ವೋಕ್ಸ್‌ವ್ಯಾಗನ್ ಟೈಗನ್ ಕಾರಿಗೆ 1 ಲಕ್ಷ ರೂಪಾಯಿ ರಿಯಾಯಿತಿ: ಇಲ್ಲಿದೆ ವಿವರಗಳು
ಡಿಸೆಂಬರ್ ತಿಂಗಳಲ್ಲಿ ಹಲವು ವಾಹನ ತಯಾರಿಕ ಕಂಪನಿಗಳು ತಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ರಿಯಾಯಿತಿಯನ್ನು ಘೋಷಿಸುತ್ತವೆ. ವೋಕ್ಸ್‌ವ್ಯಾಗನ್ ಟೈಗನ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಅದು ಬರೋಬ್ಬರಿ 1 ಲಕ್ಷದವರೆಗೆ ಇದೆ. ಇದರ ಜೊತೆಗೆ ಗ್ರಾಹಕರ ಖುಷಿಯನ್ನು ಮತ್ತಷ್ಟು ಹೆಚ್ಚಿಸಲು 4 ವರ್ಷಗಳ ಸರ್ವಿಸ್ ಪ್ಯಾಕೇಜ್ ಅನ್ನು ನೀಡಲಾಗುತ್ತಿದೆ.
ಕೇರಳದ ಕೊಚ್ಚಿ ಮೂಲದ ಡೀಲರ್‌ಶಿಪ್ EVM ವೋಕ್ಸ್‌ವ್ಯಾಗನ್, ಈ ಆಫರ್ ಅನ್ನು ಪ್ರಚಾರ ಮಾಡುತ್ತಿದೆ. ದೇಶಾದ್ಯಂತ ಇತರೆ ವಿತರಕರು ಸಹ ಟೈಗುನ್ ಕಾಂಪ್ಯಾಕ್ಟ್ ಎಸ್‍ಯುವಿ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಆಫರ್ ಸಂಬಂಧ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ವೋಕ್ಸ್‌ವ್ಯಾಗನ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಬಹುದು. ಇದು ವರ್ಷಾಂತ್ಯವಾಗಿರುವುದರಿಂದ, 2022ರ ಮಾದರಿಗಳು 2023ರಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟವಾಗುವುದರಿಂದ ಸ್ಟಾಕ್ ಖಾಲಿ ಮಾಡುವ ಮೊತ್ತದಲ್ಲಿ ವಿತರಕರು ಇದ್ದಾರೆ. ಅತ್ಯುತ್ತಮ ಡೀಲ್ ಅನ್ನು ನೀವೇ ಮಾಡಿಕೊಳ್ಳಲು ಹತ್ತಿರದ ಡೀಲರ್‌ಶಿಪ್ ಜೊತೆಗೆ ಮಾತನಾಡಬಹುದು.

ವೋಕ್ಸ್‌ವ್ಯಾಗನ್ ಕಾಂಪ್ಯಾಕ್ಟ್ ಎಸ್‍ಯುವಿ MQB A0 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಭಾರತ ಮತ್ತು ಬ್ರೆಜಿಲ್‌ನಂತಹ ಉದಯೋನ್ಮುಖ ಮಾರುಕಟ್ಟೆಯಲ್ಲಿರುವ ಸ್ಕೋಡಾ ಕಾರಿನ ಮಾದರಿಗೆ ಇದು ಹೋಲುತ್ತದೆ. ಟೈಗುನ್ ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ವರ್ಟಸ್ ಸಿ-ಸೆಗ್ಮೆಂಟ್ ಸೆಡಾನ್ ಭಾರತದಲ್ಲಿ ಈ ಪ್ಲಾಟ್‌ಫಾರ್ಮ್ ಅನ್ನು ಒಳಗೊಂಡಿರುವ ಎರಡು ವೋಕ್ಸ್‌ವ್ಯಾಗನ್ ಕಾರುಗಳಾಗಿವೆ. ಮುಂಬರುವ ದಿನಗಳಲ್ಲಿ ಅನೇಕ ಕೈಗೆಟುಕುವ ಫೋಕ್ಸ್‌ವ್ಯಾಗನ್ ಕಾರುಗಳು MQB A0 ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಫೋಕ್ಸ್‌ವ್ಯಾಗನ್ ಟೈಗನ್‌ನ ಆನ್-ರೋಡ್ ಬೆಲೆಗಳು (ದೆಹಲಿ) ಬೇಸ್ ಕಂಫರ್ಟ್‌ಲೈನ್ 1.0 ಟ್ರಿಮ್‌ಗೆ ರೂ.11.56 ಲಕ್ಷ, ಮತ್ತು ಟಾಪ್-ಆಫ್-ಲೈನ್ ಹೈಲೈನ್ 1.5 DSG ಟ್ರಿಮ್‌ಗೆ ರೂ.18.71 ಲಕ್ಷ ಇದೆ. ವೋಕ್ಸ್‌ವ್ಯಾಗನ್, ಭಾರತದಲ್ಲಿನ ಇತರೆಅನೇಕ ಕಾರು ತಯಾರಕರಂತೆ, ಮುಂದಿನ ವರ್ಷದ ಆರಂಭದಲ್ಲಿ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಫೋಕ್ಸ್‌ವ್ಯಾಗನ್ ಟೈಗನ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದೆ. 