ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಸ್ಕೋಡಾ ಇಂಡಿಯಾ ಕಂಪನಿಯು ಹೊಸ ಕಾರುಗಳ ಮೂಲಕ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಮತ್ತೊಂದು ಹೊಸ ಕಾರು ಮಾದರಿಯ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೀಗಾಗಿ ಹೊಸ ಕಾರು ಮಾದರಿಯಾಗಿ ಸ್ಕೋಡಾ ಕಂಪನಿಯು ರ‍್ಯಾಪಿಡ್ ಸೆಡಾನ್ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿ ಕಾರಿನ ಮಾಹಿತಿಯನ್ನು ತೆಗೆದುಹಾಕಲಾಗಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಯಾಗಿರುವ ರ‍್ಯಾಪಿಡ್ ಸ್ಥಾನಕ್ಕೆ ಹೊಸ ಕಾರು ಮಾದರಿಯನ್ನು ಪರಿಚಯಿಸಲಾಗುತ್ತಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೀಗಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ರ‍್ಯಾಪಿಡ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಕಂಪನಿಯು ಇದೀಗ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಸಹ ತೆಗೆದುಹಾಕಿದ್ದು, ರ‍್ಯಾಪಿಡ್ ಸ್ಥಾನಕ್ಕೆ ಸ್ಲಾವಿಯಾ ಸೆಡಾನ್ ಲಗ್ಗೆಯಿಡುತ್ತಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

