ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಜರ್ಮನ್ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ 'ಸ್ಮಾರ್ಟ್' ತನ್ನ ಮೊದಲ SUV ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಹೊಸ ಕಾರಿಗೆ ಸ್ಮಾರ್ಟ್‌ # 1 (Smart #1) ಎಂದು ಹೆಸರಿಸಿದೆ. ಈ ಸ್ಮಾರ್ಟ್‌ ಕಂಪನಿಯು ಮರ್ಸಿಡಿಸ್ ಮತ್ತು ಗೀಲಿ ನಡುವಿನ ಜಂಟಿ ಉದ್ಯಮದ ಭಾಗವಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯಗಳು:

ಈ ಎಲೆಕ್ಟ್ರಿಕ್ ಕಾರು ಒಂದೇ ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸುತ್ತದೆ. ಇದನ್ನು ನೇರವಾಗಿ ಹಿಂಭಾಗದ ಆಕ್ಸಲ್‌ಗಳಲ್ಲಿ ಜೋಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟಾರ್ ಗರಿಷ್ಠ 268 bhp ಮತ್ತು 343 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ # 1 ಕಾರು ಎಲೆಕ್ಟ್ರಿಕ್ ಮೋಟರ್‌ಗೆ ಪವರ್ ನೀಡಲು 66kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಂಡಿದೆ. ಈ ಬ್ಯಾಟರಿಯನ್ನು ಲಿಥಿಯಂ ನಿಕಲ್ ಮೆಗ್ನೀಸಿಯಮ್ ಕೋಬಾಲ್ಟ್‌ನಿಂದ ಪ್ರತ್ಯೇಕವಾಗಿ ತಯಾರಿಸಲಾಗಿದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 440 ಕಿ.ಮೀ ವರೆಗೆ ಪ್ರಯಾಣಿಸಬಹುದು.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಎಸಿ ಮತ್ತು ಡಿಸಿ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದ್ದು, ಇವು ವಿಭಿನ್ನ ಚಾರ್ಜಿಂಗ್ ಸಮಯಗಳನ್ನು ಹೊದಿವೆ. ಎಸಿ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಚಾರ್ಜ್ ಮಾಡುವಾಗ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಲು ಸುಮಾರು 3 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಡಿಸಿ ಚಾರ್ಜರ್ ಮೂಲಕ ಚಾರ್ಜ್ ಮಾಡುವಾಗ ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಲು ಕೇವಲ 30 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ. ಇಂತಹ ಸೂಪರ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದಲ್ಲೂ ಯಾವುದೇ ಅಡೆತಡೆಗಳಿಲ್ಲದೆ ಇದು ಚಾರ್ಜ್ ಆಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ # 1 ಸ್ಪೇಸ್

ಸ್ಮಾರ್ಟ್ # 1 ಎಲೆಕ್ಟ್ರಿಕ್ SUV 4,270mm ಉದ್ದ, 1,822mm ಅಗಲ ಮತ್ತು 1,636mm ಎತ್ತರವಿದೆ. ಈ ಆಯಾಮಗಳನ್ನು ಪರಿಗಣಿಸಿದರೆ, ಈ ಎಲೆಕ್ಟ್ರಿಕ್ ಕಾರ್ ಹೆಚ್ಚು ಜಾಗವನ್ನು ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಇದು ವಿವಿಧ ರಸ್ತೆಗಳಲ್ಲಿ ಉತ್ತಮ ರೈಡ್‌ ಅನುಭವ ನೀಡಲು 2,750 ಎಂಎಂ ವ್ಹೀಲ್‌ಬೇಸ್ ಅನ್ನು ಸಹ ಹೊಂದಿದೆ. ಜೊತೆಗೆ ಕಾರಿಗೆ ಗಣನೀಯ ಪ್ರಮಾಣದ ಲಗೇಜ್ ಸಾಗಿಸಲು 411 ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ. ಇದು ಬಾನೆಟ್ ಕೆಳಗೆ 15 ಲೀಟರ್ ಸಾಮರ್ಥ್ಯವನ್ನೂ ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ # 1 ವಿನ್ಯಾಸ :

