ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೆನಾಲ್ಟ್ ಇಂಡಿಯಾ(Renault India) ಕಂಪನಿಯು ಹೊಸ ಕಾರುಗಳ ಮಾರಾಟ ಸುಧಾರಣೆಗಾಗಿ ತನ್ನ ಪ್ರಮುಖ ಕಾರುಗಳ ಖರೀದಿ ಮೇಲೆ ಜುಲೈ ಅವಧಿಯ ವಿವಿಧ ಆಫರ್‌ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಕೋವಿಡ್‌ ಮತ್ತು ಸೆಮಿಕಂಡಕ್ಟರ್ ಕೊರತೆಯ ನಡುವೆಯೂ ವಿವಿಧ ಕಾರು ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನ ಮಾರಾಟವು ಏರಿಳಿತ ದಾಖಲಿಸುತ್ತಿದೆ. ಹೀಗಾಗಿ ಹೊಸ ವಾಹನಗಳ ಬೇಡಿಕೆಯಲ್ಲಿ ಸ್ಥಿರತೆಗಾಗಿ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್‌ ಘೋಷಣೆ ಮಾಡಿದ್ದು, ರೆನಾಲ್ಟ್ ಇಂಡಿಯಾ ಕಂಪನಿಯು ಕೂಡಾ ವಿವಿಧ ಕಾರುಗಳ ಖರೀದಿ ಮೇಲೆ ಜುಲೈ ತಿಂಗಳ ಆಫರ್ ಘೋಷಣೆ ಮಾಡಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೆನಾಲ್ಟ್ ಕಂಪನಿಯು ಕ್ವಿಡ್(Kwid) ಹ್ಯಾಚ್‌‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ಘೋಷಣೆ ಮಾಡುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಈ ತಿಂಗಳಾಂತ್ಯದ ತನಕ ರೆನಾಲ್ಟ್ ಕಾರುಗಳ ಖರೀದಿ ಮೇಲೂ ಗ್ರಾಹಕರು ಆಕರ್ಷಕ ಆಫರ್ ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಟ್ರೈಬರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿಯ ಮೇಲೆ ರೂ. 77 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟ್ರೈಬರ್ ಕಾರಿನ ಮೇಲೆ ರೂ. 94 ಸಾವಿರ ತನಕ ಆಫರ್ ಪಡೆಯಬಹುದಾಗಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲೆ ರೆನಾಲ್ಟ್ ಕಂಪನಿಯು ರೂ. 82 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, 2021ರ ಮಾದರಿಯ ಮೇಲೆ ರೂ. 82 ಸಾವಿರ ಮೊತ್ತದ ಆಫರ್ ಲಭ್ಯವಿದ್ದಲ್ಲಿ 2022ರ ಮಾದರಿಯ ಮೇಲೆ ರೂ. 77 ಸಾವಿರ ಸಾವಿರ ಡಿಸ್ಕೌಂಟ್ ಲಭ್ಯವಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೂ. 77 ಸಾವಿರ ಮೊತ್ತದ ಆಫರ್‌ನಲ್ಲಿ ರೂ. 30 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ. 10 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 37 ಸಾವಿರ ತನಕ ಲಭ್ಯವಿದ್ದು, 2021ರ ಮಾದರಿಯ ಮೇಲೆ ಹೆಚ್ಚಿನ ಮಟ್ಟದ ಕ್ಯಾಶ್ ಡಿಸ್ಕೌಂಟ್ ಸಿಗಲಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಕಿಗರ್ ಕಾರಿನ ಖರೀದಿಯ ಮೇಲೂ ಕೂಡಾ ರೆನಾಲ್ಟ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ರೂ.75 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ರೂ.75 ಸಾವಿರ ಮೌಲ್ಯದ ಆಫರ್‌ಗಳಲ್ಲಿ ರೂ.55 ಸಾವಿರ ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್, ರೂ. 10 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ಸ್ಕಾರ್ಪೇಜ್ ಪಾಲಸಿ ಅಡಿಯಲ್ಲಿ ಆಯ್ದ ಗ್ರಾಹಕರಿಗೆ ರೂ. 