾರಾಟ
Don't Miss!
- News
ಪಂಜಾಬ್: ತ್ರಿವರ್ಣ ಧ್ವಜದ ಮೇಲೆ ಬಿಜೆಪಿ ರಾಜಕೀಯ- ಅಮರಿಂದರ್ ಸಿಂಗ್
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ತುಲಾ, ಮೇಷ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರಿಗೆ ಶುಭ ದಿನ
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಮೇ ತಿಂಗಳಿನಲ್ಲಿ ರೆನಾಲ್ಟ್ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ವಿವಿಧ ಆಫರ್ ಘೋಷಣೆ ಮಾಡಿದೆ. ಈ ಹೊಸ ಆಫರ್‌ಗಳೊಂದಿಗೆ ರೆನಾಲ್ಟ್ ಕಾರುಗಳಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕೊರೋನಾ ಮತ್ತು ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಏರಿಳಿತ ಕಾಣುತ್ತಿದೆ. ಹೀಗಾಗಿ ಹೊಸ ವಾಹನಗಳ ಬೇಡಿಕೆಯಲ್ಲಿ ಸ್ಥಿರತೆಗಾಗಿ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಮೇ ತಿಂಗಳ ಆಫರ್ ಘೋಷಣೆ ಮಾಡಿದೆ.

ರೆನಾಲ್ಟ್ ಈ ಮೇ ತಿಂಗಳಿನಲ್ಲಿ ಕ್ವಿಡ್, ಕಿಗರ್ ಮತ್ತು ಟ್ರೈಬರ್‌ನಲ್ಲಿ ವಿವಿಧ ಪ್ರಯೋಜನಗಳ ಮೂಲಕ ರಿಯಾಯಿತಿಗಳನ್ನು ನೀಡುತ್ತಿದೆ. ಈ ತಿಂಗಳು ನೀವು ನಗದು, ಕಾರ್ಪೊರೇಟ್, ವಿನಿಮಯ ಮತ್ತು ಲಾಯಲ್ಟಿ ಪ್ರಯೋಜನಗಳನ್ನು ಪಡೆಯಬಹುದು. ವ

ರೆನಾಲ್ಟ್ ಕ್ವಿಡ್
2021ರ ರೆನಾಲ್ಟ್ ಕ್ವಿಡ್ ಕಾರಿನ ಮೇಲೆ ರೂ.35,000 ವರೆಗಿನ ಒಟ್ಟು ಪ್ರಯೋಜನಗಳನ್ನು ನೀಡಲಾಗುತ್ತಿದೆ. ಇದರಲ್ಲಿ ರೂ.10,000 ನಗದು ರಿಯಾಯಿತಿ, ರೂ 15,000 ವಿನಿಮಯ ಬೋನಸ್, ರೂ 10,000 ದವರೆಗೆ ಕಾರ್ಪೊರೇಟ್ ರಿಯಾಯಿತಿ ಅಥವಾ ರೂ 5,000 ಮತ್ತು ರೂ.37,000 ವರೆಗಿನ ಲಾಯಲ್ಟಿ ಬೋನಸ್‌ನೊಂದಿಗೆ ಲಭ್ಯವಿದೆ.

2022ರ ಹೊಸ ರೆನಾಲ್ಟ್ ಕ್ವಿಡ್ ಕಾರಿನ ಆಫರ್ ಗಳ ಬಗ್ಗೆ ಹೇಳುವುದಾದರೆ, ಈ ಮಾದರಿಗೆ ರೂ,15,000 ಗಳ ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಅಥವಾ ರೂ 10,000 ಅಥವಾ ರೂ 5,000 ರ ಗ್ರಾಮೀಣ ಕೊಡುಗೆ ಮತ್ತು ರೂ ವರೆಗಿನ ಲಾಯಲ್ಟಿ ಬೋನಸ್ ಅನ್ನು ರೂ.ವರೆಗೆ ಪಡೆಯಬಹುದು.

ಈ 2022ರ ರೆನಾಲ್ಟ್ ಕ್ವಿಡ್ ಹ್ಯಾಚ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ, ಇದರಿಂದ ಹೊಸ ಕ್ವಿಡ್ ಕಾರು ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದೆ. ಕ್ವಿಡ್ ಕಾರಿನ ಎಂಜಿನ್ ಸೆಟಪ್ ಬದಲಾಗದೆ ಉಳಿದಿದೆ. 2022ರ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಹೊಸ RXL(O) ಎಂಬ ರೂಪಾಂತರವನ್ನು ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಸ್ವೀಕರಿಸಿದೆ.

ಇದರಲ್ಲಿ 800-ಸಿಸಿ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಿದೆ.

