ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ರೆನಾಲ್ಟ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಕಾರುಗಳ ಸರಣಿಯಲ್ಲಿ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳನ್ನು ಬಿಡುಗಡೆ ಮಾಡಿದೆ.

Recommended Video

590 ಕಿ.ಮೀ ಮೈಲೇಜ್ ನೀಡುವ BMW i4 ಬಿಡುಗಡೆ | 340bhp, 430Nm, 0-100 In 5.7 Seconds & More

ವಿಶೇಷ ಮಾದರಿಗಳು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಮುಂಬರುವ ದಸರಾ ಮತ್ತು ದೀಪಾವಳಿ ಸಂಭ್ರಮಕ್ಕಾಗಿ ಬಿಡುಗಡೆ ಮಾಡಲಾಗಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌ಗಳನ್ನು ರೆನಾಲ್ಟ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಹೆಚ್ಚಿನ ಬೆಲೆಯೊಂದಿಗೆ ವಿಶೇಷ ಬಣ್ಣಗಳ ಆಯ್ಕೆ ಮತ್ತು ಹೆಚ್ಚುವರಿ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರಾಟ ಮಾಡಲಿದ್ದು, ವಿಶೇಷತೆ ಆವೃತ್ತಿಗಳ ಬಿಡುಗಡೆಯೊಂದಿಗೆ ಇಂದಿನಿಂದ ಬುಕಿಂಗ್ ಆರಂಭಿಸಲಾಗಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ರೆನಾಲ್ಟ್ ಕಂಪನಿಯು ಫೆಸ್ಟಿವಲ್ ಲಿಮಿಟೆಡ್ ಎಡಿಷನ್‌‌ಗಳಲ್ಲಿ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಮಾದರಿಗಳನ್ನು ಮಾರಾಟ ಮಾಡಲಿದ್ದು, ಸೀಮಿತ ಅವಧಿಗಾಗಿ ಮಾತ್ರವೇ ಹೊಸ ಕಾರುಗಳು ಖರೀದಿಗೆ ಲಭ್ಯವಿರಲಿವೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ವಿಶೇಷ ಆವೃತ್ತಿಗಳ ದರ ಪಟ್ಟಿಯಲ್ಲಿ ಕ್ವಿಡ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌‌ಶೋರೂಂ ಪ್ರಕಾರ ರೂ. 5.54 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಯು ರೂ. 5.99 ಲಕ್ಷ ಬೆಲೆ ಹೊಂದಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಟ್ರೈಬರ್ ಮಿನಿ ಎಂಪಿವಿ ವಿಶೇಷ ಆವೃತ್ತಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌‌ಶೋರೂಂ ಪ್ರಕಾರ ರೂ. 7.78 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ಆಟೋಮ್ಯಾಟಿಕ್ ಮಾದರಿಯು ರೂ. 8.30 ಲಕ್ಷ ಬೆಲೆ ಹೊಂದಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ವಿಶೇಷ ಆವೃತ್ತಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌‌ಶೋರೂಂ ಪ್ರಕಾರ ರೂ. 8.39 ಲಕ್ಷ ಆರಂಭಿಕ ಬೆಲೆಯೊಂದಿಗೆ ಆಟೋಮ್ಯಾಟಿಕ್ ಮಾದರಿಯು ರೂ. 10.39 ಲಕ್ಷ ಬೆಲೆ ಹೊಂದಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ರೆನಾಲ್ಟ್ ಕಂಪನಿಯು ವಿಶೇಷ ಮಾದರಿಗಳಲ್ಲಿ ಗ್ರಾಹಕರ ಆಕರ್ಷಣೆಗಾಗಿ ನವೀಕೃತ ಮುಂಭಾಗದ ಗ್ರಿಲ್, ಡಿಆರ್‌ಎಲ್/ಹೆಡ್‌ಲ್ಯಾಂಪ್‌ಗಳು ಮತ್ತು ಸೈಡ್ ಡೋರ್ ಡಿಕಾಲ್‌ಗಳ ಸುತ್ತಲೂ ಸ್ಪೋರ್ಟಿ ರೆಡ್ ಆಕ್ಸೆಂಟ್‌ಗಳನ್ನು ನೀಡಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಹಾಗೆಯೇ ಮಿಸ್ಟರಿ ಬ್ಲ್ಯಾಕ್ ರೂಫ್ ಟಾಪ್‌ನೊಂದಿಗೆ ಬಿಳಿ ಬಣ್ಣದಲ್ಲಿ ಮಾತ್ರವೇ ಸೀಮಿತ ಆವೃತ್ತಿಗಳು ಖರೀದಿಗೆ ಲಭ್ಯವಿದ್ದು, ಸಿಲ್ವರ್‌ಸ್ಟೋನ್ ಗ್ರೇ ಬಣ್ಣದ ಮಿಶ್ರಲೋಹದ ಚಕ್ರಗಳು ಮತ್ತು ಕೆಂಪು ಕ್ಯಾಲಿಪರ್‌ಗಳೊಂದಿಗೆ ಬರಲಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ವಿಶೇಷ ಮಾದರಿಗಳಿಗೆ ಸ್ಪೋರ್ಟಿ ಲುಕ್ ನೀಡಲು ಹೊಸ ಆವೃತ್ತಿಗಳನ್ನು ಪರಿಚಯಿಸಲಾಗಿದ್ದು, ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದರ ಪ್ರಮಾಣಿತ ರೂಪಾಂತರದಿಂದ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹಂಚಿಕೊಳ್ಳಲಿದ್ದು, ಕಿಗರ್ 4-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಭಾರತದಲ್ಲಿ ಕಂಪನಿಯ ಅತ್ಯಂತ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಕೊಂಡಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಹಾಗೆಯೇ ಈ ಕಾರಿನ ಕೆಲವು ಪ್ರಮುಖ ವೈಶಿಷ್ಟ್ಯಗಳೆಂದರೆ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಫಂಕ್ಷನ್ ಮತ್ತು ಎಬಿಎಸ್ ವೈಶಿಷ್ಟ್ಯತೆಗಳಿದ್ದು, ಅದೇ ರೀತಿಯಾಗಿ ಟ್ರೈಬರ್ ಫೆಸ್ಟಿವ್ ಎಡಿಷನ್ ಮಾದರಿಯಲ್ಲೂ ವಿಶೇಷ ಕೆಂಪು ಬಣ್ಣದ ಆಕ್ಸೆಂಟ್‌ಗಳನ್ನು ನೀಡಲಾಗಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಇದು ಪಿಯಾನೋ ಕಪ್ಪು ಬಣ್ಣದಲ್ಲಿ ಚಕ್ರದ ಕವರ್ ಮತ್ತು ಡೋರ್ ಹ್ಯಾಂಡಲ್‌ಗಳನ್ನು ಪಡೆಯಲಿದ್ದು, ರೆನಾಲ್ಟ್ ಟ್ರೈಬರ್ ನಿರ್ದಿಷ್ಟವಾಗಿ ಆರಾಮದಾಯಕ ಸವಾರಿ ಮತ್ತು ಕುಟುಂಬ ಕಾರ್ ಆಗಿ ಸ್ಥಾನ ಪಡೆದುಕೊಂಡಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಟ್ರೈಬರ್ ಮಿನಿ ಎಂಪಿವಿಯ ಎಲ್ಲಾ ಸಾಲುಗಳಲ್ಲಿ ಅತ್ಯುತ್ತಮ ದರ್ಜೆಯ ಆಸನಗಳನ್ನು ಮತ್ತು ಮಿನಿ ಎಂಪಿವಿ ವಿಭಾಗದಲ್ಲಿಯೇ ಗರಿಷ್ಠ 625 ಲೀಟರ್‌ ಸಾಮರ್ಥ್ಯದ ದೊಡ್ಡ ಬೂಟ್‌ಸ್ಪೇಸ್ ಅನ್ನು ಪಡೆದುಕೊಂಡಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಇದರೊಂದಿಗೆ ರೆನಾಲ್ಟ್ ಕಂಪನಿಯು ಕ್ವಿಡ್‌ನಲ್ಲಿ ಲಿಮಿಟೆಡ್ ಆವೃತ್ತಿಯನ್ನು ಆರಂಭಿಕ ಮಾದರಿಯನ್ನು ಆಧರಿಸಿ ಬಿಡುಗಡೆ ಮಾಡಿದ್ದು, ಸ್ಟೈಲಿಶ್ ಲುಕ್ ಹೆಚ್ಚಿಸುವುದಕ್ಕಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್‌ಗಳಲ್ಲಿ ಹೆಚ್ಚುವರಿಯಾಗಿ ರೆಡ್ ಆಕ್ಸೆಂಟ್ ಮತ್ತು ರೂಫ್ ಹಳಿಗಳನ್ನು ಜೋಡಿಸಲಾಗಿದೆ.