2011ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ರ‍್ಯಾಪಿಡ್ ಮಾದರಿಯು ಕಳೆದ ಹತ್ತು ವರ್ಷಗಳಲ್ಲಿ ಕೆಲವೇ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಯಾವುದೇ ದೊಡ್ಡ ಬದಲಾವಣೆಗಳನ್ನು ಕೊಂಡಿಲ್ಲ. ಜೊತೆಗೆ ಬಿಎಸ್-6 ಎಂಜಿನ್ ಕಡ್ಡಾಯ ನಂತರ ಹೊಸ ಎಂಜಿನ್ ಆಯ್ಕೆಯು ರ‍್ಯಾಪಿಡ್ ಸೆಡಾನ್ ಮಾರಾಟ ಇಳಿಕೆಗೆ ಪ್ರಮುಖ ಕಾರಣವಾಗಿದ್ದು, ಈ ಹಿನ್ನಲೆಯಲ್ಲಿ ಕಂಪನಿಯು ರ‍್ಯಾಪಿಡ್ ನ್ಯೂ ಜನರೇಷನ್ ಮಾದರಿಯ ಬದಲಾಗಿ ರ‍್ಯಾಪಿಡ್ ಸ್ಥಾನಕ್ಕೆ ಹೊಸ ಕಾರು ಮಾದರಿಯನ್ನೇ ಪರಿಚಯಿಸುತ್ತಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ವಿವಿಧ ಕಾರು ಮಾದರಿಗಳ ಮಾರಾಟದೊಂದಿಗೆ ಸದ್ಯ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕೋಡಾ ಕಂಪನಿಯು ಮತ್ತಷ್ಟು ಹೊಸ ಕಾರು ಉತ್ಪನ್ನಗಳೊಂದಿಗೆ ಪ್ರಬಲ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಕುಶಾಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ ನಂತರ ಹೊಚ್ಚ ಹೊಸ ಸ್ಲಾವಿಯಾ ಕಾರು ಮಾದರಿಯ ಬಿಡುಗಡೆಗೆ ಸಿದ್ದವಾಗಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಸದ್ಯ 1.0 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ರ‍್ಯಾಪಿಡ್ ಸೆಡಾನ್ ಮಾದರಿಯು ಒಂದೇ ಎಂಜಿನ್ ಮೂಲಕ ಪ್ರಮುಖ ಐದು ವೆರಿಯೆಂಟ್ ಹೊಂದಿದ್ದು, ಉತ್ಪಾದನೆ ಸ್ಥಗಿತಗೊಳಿಸಿರುವುದರಿಂದ ಸ್ಟಾಕ್ ಮುಕ್ತಾಯದ ತನಕ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಹೊಸ ಸ್ಲಾವಿಯಾ ಸೆಡಾನ್ ಕಾರು ರ‍್ಯಾಪಿಡ್ ಮಾದರಿಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಗಳೊಂದಿಗೆ ವಿವಿಧ ಎಂಜಿನ್ ಆಯ್ಕೆ, ಹಲವಾರು ಪ್ರೀಮಿಯಂ ಫೀಚರ್ಸ್ ಮತ್ತು ಆಕರ್ಷಕ ಬೆಲೆಯೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಸ್ಲಾವಿಯಾ ಸೆಡಾನ್ ಆವೃತ್ತಿಯನ್ನು ಸ್ಕೋಡಾ ಕಂಪನಿಯು ಫೋಕ್ಸ್‌ವ್ಯಾಗನ್ ಕಂಪನಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳಿಸಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಹೊಸ ಸ್ಲಾವಿಯಾ ಕಾರು ಮಾದರಿಯು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 1.0 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯನ್ನು ಇದೇ ತಿಂಗಳು 28ರಂದು ಬಿಡುಗಡೆ ಮಾಡಲಿರುವ ಸ್ಕೋಡಾ ಕಂಪನಿಯು ಹೈ ಎಂಡ್ ಆವೃತ್ತಿಯಾಗಿರುವ 1.5 ಲೀಟರ್ ಮಾದರಿಯನ್ನು ಮಾರ್ಚ್ 3ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಹೊಸ ಕಾರು ಆಕ್ಟಿವಾ, ಆಂಬಿಷನ್ ಮತ್ತು ಸ್ಟೈಲ್ ಎನ್ನುವ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಸ್ಲಾವಿಯಾ ಕಾರು ವಿವಿಧ ಎಂಜಿನ್ ಆಯ್ಕೆ, ಪ್ರೀಮಿಯಂ ಫೀಚರ್ಸ್‌ಗಳು ಮತ್ತು ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಸ್ಲಾವಿಯಾ ಸೆಡಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಕಾರುಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಸ್ಥಗಿತಗೊಳ್ಳಲಿರುವ ರ‍್ಯಾಪಿಡ್‌ಗಿಂತಲೂ ಆಕರ್ಷಕ ವಿನ್ಯಾಸದೊಂದಿಗೆ ಲಾಂಗ್‌ವೀಲ್ಹ್ ಬೆಸ್ ಪಡೆದುಕೊಂಡಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಹೊಸ ಕಾರು ಸಿಗ್ನಿಚೆರ್ ಬಟರ್‌ಪ್ಲೈ ಗ್ರಿಲ್, ಸ್ಲಿಕ್ ಹೆಡ್‌ಲ್ಯಾಂಪ್, ಎಲ್ ಆಕಾರದಲ್ಲಿರುವ ಡೇ ಟೈಮ್ ರನ್ನಿಂಗ್ ಲ್ಯಾಂಪ್ ಸ್ಟ್ರೀಪ್, ಸ್ಪೋರ್ಟಿ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್ ಹೌಸ್, ಎಲ್ಇಡಿ ಟೈಲ್ ಲೈಟ್ಸ್‌ನೊಂದಿಗೆ ಒಳಾಂಗಣವು ಕೂಡಾ ಸಾಕಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಹೊಸ ಕಾರಿನ ಒಳಾಂಗಣ ಸೌಲಭ್ಯವು ಆಕ್ಟಿವಿಯಾ ಸೆಡಾನ್ ಮಾದರಿಯನ್ನು ನೆನಪಿಸಲಿದ್ದು, 10 ಇಂಚಿನ ಇನ್ಪೋಟೈನ್‌ಮೆಂಟ್, 8 ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮೈ ಸ್ಕೋಡಾ ಕಾರ್ ಕನೆಕ್ಟೆಡ್ ನೊಂದಿಗೆ ವೆಂಟಿಲೆಟೆಡ್ ಲೆದರ್ ಆಸನಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಆಟೋ ಡಿಮ್ಮಿಂಗ್ ಹೊಂದಿರುವ ರಿಯರ್ ವ್ಯೂ ಮಿರರ್ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಸ್ಲಾವಿಯಾ ಹೈ ಎಂಡ್ ಮಾದರಿಯಲ್ಲಿ ಆರು ಏರ್‌ಬ್ಯಾಗ್‌ಗಳು ಇಎಸ್‌ಸಿ, ಇಡಿಎಸ್, ಟೈರ್ ಪ್ರೆಷರ್ ಮಾನಿಟರ್, ಹಿಲ್ ಹೋಲ್ಡ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಮಲ್ಟಿ ಕೂಲಿಷನ್ ಬ್ರೇಕ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್, ರೈನ್ ಸೆನ್ಸಿಂಗ್ ವೈಪ್ಸ್ ಸೇರಿದಂತೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಸ್ಲಾವಿಯಾ ಕಾರು ಕುಶಾಕ್ ಮಾದರಿಯಂತೆ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ 1.0-ಲೀಟರ್ ಟಿಎಸ್ಐ ಮೂರು-ಸಿಲಿಂಡರ್ ಎಂಜಿನ್ ಮತ್ತು 1.5-ಲೀಟರ್ ನಾಲ್ಕು-ಸಿಲಿಂಡರ್ ಟಿಎಸ್ಐ ಎಂಜಿನ್ ಜೊತೆಗೆ ಎರಡೂ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆ ಪಡೆದುಕೊಂಡಿರಲಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಕಂಪನಿಯು ಆಕ್ಟಿವಾ ಮತ್ತು ಆಂಬಿಷನ್ ಮಾದರಿಗಳಲ್ಲಿ 1.0 ಲೀಟರ್ ಪೆಟ್ರೋಲ್ ಮಾದರಿಯನ್ನು ಮತ್ತು ಸ್ಟೈಲ್ ವೆರಿಯೆಂಟ್‌ನಲ್ಲಿ ಮಾತ್ರವೇ 1.0 ಲೀಟರ್ ಮತ್ತು 1.5 ಲೀಟರ್ ಪೆಟ್ರೋಲ್ ಮಾದರಿಯನ್ನು ಮಾರಾಟ ಮಾಡಲಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಹೊಸ ಕಾರು 4,541 ಎಂಎಂ ಉದ್ದ, 1,752 ಅಗಲ ಮತ್ತು 1,487 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೇಸ್‌ನೊಂದಿಗೆ 560 ಲೀಟರ್ ಬೂಟ್‌‌ಸ್ಪೆಸ್ ಹೊಂದಿದ್ದು, ಹೊಸ ಕಾರು ಹೋಂಡಾ ಸಿಟಿ ಸೆಡಾನ್ ಮಾದರಿಯಷ್ಟೇ ಉದ್ದಳತೆಯೊಂದಿಗೆ ತುಸು ಅಗಲವಾಗಿರುವುದಲ್ಲದೆ 51 ಎಂಎಂ ನಷ್ಟು ಹೆಚ್ಚುವರಿ ವ್ಹೀಲ್ ಬೆಸ್ ಹಾಗೂ ಹೆಚ್ಚುವರಿ 15 ಲೀಟರ್‌ನಷ್ಟು ಬೂಟ್‌ಸ್ಪೆಸ್ ಹೊಂದಿದೆ.

ಅಧಿಕೃತ ವೆಬ್‌ಸೈಟ್‌ನಿಂದ ರ‍್ಯಾಪಿಡ್ ಸೆಡಾನ್ ಮಾಹಿತಿಯನ್ನು ತೆಗೆದುಹಾಕಿದ ಸ್ಕೋಡಾ

ಹೊಸ ಕಾರು ಟೊರ್ನಾಟ್ ರೆಡ್, ಕ್ರಿಸ್ಟಲ್ ಬ್ಲ್ಯೂ, ಕ್ಯಾಂಡಿ ವೈಟ್, ರೆಫ್ಲೆಕ್ಸರ್ ಸಿಲ್ವರ್ ಮತ್ತು ಕಾರ್ಬನ್ ಸ್ಟೀಲ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

More from DriveSpark

Article Published On: Saturday, February 12, 2022, 8:45 [IST]
English summary
Skoda rapid sedan removed from official website ahead of slavia launch
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+