ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಕೋವಿಡ್ ಸಂಕಷ್ಟದ ನಡುವೆಯೂ ಕಾರುಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಪ್ರಮುಖ ಕಾರು ಕಂಪನಿಯು ಹೊಸ ವರ್ಷದಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಳ ನೀರಿಕ್ಷೆಯೊಂದಿಗೆ ವಿವಿಧ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡುತ್ತಿದ್ದು, ಸ್ಕೋಡಾ ಇಂಡಿಯಾ ಕಂಪನಿಯು ಸಹ ತನ್ನ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡುತ್ತಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಕುಶಾಕ್ ಕಾರು ಪ್ರತಿಸ್ಪರ್ಧಿ ಕಾರುಗಳಲ್ಲೇ ಅತಿಹೆಚ್ಚು ಪ್ರೀಮಿಯಂ ಫೀಚರ್ಸ್ ಮತ್ತು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಹೊಂದಿರುವ ಮೊದಲ ಕಾರು ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಹೊಸ ಕಾರು ಮಾದರಿಯು ಅತಿ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ. ಹೊಸ ಕಾರಿನ ಬುಕ್ಕಿಂಗ್ ಆಧರಿಸಿ ವಿತರಣೆಯನ್ನು ಆರಂಭಿಸಿರುವ ಸ್ಕೋಡಾ ಕಂಪನಿಯು ಇದುವರೆಗೆ ಸುಮಾರು 12 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಣೆ ಮಾಡಿದ್ದು, ಕಂಪನಿಯು 2021ರ ಆವೃತ್ತಿಯ ಮೇಲೆ ಆಫರ್ ನೀಡುತ್ತಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಸ್ಕೋಡಾ ಕಂಪನಿಯು ಕುಶಾಕ್ ಕಾರಿನ 2021ರ ಆವೃತ್ತಿಯ ಮೇಲೆ ಮಾತ್ರ ಅನ್ವಯಿಸುವಂತೆ ರೂ. 70 ಸಾವಿರ ತನಕ ಡಿಸ್ಕೌಂಟ್ ನೀಡುತ್ತಿದ್ದು, ಹೊಸ ಆಫರ್‌ನಲ್ಲಿ ಎಕ್ಸ್‌ಚೆಂಜ್, ಕ್ಯಾಶ್‌ಬ್ಯಾಕ್ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ಒಳಗೊಂಡಿರಲಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಮೇಲೆ ಹೇಳಿದಂತೆ ಹೊಸ ಆಫರ್ ಕೇವಲ ಸ್ಟಾಕ್ ಕ್ಲಿಯೆರೆನ್ಸ್ ಉದ್ದೇಶಕ್ಕಾಗಿ ಆಫರ್ ನೀಡುತ್ತಿರುವುದರಿಂದ 2021ರ ಮಾದರಿಯ ಮೇಲೆ ಮಾತ್ರ ಅನ್ವಯಿಸಲಿದ್ದು, 2022ರ ಮಾದರಿಯ ಮೇಲೆ ಯಾವುದೇ ರೀತಿಯ ಆಫರ್ ಲಭ್ಯವಿಲ್ಲ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ಸ್ಕೋಡಾ ಕಂಪನಿಯು ಭಾರತದಲ್ಲಿ ಕುಶಾಕ್ ಕಾರು ಮಾದರಿಯೊಂದಿಗೆ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರು ಬಿಡುಗಡೆಯ ನಂತರ ಕಂಪನಿಯು ಕುಶಾಕ್ ಕಾರಿನ ಬೆಲೆಯಲ್ಲಿ ಮೂರನೇ ಬಾರಿಗೆ ಹೆಚ್ಚಳ ಮಾಡಿದೆ. ಸ್ಕೋಡಾ ಕಂಪನಿಯು ಬಿಡುಗಡೆ ಮಾಡಿರುವ ಕುಶಾಕ್ ಕಾರಿನ ಹೊಸ ದರಪಟ್ಟಿಯಲ್ಲಿ ಆರಂಭಿಕ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.19 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೊಸ ವರ್ಷದ ವಿಶೇಷವಾಗಿ ಕಾರು ಖರೀದಿಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಲಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ದರ ಪಟ್ಟಿಯಲ್ಲಿ ಕುಶಾಕ್ ಕಾರು ಮಾದರಿಯು ರೂ. 19 ಸಾವಿರದಿಂದ ರೂ. 