ವಿಶೇಷ ಬಣ್ಣಗಳ ಆಯ್ಕೆ ಹೊಂದಿರುವ ರೆನಾಲ್ಟ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಕಾರುಗಳು ಬಿಡುಗಡೆ

ಜೊತೆಗೆ ಕ್ವಿಡ್ ಲಿಮಿಟೆಡ್ ಆವೃತ್ತಿಯು ಸಿ-ಪಿಲ್ಲರ್‌ನಲ್ಲಿ ಕೆಂಪು ಬಣ್ಣದ ರೂಫ್ ರೈಲ್ ಅನ್ನು ಪಡೆಯಲಿದ್ದು, ವ್ಹೀಲ್ ಕವರ್‌ಗಳು ಮತ್ತು ಒಆರ್‌ವಿಎಂಗಳಲ್ಲಿ ಪಿಯಾನೋ ಕಪ್ಪು ಬಣ್ಣವನ್ನು ಬಳಸಿರುವುದರಿಂದ ಅದರ ಆಕರ್ಷಣೆಯು ಮತ್ತಷ್ಟು ಹೆಚ್ಚಳವಾಗಿದೆ.

Most Read Articles

Kannada
English summary
Renault kwid kiger triber limited edition festive season launched details
Story first published: Thursday, September 1, 2022, 21:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X