ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ವ್ಯಾಗನ್ಆರ್ ಫೇಸ್‌ಲಿಫ್ಟ್ ಕಾರನ್ನು ತಾಯಿನಾಡು ಜಪಾನ್ ನಲ್ಲಿ ಪರಿಚಯಿಸಿದೆ. 2023ರ ಸುಜುಕಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಕಾರು ವಿನ್ಯಾಸದಲ್ಲಿ ಹೊಸ ನವೀಕರಣಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಹೊಸ ಸುಜುಕಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಕಾರಿನ ಇಂಜಿನ್ ಮತ್ತು ಇತರ ಹಾರ್ಡ್‌ವೇರ್‌ಗಳಂತಹ ಆಂತರಿಕ ಅಂಶಗಳು ಮೊದಲಿನಂತೆಯೇ ಇರುತ್ತವೆ. ಈ ಹೊಸ ವ್ಯಾಗನ್ಆರ್ ಫೇಸ್‌ಲಿಫ್ಟ್ ಕಾರಿನ ಬೆಲೆಯು 1,509,200 ಯೆನ್ (ರೂ. 7.22 ಲಕ್ಷದಿಂದ ರೂ. 8.96 ಲಕ್ಷ) ಬೆಲೆ ಶ್ರೇಣಿಯಲ್ಲಿ ಲಭ್ಯವಿರುತ್ತದೆ. ವ್ಯಾಗನ್ಆರ್ ಕಸ್ಟಮ್ ಝಡ್ ಮಾದರಿಯು 1,474,000 ಯೆನ್‌ನಿಂದ 1,756,700 ಯೆನ್ (ರೂ. 8.75 ಲಕ್ಷದಿಂದ ರೂ. 10.43 ಲಕ್ಷ) ಬೆಲೆಯನ್ನು ಹೊಂದಿದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ವ್ಯಾಗನ್ಆರ್ ಫೇಸ್‌ಲಿಫ್ಟ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಮುಂಭಾಗದ ಗ್ರಿಲ್ ಮತ್ತು ಮುಂಭಾಗದ ಬಂಪರ್‌ಗೆ ಬದಲಾವಣೆಗಳೊಂದಿಗೆ ಪರಿಷ್ಕೃತ ಮುಂಭಾಗದ ಫಾಸಿಕವನ್ನು ಒಳಗೊಂಡಿವೆ. ವ್ಯಾಗನ್ಆರ್ ಕಸ್ಟಮ್ ಝಡ್ ರೂಪಾಂತರವು ಇದೇ ರೀತಿಯ ನವೀಕರಣಗಳನ್ನು ಪಡೆಯುತ್ತದೆ, ಮಿನಿ ಪ್ಯಾಸೆಂಜರ್ ಕಾರಿಗೆ ವಿಶಿಷ್ಟವಾದ ಪ್ರೊಫೈಲ್ ಅನ್ನು ಖಚಿತಪಡಿಸುತ್ತದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಒಳಭಾಗದಲ್ಲಿ, ವ್ಯಾಗನ್ಆರ್ ಫೇಸ್‌ಲಿಫ್ಟ್‌ನ ಪ್ರಮುಖ ವೈಶಿಷ್ಟ್ಯಗಳು ಟೈಪ್-ಎ / ಟೈಪ್-ಸಿ ಯುಎಸ್‌ಬಿ ಪವರ್ ಸಾಕೆಟ್, ಕೀಲೆಸ್ ಪುಶ್-ಸ್ಟಾರ್ಟ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಒಳಗೊಂಡಿವೆ. ಹೀಟೆಡ್ ಡ್ರೈವರ್ ಸೀಟ್ ಮತ್ತೊಂದು ಪ್ರಮುಖ ಅಪ್‌ಡೇಟ್ ಆಗಿದ್ದು ಇದನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಆಂತರಿಕ ಬಣ್ಣದ ಥೀಮ್ ರೂಪಾಂತರವನ್ನು ಆಧರಿಸಿ ಬದಲಾಗುತ್ತದೆ ಮತ್ತು ಸಂಪೂರ್ಣ ಬ್ಲ್ಯಾಕ್ ಮತ್ತು ಎಲ್ಲಾ-ಬೀಜ್ ಆಯ್ಕೆಯನ್ನು ಒಳಗೊಂಡಿರುತ್ತದೆ. ಜಪಾನ್-ಸ್ಪೆಕ್ ವ್ಯಾಗನ್ಆರ್ ಕೇಂದ್ರೀಯವಾಗಿ-ಮೌಂಟೆಡ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಪೂರ್ಣ-ಅಗಲ ಎಸಿ ಪ್ಯಾನೆಲ್ ಅನ್ನು ಹೊಂದಿದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಇದು ಸುಜುಕಿ ಕನೆಕ್ಟ್ ಕನೆಕ್ಟಿವಿಟಿ ಪ್ಲಾಟ್‌ಫಾರ್ಮ್‌ನೊಂದಿಗೆ ಫ್ಲೋಟಿಂಗ್-ಟೈಪ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಸುರಕ್ಷತೆಯ ವಿಷಯದಲ್ಲಿ, ನವೀಕರಣಗಳಲ್ಲಿ ಮುಂಭಾಗದ ಸೀಟಿನ SRS ಸೈಡ್ ಏರ್‌ಬ್ಯಾಗ್‌ಗಳು, SRS ಕರ್ಟನ್ ಏರ್‌ಬ್ಯಾಗ್‌ಗಳು, ವಾಹನ ಸ್ಪೀಡ್ ಟ್ರ್ಯಾಕಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ವ್ಯಾಗನ್ಆರ್ ಫೇಸ್‌ಲಿಫ್ಟ್‌ನ ಎಲ್ಲಾ ರೂಪಾಂತರಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಸ್ಟ್ಯಾಂಡರ್ಡ್ ವ್ಯಾಗನ್ಆರ್ ಫೇಸ್‌ಲಿಫ್ಟ್ ಡಸ್ಕ್ ಬ್ಲೂ ಮೆಟಾಲಿಕ್, ಟೆರಾಕೋಟಾ ಪಿಂಕ್ ಮೆಟಾಲಿಕ್ ಮತ್ತು ಫಾಗ್ಗಿ ಬ್ಲೂ ಪರ್ಲ್ ಮೆಟಾಲಿಕ್ ಸೇರಿದಂತೆ ಒಟ್ಟು 10 ಬಣ್ಣದ ಆಯ್ಕೆಗಳನ್ನು ಹೊಂದಿರುತ್ತದೆ. ವ್ಯಾಗನ್ಆರ್ ಸ್ಟಿಂಗ್ರೇ ಮತ್ತು ವ್ಯಾಗನ್ಆರ್ ಕಸ್ಟಮ್ ಝಡ್ ಕ್ರಮವಾಗಿ 6 ಮತ್ತು 8 ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಸ್ಟಿಂಗ್ರೇ ಮೂನ್‌ಲೈಟ್ ವೈಲೆಟ್ ಪರ್ಲ್ ಮೆಟಾಲಿಕ್‌ನ ಹೊಸ ಬಣ್ಣದ ಆಯ್ಕೆಯನ್ನು ಪಡೆಯುತ್ತದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಈ ವ್ಯಾಗನ್ಆರ್ ಕಸ್ಟಮ್ ಝಡ್ ಡೆನಿಮ್ ಬ್ಲೂ ಮೆಟಾಲಿಕ್ ಮತ್ತು ಪ್ಯೂರ್ ವೈಟ್ ಪರ್ಲ್ ಅನ್ನು ಪಡೆಯುತ್ತದೆ. ವ್ಯಾಗನ್ಆರ್ ಗಾಗಿ ಬಣ್ಣದ ಆಯ್ಕೆಗಳು ಸಿಂಗಲ್-ಟೋನ್ ಮತ್ತು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಒಳಗೊಂಡಿವೆ. ಇದಲ್ಲದೆ, ಡ್ಯುಯಲ್-ಟೋನ್ ಬಣ್ಣ ರೂಪಾಂತರಗಳಿಗಾಗಿ ಬಳಸುವ ಥೀಮ್‌ನಲ್ಲಿ ವ್ಯತ್ಯಾಸಗಳಿವೆ. ಹೆಚ್ಚುವರಿ ಬಣ್ಣದ ಆಯ್ಕೆಗಳು ಬಳಕೆದಾರರಿಗೆ ಹೆಚ್ಚು ಕಸ್ಟಮೈಸ್ ಅನುಭವವನ್ನು ನೀಡುತ್ತದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಜಪಾನ್-ಸ್ಪೆಕ್ ವ್ಯಾಗನ್ಆರ್ 660ಸಿಸಿ ಎಂಜಿನ್ ಅನ್ನು ಹೊಂದಿದೆ. ಇದು NA ಪೆಟ್ರೋಲ್ ಮತ್ತು ಮೈಲ್ಡ್ -ಹೈಬ್ರಿಡ್ ಕಾನ್ಫಿಗರೇಶನ್ ಎರಡರಲ್ಲೂ ನೀಡಲಾಗುತ್ತದೆ. ಈ ಎಂಜಿನ್‌ನ ಟರ್ಬೊ ಆವೃತ್ತಿಯು ಸ್ಟಿಂಗ್ರೇ ಮತ್ತು ಕಸ್ಟಮ್ ಝಡ್ ನೊಂದಿಗೆ ಲಭ್ಯವಿದೆ. ಟ್ರಾನ್ಸ್‌ಮಿಷನ್ ಆಯ್ಕೆಗಳು 5-ಸ್ಪೀಡ್ ಎಂಟಿ ಮತ್ತಿ ಸಿವಿಟಿ ಅನ್ನು ಒಳಗೊಂಡಿವೆ. ಟೂ ವ್ಹೀಲ್ ಡ್ರೈವ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ಎರಡೂ ರೂಪಾಂತರಗಳು ಆಫರ್‌ನಲ್ಲಿವೆ. ಸಿವಿಟಿ ಗೇರ್‌ಬಾಕ್ಸ್‌ಗೆ ಸಂಯೋಜಿಸಲಾದ ಮೈಲ್ಡ್ -ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ 25.2 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಇನ್ನು ಭಾರತದಲ್ಲಿ ಮಾರುತಿ ಸುಜುಕಿ ವ್ಯಾಗನ್‍ಆರ್ ಸುಮಾರು ಎರಡು ದಶಕಗಳಿಂದ ಮಾರಾಟದಲ್ಲಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು ಅದೇ 1.0-ಲೀಟರ್ ಮತ್ತು 1.2-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಗಳ ಆಯ್ಕೆಯಲ್ಲಿ ಮಾರಾಟ ಮಾಡಲಾಗುತ್ತದೆ. ಎಸ್-ಸಿಎನ್‌ಜಿ ಮಾದರಿಯಲ್ಲಿ 1.0-ಲೀಟರ್ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 58 ಬಿಹೆಚ್‌ಪಿ ಮತ್ತು 78 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಇದರೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಜೋಡಿಸಲಾಗಿದೆ. ವ್ಯಾಗನ್ಆರ್ ಅನ್ನು ಎಲ್ಎಕ್ಸ್ಐ ಮತ್ತು ಎಲ್ಎಕ್ಸ್ಐ(ಒ) ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರಲ್ಲಿ ಸುರಕ್ಷತೆಗಾಗಿ ಡ್ರೈವರ್-ಸೈಡ್ ಏರ್‌ಬ್ಯಾಗ್, ಎಬಿಎಸ್ ವಿಥ್ ಇಬಿಡಿ, ಹೈಸ್ಪೀಡ್ ಅಲರ್ಟ್, ಸೀಟ್‌ಬೆಲ್ಟ್ ರಿಮೈಂಡರ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಇತರ ಪೀಚರ್ ಗಳನ್ನು ಕೂಡ ಹೊಂದಿದೆ,

ಹೊಸ ಲುಕ್‌ನಲ್ಲಿ ಜನಪ್ರಿಯ ವ್ಯಾಗನ್ಆರ್ ಕಾರನ್ನು ಪರಿಚಯಿಸಿದ ಸುಜುಕಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸುಜುಕಿ ತನ್ನ ಜನಪ್ರಿಯ ವ್ಯಾಗನ್ಆರ್ ಫೇಸ್‌ಲಿಫ್ಟ್ ಕಾರನ್ನು ತಾಯಿನಾಡು ಜಪಾನ್ ನಲ್ಲಿ ಬಿಡುಗಡೆಗೊಳಿಸಿದೆ. 2023ರ ಸುಜುಕಿ ವ್ಯಾಗನ್ಆರ್ ಫೇಸ್‌ಲಿಫ್ಟ್ ಕಾರು ವಿನ್ಯಾಸದಲ್ಲಿ ಹೊಸ ನವೀಕರಣಗಳೊಂದಿಗೆ ಆಕರ್ಷಕ ಲುಕ್ ನಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ.

Most Read Articles

Kannada
English summary
Suzuki introduced 2023 wagonr facelift with new look features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X