ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಬಹುನಿರೀಕ್ಷಿತ 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜನವರಿಯಲ್ಲಿ ಬಿಡುಗಡೆಗೊಳಿಸಿತ್ತು. 2022ರ ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯನ್ನು ಪಡೆದುಕೊಂಡಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‌ಯುವಿ ಬಿಡುಗಡೆಯಾದ ಮೊದಲ 20 ದಿನಗಳಲ್ಲಿ ಈ ವರ್ಷ ಸ್ಕೋಡಾ ಮಾರಾಟ ಮಾಡಲು ಉದ್ದೇಶಿಸಿರುವ ಎಲ್ಲಾ ಯುನಿಟ್ ಗಳು ಮಾರಾಟವಾಗಿತ್ತು. ಜನವರಿ 10 ರಂದು ಬಿಡುಗಡೆಯಾದಾಗಿನಿಂದ ಮಾರಾಟವಾದ ಕೊಡಿಯಾಕ್‌ನ ನಿಖರವಾದ ಸಂಖ್ಯೆಯನ್ನು ಕಾರು ತಯಾರಕರು ಬಹಿರಂಗಪಡಿಸಿಲ್ಲ. ಇದೀಗ ಸ್ಕೋಡಾ ಕೊಡಿಯಾಕ್‌ನ ಹೊಸ ಬ್ಯಾಚ್‌ಗಾಗಿ ಬುಕ್ಕಿಂಗ್‌ಗಳನ್ನು ಪ್ರಾರಂಭಿಸಲಾಗಿದೆ. ವಿತರಣೆಯನ್ನು ಜನವರಿ 2023 ರಿಂದ ಪ್ರಾರಂಭಿಸಲಿದೆ. ಇದರೊಂದಿಗೆ, ಸ್ಕೋಡಾ ಕೊಡಿಯಾಕ್‌ನ ಹೊಸ ಬೆಲೆಯನ್ನು ಬಹಿರಂಗಪಡಿಸಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಈ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯ ಆರಂಭಿಕ ಬೆಲೆಯು ರೂ.37.49 ಲಕ್ಷವನ್ನು ಹೊಂದಿದೆ. ಈ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.50,000 ಮುಂಗಡ ಮೊತ್ತವನ್ನು ಪಾವತಿಸಿ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಈ ಮಾದರಿಯನ್ನು ಬುಕ್ ಮಾಡಬಹುದು.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ತಯಾರಕರು ಕೊಡಿಯಾಕ್ ಅನ್ನು ಪ್ರಿ-ಫೇಸ್‌ಲಿಫ್ಟ್ ಮಾದರಿಯಿಂದ ಪ್ರತ್ಯೇಕಿಸಲು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದ್ದಾರೆ. ಬಿಎಸ್6 ಮಾಲಿನ್ಯ ನಿಯಮದ ಕಾರಣದಿಂದಾಗಿ ಹಿಂದಿನ ಮಾದರಿಯನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಯಿತು. 2022ರ ಆವೃತ್ತಿಯು ಪ್ರಸ್ತುತ ಸುರಕ್ಷತೆ ಮತ್ತು ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಇತ್ತೀಚೆಗೆ ಸ್ಕೋಡಾ ಕಂಪನಿಯು ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಗಾಗಿ ಹೊಸ ಟಿವಿಸಿಯನ್ನು ಬಿಡುಗಡೆಗೊಳಿಸಿತ್ತು. ಈ ಟಿವಿಸಿಯಲ್ಲಿ 2022ರ ಕೊಡಿಯಾಕ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ನೀಡಲಾದ ಕೆಲವು ಫೀಚರ್ಸ್ ಗಳನ್ನು ತೋರಿಸಲಾಗಿದೆ. 