ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ಕುಶಾಕ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಕುಶಾಕ್ ಮಾದರಿಯಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಇದೀಗ ಸ್ಟೈಲ್ ಮಾದರಿಯಲ್ಲಿ ಹೊಸ ವೆರಿಯೆಂಟ್ ಬಿಡುಗಡೆ ಮಾಡಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

1.0 ಲೀಟರ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವ ಸ್ಟೈಲ್ ವೆರಿಯೆಂಟ್‌ನಲ್ಲಿ ಹೊಸ ರೂಪಾಂತರವನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 12.99 ಲಕ್ಷ ಬೆಲೆ ಹೊಂದಿದೆ. ಸನ್‌ರೂಫ್ ಹೊಂದಿರುವ ಸಾಮಾನ್ಯ ಸ್ಟೈಲ್ ವೆರಿಯೆಂಟ್‌ಗೆ ಹೋಲಿಕೆ ಮಾಡಿದರೆ ಹೊಸ ಮಾದರಿಯಲ್ಲಿ ಸ್ವಯಂಚಾಲಿತ ವೈಪರ್ ಸಿಸ್ಟಮ್ ಮತ್ತು ಒಳಭಾಗದಲ್ಲಿ ರಿಯರ್ ವ್ಯೂ ಮಿರರ್ ನೀಡಲಾಗಿದ್ದರೂ ಆಟೋ-ಡಿಮ್ಮಿಂಗ್ ವೈಶಿಷ್ಟ್ಯತೆಯನ್ನು ನೀಡಲಾಗಿಲ್ಲ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಜೊತೆಗೆ ಹೊಸ ಮಾದರಿಯಲ್ಲಿ ಕಂಪನಿಯು ಎಂಟು ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇಯನ್ನು ಸಹ ಈ ರೂಪಾಂತರದಲ್ಲಿ ತೆಗೆದುಹಾಕಲಾಗಿದ್ದು, 16-ಇಂಚಿನ ಅಲಾಯ್ ಚಕ್ರದ ಬದಲಿಗೆ 15-ಇಂಚಿನ ಚಕ್ರ ನೀಡಲಾಗಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊಸ ಕಾರು ಮಾದರಿಯು ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್ ಹೊಂದಿರಲಿದ್ದು, ಸ್ಟೈಲ್ ಸಾಮಾನ್ಯ ಮಾದರಿಗಿಂತ ಸನ್‌ರೂಫ್ ಮಾದರಿಯು ತುಸು ದುಬಾರಿ ಬೆಲೆಯೊಂದಿಗೆ ಹೆಚ್ಚುವರಿಯಾಗಿ ಹೊಸ ಬಣ್ಣದ ಆಯ್ಕೆ ಜೊತೆ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ರೂಫ್ ಲೈನರ್ ಸೇರಿದಂತೆ ಮತ್ತಷ್ಟು ಹೊಸ ಫೀಚರ್ಸ್ ಹೊಂದಿರಲಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಸ್ಟ್ಯಾಂಡರ್ಡ್ ಕುಶಾಕ್ ಮಾದರಿಯು ಸದ್ಯ ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಕಾರು ಆರಂಭಿಕವಾಗಿ ರೂ. 10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುತ್ತಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕುಶಾಕ್ ಕಾರಿನಲ್ಲಿ ಸ್ಕೋಡಾ ಕಂಪನಿಯು 1.-0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಯಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 7-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕಾರು ಸ್ಕೋಡಾ ಬಟರ್ ಪ್ಲೈ ಗ್ರಿಲ್‌ನೊಂದಿಗೆ ಆಕರ್ಷಕವಾದ ಮುಂಭಾಗದ ವಿನ್ಯಾಸ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲ್ಯಾಂಪ್, 17-ಇಂಚಿನ ಅಲಾಯ್ ವ್ಹೀಲ್, ರೂಫ್ ರೈಲ್, ಫ್ಲಕ್ಸ್ ಸ್ಕೀಡ್ ಪ್ಲೇಟ್, ಇಂಟ್ರಾಗ್ರೆಟೆಡ್ ರೂಫ್ ರೈಲ್ಸ್‌ನೊಂದಿಗೆ ಬಲಿಷ್ಠ ಮಾದರಿಯಾಗಿ ಹೊರಹೊಮ್ಮಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹೊಸ ಕಾರಿನಲ್ಲಿ ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಮಲ್ಟಿ ಕೂಲಿಷನ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಏರ್‌ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಸೇಫ್ಟಿ ಫೀಚರ್ಸ್‌ಗಳಿವೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾಂಟೆ ಕಾರ್ಲೊ ಎಡಿಷನ್ ಮಾದರಿಯು ಆಕರ್ಷಕವಾದ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್ ಹೊಂದಿದ್ದು, ಸ್ಕೋಡಾ ವಿವಿಧ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಮಾಂಟೆ ಕಾರ್ಲೊ ಆವೃತ್ತಿಯು ಎರಡು ಎಂಜಿನ್ ಆಯ್ಕೆಯೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾದರಿಗಳನ್ನು ಒಳಗೊಂಡಿದ್ದು, ಆರಂಭಿಕ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.49 ಲಕ್ಷ ಬೆಲೆ ಹೊಂದಿವೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಸ್ಟ್ಯಾಂಡರ್ಡ್ ಕುಶಾಕ್ ಮಾದರಿಗಿಂತ ಮಾಂಟೆ ಕಾರ್ಲೊ ಮಾದರಿಯು ಸುಮಾರು ರೂ.70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಬೆಲೆಗೆ ಅನುಗುಣವಾಗಿ ಹೊಸ ಮಾದರಿಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಮಾಂಟೆ ಕಾರ್ಲೊ ಮಾದರಿಯು ಟೊರ್ನಾಡೊ ರೆಡ್ ಮತ್ತು ಕ್ಯಾಂಡಿ ವೈಟ್ ಎನ್ನುವ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಬ್ಲ್ಯಾಕ್ಔಟ್ ಫೀಚರ್ಸ್ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಹೊಸ ಕಾರಿನ ಗ್ರಿಲ್, ಬಂಪರ್, ಏರ್ ಇನ್‌ಟೆಕ್, ಫ್ರಂಟ್ ಡಿಫ್ಯೂಸರ್‌ಗಳು ಸ್ಪೋರ್ಟಿ ವಿನ್ಯಾಸವನ್ನು ಹೊಂದಿವೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಜೊತೆಗೆ ಹೊಸ ಕಾರಿನ ರೂಫ್ ಕಾರ್ಬನ್ ಸ್ಟ್ರಿಲ್ ಪೇಟಿಂಗ್ ಸೌಲಭ್ಯವನ್ನು ಪಡೆದುಕೊಂಡಿದ್ದು, ಸ್ಕೋಡಾ ಜನಪ್ರಿಯ ಸ್ಪೋರ್ಟ್ ಕಾರು ಸೂಪರ್ಬ್ ವಿಆರ್‌ಎಸ್ ಮಾದರಿಯಲ್ಲಿರುವಂತೆ ಹೊಸ ಕಾರಿನಲ್ಲಿ 17 ಇಂಚಿನ ವೆಗಾ ಅಲಾಯ್ ವ್ಹೀಲ್ ಜೋಡಣೆ ಮಾಡಲಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಇದರೊಂದಿಗೆ ಹೊಸ ಕಾರಿನ ಫೆಂಡರ್ ಮೇಲೆ ಮಾಂಟೆ ಕಾರ್ಲೊ ಬ್ಯಾಡ್ಜಿಂಗ್ ನೀಡಲಾಗಿದ್ದು, ಫ್ರಂಟ್ ಡಿಸ್ಕ್ ಬ್ರೇಕ್‌ನಲ್ಲಿ ರೆಡ್ ಕ್ಯಾಲಿಪರ್, ಡ್ಯುಯಲ್ ಟೋನ್ ಟೈಲ್‌ಗೇಟ್ ಸ್ಪಾಯ್ಲರ್ ಸೇರಿದಂತೆ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ಹೊಂದಿದೆ.

