ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಟೊಯೊಟಾ ಇನೋವಾ ಬಗ್ಗೆ ವಾಹನ ಮಾರುಕಟ್ಟೆಯಲ್ಲಿ ತಿಳಿಯದವರಿಲ್ಲ, ಕಂಪನಿಯು ಈ ಕಾರನ್ನು ಟೊಯೋಟಾ ಕ್ವಾಲಿಸ್ ಬದಲಿಯಾಗಿ ಮಾರುಕಟ್ಟೆಗೆ ಪರಿಚಯಿಸಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇನ್ನೋವಾ ಕಾರು ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಇಲ್ಲಿಯವರೆಗೆ ಹಿಂತಿರುಗಿ ನೋಡಿದ್ದೇ ಇಲ್ಲ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಕಾಲ ಕಾಲಕ್ಕೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಮಾರುಕಟ್ಟೆ ಪೈಪೋಟಿಯನ್ನು ಎದುರಿಸಲು ಇನೋವಾ ಕ್ರಿಸ್ಟಾವನ್ನು ನವೀಕರಣಗಳೊಂದಿಗೆ ಮಾರುಕಟ್ಟೆಗೆ ಇಳಿಸಲಾಗಿತ್ತು. ಈ ಕಾರಣದಿಂದಲೂ ಟೊಯೊಟಾ ಬಹಳ ಹಿಂದಿನಿಂದಲೂ ಇನೋವಾವನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಅಲ್ಲದೇ ಭಾರತೀಯ ಮಾರುಕಟ್ಟೆಯಿಂದ ಗರಿಷ್ಠ ಆದಾಯವನ್ನು ಪಡೆಯುವ ಕಂಪನಿಯ ಫ್ಲೀಟ್‌ನಲ್ಲಿರುವ ಪ್ರಮುಖ ಕಾರಾಗಿಯು ಗುರ್ತಿಸಿಕೊಂಡಿದೆ. ಈ ಕಾರು ಹಲವಾರು ಫೇಸ್‌ಲಿಫ್ಟ್‌ಗಳ ಮೂಲಕ ಸಾಗಿ ಈಗ ಅಂತಿಮವಾಗಿ ನಾವು ಎರಡನೇ ತಲೆಮಾರಿನ ಟೊಯೋಟಾ ಇನೋವಾ ಕ್ರಿಸ್ಟಾವನ್ನು ನೋಡುತ್ತಿದ್ದೇವೆ. ಇಷ್ಟು ದೊಡ್ಡ ಸುಧೀರ್ಘ ಪಯಣದಲ್ಲಿ ಇನೋವಾ ಕ್ರಿಸ್ಟಾ ಎಂದೂ ಕೂಡ ಹಿಂತಿರುಗಿ ನೋಡಿಲ್ಲ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಇದಕ್ಕೆ ಹಲವಾರು ಕಾರಣಗಳಿವೆ, ಇದರಲ್ಲಿ ಪ್ರಮುಖವಾಗಿ ಹೇಳುವುದಾದರೆ ವಿಶ್ವಾಸಾರ್ಹತೆ ಮತ್ತು ಹೆಚ್ಚಿನ ಸೌಕರ್ಯವನ್ನು ನೀಡುವುದಲ್ಲದೇ ಕಾರು ಪ್ರಿಯರಿಗೆ ಈ ವಾಹನದಲ್ಲಿ ಅತಿ ಹೆಚ್ಚಾಗಿ ಇಷ್ಟವಾಗಿದ್ದು ಇದರ ಶಕ್ತಿಶಾಲಿ ಎಂಜಿನ್ ಕೂಡ ಹೌದು. ಇವಿಷ್ಟೇ ಅಲ್ಲದೇ ಕಾರಿನ ಯಶಸ್ಸಿಗೆ ಕಾರಣವಾದ ಪ್ರಮುಖ ವಿಶೇಷತೆಗಳನ್ನು ಇಲ್ಲಿ ವಿವರವಾಗಿ ನೋಡೋಣ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಕಂಫರ್ಟ್

