ಮಾಡರ್ನ್ ಸಾಲಿಡ್ ಡಿಸೈನ್ ಟೀಸರ್ ಹೊರಬಿಟ್ಟ ಸ್ಕೋಡಾ: ವರ್ಷಾಂತ್ಯದಲ್ಲಿ ಅನಾವರಣ!
ಐಷಾರಾಮಿ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಹೊಸ ಮಾಡರ್ನ್ ಸಾಲಿಡ್ ಡಿಸೈನ್ ಫಿಲಾಸಫಿಯ ಕುರಿತು ಸಣ್ಣ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಿದೆ. ಜೆಕ್ ವಾಹನ ತಯಾರಕರ ಈ ಹೊಸ ವಿನ್ಯಾಸ ಫಿಲಾಸಫಿಯು ಈ ವರ್ಷದ ಕೊನೆಯಲ್ಲಿ ಅನಾವರಣಗೊಳ್ಳುವ ಸಾಧ್ಯತೆಯಿದೆ.

ಕೆಲವು ವಿಶ್ವಾಸಾರ್ಹ ಮೂಲಗಳ ಪ್ರಕಾರ, ಸ್ಕೋಡಾದ ಈ ಹೊಸ ವಿನ್ಯಾಸ ಫಿಲಾಸಫಿಯನ್ನು ಜೆಕ್ ವಾಹನ ತಯಾರಕರ ಮುಂಬರುವ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸುವ ನಿರೀಕ್ಷೆಯೂ ಇದೆ. ಈ ಮಾಡರ್ನ್ ಸಾಲಿಡ್ ಡಿಸೈನ್ ಫಿಲಾಸಫಿಯು ವೇಗವಾಗಿ ಬದಲಾಗುತ್ತಿರುವ ಆಧುನಿಕ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಹಾಗೂ ಗ್ರಾಹಕರ ಜೀವನಶೈಲಿಯೊಂದಿಗೆ ಬ್ರಾಂಡ್ ಹೆಚ್ಚು ನಿಕಟವಾಗಿ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಸ್ಕೋಡಾ ಸಿಇಒ ಥಾಮಸ್ ಶಾಫರ್ ತಿಳಿಸಿದ್ದಾರೆ.

ಸ್ಕೋಡಾದಿಂದ ಮುಂಬರುವ ಎಲೆಕ್ಟ್ರಿಕ್ ವಾಹನಗಳು ತೀಕ್ಷ್ಣವಾದ ಲುಕ್ ಮತ್ತು ಡಿಸೈನ್‌ನಲ್ಲಿ ತುಂಬಾ ಆಸಕ್ತಿದಾಯಕವಾಗಿ ಕಾಣಲಿವೆ ಎಂದು ಮಾಡರ್ನ್ ಸಾಲಿಡ್ ಡಿಸೈನ್ ಥೀಮ್‌ನ ಟೀಸರ್ ನೋಡಿದವರು ಹೇಳುತ್ತಿದ್ದಾರೆ.

ಇದಲ್ಲದೆ ಟೀಸರ್ ಚಿತ್ರದಲ್ಲಿರುವ ಕಾರಿಗೆ ತೆಳುವಾದ ಲಂಬವಾದ ಎಲ್ಇಡಿ ಹೆಡ್‌ಲೈಟ್‌ಗಳನ್ನು ಬಳಸಿರುವಂತೆ ಕಾಣುತ್ತಿದೆ. ಮತ್ತು ಸಾಂಪ್ರದಾಯಿಕ ಮುಂಭಾಗದ ಗ್ರಿಲ್ ಬದಲಿಗೆ ಆಯತಾಕಾರದ ಹೊಳೆಯುವ ಕಪ್ಪು ಫಲಕವನ್ನು ಬಳಸಲಾಗಿದೆ. ಸಂಪೂರ್ಣವಾಗಿ ಸೀಲ್ ಮಾಡಲಾದ ಗ್ರಿಲ್ ಈ ವಿನ್ಯಾಸದ ಥೀಮ್ ಅಡಿಯಲ್ಲಿ ಭವಿಷ್ಯದ ವಾಹನಗಳು ಪ್ರಧಾನವಾಗಿ ಎಲೆಕ್ಟ್ರಿಕ್ ವಾಹನಗಳಾಗಿರುತ್ತವೆ ಎಂದು ಹಲವರು ವಿಶ್ಲೇಷಕರು ದೃಢಪಡಿಸುತ್ತಿದ್ದಾರೆ.

