ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳು ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇದರ ನಡುವೆ ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಕ್ವಿಡ್ ಇ-ಟೆಕ್ ಅನ್ನು ಬ್ರೆಜಿಲ್‌ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇದು ರೆನಾಲ್ಟ್‌ನ ಲೈನ್‌ಅಪ್‌ನಲ್ಲಿ ಎಂಟ್ರಿ ಲೆವೆಲ್ ಇವಿ ಆಗಿದೆ. ಯುರೋಪ್‌ನಲ್ಲಿ ಡೇಸಿಯಾ ಸ್ಪ್ರಿಂಗ್ ಎಂಬ ಹೆಸರಿನಲ್ಲಿ ಮಾರಾಟವಾಗುತ್ತದೆ. ಕ್ವಿಡ್ ಇವಿ ವಿನ್ಯಾಸವು ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಾಗಿ ಬದಲಾಗದೆ ಉಳಿದಿದ್ದರೂ, ಇದು ಇವಿ-ನಿರ್ದಿಷ್ಟ ಗ್ರಿಲ್ (ಲೋಗೋದ ಕೆಳಗೆ ಎರಡು ಕ್ರೋಮ್ ಸ್ಟ್ರಿಪ್‌ಗಳೊಂದಿಗೆ), ಇ-ಟೆಕ್ ಬ್ಯಾಡ್ಜ್‌ಗಳು ಮತ್ತು ಅಲಾಯ್ ವ್ಹೀಲ್ ಗಳನ್ನು ಒಳಗೊಂಡಂತೆ ಕೆಲವು ವ್ಯತ್ಯಾಸಗಳನ್ನು ಹೊಂದಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಬ್ರೆಜಿಲ್-ಸ್ಪೆಕ್ ಕ್ವಿಡ್ ಇವಿ ನೊರೊನ್ಹಾ ಗ್ರೀನ್, ಗ್ಲೇಸಿಯರ್ ಪೋಲಾರ್ ವೈಟ್ ಮತ್ತು ಡೈಮಂಡ್ ಸಿಲ್ವರ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಕ್ವಿಡ್ ಇವಿ ಮತ್ತು ಒಳಗೆ ಇರುವ ಸಾಮಾನ್ಯ ಮಾದರಿಯ ನಡುವಿನ ಪ್ರಮುಖ ವ್ಯತ್ಯಾಸಗಳೆಂದರೆ ಇವಿ-ನಿರ್ದಿಷ್ಟ ಸಲಕರಣೆ ಕ್ಲಸ್ಟರ್ ಮತ್ತು ಹಿಂದಿನ ನಾಲ್ಕು-ಸ್ಪೋಕ್ ಸ್ಟೀರಿಂಗ್ ವೀಲ್ ಆಗಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಇದು ಇಂಡಿಯಾ-ಸ್ಪೆಕ್ ಕ್ವಿಡ್‌ನಂತಹ ಅದೇ ವೃತ್ತಾಕಾರದ ಗೇರ್ ಸೆಲೆಕ್ಟರ್ ಅನ್ನು ಸಹ ಪಡೆಯುತ್ತದೆ. ಇನ್ನು ರೆನಾಲ್ಟ್ ಕ್ವಿಡ್ ಇ-ಟೆಕ್ ಕಾರಿನ ಒಳಭಾಗದಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಎಲ್ಲಾ ಪವರ್ ವಿಂಡೋಗಳು, ಮ್ಯಾನ್ಯುವಲ್ ಎಸಿ ಮತ್ತು ವಾಯ್ಸ್ ಕಾಮೆಂಡ್ ಗಳನ್ನು ಹೊಂದಿವೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ರೆನಾಲ್ಟ್ ಕ್ವಿಡ್ ಇ-ಟೆಕ್ ಕಾರಿನಲ್ಲಿ ಸುರಕ್ಷತೆಗಾಗಿ, ಕಿಟ್ ಬ್ರೇಕ್ ಅಸಿಸ್ಟ್, ಹಿಲ್-ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆರು ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಜೊತೆಗೆ ಎಬಿಎಸ್ ಅನ್ನು ನೀಡಲಾಗಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ರೆನಾಲ್ಟ್ ಕ್ವಿಡ್ ಇ-ಟೆಕ್ ಎಲೆಕ್ಟ್ರಿಕ್ ಕಾರಿನಲ್ಲಿ 26.8kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್‌ 65 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು ಇಕೋ ಮೋಡ್‌ನಲ್ಲಿ, ಬ್ಯಾಟರಿ ಬಾಳಿಕೆಯನ್ನು ಅತ್ಯುತ್ತಮವಾಗಿಸಲು ಇದು 44 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಎಲೆಕ್ಟ್ರಿಕ್ ಕಾರಿನಲ್ಲಿ 4.1 ಸೆಕೆಂಡುಗಳಲ್ಲಿ 0-50 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ರೆನಾಲ್ಟ್ ಕ್ವಿಡ್ ಕಾರು 977 ಕೆಜಿ ತೂಕವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರು ಬ್ಯಾಟರಿಗಳನ್ನು ಚಾರ್ಜ್ ಮಾಡುವ ಪುನರುತ್ಪಾದಕ ಬ್ರೇಕಿಂಗ್‌ನೊಂದಿಗೆ ಬರುತ್ತದೆ. ರೆನಾಲ್ಟ್‌ನ ಎಲೆಕ್ಟ್ರಿಕ್ ಹ್ಯಾಚ್ ಅನ್ನು 7kW ವಾಲ್‌ಬಾಕ್ಸ್ ಚಾರ್ಜರ್ ಅಥವಾ ಡಿಸಿ ಫಾಸ್ಟ್ ಚಾರ್ಜರ್‌ಗಳೊಂದಿಗೆ ಚಾರ್ಜ್ ಮಾಡಬಹುದು.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಮೊದಲಿನವು ಪೂರ್ಣ ಚಾರ್ಜ್‌ಗೆ ಸುಮಾರು ಮೂರು ಗಂಟೆಗಳನ್ನು ತೆಗೆದುಕೊಂಡರೆ, 220 ವೂಲ್ಟ್ ಸಾಕೆಟ್‌ನೊಂದಿಗೆ ಅದೇ ಟಾಪ್-ಅಪ್‌ಗೆ ಇದು ಸುಮಾರು ಒಂಬತ್ತು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮತ್ತೊಂದೆಡೆ ಡಿಸಿ ಚಾರ್ಜರ್ ಅನ್ನು 15 ರಿಂದ 80 ಪ್ರತಿಶತದವರೆಗೆ ಚಾರ್ಜ್‌ ಮಾಡಲು ಕೇವಲ 40 ನಿಮಿಷಗಳ ಅಗತ್ಯವಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಯುರೋಪ್‌ನಲ್ಲಿ ಡೇಸಿಯಾ ಸ್ಪ್ರಿಂಗ್ ಎಂಬ ಹೆಸರಿನಲ್ಲಿ ಮಾರಾಟವಾಗುವ ಕ್ವಿಡ್ ಇವಿಯನ್ನು ಕಳೆದ ವರ್ಷ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಪಡೆಸಿತು. ರೆನಾಲ್ಟ್ ಯುರೋಪ್‌ನಲ್ಲಿ ತಮ್ಮ ಅಂಗಸಂಸ್ಥೆ ಡೇಸಿಯಾ ಬ್ರಾಂಡ್ ಹೆಸರಿನಲ್ಲಿ ತಮ್ಮ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸಣ್ಣ ಕಾರು ಇದಾಗಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಡೇಸಿಯಾ ಸ್ಪ್ರಿಂಗ್ ಎಂದು ಕರೆಯಲ್ಪಡುವ ಇದು ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್‌ನ ಎರಡು ಟ್ರಿಮ್‌ಗಳಲ್ಲಿ ಲಭ್ಯವಿದೆ. ಡೇಸಿಯಾ ಸ್ಪ್ರಿಂಗ್ ಎಲೆಕ್ಟ್ರಿಕ್ ಮೂಲತಃ ಚೀನಾದ ರೆನಾಲ್ಟ್ ಸಿಟಿ ಕೆ-ಝಡ್ಇ ಮಾದರಿಯ ಯುರೋಪಿಯನ್ ಆವೃತ್ತಿಯಾಗಿದೆ ಮತ್ತು ಭಾರತದ ರೆನಾಲ್ಟ್ ಕ್ವಿಡ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಇದು ಯುರೋಪ್‌ನಲ್ಲಿ ಮಾರಾಟವಾಗುವ ಅತ್ಯಂತ ಒಳ್ಳೆ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿದೆ. ಆದರೆ ಇಲ್ಲಿಯವರೆಗೆ, ಸುರಕ್ಷತೆಯ ರೇಟಿಂಗ್ ಲಭ್ಯವಿರಲಿಲ್ಲ. ಯುರೋ ಎನ್‌ಸಿಎಪಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರನ್ನು ಕ್ರ್ಯಾಶ್ ಟೆಸ್ಟ್ ಮಾಡಿದೆ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಈ ಕ್ರ್ಯಾಶ್ ಟೆಸ್ಟ್ ನಲ್ಲಿ ಈ ಎಲೆಕ್ಟ್ರಿಕ್ ಕಾರಿಗೆ ಕೇವಲ 1 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಪರೀಕ್ಷಿಸಿದ ಮಾದರಿಯು 970 ಕೆಜಿ ತೂಕವಿತ್ತು ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳೊಂದಿಗೆ ಬಂದಿತು. ಇದು ಸೈಡ್ ಹೆಡ್ ಏರ್‌ಬ್ಯಾಗ್ ಮತ್ತು ಸೈಡ್ ಎದೆಯ ಏರ್‌ಬ್ಯಾಗ್ ಅನ್ನು ಸಹ ಪಡೆದುಕೊಂಡಿದೆ.ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ. ವಯಸ್ಕರ ಸುರಕ್ಷತೆಗಾಗಿ ತಮ್ಮ ಕಾಮೆಂಟ್‌ಗಳಲ್ಲಿ, ಯುರೋ ಎನ್‌ಸಿಎಪಿ, "ಸ್ಪ್ರಿಂಗ್‌ನ ಪ್ರಯಾಣಿಕರ ವಿಭಾಗವು ಮುಂಭಾಗದ ಆಫ್‌ಸೆಟ್ ಪರೀಕ್ಷೆಯಲ್ಲಿ ಸ್ಥಿರವಾಗಿದೆ. ಡಮ್ಮೀಸ್‌ನ ಕಾಲುಗಳಲ್ಲಿ ಕಳಪೆ ರಕ್ಷಣೆಯನ್ನು ಸೂಚಿಸುತ್ತವೆ ಮತ್ತು ಡ್ಯಾಶ್‌ಬೋರ್ಡ್‌ನಲ್ಲಿನ ರಚನೆಗಳು ವಿವಿಧ ಗಾತ್ರದ ಪ್ತಯಾಣಿಕರಿಗೆ ಮತ್ತು ವಿವಿಧ ಸ್ಥಾನಗಳಲ್ಲಿ ಕುಳಿತವರಿಗೆ ಗಾಯದ ಅಪಾಯವನ್ನು ಪ್ರಸ್ತುತಪಡಿಸಿದವು.