ಆಗಸ್ಟ್ ಆಫರ್: ಪ್ರಮುಖ ಕಾರುಗಳ ಮೇಲೆ ರೂ. 45 ಸಾವಿರ ತನಕ ಆಫರ್ ನೀಡಿದ ರೆನಾಲ್ಟ್
ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಅಗಸ್ಟ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಗ್ರಾಹಕರು ರೂ. 45 ಸಾವಿರ ತನಕ ಉಳಿತಾಯ ಮಾಡಬಹುದಾಗಿದೆ.

ಕೋವಿಡ್ ಮತ್ತು ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಏರಿಳಿತ ದಾಖಲಿಸುತ್ತಿದೆ. ಹೀಗಾಗಿ ಹೊಸ ವಾಹನಗಳ ಮಾರಾಟ ಸ್ಥಿರತೆಗಾಗಿ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಅಗಸ್ಟ್ ತಿಂಗಳ ಆಫರ್ ಘೋಷಣೆ ಮಾಡಿದೆ.

ರೆನಾಲ್ಟ್ ಕಂಪನಿಯು ಕ್ವಿಡ್(Kwid) ಹ್ಯಾಚ್‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಟ್ರೈಬರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿಯ ಮೇಲೆ ರೂ. 30 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟ್ರೈಬರ್ ಕಾರಿನ ಮೇಲೆ ರೂ. 45 ಸಾವಿರ ತನಕ ಆಫರ್ ಪಡೆಯಬಹುದಾಗಿದೆ.

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲೆ ರೆನಾಲ್ಟ್ ಕಂಪನಿಯು ರೂ. 30 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಇದರಲ್ಲಿ ಕಂಪನಿಯು ರೂ. 5 ಸಾವಿರ ಕ್ಯಾಶ್ ಬ್ಲ್ಯಾಕ್, ಸ್ಕ್ರ್ಯಾಪೇಜ್ ಕಾರ್ಯಕ್ರಮದ ಅಡಿಯಲ್ಲಿ ರೂ. 15 ಸಾವಿರ ಮತ್ತು ರೂ. 10 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್ ನೀಡುತ್ತದೆ.

ಇದರಲ್ಲದೆ ಕಂಪನಿಯು ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾ ಗ್ರಾಹಕರಿಗೆ ಮಾತ್ರ ಅನ್ವಯಿಸುವಂತೆ ಹೆಚ್ಚುವರಿಯಾಗಿ ರೂ. 35 ಸಾವಿರ ರಿಯಾಯಿತಿಯನ್ನು ನೀಡಲಾಗುತ್ತಿದೆ. ಕಂಪನಿಯು ಈ ನಾಲ್ಕು ರಾಜ್ಯಗಳ ಗ್ರಾಹಕರಿಗೆ ಈಸಿ ಕೇರ್ ಪ್ಯಾಕೇಜ್‌ನಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ಖರೀದಿಯ ಸಮಯದಲ್ಲಿ ಈ ಪ್ಯಾಕೇಜ್‌ನಲ್ಲಿ ಶೇ.10 ರಷ್ಟು ರಿಯಾಯಿತಿ ಜೊತೆಗೆ ರೂ. 4999 ಇಎಂಐಯೊಂದಿಗೆ ಕಾರು ಖರೀದಿಸಬಹುದು.

ಹೊಸ ಆಫರ್‌ಗಳಲ್ಲಿ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಡಿಸ್ಕೌಂಟ್ ಲಭ್ಯವಿದ್ದು, ಗರಿಷ್ಠ ರೂ. 45 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ರೂ. 10 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ. 20 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ಸ್ಕಾರ್ಪೇಜ್ ಪಾಲಸಿ ಅಡಿಯಲ್ಲಿ ರೂ. 10 ಸಾವಿರ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಇದರೊಂದಿಗೆ ಫ್ರೀಡಂ ಕಾರ್ನಿವಲ್ ಆಫರ್ ಅಡಿಯಲ್ಲಿ ರೂ. 5 ಸಾವಿರ ವರೆಗಿನ ಆಕ್ಸೆಸರಿಗಳನ್ನು ಸಹ ನೀಡಲಾಗುತ್ತಿದ್ದು, ಅದೇ ಸಮಯದಲ್ಲಿ ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾದ ಗ್ರಾಹಕರಿಗೆ 45,000 ರೂ.ಗಳನ್ನು ಉಳಿಸುವ ಅವಕಾಶವನ್ನು ನೀಡಲಾಗುತ್ತಿದೆ.

ಫ್ರೀಡಮ್ ಕಾರ್ನಿವಲ್ ಆಫರ್ ಅಡಿಯಲ್ಲಿ ರೂ. 5 ಸಾವಿರ ಮೌಲ್ಯದ ಪರಿಕರಗಳನ್ನು ನೀಡಲಾಗುತ್ತಿದ್ದು, ಇದರೊಂದಿಗೆ ಕಾಂಪ್ಯಾಕ್ಟ್ ಎಂಪಿವಿಯನ್ನು ಅನ್ನು ರೂ. 5999 ಇಎಂಐನಲ್ಲಿ ಖರೀದಿಸಬಹುದಾಗಿದೆ.

ಇನ್ನು ಕಿಗರ್ ಕಂಪ್ಯಾಕ್ಟ್ ಎಸ್‌ಯುವಿಯ ಖರೀದಿಯ ಮೇಲೂ ಕೂಡಾ ರೆನಾಲ್ಟ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ರೂ.25 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ.

ಇದರಲ್ಲಿ ರೂ. 10 ಸಾವಿರ ಮೌಲ್ಯದ ಕಾರ್ಪೊರೇಟ್ ರಿಯಾಯ್ತಿ ಸೇರಿದಂತೆ ಸ್ಕ್ರ್ಯಾಪೇಜ್ ನೀತಿ ಅಡಿ ರೂ. 10 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ಇದರೊಂದಿಗೆ ಫ್ರೀಡಂ ಕಾರ್ನಿವಲ್ ಆಫರ್ ಅಡಿಯಲ್ಲಿ ರೂ.5 ಸಾವಿರ ಆಕ್ಸೆಸರಿಗಳನ್ನು ಸಹ ನೀಡಲಾಗುತ್ತಿದೆ.


Click it and Unblock the Notifications