ಕಂಫರ್ಟ್ ವಿಭಾಗದಲ್ಲಿ ಇನೋವಾ ಕ್ರಿಸ್ಟಾ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಎಲ್ಲಾ ಸಾಲುಗಳಲ್ಲಿ ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಲಭ್ಯವಿದ್ದರೆ, ನಿಮ್ಮ ಪ್ರಯಾಣವು ತುಂಬಾ ಆರಾಮದಾಯಕವಾಗಿರುತ್ತದೆ. ಮೂರನೇ ಸಾಲು ಕೂಡ ವಿಶಾಲವಾಗಿರುವುದು ಈ ಕಾರಿನ ಯಶಸ್ಸಿಗೆ ಪ್ರಮುಖ ಕಾರಣವೆಂದೇ ಹೇಳಬಹುದು.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಈ ಸಾಲಿನಲ್ಲಿ ಇಬ್ಬರು ಅಥವಾ ಮೂವರು ವಯಸ್ಕರು ಕುಳಿತುಕೊಳ್ಳಬಹುದು. ಟೊಯೊಟಾ ಇನೋವಾ ಕ್ರಿಸ್ಟಾ 7 ಆಸನಗಳು ಮತ್ತು 8 ಆಸನಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಕ್ಯಾಪ್ಟನ್ ಸೀಟ್‌ಗಳನ್ನು 7 ಆಸನಗಳ ರೂಪಾಂತರಗಳ ಮಧ್ಯದ ಸಾಲಿನಲ್ಲಿ ಒದಗಿಸಲಾಗಿದೆ. ಅಲ್ಲದೆ, ಈ ಕಾರಿನ ಡ್ರೈವರ್ ಸೀಟ್ ಅನ್ನು ಎಲೆಕ್ಟ್ರಾನಿಕ್ ಆಗಿ ಸರಿಹೊಂದಿಸಬಹುದು.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಜೊತೆಗೆ ಅಗತ್ಯವಿದ್ದರೆ ವಸ್ತುಗಳ ಸಂಗ್ರಹಣೆಯ ಸ್ಥಳವನ್ನು ಹೆಚ್ಚಿಸಲು ಕೊನೆಯ ಸಾಲಿನ ಆಸನಗಳನ್ನು ಮಡಚಬಹುದು. ಈ ಮೂಲಕ ಟೊಯೊಟಾ ಇನೋವಾ ಕ್ರಿಸ್ಟಾ ಭಾರತೀಯ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗಲು ಕಂಫರ್ಟ್ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಸುಲಭ ನಿರ್ವಹಣೆ ಮತ್ತು ಸೇವೆ

ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಬಿಡಿ ಭಾಗಗಳು ಕಡಿಮೆ ಬೆಲೆಯಲ್ಲಿ ಲಭ್ಯವಿರುವುದರಿಂದ ಈ ಕಾರನ್ನು ನಿರ್ವಹಿಸುವುದು ತುಂಬಾ ಸರಳವಾಗಿದೆ. ಟೊಯೊಟಾ ಇನೋವಾ ಕ್ರಿಸ್ಟಾದ ನಿರ್ಮಾಣ ಗುಣಮಟ್ಟವು ಉತ್ತವಾಗಿದ್ದು, ಕಾರು ಕೈಕೊಡುವ ಸಂದರ್ಭಗಳು ತುಂಬಾ ವಿರಳ ಎಂದೇ ಹೇಳಬಹುದು. ಹಾಗಾಗಿ ಬಿಡಿ ಭಾಗಗಳನ್ನು ಬದಲಾಯಿಸಿಕೊಳ್ಳುವುದು ಅಪರೂಪವಾಗಿರುತ್ತದೆ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಒಟ್ಟಿನಲ್ಲಿ ಟೊಯೊಟಾ ಕಾರುಗಳಿಗೆ ಅಷ್ಟು ಸುಲಭವಾಗಿ ಯಾವುದೇ ತೊಂದರೆ ಬರುವುದಿಲ್ಲ. ಒಂದು ವೇಳೆ ಸಮಸ್ಯೆ ಎದುರಾದರೂ ಟೊಯೊಟಾದ ಸೇವಾ ಕೇಂದ್ರ ಜಾಲವು ಭಾರತದಾದ್ಯಂತ ಹರಡಿದೆ. ಇಲ್ಲಿನ ಸೇವಾ ಕೇಂದ್ರಗಳು ಸಹ ಕಾರುಗಳ ಗ್ರಾಹಕರನ್ನು ತೃಪ್ತಿಪಡಿಸುವ ಸೇವೆಯನ್ನು ಒದಗಿಸುತ್ತವೆ. ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಹೆಚ್ಚು ಜನಪ್ರಿಯವಾಗಲು ಮತ್ತು ಅದರ ಮರುಮಾರಾಟ ಮೌಲ್ಯವು ಹೆಚ್ಚಿರುವುದಕ್ಕೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಬ್ರ್ಯಾಂಡ್ ಇಮೇಜ್ ಮತ್ತು ಸುರಕ್ಷತೆ