ಸ್ಕೋಡಾ ಕಾರುಗಳ ವಿನ್ಯಾಸದ ಥೀಮ್‌ಗೆ ಮಾಡರ್ನ್ ಸಾಲಿಡ್ ಡಿಸೈನ್ ಥೀಮ್‌ಗೆ ಹೋಲಿಸಿಕೊಂಡಿರೆ ಅತ್ಯಂತ ವಿಶಿಷ್ಟ ವಿನ್ಯಾಸದ ವೈಶಿಷ್ಟ್ಯಗಳಲ್ಲಿ ಕಾರಿನ ಬದಿಯಲ್ಲಿ ಪ್ರಮುಖ ಶೋಲ್ಡರ್ ಲೈನ್ ಕೊರತೆಯನ್ನು ಕಾಣಬಹುದು. ಇದರ ಶೋಲ್ಡರ್ ಲೈನ್ ವಾಹನಕ್ಕೆ ಸಾಕಷ್ಟು ಆಕರ್ಷಣೆಯನ್ನು ನೀಡುವುದರಿಂದ ಈ ಡಿಸೈನ್ ಫಿಲಾಸಫಿಯೂ ವಿಚಿತ್ರವಾಗಿ ಕಂಡರೂ, ಹೊಸ ಮಾಡರ್ನ್ ಸಾಲಿಡ್ ಡಿಸೈನ್ ಥೀಮ್ ತನ್ನದೇ ಆದ ರೀತಿಯಲ್ಲಿ ಸಾಕಷ್ಟು ಅನನ್ಯ ಮತ್ತು ಶಕ್ತಿಯುತವಾಗಿದೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ ಜೆಕ್ ವಾಹನ ತಯಾರಕರ ಹೊಸ ಮಾಡರ್ನ್ ಸಾಲಿಡ್ ಡಿಸೈನ್ ಭಾಷೆಯು ಚೌಕಾಕಾರದ-ಆಫ್ ಚಕ್ರ ಕಮಾನುಗಳು ಮತ್ತು ನೇರವಾದ ಹಿಂಭಾಗದ ಕ್ವಾರ್ಟರ್ ವಿಂಡೋಗಳನ್ನು ಸೇರಿಸುತ್ತದೆ. ಇದು ಮುಂಬರುವ ಸ್ಕೋಡಾ ಇವಿಗಳಿಗೆ ಸ್ವಲ್ಪ ಮಟ್ಟಿಗೆ ಬಾಕ್ಸಿ ಆದರೆ ಅನನ್ಯವಾದ ಛಾಯೆಯನ್ನು ನೀಡುತ್ತದೆ. ಇದಲ್ಲದೆ, ಹೆಡ್‌ಲೈಟ್‌ಗಳ ವಿನ್ಯಾಸವನ್ನು ಪ್ರತಿಬಿಂಬಿಸುವ, ಹೊಸ ಮಾಡರ್ನ್ ಸಾಲಿಡ್ ಡಿಸೈನ್ ಥೀಮ್‌ನಲ್ಲಿರುವ ಟೈಲ್ಯಾಂಪ್‌ಗಳು ಎಲ್ಇಡಿಗಳ ತೆಳುವಾದ ಪಟ್ಟಿಯನ್ನು ಬಳಸಿಕೊಂಡಂತೆ ಕಾಣುತ್ತಿದೆ.

ಸ್ಕೋಡಾ ಆಟೋ ಇಂಡಿಯಾದ ಬಗ್ಗೆ ಮಾತನಾಡುವುದಾದರೆ, ಜೆಕ್ ವಾಹನ ತಯಾರಕ ಕಂಪನಿಯು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಕೊಳ್ಳಲು ಕೆಲ ವರ್ಷಗಳಿಂದ ಹೆಣಗಾಡುತ್ತಿತ್ತು. ನಂತರ ಬಂದ ಸ್ಕೋಡಾ ಕುಶಾಕ್‌ನ ಬಿಡುಗಡೆಯು ದೇಶದಲ್ಲಿ ಸ್ಕೋಡಾ ಪಾಲಿಗೆ ಗೇಮ್ ಚೇಂಜರ್ ಆಯಿತು.

ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿರುವ ಕುಶಾಕ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೂ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಎಡಿಷನ್‌ನಲ್ಲಿ ಸ್ಟ್ಯಾಂಡರ್ಡ್ ಟಾಪ್ ಎಂಡ್ ವೆರಿಯೆಂಟ್‌ಗಳಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಜೊತೆ ಆಕರ್ಷಕ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ಬ್ಯಾಡ್ಜ್ ಹೊಂದಿದೆ.