10 ಸಾವಿರ ಡಿಸ್ಕೌಂಟ್ ಲಭ್ಯವಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಹೊಸ ಆಫರ್‌ಗಳಲ್ಲಿ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಡಿಸ್ಕೌಂಟ್ ಲಭ್ಯವಿದ್ದು, ಗರಿಷ್ಠ ರೂ. 94 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ರೂ. 40 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ. 44 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ಸ್ಕಾರ್ಪೇಜ್ ಪಾಲಸಿ ಅಡಿಯಲ್ಲಿ ರೂ. 10 ಸಾವಿರ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಕಾರು ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಗ್ರಾಹಕರನ್ನು ಸೆಳೆಯಲು ವಿಶೇಷ ಆಫರ್ ನೀಡಿರುವ ರೆನಾಲ್ಟ್ ಕಂಪನಿಯು ಕ್ವಿಡ್, ಟ್ರೈಬರ್ ಮತ್ತು ಕಿಗರ್ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಇಎಂಐ ಮರುಪಾವತಿ ಆಯ್ಕೆಯನ್ನು ಸಹ ನೀಡುತ್ತಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಇದರೊಂದಿಗೆ ರೆನಾಲ್ಟ್ ಕಂಪನಿಯ ಹೊಸ ವಾಹನಗಳ ಖರೀದಿಯನ್ನು ಉತ್ತೇಜಿಸಲು ತನ್ನ ಎಲ್ಲಾ ಕಾರು ಮಾದರಿಗಳ ಮೇಲೂ ರೂ. 10 ಸಾವಿರದಷ್ಟು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿ ಅಡಿ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಗ್ರಾಹಕರಿಗೆ ಪ್ರೋತ್ಸಾಹಿಸುತ್ತಿದ್ದು, ಹಳೆಯ ವಾಹನಗಳನ್ನು ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯಡಿ ಅಳವಡಿಸಿಕೊಳ್ಳಲು ನೆರವಾಗುವಂತೆ ಹೊಸ ಆಫರ್ ನೀಡುತ್ತಿವೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಇನ್ನುಳಿದಂತೆ ರೆನಾಲ್ಟ್ ಕಂಪನಿಯು ಕ್ವಿಡ್, ಕಿಗರ್ ಮತ್ತು ಟ್ರೈಬರ್ ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಕಂಪನಿಯು ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ರೆನಾಲ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಇದೀಗ ಹೊಸ ಕಾರಿನ ಉತ್ಪಾದನೆಯಲ್ಲಿ 50 ಸಾವಿರ ಯುನಿಟ್ ಉತ್ಪಾದನಾ ಮೈಲಿಗಲ್ಲು ಸಾಧಿಸಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ರೆನಾಲ್ಟ್ ಕಂಪನಿಗೆ ಹೊಸ ಕಿಗರ್ ಕಾರು ಮಾದರಿಯು ಉತ್ತಮ ಬೇಡಿಕೆ ತಂದುಕೊಟ್ಟಿದ್ದು, ಹೊಸ ಕಾರು ಮಾದರಿಯು ಇದೀಗ 50 ಸಾವಿರ ಯುನಿಟ್ ಮಾರಾಟ ಗುರಿತಲುಪುದರ ಜೊತೆಗೆ ವಿಶೇಷ ಸಂದರ್ಭಕ್ಕಾಗಿ ಹೊಸ ಬಣ್ಣದ ಆಯ್ಕೆ ಪಡೆದುಕೊಂಡಿದೆ.

ಪ್ರಮುಖ ಕಾರುಗಳ ಮೇಲೆ ಜುಲೈ ಆಫರ್ ಘೋಷಣೆ ಮಾಡಿದ ರೆನಾಲ್ಟ್

ಕಿಗರ್ ಕಾರು ಮಾದರಿಗಾಗಿ ರೆನಾಲ್ಟ್ ಇಂಡಿಯಾ ಕಂಪನಿಯು ಸ್ಟೆಲ್ತ್ ಬ್ಲ್ಯಾಕ್ ಬಣ್ಣದ ಆಯ್ಕೆ ನೀಡಿದ್ದು, ಹೊಸ ಬಣ್ಣದ ಆಯ್ಕೆಯು ಸ್ಪೋರ್ಟಿ ಸ್ಟೈಲ್ ಹೊಂದಿರುವ ಕಿಗರ್ ಮಾದರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

Most Read Articles

Kannada
English summary
Renault india discounts july 2022 save up to 94000
Story first published: Tuesday, July 12, 2022, 8:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X