ಟೊಯೋಟಾ ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿದೆ. ಗ್ರಾಹಕರಲ್ಲಿ ಟೊಯೊಟಾದ ಉತ್ತಮ ಖ್ಯಾತಿಯು ಇನೋವಾ ಕ್ರಿಸ್ಟಾದ ಯಶಸ್ಸಿನ ಹಿಂದಿನ ಪ್ರಮುಖ ಕಾರಣವೆಂದು ಹೇಳಬಹುದು. ಹಾಗೆಯೇ ಟೊಯೊಟಾ ಇನೋವಾ ಕ್ರಿಸ್ಟಾ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಟೊಯೊಟಾ ಇನೋವಾ ಕ್ರಿಸ್ಟಾದ ಉನ್ನತ ರೂಪಾಂತರವು 7 ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ. ಇದಲ್ಲದೇ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ ನಂತಹ ಪ್ರಮುಖ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವುದು ಗಮನಾರ್ಹ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಶಕ್ತಿಶಾಲಿ ಎಂಜಿನ್ ಆಯ್ಕೆಗಳು ಮತ್ತು ಗೇರ್‌ಬಾಕ್ಸ್‌ಗಳ ಜೊತೆಗೆ ಎಂಪಿವಿ ವಿಭಾಗದಲ್ಲಿ 7 ಆಸನಗಳು ಮತ್ತು 8 ಆಸನಗಳ ಆಯ್ಕೆಗಳಲ್ಲಿ ಸಮಂಜಸವಾದ ಬೆಲೆಯಲ್ಲಿ ಲಭ್ಯವಿರುವುದರಿಂದ ಈ ಕಾರು ಭಾರತದಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಕೂಡ ಟೊಯೊಟಾ ಇನೋವಾ ಕ್ರಿಸ್ಟಾವನ್ನು ತುಂಬಾ ಇಷ್ಟಪಡುತ್ತಾರೆ.

ಇವೆ ನೋಡಿ...ಎಂದೂ ಹಿಂತಿರುಗಿ ನೋಡದ ಟೊಯೊಟಾ ಇನೋವಾ ಕ್ರಿಸ್ಟಾ ಯಶಸ್ಸಿಗೆ ಕಾರಣಗಳು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟೊಯೊಟಾ ಕಂಪನಿಯಿಂದ ಸುಧೀರ್ಘ ಯಶಸ್ವಿ ಮಾರಾಟವನ್ನು ದಾಖಲಿಸಿರುವ ಕಾರುಗಳಲ್ಲಿ ಇನೋವಾ ಕ್ರಿಸ್ಟಾ ಮಾದರಿಯು ಅಗ್ರ ಸ್ಥಾನ ಪಡೆದುಕೊಂಡಿದೆ. ಮೇಲೆ ತಿಳಿಸಿರುವ ಪ್ರತಿಯೊಂದು ಕಾರಣಗಳು ಈ ಮಾದರಿಯನ್ನು ಇಂದಿಗೂ ಮಾರಾಟದಲ್ಲಿ ತನ್ನದೇ ಪ್ರತ್ಯೇಕ ಸ್ಥಾನವನ್ನು ಪಡೆದುಕೊಳ್ಳಲು ಸಹಕರಿಸಿವೆ. ಇನ್ನು ಮುಂದಿಯೂ ಇನೋವಾ ತನ್ನ ಬೇಡಿಕೆಯಿಂದ ಕಾರು ಉತ್ತಮ ಮಾರಾಟ ದಾಖಲಿಸಿ ಯಶಸ್ವಿಯಾಗಿ ಮುಂದೆ ಸಾಗಲಿದೆ.

Most Read Articles

Kannada
English summary
Secrets behind Toyota Innova Crystas success
Story first published: Thursday, September 15, 2022, 11:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X