ಕುಶಾಕ್ ಮಾದರಿಯು ಸದ್ಯ ಆಕ್ಟಿವ್, ಆ್ಯಂಬಿನೇಷನ್ ಮತ್ತು ಸ್ಟೈಲ್ ಎನ್ನುವ ಮೂರು ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಮಾಂಟೆ ಕಾರ್ಲೊ ಮಾದರಿಯು ಸ್ಟೈಲ್ ಮಾದರಿಗಿಂತಲೂ ತುಸು ದುಬಾರಿ ಬೆಲೆಯೊಂದಿಗೆ ಹೆಚ್ಚುವರಿಯಾಗಿ ಹೊಸ ಬಣ್ಣದ ಆಯ್ಕೆ ಜೊತೆ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ರೂಫ್ ಲೈನರ್, ರೆಡ್ ಕಾಟ್ರಾಸ್ಟ್ ಸೇರಿದಂತೆ ಮತ್ತಷ್ಟು ಹೊಸ ಫೀಚರ್ಸ್ ಹೊಂದಿರಲಿದೆ.

ಇದಲ್ಲದೆ, ಸ್ಕೋಡಾ ಸ್ಲಾವಿಯಾ ಬಿಡುಗಡೆಯು ಫೆಬ್ರವರಿ 2022 ರಲ್ಲಿ ಮಾರಾಟದ ಸಂಖ್ಯೆಯನ್ನು 4,000ಕ್ಕೂ ಹೆಚ್ಚು ಯುನಿಟ್‌ಗಳಿಗೆ ಹೆಚ್ಚಿಸಲು ಸಹಾಯ ಮಾಡಿತು. ಅಲ್ಲದೆ, ಹೊಸ ಸ್ಕೋಡಾ ಕುಶಾಕ್ ಫೋಕ್ಸ್‌ವ್ಯಾಗನ್ ಗ್ರೂಪ್ ಅಡಿಯಲ್ಲಿ ಇಂಡಿಯಾ 2.0 ವ್ಯವಹಾರ ಕಾರ್ಯತಂತ್ರದೊಂದಿಗೆ ಭಾರತದಲ್ಲಿ ತಯಾರಾದ ಮೊದಲ ವಾಹನವಾಗಿದೆ. ಈ ಆಕ್ರಮಣಕಾರಿ ವ್ಯಾಪಾರ ತಂತ್ರದಿಂದಾಗಿ, ಫೋಕ್ಸ್ವ್ಯಾಗನ್ ಗ್ರೂಪ್ ಭಾರತದಲ್ಲಿ ಹೆಚ್ಚು ಲಾಭದಾಯಕವಾಯಿತು.

ಕುಶಾಕ್ ಕಾರು ಮಾದರಿಯು ಸದ್ಯ ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದು, ಹೊಸ ಕಾರು ಇದುವರೆಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗಾಗಿ ಬುಕಿಂಗ್ ಪಡೆದುಕೊಂಡಿದೆ. ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಕಳೆದ ತಿಂಗಳು ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಆರಂಭಿಕ ಮಾದರಿಯಲ್ಲಿ ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್ ಅಳವಡಿಕೆಯೊಂದಿಗೆ ಬೆಲೆ ಹೆಚ್ಚಳ ಮಾಡಲಾಗಿದೆ.

ಹೊಸ ಕಾರ್ಯತಂತ್ರದ ಅಡಿಯಲ್ಲಿ ವ್ಯವಹಾರವನ್ನು ಹೆಚ್ಚು ಲಾಭದಾಯಕವಾಗಿಸಲು, ಉತ್ಪಾದನಾ ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ವಾಹನ ತಯಾರಕರಿಗೆ ಲಾಭವನ್ನು ಹೆಚ್ಚಿಸಲು ಶೇಕಡಾ 95 ರಷ್ಟು ಉತ್ಪಾದನೆಯನ್ನು ಸ್ಥಳೀಯಗೊಳಿಸಲಾಯಿತು. ಸ್ಕೋಡಾ ಆಟೋ ಇಂಡಿಯಾ 2022ರ ಫೆಬ್ರವರಿಯಲ್ಲಿ ಒಟ್ಟು 4,503 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದಕ್ಕೆ ಹೋಲಿಸಿದರೆ, ಸ್ಕೋಡಾ ಫೆಬ್ರವರಿ 2021 ರಲ್ಲಿ ಕೇವಲ 853 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿತ್ತು.


Click it and Unblock the Notifications








