ಹೊಸ ನವೀಕರಣಗಳೊಂದಿಗೆ 2022ರ ರೆನಾಲ್ಟ್ ಕ್ವಿಡ್ ಕಾರು ಬಿಡುಗಡೆ
ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ಇಂಡಿಯಾ ತನ್ನ 2022ರ ಕ್ವಿಡ್ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ 2022ರ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.49 ಲಕ್ಷವಾಗಿದೆ.

2022ರ ರೆನಾಲ್ಟ್ ಕ್ವಿಡ್ ಬೆಲೆಯು ಹಿಂದಿನ ಮಾದರಿಗಿಂತ ರೂ.25,000 ಹೆಚ್ಚು ದುಬಾರಿಯಾಗಿದೆ. ಆದರ್ ಈ ರೆನಾಲ್ಟ್ ಕ್ವಿಡ್ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಕಾರುಗಳಲ್ಲಿ ಒಂದಾಗಿದೆ. 2022ರ ರೆನಾಲ್ಟ್ ಕ್ವಿಡ್ ಹ್ಯಾಚ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ, ಇದರಿಂದ ಹೊಸ ಕ್ವಿಡ್ ಕಾರು ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದೆ. ಕ್ವಿಡ್ ಕಾರಿನ ಎಂಜಿನ್ ಸೆಟಪ್ ಬದಲಾಗದೆ ಉಳಿದಿದೆ. 2022ರ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಹೊಸ RXL(O) ಎಂಬ ರೂಪಾಂತರವನ್ನು ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಸ್ವೀಕರಿಸಿದೆ.

ಇದರಲ್ಲಿ 800-ಸಿಸಿ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಿದೆ.

ಹೊಸ ರೆನಾಲ್ಟ್ ಕ್ವಿಡ್ ಕಾರಿನ ಬಣ್ಣಗಳ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ಮೆಟಲ್ ಮಸ್ಟರ್ಡ್ ಮತ್ತು ಐಸ್ ಕೂಲ್ ವೈಟ್ ಜೊತೆಗೆ ಬ್ಲ್ಯಾಕ್ ರೂಫ್ ಅನ್ನು ಹೊಂದಿದೆ. ಇದರೊಂದಿಗೆ ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕಾರ್ ಬ್ಲೂ ಎಂಬ ಎರಡು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಇದರೊಂದಿಗೆ ಫ್ಲೆಕ್ಸ್ ವ್ಹೀಲ್ ಅನ್ನು ಸಹ ಪಡೆದುಕೊಂಡಿದೆ.

ಈ ಹೊಸ ಕಾರಿನಲ್ಲಿ ಫೀಚರ್ಸ್ ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ 2022ರ ರೆನಾಲ್ಟ್ ಕ್ವಿಡ್ ಟ್ಯಾಕೋಮೀಟರ್‌ನೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೀಪ್ ಫಂಕ್ಷನ್ ( ಎಎಂಟಿಯಲ್ಲಿ ಮಾತ್ರ) ಮತ್ತು ಬ್ಲೂಟೂತ್‌ನೊಂದಿಗೆ ಸಿಂಗಲ್-ಡಿಐಎನ್ ಆಡಿಯೊ ಸಿಸ್ಟಂ ಅನ್ನು ಹೊಂದಿದೆ.

ಇದರೊಂದಿಗೆ ಯುಎಸ್‌ಬಿ ಮತ್ತು ಆಕ್ಸ್ ಕನೆಕ್ಟಿವಿಟಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಇಂಜಿನ್ ಇಮೊಬಿಲೈಸರ್, ಡ್ರೈವರ್ ಸೈಡ್ ಏರ್‌ಬ್ಯಾಗ್, ಇಬಿಡಿ ಜೊತೆಗೆ ಎಬಿಎಸ್, ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಇನ್ನಷ್ಟು.ಫೀಚರ್ಸ್ ಗಳನ್ನು ಒಳಗೊಂಡಿವೆ.

ಈ ಹೊಸ ಕ್ವಿಡ್ ನಯವಾದ-ಕಾಣುವ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಟಾಪ್-ಎಂಡ್ ರೂಪಾಂತರಗಳಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಿಕ್ ಆಗಿ ಹೋಂದಿಸಬಹುದಾದ ವಿಂಗ್ ಮಿರರ್‌ಗಳನ್ನು ಹೊಂದಿವೆ

ರೆನಾಲ್ಟ್ ಕ್ವಿಡ್ ಕಾರಿನ ಆಕರ್ಷಕ ವಿನ್ಯಾಸ, ಹೆಚ್ಚು ಫೀಚರ್ ಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಕ್ವಿಡ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಲು ಸಹಾಯ ಮಾಡಿತು. ಈ ರೆನಾಲ್ಟ್ ಕ್ವಿಡ್ ಕಾರಿನ ಮುಂಭಾಗದ ಗ್ರಿಲ್ ವಿಭಾಗದಲ್ಲಿನ ಇತರ ಅನೇಕ ಪ್ರೀಮಿಯಂ ಕಾರುಗಳಂತೆ ಕಾಣುತ್ತದೆ.