ಈ 2022ರ ರೆನಾಲ್ಟ್ ಕ್ವಿಡ್ ಕಾರಿನ ಬಣ್ಣಗಳ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ಮೆಟಲ್ ಮಸ್ಟರ್ಡ್ ಮತ್ತು ಐಸ್ ಕೂಲ್ ವೈಟ್ ಜೊತೆಗೆ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ. ಇದರೊಂದಿಗೆ ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕಾರ್ ಬ್ಲೂ ಎಂಬ ಎರಡು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಇದರೊಂದಿಗೆ ಫ್ಲೆಕ್ಸ್ ವ್ಹೀಲ್ ಅನ್ನು ಸಹ ಪಡೆದುಕೊಂಡಿದೆ.

ರೆನಾಲ್ಟ್ ಟ್ರೈಬರ್
ಕಂಪನಿಯ ಕೈಗೆಟಕುವ ಎಂಪಿವಿ ರೆನಾಲ್ಟ್ ಟ್ರೈಬರ್‌ನ 2022ರ ಮಾದರಿಯ ಮೇಲೆ ರೂ 5,000 ನಗದು ರಿಯಾಯಿತಿ, ರೂ 20,000 ವಿನಿಮಯ ಬೋನಸ್, ರೂ 10,000 ಅಥವಾ ರೂ ರೂ 5,000 ರ ಕಾರ್ಪೊರೇಟ್ ರಿಯಾಯಿತಿ ಅಥವಾ ರೂ 5,000 ಮತ್ತು ರೂ 44, 00 ವರೆಗೆ ಲಾಯಲ್ಟಿ ಬೋನಸ್ ಅನ್ನು ನೀಡುತ್ತಿದೆ. .

ಕಂಪನಿಯು ಟ್ರೈಬರ್‌ನ 2022ರ ಮಾದರಿಯ ಮೇಲೆ ರೂ.35,000 ವರೆಗೆ ಒಟ್ಟು ಕೊಡುಗೆಗಳನ್ನು ನೀಡುತ್ತಿದೆ. ಇದರ ಹೊರತಾಗಿ, ಕಂಪನಿಯು ಈ ಕಾರಿನ ಸೀಮಿತ ಆವೃತ್ತಿಯ ಮಾದರಿಯ ಮೇಲೆ ರೂ.44,000 ವರೆಗಿನ ಒಟ್ಟು ಪ್ರಯೋಜನಗಳನ್ನು ನೀಡುತ್ತಿದೆ, ಇದರಲ್ಲಿ ಕಾರ್ಪೊರೇಟ್ ರಿಯಾಯಿತಿ ಅಥವಾ ರೂ.10,000 ಅಥವಾ ರೂ.5,000 ಮತ್ತು ರೂ.44,000 ವರೆಗಿನ ಲಾಯಲ್ಟಿ ಬೋನಸ್ ಒಳಗೊಂಡಿದೆ.

ರೆನಾಲ್ಟ್ ಕಿಗರ್
ರೆನಾಲ್ಟ್ ಕಿಗರ್ ಕಂಪನಿಯ ಅತ್ಯಂತ ಜನಪ್ರಿಯ ಎಸ್‍ಯುವಿಯಾಗಿದೆ. , ಇದರ ಮಾರಾಟವು ಪ್ರತಿ ತಿಂಗಳು ಹೆಚ್ಚು ಉತ್ತಮವಾಗಿರುತ್ತದೆ. ಮೇ ತಿಂಗಳ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಕಾರ್ಪೊರೇಟ್ ರಿಯಾಯಿತಿ ರೂ 10,000 ಮತ್ತು ರೂ 10,000 ವರೆಗೆ ಬಿಮಾಯಿತಿ ಬೋನಸ್ ಅನ್ನು ಹೊಂದಿದೆ. ಇನ್ನು ರೂ.55,000 ವರೆಗಿನ ಲಾಯಲ್ಟಿ ಬೋನಸ್ ಅನ್ನು ಈ ಕಾರಿನ ಮೇಲೆ ನೀಡುತ್ತಿದೆ.

ಕಿಗರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಟಿ ಮತ್ತು ಆರ್‌ಎಕ್ಸ್‌ಜೆಡ್ ಎನ್ನುವ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಸಿ ಆಕಾರದ ಎಲ್ಇಡಿ ಟೈಲ್ ಲೆಟ್ಸ್, ಫ್ಲಕ್ಸ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್, ತೀಕ್ಷ್ಣವಾದ ಹಿಂಭಾಗದ ವಿಂಡ್‌ಸ್ಕ್ರೀನ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 205 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ. ಹೊಸ ಕಾರಿನಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸರ್ಪೊಟ್ ಮಾಡುವ 8 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂವನ್ನು ಹೊಂದಿದೆ.