1 ಲೀಟರ್ -3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 110 PS ಗರಿಷ್ಠ ಪವರ್ ಹಾಗೂ 170 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಮತ್ತೊಂದು 1.5 ಲೀಟರ್ -4 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 150 PS ಗರಿಷ್ಠ ಪವರ್, 250 Nm ಟಾರ್ಕ್ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಎರಡು ಎಂಜಿನ್‌ಗಳು 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗಳನ್ನು ಒಳಗೊಂಡಿದ್ದು, 1 ಲೀಟರ್ TSI ಮೋಟಾರ್ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಆಯ್ಕೆಯನ್ನು ಪಡೆದರೆ, 1.5 TSI ಮೋಟಾರ್ 7 ಸ್ಪೀಡ್ ಟ್ವಿನ್ ಕ್ಲಚ್ DSG ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಆಯ್ಕೆಯನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ಟೈಗನ್ ಸಿಎನ್‌ಜಿ-ಪೆಟ್ರೋಲ್ ಡ್ಯುಯಲ್ ಪ್ಯೂಯೆಲ್ ಮಾದರಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬಹುದು.
ಈ ಕಾರಿನ ಸುರಕ್ಷತೆ ಬಗ್ಗೆ ಹೇಳುವುದಾದರೆ, ಟೈಗನ್ ಭಾರತೀಯ ಮಾರುಕಟ್ಟೆಯ ದೊರೆಯುವ ಪ್ರಮುಖ ಸೇಫ್ಟಿ ಕಾರುಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಈ ಕಾರು ಸ್ಕೋಡಾ ಕುಶಾಕ್ ಮಾದರಿಯಂತೆ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಟೈಗುನ್ ಮತ್ತು ಕುಶಾಕ್ ತಲಾ 29.64/34 ಅಂಕಗಳನ್ನು ಪಡೆದುಕೊಂಡಿವೆ. ಜೊತೆಗೆ ಮಕ್ಕಳ ರಕ್ಷಣೆ ವಿಭಾಗದಲ್ಲಿ 42/49 ಅಂಕಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಿದೆ ಎಂದು ಹೇಳಬಹುದು.
ಫ್ರೆಂಚ್ ವಾಹನ ತಯಾರಿಕ ಕಂಪನಿ 'ರೆನಾಲ್ಟ್ ಇಂಡಿಯಾ' ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ತನ್ನ ಮೂರು ಕಾರುಗಳಾದ ರೆನಾಲ್ಟ್ ಕ್ವಿಡ್, ಟ್ರೈಬರ್ ಮತ್ತು ಕಿಗರ್‌ಗಳ ಮೇಲೆ ಡಿಸೆಂಬರ್ ತಿಂಗಳ ಆರಂಭದಲ್ಲಿಯೇ ಭರ್ಜರಿ ರಿಯಾಯಿತಿಯನ್ನು ಘೋಷಿಸಿತ್ತು. ಇದು 35,000 ರೂ.ನಿಂದ 50,000 ರೂ.ವರೆಗೆ ಇರಲಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ RELIVE ಸ್ಕ್ರ್ಯಾಪ್‌ಪೇಜ್ ಪ್ರೋಗ್ರಾಂ ಅಡಿ 10,000 ರೂ.ವರೆಗೆ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿತ್ತು.
ಹ್ಯುಂಡೈ ಈ ಡಿಸೆಂಬರ್ ತಿಂಗಳ ಪ್ರಾರಂಭದಲ್ಲಿಯೇ ಕೋನಾ ಎಲೆಕ್ಟ್ರಿಕ್, ಗ್ರ್ಯಾಂಡ್ i10 Nios, i20 ಮತ್ತು Aura ಸೆಡಾನ್‌ಗಳ ಮೇಲೆ 1.50 ಲಕ್ಷದವರೆಗೆ ರಿಯಾಯಿತಿ ಹಾಗೂ ಆಕರ್ಷಕ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಎಕ್ಸ್‌ಚೇಂಜ್ ಬೋನಸ್, ನಗದು ರಿಯಾಯಿತಿ ಮತ್ತು ಕಾರ್ಪೊರೇಟ್ ಪ್ರಯೋಜನಗಳು ಸೇರಿವೆ. ಔರಾ ಸೆಡಾನ್ ಮತ್ತು ಗ್ರ್ಯಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಗಳು ಸಹ ಈ ತಿಂಗಳು ರಿಯಾಯಿತಿಯೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.


Click it and Unblock the Notifications