ಕಳೆದ ವರ್ಷ ಉತ್ಪಾದನಾ ಕಂಪನಿಯು ಈ ಕಾರನ್ನು ಪರಿಕಲ್ಪನೆಯ ಮಾದರಿಯಾಗಿ ಜಗತ್ತಿಗೆ ಪರಿಚಯಿಸಿತ್ತು. ಕಂಪನಿಯು ಈಗ ಯಾವುದೇ ಬದಲಾವಣೆಗಳಿಲ್ಲದೆ ಬಿಡುಗಡೆ ಮಾಡಿದೆ. ಸ್ಮಾರ್ಟ್ # 1 ಅನ್ನು ಮುಂಭಾಗ ಮತ್ತು ಹಿಂಭಾಗದಲ್ಲಿ ಬಹಳ ಕ್ಯಾಶುಯಲ್ ಲುಕ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಅಂತೆಯೇ ಬಾರ್ ಸೆಟ್-ಅಪ್ ಲೈಟ್ ಬಾರ್ ಹೆಡ್‌ಲೈಟ್‌ಗೆ ಸಂಪರ್ಕಿಸುವ ರೀತಿಯಲ್ಲಿ ಮತ್ತು ಟೈಲ್ ಲೈಟ್‌ಗೆ ಹೋಲುತ್ತದೆ. ಹೆಚ್ಚು ಗಾಳಿಯನ್ನು ಹೀರಿಕೊಳ್ಳುವ ರಂಧ್ರಗಳನ್ನು ಹೊಂದಿರುವ ಬಂಪರ್ ಅನ್ನು ಮುಂಭಾಗದಲ್ಲಿ ಬಳಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಅಲ್ಲದೆ, ಕಾರಿನಲ್ಲಿ 19 ಇಂಚಿನ ಅಲಾಯ್ ಚಕ್ರಗಳು ದೊಡ್ಡ ಕಮಾನುಗಳು ಮತ್ತು 235/45 R19 ಟೈರ್‌ಗಳನ್ನು ಆಕರ್ಷಕ ನೋಟಕ್ಕಾಗಿ ಅಳವಡಿಸಲಾಗಿದೆ. ಈ ವೈಶಿಷ್ಟ್ಯಗಳೊಂದಿಗೆ ಕಾರಿನ ಹೊರಭಾಗವು ತುಂಬಾ ಆಕರ್ಷಣೀಯವಾಗಿ ಕಾಣುತ್ತದೆ. ಅದೇ ರೀತಿ ಕಾರಿನ ಒಳಭಾಗವು ಕೆಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ # 1 12.8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 9.2-ಇಂಚಿನ ಅಗಲದ ಡ್ರೈವರ್ ಸ್ಕ್ರೀನ್ ಮತ್ತು 10-ಇಂಚಿನ ಹೆಡ್-ಅಪ್ ಪರದೆಯೊಂದಿಗೆ ಬರುತ್ತದೆ. ಇವುಗಳಲ್ಲಿ ಅತ್ಯಂತ ಆಕರ್ಷಕವಾದ ಪರದೆ ಎಂದರೆ ಇನ್ಫೋಟೈನ್ ಸಿಸ್ಟಂ. ಇದರಲ್ಲಿ, ವಿವಿಧ ಸಂಪರ್ಕ ವೈಶಿಷ್ಟ್ಯಗಳು ಮತ್ತು ಏರ್ ಅಪ್ಡೇಟ್ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು ಕೇವಲ ತಾಂತ್ರಿಕವಾಗಿ ಮುಂದುವರಿದಿಲ್ಲ, ಇದು ಸುರಕ್ಷತಾ ವೈಶಿಷ್ಟ್ಯಗಳಲ್ಲಿಯೂ ಉತ್ತಮವಾಗಿದೆ. ಈ ಕಾರಿನಲ್ಲಿ, ಲೆವೆಲ್ 2ಗೆ ಸ್ವಾಯತ್ತ ಚಾಲನಾ ವ್ಯವಸ್ಥೆಯನ್ನು ನೀಡಲಾಗಿದೆ. ಇದರ ಜೊತೆಗೆ, ಸ್ಮಾರ್ಟ್ # 1 ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಅಸಿಸ್ಟ್ ಜೊತೆಗೆ ಸ್ಟಾಪ್ ಮತ್ತು ಗೋ ವೈಶಿಷ್ಟ್ಯದಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನ, ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಸ್ಮಾರ್ಟ್ # 1 ಎಲೆಕ್ಟ್ರಿಕ್ ಕಾರು

ಜೊತೆಗೆ ಅಪಘಾತದ ಸಂದರ್ಭದಲ್ಲಿ ರಕ್ಷಣೆ ನೀಡಲು 7 ಏರ್ ಬ್ಯಾಗ್‌ಗಳನ್ನು ನೀಡಲಾಗಿದೆ. ಜಗತ್ತಿನ ಇತರೆ ಎಲೆಕ್ಟ್ರಿಕ್ ದೈತ್ಯ ಕಂಪನಿಗಳು ಅತ್ಯಾಧುನಿಕ ಇವಿಗಳ ತಯಾರಿಯಲ್ಲಿದ್ದರೆ, ಸ್ಮಾರ್ಟ್ ಕಂಪನಿ ತನ್ನ ಸ್ಮಾರ್ಟ್ # 1 ಮೂಲಕ ಅಂತಹ ಸೂಪರ್ ಕಾರನ್ನು ಬಿಡುಗಡೆ ಮಾಡಿದೆ. 2023ರ ನಂತರ ಈ ಕಾರು ವಿಶ್ವಾದ್ಯಂತ ಮಾರಾಟವಾಗುವ ನಿರೀಕ್ಷೆಯಿದೆ. ಆದರೆ, ಭಾರತಕ್ಕೆ ಆಗಮಿಸುವ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

Most Read Articles

Kannada
English summary
Smart 1 electric car released with sophisticated technology many features
Story first published: Friday, April 8, 2022, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X