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಟೆಸ್ಟಿಂಗ್ ಸಮಯದಲ್ಲಿ ಎದೆಯ ಭಾಗ ರಕ್ಷಣೆಯನ್ನು ಕಳಪೆ ಎಂದು ರೇಟ್ ಮಾಡಲಾಗಿದೆ. ಶಿಫಾರಸು ಮಾಡಲಾದ ಮೌಲ್ಯಗಳನ್ನು ಮೀರಿದ ಚಾಲಕನನಿಗೆ ಸಹ ಕಳಪೆ ರಕ್ಷಣೆಯನ್ನು ಹೊಂದಿದೆ. ಪರೀಕ್ಷೆಯ ಸಮಯದಲ್ಲಿ ಇಂಪ್ಯಾಕ್ಟ್ ಟ್ರಾಲಿಯ ಕುಸಿತದ ವಿಶ್ಲೇಷಣೆ ಮತ್ತು ನಂತರ ತಡೆಗೋಡೆಯ ವಿರೂಪತೆಯ ವಿಶ್ಲೇಷಣೆಯು ಸ್ಪ್ರಿಂಗ್ ಇತರ ವಾಹನಗಳಿಗೆ ಹಾನಿಕರವಲ್ಲದ ಕ್ರ್ಯಾಶ್ ಪಾಲುದಾರ ಎಂದು ಬಹಿರಂಗಪಡಿಸಿತು.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಸೈಡ್ ಇಂಪ್ಯಾಕ್ಟ್‌ಗಳಲ್ಲಿ ಪ್ರಯಾಣಿಕರಿಗೆ ಗಾಯಗಳ ವಿರುದ್ಧ ರಕ್ಷಿಸಲು ಸ್ಪ್ರಿಂಗ್ ಸೆಂಟರ್ ಏರ್‌ಬ್ಯಾಗ್‌ನೊಂದಿಗೆ ಸಜ್ಜುಗೊಂಡಿಲ್ಲ. ಮುಂಭಾಗದ ಸೀಟುಗಳು ಮತ್ತು ತಲೆಯ ನಿರ್ಬಂಧಗಳ ಮೇಲಿನ ಪರೀಕ್ಷೆಗಳು ಹಿಂಬದಿಯ ಘರ್ಷಣೆಯ ಸಂದರ್ಭದಲ್ಲಿ ಗಾಯಗಳ ವಿರುದ್ಧ ಉತ್ತಮ ರಕ್ಷಣೆಯನ್ನು ಪ್ರದರ್ಶಿಸಿದವು. ಆದರೆ ಹಿಂದಿನ ಸೀಟುಗಳ ಪ್ರಯಾಣಿಕರಿಗೆ ಕಳಪೆ ರಕ್ಷಣೆಯನ್ನು ಸೂಚಿಸುತ್ತದೆ. ಸ್ಪ್ರಿಂಗ್ ಯುರೋ NCAP ನ ಅವಶ್ಯಕತೆಗಳನ್ನು ಭಾಗಶಃ ಪೂರೈಸುವ ಸುಧಾರಿತ eCall ವ್ಯವಸ್ಥೆಯನ್ನು ಹೊಂದಿದೆ ಮತ್ತು ದ್ವಿತೀಯ ಪರಿಣಾಮಗಳನ್ನು ತಡೆಯಲು ಕಾರು ಯಾವುದೇ ಮಲ್ಟಿ-ಕೊಲಿಷನ್ ಘರ್ಷಣೆ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿಲ್ಲ.

ಅಧಿಕ ರೇಂಜ್, ಆಕರ್ಷಕ ವಿನ್ಯಾಸದಲ್ಲಿ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಬಿಡುಗಡೆ

ಭಾರತದಲ್ಲಿ ರೆನಾಲ್ಟ್ ಕಂಪನಿಯು ಸಾಮಾನ್ಯ ಕ್ವಿಡ್ ಹ್ಯಾಚ್‌ಬ್ಯಾಕ್ ಅನ್ನು ಹಲವು ವರ್ಷಗಳಿಂದ ಮಾರಾಟಗೊಳಿಸುತ್ತಿದೆ. ರೆನಾಲ್ಟ್ ಕಂಪನಿಯ ಕಾರುಗಳ ಸರಣಿಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಜನಪ್ರಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ರೆನಾಲ್ಟ್ ಕ್ವಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

Article Published On: Sunday, April 17, 2022, 12:55 [IST]
English summary
Renault launched kwid ev in brazil market range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+