ಸೆಪ್ಟೆಂಬರ್ ಆಫರ್: ರೆನಾಲ್ಟ್ ಕಾರುಗಳ ಖರೀದಿಗೆ ಮೇಲೆ ರೂ.45 ಸಾವಿರ ತನಕ ಡಿಸ್ಕೌಂಟ್..
ರೆನಾಲ್ಟ್ ಇಂಡಿಯಾ ಕಂಪನಿಯು ಪ್ರಮುಖ ಕಾರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಸೆಪ್ಟೆಂಬರ್ ಅವಧಿಗಾಗಿ ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.

ಹೊಸ ಆಫರ್‌ಗಳಲ್ಲಿ ರೆನಾಲ್ಟ್ ಕಾರು ಖರೀದಿಸುವ ಗ್ರಾಹಕರು ಗರಿಷ್ಠ ರೂ. 45 ಸಾವಿರ ತನಕ ಉಳಿತಾಯ ಮಾಡಬಹುದಾಗಿದ್ದು, ಕ್ವಿಡ್(Kwid) ಹ್ಯಾಚ್‌ಬ್ಯಾಕ್, ಟ್ರೈಬರ್(Triber) ಮಿನಿ ಎಂಪಿವಿ ಮತ್ತು ಕಿಗರ್(Kiger) ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್‌ಗಳು ಲಭ್ಯವಿವೆ.

ರೆನಾಲ್ಟ್ ಕಂಪನಿಯು ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ವಿಶೇಷ ರಿಯಾಯ್ತಿಗಳನ್ನು ನೀಡುತ್ತಿದ್ದು, ಹೊಸ ವಾಹನಗಳ ಮಾರಾಟ ಸ್ಥಿರತೆಗಾಗಿ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡುತ್ತಿವೆ.

ಹೊಸ ಆಫರ್‌ಗಳಲ್ಲಿ ಕಿಗರ್ ಕಾರಿನ ಮೇಲೆ ಕನಿಷ್ಠ ಮತ್ತು ಟ್ರೈಬರ್ ಕಾರಿನ ಮೇಲೆ ಗರಿಷ್ಠ ಆಫರ್ ಘೋಷಣೆ ಮಾಡಲಾಗಿದ್ದು, ಆಯ್ದು ಕಾರುಗಳ ಖರೀದಿ ಮೇಲೆ ಗ್ರಾಹಕರಿಗೆ ಕಂಪನಿಯು ನೀಡುತ್ತಿರುವ ಲೊಯಾಲಿಟಿ ಆಫರ್ ಕೂಡಾ ಪ್ರಮುಖ ಆಕರ್ಷಕವಾಗಲಿದೆ.

ರೆನಾಲ್ಟ್ ಕಂಪನಿಯ ಆರಂಭಿಕ ಕಾರು ಮಾದರಿಯಾದ ಕ್ವಿಡ್ ಖರೀದಿಯ ಮೇಲೆ ರೂ.35 ಸಾವಿರ ಮೌಲ್ಯದ ಆಫರ್ ಲಭ್ಯವಿದ್ದಲ್ಲಿ ಟ್ರೈಬರ್ ಕಾರಿನ ಮೇಲೆ ರೂ. 45 ಸಾವಿರ ತನಕ ಆಫರ್ ಪಡೆಯಬಹುದಾಗಿದೆ.

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲೆ ರೆನಾಲ್ಟ್ ಕಂಪನಿಯು ರೂ. 30 ಸಾವಿರ ಡಿಸ್ಕೌಂಟ್ ನೀಡುತ್ತಿದ್ದು, ಇದರಲ್ಲಿ ಕಂಪನಿಯು ರೂ.10 ಸಾವಿರ ಕ್ಯಾಶ್ ಬ್ಲ್ಯಾಕ್, ರೂ. 15 ಸಾವಿರ ತನಕ ಎಕ್ಸ್‌ಚೆಂಜ್ ಆಫರ್ ಮತ್ತು ರೂ. 10 ಸಾವಿರ ತನಕ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ರೂ.5 ಸಾವಿರ ತನಕ ಗ್ರಾಮೀಣ ಭಾಗದ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.

ಹೊಸ ಆಫರ್‌ಗಳಲ್ಲಿ ಟ್ರೈಬರ್ ಕಾರಿನ ಖರೀದಿಯ ಮೇಲೂ ಕೂಡಾ ಆಕರ್ಷಕ ಡಿಸ್ಕೌಂಟ್ ಲಭ್ಯವಿದ್ದು, ಗರಿಷ್ಠ ರೂ. 45 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್ ಸೇರಿದಂತೆ ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್, ರೂ. 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ರೂ. 5 ಸಾವಿರದಷ್ಟು ಗ್ರಾಮೀಣ ಭಾಗದ ಗ್ರಾಹಕರು ಹೆಚ್ಚುವರಿ ಕ್ಯಾಶ್‌ಬ್ಯಾಕ್ ಆಫರ್ ಪಡೆದುಕೊಳ್ಳಬಹುದಾಗಿದೆ.

ಇನ್ನು ಕಿಗರ್ ಕಂಪ್ಯಾಕ್ಟ್ ಎಸ್‌ಯುವಿಯ ಖರೀದಿಯ ಮೇಲೂ ಕೂಡಾ ರೆನಾಲ್ಟ್ ಕಂಪನಿಯು ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ್ದು, ರೂ. 25 ಸಾವಿರ ಮೌಲ್ಯದ ಆಫರ್‌ಗಳನ್ನು ನೀಡಲಾಗುತ್ತಿದೆ.

ಇದರಲ್ಲಿ ರೂ. 10 ಸಾವಿರ ಮೌಲ್ಯದ ಎಕ್ಸ್‌ಚೆಂಜ್ ಡಿಸ್ಕೌಂಟ್, ರೂ. 10 ಸಾವಿರ ಕಾರ್ಪೊರೇಟ್ ರಿಯಾಯ್ತಿ ಸಿಗಲಿದ್ದು, ಇದರೊಂದಿಗೆ ರೂ.5 ಸಾವಿರದಷ್ಟು ಕ್ಯಾಶ್ ಡಿಸ್ಕೌಂಟ್ ಸಹ ಲಭ್ಯವಿದೆ.

ರೆನಾಲ್ಟ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದೆ. ವಿಶೇಷ ಮಾದರಿಗಳು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಮುಂಬರುವ ದಸರಾ ಮತ್ತು ದೀಪಾವಳಿ ಸಂಭ್ರಮಕ್ಕಾಗಿ ಬಿಡುಗಡೆ ಮಾಡಲಾಗಿದೆ.

ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ಗಳನ್ನು ರೆನಾಲ್ಟ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚಿನ ಬೆಲೆಯೊಂದಿಗೆ ವಿಶೇಷ ಬಣ್ಣಗಳ ಆಯ್ಕೆ ಮತ್ತು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರಾಟ ಮಾಡಲಿದೆ.

ರೆನಾಲ್ಟ್ ಕಂಪನಿಯು ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ಗಳಲ್ಲಿ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಮಾದರಿಗಳನ್ನು ಮಾರಾಟ ಮಾಡಲಿದ್ದು, ಸೀಮಿತ ಅವಧಿಗಾಗಿ ಮಾತ್ರವೇ ಹೊಸ ಕಾರುಗಳು ಖರೀದಿಗೆ ಲಭ್ಯವಿರಲಿವೆ.

ವಿಶೇಷ ಆವೃತ್ತಿಗಳ ದರ ಪಟ್ಟಿಯಲ್ಲಿ ಕ್ವಿಡ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.54 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಯು ರೂ. 5.99 ಲಕ್ಷ ಬೆಲೆ ಹೊಂದಿದೆ.

ಟ್ರೈಬರ್ ಮಿನಿ ಎಂಪಿವಿ ವಿಶೇಷ ಆವೃತ್ತಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.78 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಯು ರೂ. 8.30 ಲಕ್ಷ ಬೆಲೆ ಹೊಂದಿದೆ.

ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ವಿಶೇಷ ಆವೃತ್ತಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.39 ಲಕ್ಷ ಆರಂಭಿಕ ಬೆಲೆಯೊಂದಿಗೆ ಆಟೋಮ್ಯಾಟಿಕ್ ಮಾದರಿಯು ರೂ. 10.39 ಲಕ್ಷ ಬೆಲೆ ಹೊಂದಿದೆ.

ರೆನಾಲ್ಟ್ ಕಂಪನಿಯು ವಿಶೇಷ ಮಾದರಿಗಳಲ್ಲಿ ಗ್ರಾಹಕರ ಆಕರ್ಷಣೆಗಾಗಿ ನವೀಕೃತ ಮುಂಭಾಗದ ಗ್ರಿಲ್, ಡಿಆರ್‌ಎಲ್/ಹೆಡ್‌ಲ್ಯಾಂಪ್‌ಗಳು ಮತ್ತು ಸೈಡ್ ಡೋರ್ ಡಿಕಾಲ್‌ಗಳ ಸುತ್ತಲೂ ಸ್ಪೋರ್ಟಿ ರೆಡ್ ಆಕ್ಸೆಂಟ್‌ಗಳನ್ನು ನೀಡಿದೆ. ಹಾಗೆಯೇ ಮಿಸ್ಟರಿ ಬ್ಲ್ಯಾಕ್ ರೂಫ್ ಟಾಪ್‌ನೊಂದಿಗೆ ಬಿಳಿ ಬಣ್ಣದಲ್ಲಿ ಮಾತ್ರವೇ ಸೀಮಿತ ಆವೃತ್ತಿಗಳು ಖರೀದಿಗೆ ಲಭ್ಯವಿದ್ದು, ಸಿಲ್ವರ್‌ಸ್ಟೋನ್ ಗ್ರೇ ಬಣ್ಣದ ಮಿಶ್ರಲೋಹದ ಚಕ್ರಗಳು ಮತ್ತು ಕೆಂಪು ಕ್ಯಾಲಿಪರ್‌ಗಳೊಂದಿಗೆ ಬರಲಿದೆ.


Click it and Unblock the Notifications