ಸನ್‌ರೂಫ್ ರಹಿತ ಕುಶಾಕ್ ಹೊಸ ಸ್ಟೈಲ್ ವೆರಿಯೆಂಟ್ ಬಿಡುಗಡೆ ಮಾಡಿದ ಸ್ಕೋಡಾ

ಹೊಸ ಕಾರಿನ ಒಳಭಾಗವು ಕೂಡಾ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಆಕರ್ಷಕವಾಗಿದ್ದು, ಬ್ಲ್ಯಾಕ್ ಮತ್ತು ರೂಬಿ ರೆಡ್ ಮೆಟಾಲಿಕ್ ಹೊಂದಿರುವ ಡ್ಯುಯಲ್ ಟೋನ್ ಇಂಟಿರಿಯರ್, ರೆಡ್ ಆಕ್ಸೆಂಟ್‌ಗಳು, ಡ್ಯುಯಲ್ ಟೋನ್ ಆಸನ‌ಗಳು, ರೆಡ್ ಆಂಬಿಯೆಂಟ್, ಅಲ್ಯುಮಿನಿಯಂ ಪೆಡಲ್ಸ್‌ನೊಂದಿಗೆ ರೆಡ್ ಥಿಮ್ಸ್ ಐಷಾರಾಮಿ ಲುಕ್ ನೀಡಲಿದೆ.

More from DriveSpark

Article Published On: Saturday, June 11, 2022, 8:46 [IST]
English summary
Skoda launched kushaq new style non sunroof variant details
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+