ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಸ್ಕೋಡಾ ಇಂಡಿಯಾ ಕಂಪನಿಯು ಮಾತೃಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಜೊತೆಗೂಡಿ ಭಾರತದಲ್ಲಿ ಹಲವಾರು ಹೊಸ ಕಾರುಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿದ್ದು, ಕಂಪನಿಯ ಇದೀಗ ಕುಶಾಕ್ ಮಾದರಿಯನ್ನು ಭಾರತದಿಂದಲೇ ರಫ್ತು ಮಾಡುವ ಯೋಜನೆಯಲ್ಲಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಭಾರತದಿಂದ ಈಗಾಗಲೇ ಫೋಕ್ಸ್‌ವ್ಯಾಗನ್ ಕಂಪನಿಯು ವಿವಿಧ ಕಾರು ಮಾದರಿಗಳೊಂದಿಗೆ ಸ್ಕೋಡಾ ನಿರ್ಮಾಣದ ಕಾರು ಮಾದರಿಗಳನ್ನು ಸಹ ಆಫ್ರಿಕಾ, ಲ್ಯಾಟಿನ್ ಅಮೆರಿಕದ ಪ್ರಮುಖ ರಾಷ್ಟ್ರಗಳಿಗೆ ಭಾರತದಿಂದಲೇ ರಫ್ತು ಕೊಳ್ಳುತ್ತಿದ್ದು, ಇದೀಗ ಕಂಪನಿಯು ಹೊಸ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿಯ ರಫ್ತು ಆರಂಭಕ್ಕೆ ಚಾಲನೆ ನೀಡಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಲೆಫ್ಟ್ ಹ್ಯಾಂಡ್ ವಾಹನಗಳ ಮಾರುಕಟ್ಟೆಗಾಗಿ ವಿಭಿನ್ನ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಸ್ಕೋಡಾ ಕುಶಾಕ್ ಕಾರು ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಆದರೆ ಎಂಜಿನ್ ಆಯ್ಕೆಯು ದೇಶಿಯ ಮಾರುಕಟ್ಟೆಯಲ್ಲಿನ ಮಾದರಿಯನ್ನು ಆಧರಿಸಿ ಬಿಡುಗಡೆಯಾಗಲಿದ್ದು, ಹೊಸ ಫೀಚರ್ಸ್‌ಗಳಿಗೆ ಅನುಗುಣವಾಗಿ ತುಸು ದುಬಾರಿಯಾಗಿರಲಿದೆ. ಕುಶಾಕ್ ಕಾರು ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ದುಬಾರಿ ಬೆಲೆ ನಡುವೆಯೂ ಹೊಸ ಕಾರು ಖರೀದಿಗಾಗಿ ನೀರಿಕ್ಷೆಗೂ ಮೀರಿ ಬುಕಿಂಗ್ ಪಡೆದುಕೊಳ್ಳುತ್ತಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಪ್ರತಿಸ್ಪರ್ಧಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಕೋಡಾ ಕುಶಾಕ್ ಮಾದರಿಯು ಅತಿ ಕಡಿಮೆ ಅವಧಿಯಲ್ಲಿ 30 ಸಾವಿರಕ್ಕೂ ಹೆಚ್ಚು ಬುಕಿಂಗ್ ಗುರಿತಲುಪಿದ್ದು, ಹೊಸ ಕಾರಿನ ಟಾಪ್ ಎಂಡ್ ಮಾದರಿಗೆ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಿಸಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 11.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಹೊಸ ಕಾರಿನ ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಆಟೋಮ್ಯಾಟಿಕ್ ಮಾದರಿಗಳು ಉತ್ತಮ ಬೇಡಿಕೆ ಹೊಂದಿವೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್‌ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಜೊತೆಗೆ ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಮಲ್ಟಿ ಫಂಕ್ಷನಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್‌ರೂಫ್, ಮೈ ಸ್ಕೋಡಾ ಕಾರ್ ಕನೆಕ್ಟ್ ಆ್ಯಪ್, ಸ್ಮಾರ್ಟ್ ಬಾಟಲ್ ಹೋಲ್ಡರ್ ಮತ್ತು ಸ್ಕೋಡಾ ಸೌಂಡ್ ಸಿಸ್ಟಂ ಸೌಲಭ್ಯವಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಸ್ಕೋಡಾ ಇಂಡಿಯಾ ಕಂಪನಿಯು ತನ್ನ ಹೊಸ ಕುಶಾಕ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಯ ಜೊತೆಗೆ ಮಾಂಟೆ ಕಾರ್ಲೊ ಎಡಿಷನ್ ಸಹ ಮಾರಾಟಗೊಳಿಸುತ್ತಿದ್ದು, ಹೊಸ ಎಡಿಷನ್‌ ಅನ್ನು ಸಾಮಾನ್ಯ ಮಾದರಿಯ ಟಾಪ್ ಎಂಡ್ ವೆರಿಯೆಂಟ್‌ಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊಸ ಕಾರು ಮಾದರಿಯು ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್ ಹೊಂದಿದ್ದು, ಸ್ಕೋಡಾ ವಿವಿಧ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಹೊಸ ಮಾಂಟೆ ಕಾರ್ಲೊ ಆವೃತ್ತಿಯು ಎರಡು ಎಂಜಿನ್ ಆಯ್ಕೆಯೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳನ್ನು ಒಳಗೊಂಡಿದ್ದು, ಸ್ಟ್ಯಾಂಡರ್ಡ್ ಕುಶಾಕ್ ಮಾದರಿಗಿಂತಲೂ ಮಾಂಟೆ ಕಾರ್ಲೊ ಮಾದರಿಯು ಸುಮಾರು ರೂ.70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ಭಾರತದಿಂದ ರಫ್ತುಗೊಳ್ಳಲಿರುವ ಕುಶಾಕ್ ಲೆಫ್ಟ್ ಹ್ಯಾಂಡ್ ಕಂಪ್ಯಾಕ್ಟ್ ಎಸ್‌ಯುವಿ ಉತ್ಪಾದನೆ ಆರಂಭ

ಮಾಂಟೆ ಕಾರ್ಲೊ ಮಾದರಿಯು ಟೊರ್ನಾಡೊ ರೆಡ್ ಮತ್ತು ಕ್ಯಾಂಡಿ ವೈಟ್ ಎನ್ನುವ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಬ್ಲ್ಯಾಕ್ಔಟ್ ಫೀಚರ್ಸ್ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಹೊಸ ಕಾರಿನ ಗ್ರಿಲ್, ಬಂಪರ್, ಏರ್ ಇನ್‌ಟೆಕ್, ಫ್ರಂಟ್ ಡಿಫ್ಯೂಸರ್‌ಗಳು ಸ್ಪೋರ್ಟಿ ವಿನ್ಯಾಸವನ್ನು ಹೊಂದಿವೆ.

More from DriveSpark

Article Published On: Tuesday, September 20, 2022, 11:32 [IST]
English summary
Skoda india commences left hand drive version of the kushaq production
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+