ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಸೆಮಿಕಂಡಕ್ಟರ್ ಕೊರತೆ ಪರಿಣಾಮ ಹಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಸೆಮಿಕಂಡಕ್ಟರ್ ಲಭ್ಯತೆ ಆಧರಿಸಿ ಕಂಪನಿಯು ಕುಶಾಕ್ ಎನ್ಎಸ್‌ಆರ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಜಾಗತಿಕ ಮಾರುಕಟ್ಟೆಯಲ್ಲಿ ತಲೆದೊರಿರುವ ಸೆಮಿಕಂಡಕ್ಟರ್ ಕೊರತೆಯು ಕಾರು ಉತ್ಪಾದನೆಗೆ ತೀವ್ರ ಹಿನ್ನಡೆ ಉಂಟು ಮಾಡುತ್ತಿರುವ ಕುರಿತು ಮಾತನಾಡಿರುವ ಸ್ಕೋಡಾ ಇಂಡಿಯಾ ಮುಖ್ಯಸ್ಥರು ಫೋಕ್ಸ್‌ವ್ಯಾಗನ್ ಗ್ರೂಪ್ ಸೂಚಿಸಿರುವ ಮಾರ್ಗಸೂಚಿಯೆಂತೆ ಹೊಸ ಕಾರುಗಳ ಫೀಚರ್ಸ್ ಪರಿಷ್ಕರಣೆ ಮಾಡಿ ಹೊಸ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಸದ್ಯ ಮಾರುಕಟ್ಟೆಯಲ್ಲಿ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆಯು ಸ್ಕೋಡಾ ಕಂಪನಿಗೆ ಮಾತ್ರವಲ್ಲ ಬಹುತೇಕ ಎಲ್ಲಾ ಕಾರು ಕಂಪನಿಗಳು ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿದ್ದು, ಹೊಸ ಕಾರುಗಳಿಗೆ ಬೇಡಿಕೆಯಿದ್ದರೂ ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ವಿಳಂಬವು ಕಾರು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಇದೇ ಕಾರಣಕ್ಕೆ ಸ್ಕೋಡಾ ಕಂಪನಿಯು ಕುಶಾಕ್ ಮಾದರಿಯಲ್ಲಿನ ಪ್ರಮುಖ ವೆರಿಯೆಂಟ್‌ಗಳಲ್ಲಿನ ಫೀಚರ್ಸ್ ಬದಲಾವಣೆಗೊಳಿಸಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಲಾಗುತ್ತಿದ್ದು, ಇದೀಗ ಕಂಪನಿಯು ಕುಶಾಕ್ ಟಾಪ್ ಎಂಡ್ ಮಾದರಿಯಾದ 1.0 ಟಿಎಸ್ಐ ಸ್ಟೈಲ್ ಮಾದರಿಯನ್ನು ಆಧರಿಸಿ ಹೊಸ ಟಿಎಸ್ಐ ಸ್ಟೈಲ್ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಟಿಎಸ್ಐ ಸ್ಟೈಲ್ ಎನ್ಎಸ್ಆರ್ ವೆರಿಯೆಂಟ್ ಸ್ಟ್ಯಾಂಡರ್ಡ್ ಟಿಎಸ್ಐ ಸ್ಟೈಲ್ ಮಾದರಿಗಿಂತಲೂ ರೂ. 20 ಸಾವಿರದಷ್ಟು ಕಡಿಮೆ ಬೆಲೆ ಹೊಂದಿದ್ದು, ಹೊಸ ವೆರಿಯೆಂಟ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 15.09 ಲಕ್ಷಕ್ಕೆ ನಿರ್ಧರಿಸಲಾಗಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಬೆಲೆ ಕಡಿತದೊಂದಿಗೆ ಹೊಸ ಎನ್ಎಸ್ಆರ್ ವೆರಿಯೆಂಟ್‌ನಲ್ಲಿ ಕಂಪನಿಯು ಎಲೆಕ್ಟ್ರಿಕ್ ಸನ್‌ರೂಫ್, ಆಟೋ-ಡಿಮ್ಮಿಂಗ್ ರಿಯರ್‌ ವ್ಯೂ ಮಿರರ್ ಮತ್ತು ರೈನ್-ಸೆನ್ಸಿಂಗ್ ವೈಪರ್‌ಗಳನ್ನು ತೆಗೆದುಹಾಕಿದ್ದು, 16-ಇಂಚಿನ ಅಲಾಯ್ ಚಕ್ರಗಳ ಬದಲಾಗಿ 15 ಇಂಚಿನ ಅಲಾಯಲ್ ಚಕ್ರಗಳನ್ನು ನೀಡಲಾಗುತ್ತಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಆದಾಗ್ಯೂ, ಹೊಸ ವೆರಿಯೆಂಟ್‌ನಲ್ಲಿ ಗ್ರಾಹಕರು ಎಲೆಕ್ಟ್ರಿಕ್ ಸನ್‌ರೂಫ್ ಕೊರತೆಯಿಂದಾಗಿ ಸನ್‌ಗ್ಲಾಸ್ ಹೋಲ್ಡರ್ ಎಂಬ ಹೊಸ ವೈಶಿಷ್ಟ್ಯವನ್ನು ಪಡೆಯಲಿದ್ದು, ಅದು ಇತರೆ ಯಾವುದೇ ಸ್ಟೈಲ್ ರೂಪಾಂತರದಲ್ಲಿ ಲಭ್ಯವಿಲ್ಲರುವುದಿಲ್ಲ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಇನ್ನುಳಿದ ತಾಂತ್ರಿಕ ಉಪಕರಣಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಮುಂದುವರಿಸಲಾಗಿದ್ದು, ಸೆಮಿಕಂಡಕ್ಟರ್ ಮೇಲಿನ ಅಲಂಬನೆ ತಗ್ಗಿಸಲು ಪರಿಸ್ಥಿತಿಗೆ ಅನುಗುಣವಾಗಿ ಹೊಸ ಮಾದರಿಯನ್ನು ಸಿದ್ದಪಡಿಸಲಾಗಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಇನ್ನು ಸ್ಟ್ಯಾಂಡರ್ಡ್ ಕುಶಾಕ್ ಮಾದರಿಯು ಸದ್ಯ ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ಆರಂಭಿಕವಾಗಿ ರೂ. 11.29 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹೊಸ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಏರ್‌ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್‌ಗಳಿವೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾಂಟೆ ಕಾರ್ಲೊ ಎಡಿಷನ್ ಮಾದರಿಯು ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್ ಹೊಂದಿದ್ದು, ಸ್ಕೋಡಾ ವಿವಿಧ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಸ್ಟ್ಯಾಂಡರ್ಡ್ ಕುಶಾಕ್ ಮಾದರಿಗಿಂತ ಮಾಂಟೆ ಕಾರ್ಲೊ ಮಾದರಿಯು ಸುಮಾರು ರೂ.70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಬೆಲೆಗೆ ಅನುಗುಣವಾಗಿ ಹೊಸ ಮಾದರಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಕುಶಾಕ್ ಮಾದರಿಯಲ್ಲಿ ಹೊಸ ಎನ್ಎಸ್ಆರ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕಾರಿನ ಒಳಭಾಗವು ಕೂಡಾ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದ್ದು, ಬ್ಲ್ಯಾಕ್ ಮತ್ತು ರೂಬಿ ರೆಡ್ ಮೆಟಾಲಿಕ್ ಹೊಂದಿರುವ ಡ್ಯುಯಲ್ ಟೋನ್ ಇಂಟಿರಿಯರ್, ರೆಡ್ ಆಕ್ಸೆಂಟ್‌ಗಳು, ಡ್ಯುಯಲ್ ಟೋನ್ ಆಸನ‌ಗಳು, ರೆಡ್ ಆಂಬಿಯೆಂಟ್, ಅಲ್ಯುಮಿನಿಯಂ ಪೆಡಲ್ಸ್‌ನೊಂದಿಗೆ ರೆಡ್ ಥಿಮ್ಸ್ ಐಷಾರಾಮಿ ಲುಕ್ ನೀಡಲಿದೆ.

More from DriveSpark

Article Published On: Wednesday, June 15, 2022, 14:37 [IST]
English summary
Skoda introduce new affordable tsi style nsr variant for kushaq suv
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+