29 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಹೊಸ ಕಾರು ಕಳೆದ ಜೂನ್‌ನಲ್ಲಿ ಬಿಡುಗಡೆಯ ನಂತರ ಇದು ಮೂರನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಪ್ರತಿಸ್ಪರ್ಧಿಗಳಿಂತಲೂ ಅತ್ಯುತ್ತಮ ಪ್ರೀಮಿಯಂ ಫೀಚರ್ಸ್ ಹೊಂದಿರುವ ಕುಶಾಕ್ ಕಾರು ಮಾದರಿಯು ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಕಾರಿನ ಟಾಪ್ ಎಂಡ್ ಮಾದರಿಗೆ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಾಗಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಹೊಸ ಕಾರಿನ ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, ಆಟೋಮ್ಯಾಟಿಕ್ ಮಾದರಿಗಳು ಉತ್ತಮ ಬೇಡಿಕೆ ಹೊಂದಿವೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಕುಶಾಕ್ ಕಾರಿನ ಒಳಭಾಗದ ವಿನ್ಯಾಸವು ಕೂಡಾ ಆಕರ್ಷಕವಾಗಿದ್ದು, ವಿಶಾಲವಾದ ಕ್ಯಾಬಿನ್‌ನೊಂದಿಗೆ ವರ್ಚುವಲ್ ಕಾಕ್‌ಪಿಟ್‌ ಹೊಂದಿದೆ. ಇದರಲ್ಲಿ ಟು ಸ್ಪೋಕ್ ಸ್ಟೀರಿಂಗ್ ವೀಲ್ಹ್, ವೆಂಟಿಲೆಟೆಡ್ ಲೆದರ್ ಆಸನಗಳು, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಸರ್ಪೊಟ್ ಮಾಡುವ 10.1 ಇಂಚಿನ ಇನ್ಟೋಟೈನ್‌ಮೆಂಟ್ ಸ್ಕ್ರೀನ್ ಸೌಲಭ್ಯವಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಜೊತೆಗೆ ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಆ್ಯಂಬಿಯೆಂಟ್ ಲೈಟಿಂಗ್ಸ್, ಮಲ್ಟಿ ಫಂಕ್ಷನಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಿಕ್ ಸನ್‌ರೂಫ್, ಮೈ ಸ್ಕೋಡಾ ಕಾರ್ ಕನೆಕ್ಟ್ ಆ್ಯಪ್, ಸ್ಮಾರ್ಟ್ ಬಾಟಲ್ ಹೋಲ್ಡರ್ ಮತ್ತು ಸ್ಕೋಡಾ ಸೌಂಡ್ ಸಿಸ್ಟಂ ಸೌಲಭ್ಯವಿದ್ದು, ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಇದರೊಂದಿಗೆ ಕಂಪನಿಯು ಕುಶಾಕ್ ಕಾರಿನ ಎಂಟ್ರಿ ಲೆವಲ್ ಮಾದರಿಗಳಲ್ಲಿ ಆಟೋಮ್ಯಾಟಿಕ್ ವರ್ಷನ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಶೀಘ್ರದಲ್ಲೇ ಹೊಸ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಕಾರಿನ ಆಕ್ಟಿವಾ ವೆರಿಯೆಂಟ್‌ನಲ್ಲಿ ಆಟೋಮ್ಯಾಟಿಕ್ ಮಾದರಿಯನ್ನು ಪರಿಚಯಿಸುತ್ತಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ತನ್ನ ಕಾರು ಮಾದರಿಗಳಲ್ಲೂ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಮಾಂಟೆ ಕಾರ್ಲೊ ಎಡಿಷನ್ ಮಾರಾಟ ಹೊಂದಿರುವ ಸ್ಕೋಡಾ ಕಂಪನಿಯು ಇದೀಗ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಕುಶಾಕ್ ಮಾದರಿಯಲ್ಲೂ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಎಡಿಷನ್‌ನಲ್ಲಿ ಸ್ಟ್ಯಾಂಡರ್ಡ್ ಟಾಪ್ ಎಂಡ್ ವೆರಿಯೆಂಟ್‌ಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಜೊತೆ ಸ್ಪೋರ್ಟಿ ಬ್ಯಾಡ್ಜ್ ಹೊಂದಿರಲಿದೆ.

ಸ್ಕೋಡಾ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಮಾಂಟೆ ಕಾರ್ಲೊ ವಿಶೇಷ ಆವೃತ್ತಿಗಳು ಸ್ಕೋಡಾ ವಿವಿಧ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದ್ದು, ಇದೀಗ ಕುಶಾಕ್ ಮಾದರಿಯಲ್ಲೂ ಹೊಸ ಎಡಿಷನ್ ಬಿಡುಗಡೆಗೆ ಸಿದ್ದಗೊಂಡಿದೆ.

More from DriveSpark

Article Published On: Monday, January 24, 2022, 10:14 [IST]
English summary
Skoda kushaq january 2022 discounts and offers
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+