ಈ ರೆನಾಲ್ಟ್ ಕ್ವಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ 4 ಲಕ್ಷ ಯುನಿಟ್‌ಗಳು ಮಾರಾಟವಾಗಿ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಈಗಾಗಲೇ ಸಾಧಿಸಿಸಳಾಗಿದೆ. 2015ರಲ್ಲಿ ಬಿಡುಗಡೆಯಾದ ಹ್ಯಾಚ್‌ಬ್ಯಾಕ್ ಆರಂಭದಲ್ಲಿ ಅದರ ಕಾಂಪ್ಯಾಕ್ಟ್ ಶೈಲಿಯ ವಿನ್ಯಾಸ ಮತ್ತು ಕೈಗೆಟುಕುವ ಬೆಲೆಗೆ ಹೆಚ್ಚಿನ ಗ್ರಾಹಕರು ಒಲವು ತೋರಿತು. ಈ ಮಾದರಿಯು ತನ್ನ ಮೊದಲ ಮಿಡ್-ಲೈಫ್ ಅಪ್‌ಡೇಟ್ 2019ರ ಅಕ್ಟೋಬರ್ ತಿಂಗಳಿನಲ್ಲಿ ಪಡೆದುಕೊಂಡಿತು.

ಇದರೊಂದಿಗೆ ಹೊಸ ವರದಿಗಳ ಪ್ರಕಾರ, ರೆನಾಲ್ಟ್ ಕಂಪನಿಯು ತನ್ನ ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ, ರೆನಾಲ್ಟ್ ಕಂಪನಿಯು ಪ್ರಸ್ತುತ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿಯ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿದೆ. ಈ ನ್ಯೂ ಜನರೇಷನ್ ರೆನಾಲ್ಟ್ ಎಸ್‍ಯುವಿಯು 2024ರಲ್ಲಿ ಅನವರಣವಾಗಲಿದೆ. ಈ ನ್ಯೂ ಜನರೇಷನ್ ರೆನಾಲ್ಟ್ ಡಸ್ಟರ್ ಎಸ್‍ಯುವಿಯು ಹೊಸ ಫ್ಲಾಟ್ ಫಾರ್ಮ್ ಅನ್ನು ಆಧರಿಸಿರುತ್ತದೆ,

ಇನ್ನು ಈ ನ್ಯೂ ಜನರೇಷನ್ ಡಸ್ಟರ್ ಮಾದರಿಯು ಆಕರ್ಷಕ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆಗಳನ್ನು ಹೊಂದಿರಲಿವೆ. ಈ ಹೊಸ ಡಸ್ಟರ್ ಮಾದರಿಯಲ್ಲಿ ಕಾಸ್ಮೆಟಿಕ್ ಮತ್ತು ತಾಂತ್ರಿಕ ದೃಷ್ಟಿಕೋನದಿಂದ ಪ್ರಮುಖ ಬದಲಾವಣೆಗಳನ್ನು ಮಾದಲಾಗುತ್ತದೆ. ಇನ್ನು ಎರಡನೇ ತಲೆಮಾರಿನ ಡಸ್ಟರ್ ಬಿಒ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ್ದರೆ, ನ್ಯೂ ಜನರೇಷನ್ ಡಸ್ಟರ್ ಎಸ್‍ಯುವಿಯು ರೆನಾಲ್ಟ್-ನಿಸ್ಸಾನ್ ಅಲೈಯನ್ಸ್ ಸಿಎಂಎಫ್-ಬಿ ಮಾಡ್ಯುಲರ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿರಲಿದೆ. ಇದು ಪ್ರಸ್ತುತ ಲೋಗನ್ ಮತ್ತು ಸ್ಯಾಂಡರೊ ಎಸ್‍ಯುವಿ ಮಾದರಿಗಳನ್ನು ಇದೇ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ದಿಪಡಿಸಲಾಗಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕ್ವಿಡ್ ಹ್ಯಾಚ್‌ಬ್ಯಾಕ್ ಮಾದರಿಯು ಮೊದಲ ತಲೆಮಾರಿನಿಂದ ಇಲ್ಲಿಯವರೆಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟ ಮಾಡಲಾಗಿದೆ. ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯ ಎಸ್-ಪ್ರೆಸ್ಸೊ ಸೇರಿದಂತೆ ಪ್ರಮುಖ ಎಂಟ್ರಿ ಲೆವಲ್ ಕಾರುಗಳಿಗೆ ಪೈಪೋಟಿ ನೀಡುತ್ತದೆ,


Click it and Unblock the Notifications