7-ಸೀಟುಗಳ ಈ ಎಸ್‍ಯುವಿಯ ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಘಟಕವಾಗಿ ನೀಡಲಾಗುತ್ತದೆ ಮತ್ತು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾದ ಉತ್ಪಾದನಾ ಘಟಕದಲ್ಲಿ ಸ್ಥಳೀಯವಾಗಿ ಜೋಡಿಸಲಾಗಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಈ ಕೊಡಿಯಾಕ್ ಎಸ್‍ಯುವಿಯಲ್ಲಿ 2.0 ಲೀಟರ್, ನಾಲ್ಕು-ಸಿಲಿಂಡರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಕೊಡಿಯಾಕ್ ಎಸ್‍ಯುವಿಯು ಸ್ಟೈಲ್, ಸ್ಪೋರ್ಟ್‌ಲೈನ್ ಮತ್ತು ಲಾರಿನ್ & ಕ್ಲೆಮೆಂಟ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಎಸ್‍ಯುವಿಯ 4,699 ಎಂಎಂ ಉದ್ದ, 1,882 ಎಂಎಂ ಅಗಲ ಮತ್ತು 1,685 ಎಂಎಂ ಎತ್ತರ ಮತ್ತು 2,791 ಎಂಎಂ ವೀಲ್‌ಬೇಸ್ ಅನ್ನು ಒಳಗೊಂಡಿದೆ. ಈ ಸ್ಕೋಡಾ ಕೊಡಿಯಾಕ್ ಮಾದರಿಯು 7-ಸೀಟರ್ ಪ್ರೀಮಿಯಂ ಎಸ್‍ಯುವಿ ಮಾದರಿಯಾಗಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಈ ಪ್ರೀಮಿಯಂ ಮೂರು-ಸಾಲಿನ ಎಸ್‍ಯುವಿಯಲ್ಲಿನ ನವೀಕರಣಗಳು ಪ್ರಸ್ತುತ ಮಾದರಿಯಲ್ಲಿ ಕಾಸ್ಮೆಟೀಕ್ ಮತ್ತು ಪೀಚರ್ಸ್ ಗಳ ನವೀಕರಣಗಳನ್ನು ಒಳಗೊಂಡಿದೆ. ಅದರ ಬಾಹ್ಯ ವಿನ್ಯಾಸದಿಂದ ಪ್ರಾರಂಭಿಸಿ, ಹೊಸ ಕೊಡಿಯಾಕ್ ಫೇಸ್‌ಲಿಫ್ಟ್ ಮೊದಲ ಬಾರಿಗೆ ಸಮಗ್ರ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಎಂಬೆಡ್ ಮಾಡಲಾದ ಪೂರ್ಣ-ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್‌ಲೈಟ್‌ಗಳನ್ನು ಒಳಗೊಂಡಿವೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ನವೀಕರಿಸಿದ ಕೊಡಿಯಾಕ್ ಎಸ್‍ಯುವಿಯ ಮುಂಭಾಗವು ಪರಿಷ್ಕೃತ ಸ್ಕೋಡಾ ಬಟರ್‌ಫ್ಲೈ ರೇಡಿಯೇಟರ್ ಗ್ರಿಲ್ ಮತ್ತು ಮೆಶ್-ಪ್ಯಾಟರ್ನ್ ಏರ್ ಇನ್‌ಟೇಕ್ ವೆಂಟ್‌ಗಳೊಂದಿಗೆ ರಿಪ್ರೊಫೈಲ್ಡ್ ಫ್ರಂಟ್ ಬಂಪರ್ ಅನ್ನು ಪಡೆದಿದೆ, ಎಸ್‍ಯುವಿಯ ಬಾನೆಟ್ ವಿನ್ಯಾಸವನ್ನು ಸಹ ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾಗಿದೆ. ಇದರ ಸೈಡ್ ಪ್ರೊಫೈಲ್ ನಲ್ಲಿ ಹೊಸ 20-ಇಂಚಿನ ಅಲಾಯ್ ವ್ಹೀಲ್ ಗಳನ್ನು ಟಾಪ್-ಎಂಡ್ ರೂಪಾಂತರಕ್ಕಾಗಿ ತೆಗೆಯಬಹುದಾದ ಕವರ್‌ಗಳೊಂದಿಗೆ ಬ್ಲ್ಯಾಕ್ -ಔಟ್ ಪಿಲ್ಲರ್‌ಗಳು ಮತ್ತು ರೂಫ್ ರೈಲ್‌ಗಳನ್ನು ಪಡೆದುಕೊಂಡಿದೆ,

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಹೊಸ ಕೊಡಿಯಾಕ್ ಎಸ್‍ಯುವಿ ಹಿಂಭಾಗದ ವಿಂಡ್‌ಶೀಲ್ಡ್‌ನ ಬದಿಗಳಲ್ಲಿ ವಿಂಗ್ಲೆಟ್‌ಗಳೊಂದಿಗೆ ಹೊಸ ಸ್ಪಾಯ್ಲರ್ ಅನ್ನು ಹೊಂದಿದೆ. ಕೊಡಿಯಾಕ್ ಎಸ್‍ಯುವಿಯ ಏರೋಡೈನಾಮಿಕ್ ಗುಣಲಕ್ಷಣಗಳನ್ನು ಉತ್ತಮಗೊಳಿಸುತ್ತದೆ ಮತ್ತು 0.31 ರ ಕಡಿಮೆ ಡ್ರ್ಯಾಗ್ ಗುಣಾಂಕವನ್ನು ನೀಡುತ್ತದೆ. ಇದು ಮರುವಿನ್ಯಾಸಗೊಳಿಸಲಾದ ಸುತ್ತುವ ಎಲ್ಇಡಿ ಟೈಲ್-ಲ್ಯಾಂಪ್ ಗಳು ಮತ್ತು ಪರಿಷ್ಕೃತ ಹಿಂಭಾಗದ ಬಂಪರ್ ಅನ್ನು ಹೊಂದಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಈ ಹೊಸ ಸ್ಕೋಡಾ ಕೊಡಿಯಾಕ್ ಕ್ಯಾಬಿನ್ ಒಳಗೆ, ಕೊಡಿಯಾಕ್ ಫೇಸ್‌ಲಿಫ್ಟ್ ಅನ್ನು ಐದು ಮತ್ತು ಏಳು-ಆಸನಗಳ ಲೇಔಟ್‌ಗಳಲ್ಲಿ ನೀಡಲಾಗುವುದು, ಮೆಮೊರಿ ಕಾರ್ಯದೊಂದಿಗೆ ಮಲ್ಟಿವೇ ಎಲೆಕ್ಟ್ರಿಕ್ ಸೀಟ್ ಹೊಂದಾಣಿಕೆ, ಮತ್ತು ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್ ಸೇರಿವೆ. ಕ್ಯಾಬಿನ್ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಒಳಗೊಂಡಿದೆ,ಈ ಇನ್ಫೋಟೈನ್‌ಮೆಂಟ್ ಯೂನಿಟ್ ನೊಂದಿಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕಾನ್ಸೆಟಿವಿಟಿ ಹೊಂದಿದೆ.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಇದರೊಂದಿಗೆ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಮತ್ತು 12-ಸ್ಪೀಕರ್ ಕ್ಯಾಂಟನ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ. ಇದರೊಂದಿಗೆ ಮೂರು-ಜೋನ್ ಕ್ಲೈಮೇಂಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್,ಹ್ಯಾಂಡ್ಸ್-ಫ್ರೀ ಪಾರ್ಕಿಂಗ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಗಳನ್ನು ಹೊಂದಿದೆ, ಇನ್ನು ಸ್ಕೋಡಾ ಕಂಪನಿಯು ಕೊಡಿಯಾಕ್ ಎಸ್‍ಯುವಿಯನ್ನು ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಲಾಯಿತು ಮತ್ತು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು.

ಸ್ಕೋಡಾ ಕೊಡಿಯಾಕ್ ಎಸ್‍ಯುವಿ ಖರೀದಿಗೆ ಎರಡನೇ ಹಂತದ ಬುಕ್ಕಿಂಗ್ ಪ್ರಾರಂಭ

ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ, ಒಂಬತ್ತು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮೆಕ್ಯಾನಿಕಲ್ ಬ್ರೇಕ್ ಅಸಿಸ್ಟ್ (MBA) ಜೊತೆಗೆ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ (HBA), ಆಂಟಿ ಸ್ಲಿಪ್ ರೆಗ್ಯುಲೇಶನ್ (ASR), ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಅನ್ನು ಹೊಂದಿದೆ. ಸ್ಕೋಡಾ ಕೊಡಿಯಾಕ್ ಫೇಸ್‌ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ಟಿಗ್ಬಾನ್ ಫೇಸ್‌ಲಿಫ್ಟ್, ಸಿಟ್ರನ್ ಸಿ5 ಏರ್‌ಕ್ರಾಸ್, ಹ್ಯುಂಡೈ ಟ್ಯೂಸಾನ್ ಮತ್ತು ಬಿಡುಗಡೆಯಾಗಲಿರುವ ಜೀಪ್ ಮೆರಿಡಿಯನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ.

Article Published On: Wednesday, August 10, 2022, 19:09 [IST]
English summary
Skoda kodiaq suv booking reopens new price details
Read more on skoda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+