ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಸುಜುಕಿ ಜಿಮ್ನಿ(Suzuki Jimny) ಆಫ್-ರೋಡರ್ ಮಿನಿ-ಎಸ್‍ಯುವಿಯು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿಯನ್ನು 2018ರಲ್ಲಿ ಬಿಡುಗಡೆಗೊಳಿಸಿದ್ದರು.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಭಾರತದಲ್ಲಿ ಜಿಮ್ನಿ ಎಸ್‌ಯುವಿ ಬಿಡುಗಡೆಗೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದಿದೆ. ಇಂಡೋ-ಜಪಾನೀಸ್ ವಾಹನ ತಯಾರಕರಾದ ಮಾರುತಿ ಸುಜುಕಿ ಬೆಲೆ, ಎಸ್‍ಯುವಿಯ ನಿರ್ದಿಷ್ಟತೆ ಮತ್ತು ಬಿಡುಗಡೆ ದಿನಾಂಕದಂತಹ ನಿರ್ಣಾಯಕ ಅಂಶಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸುಜುಕಿ ಜಿಮ್ನಿ ಕಾಂಪ್ಯಾಕ್ಟ್ ಎಸ್‍ಯುವಿ ಆಗಿದ್ದರೂ (ಭಾರತೀಯ ಗ್ರಾಹಕರಲ್ಲಿ ನೆಚ್ಚಿನ ವಿಭಾಗ), ಸುಜುಕಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯಾಗಿದ್ದು, ಇದು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಇತರ ಕಾಂಪ್ಯಾಕ್ಟ್ ಎಸ್‍ಯುವಿಗಳಿಗಿಂತ ಸ್ವಲ್ಪ ಕಡಿಮೆ ಪ್ರಾಯೋಗಿಕ ಮತ್ತು ಹೆಚ್ಚು ಉದ್ದೇಶಿತವಾಗಿದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಸುಜುಕಿ ಜಿಮ್ನಿ ಬಿಡುಗಡೆಯಾದ ಇತರ ಮಾರುಕಟ್ಟೆಗಳಲ್ಲಿ ಹೆಚ್ಚು ಯಶಸ್ವಿಯಾಗಿದೆ ಮತ್ತು ಹೆಚ್ಚು ರೇಟಿಂಗ್ ಪಡೆದಿದೆ. ಇದೀಗ ಸುಜುಕಿ ಕಂಪನಿಯು ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಅನ್ನು ಬ್ರೆಜಿಲ್‌ನಲ್ಲಿ ಅನಾವರಣಗೊಳಿಸಿದೆ. ಹೆಚ್ಚು ಆಫ್-ರೋಡ್ ಫೋಕಸ್ಡ್ ಎಸ್‍ಯುವಿಯಾಗಿ ವಿನ್ಯಾಸಗೊಳಿಸಲಾಗಿದ್ದು, ಹೊಸ ಸುಜುಕಿ ಜಿಮ್ನಿ 4ಸ್ಪೋರ್ಟ್ ಉತ್ಪಾದನೆಯು ಕೇವಲ 100 ಯುನಿಟ್ ಗಳಿಗೆ ಸೀಮಿತವಾಗಿದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಜಿಮ್ನಿ ಸಿಯೆರಾ, ಹೊಸ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ರನ್ ಮಾದರಿಯ ಬೆಲೆ ಬ್ರೆಜಿಲ್‌ನಲ್ಲಿ R$ 181,990 (ಅಂದಾಜು ರೂ.27.15 ಲಕ್ಷ) ಆಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ಜಿಮ್ನಿಯ ಅತ್ಯಂತ ದುಬಾರಿ ಪುನರಾವರ್ತನೆಯಾಗಿದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಹೊಸ ಸುಜುಕಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ನೀರಿನ ವೇಡಿಂಗ್ ಸಾಮರ್ಥ್ಯವನ್ನು 600 ಎಂಎಂ ಹೆಚ್ಚಿಸುತ್ತದೆ. ಹೊಸ ಸೀಮಿತ ಆವೃತ್ತಿಯು ಮ್ಯಾಟ್ ಬ್ಲ್ಯಾಕ್ ಬಣ್ಣದ ರಾಕ್‌ಸ್ಲೈಡರ್‌ನೊಂದಿಗೆ ಬರುತ್ತದೆ. ಇದು ಪಕ್ಕದ ಹಂತವಾಗಿ ಕಾರ್ಯನಿರ್ವಹಿಸುವ ಒಂದು ಪರಿಕರವಾಗಿದೆ ಮತ್ತು ಕಂದರಗಳು ಮತ್ತು ಬಂಡೆಗಳನ್ನು ದಾಟುವಂತಹ ಕಠಿಣ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಬಾಡಿಯನ್ನು ಡೆಂಟ್‌ಗಳಿಂದ ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಈ ಎಸ್‍ಯುವಿಯು ನೀಲಿ ಬಣ್ಣದಲ್ಲಿ ಪೂರ್ಣಗೊಳಿಸಿದ ನಾಲ್ಕು ಟೋ ಹುಕ್ಕ್ ಗಳನ್ನು ಪಡೆಯುತ್ತದೆ, ಮ್ಯಾಟ್ ಬ್ಲ್ಯಾಕ್ ಮತ್ತು ಬ್ಲ್ಯಾಕ್ ಸ್ಕಿಡ್-ಪ್ಲೇಟ್‌ನಲ್ಲಿ ರೂಫ್ ರ್ಯಾಕ್. ಹೊಂದಿದೆ, ಸುಜುಕಿ ಜಿಮ್ನಿ 4ಸ್ಪೋರ್ಟ್ ತಿಳಿ ನೀಲಿ ಬಣ್ಣದ ಟ್ರೇಲರ್‌ಗಳು, ಕಪ್ಪು ಬಣ್ಣದ ರೂಫ್, ಡ್ ಮೋಲ್ಡಿಂಗ್‌ಗಳು, ಡೋರುಗಳ ಮೇಲೆ ನೀಲಿ ಬಾಹ್ಯರೇಖೆಗಳೊಂದಿಗೆ ಕಪ್ಪು 4ಸ್ಪೋರ್ಟ್ ಬ್ಯಾಡ್ಜ್‌ಗಳನ್ನು ಹೊಂದಿವೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಹುಡ್ ಬಳಿ ಮತ್ತು ಸ್ನಾರ್ಕೆಲ್‌ನ ಮೇಲ್ಭಾಗದಲ್ಲಿ ನೀಲಿ ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ. ಇದು 215/75 R15 ಪಿರೆಲಿ ಸ್ಕಾರ್ಪಿಯನ್ MTR "ಮಡ್ಡಿ" ಟೈರ್‌ಗಳೊಂದಿಗೆ 15-ಇಂಚಿನ ಬ್ಲ್ಯಾಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಕ್ಯಾಬಿನ್ ಸ್ಟೀರಿಂಗ್ ವೀಲ್, ಸೀಟುಗಳು ಮತ್ತು ಸೈಡ್ ಏರ್ ವೆಂಟ್‌ಗಳ ತಿಳಿ ನೀಲಿ ಥೀಮ್ ಅನ್ನು ಸಹ ಹೊಂದಿದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಹೊಸ ಲಿಮಿಟೆಡ್ ಎಡಿಷನ್ ಜಿಮ್ನಿಯು 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 138 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಸುಜುಕಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಸಿಲ್ಕ್ ಸಿಲ್ವರ್, ಗ್ರೇ, ಕಪ್ಪು, ಕೈನೆಟಿಕ್ ಯೆಲ್ಲೋ ಮತ್ತು ವೈಟ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಇನ್ನು ಪ್ರಸ್ತುತ ಬಾರತದಲ್ಲಿ ಕಂಪನಿಯು ತನ್ನ ಗುರುಗ್ರಾಮ್ ಸ್ಥಾವರದಲ್ಲಿ ಮೂರು-ಡೋರಿನ ಜಿಮ್ನಿ ಎಸ್‍ಯುವಿಯನ್ನು ತಯಾರಿಸುತ್ತದೆ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ. ಈ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಈ ಜಿಮ್ನಿ ಮಾದರಿಯು ಈ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಪಡೆಯಬಹುದು; ಆದೆರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ 3-ಡೋರಿನ ಅಥವಾ 5-ಡೋರ್ ಜಿಮ್ನಿಯನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಒಂದು ವೇಳೆ ಭಾರತದಲ್ಲಿ ಜಿಮ್ನಿಯನ್ನು ಬಿಡುಗಡೆಗೊಳಿಸಿದರೆ, 5-ಡೋರ್ ಜಿಮ್ನಿ ಬಿಡುಗಡೆಯಾಗಬಹುದು. ಇದು ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿರುತ್ತದೆ. ಈ ಆಫ್-ರೋಡ್ ಎಸ್‍ಯುವಿಯು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗದಲ್ಲಿ ಇರಿಸಬಹುದು. ಜಿಮ್ನಿ 5-ಡೋರ್ ಎಸ್‍ಯುವಿಯ ವ್ಹೀಲ್‌ಬೇಸ್ ಮಹೀಂದ್ರಾ ಥಾರ್‌ಗಿಂತ 100 ಎಂಎಂ ಉದ್ದವಾಗಿರುತ್ತದೆ.

ಆಫ್-ರೋಡ್ ಪ್ರಿಯರಿಗಾಗಿ ಜಿಮ್ನಿ 4ಸ್ಪೋರ್ಟ್ ಲಿಮಿಟೆಡ್ ಎಡಿಷನ್ ಪರಿಚಯಿಸಿದ ಸುಜುಕಿ

ಒಟ್ಟಾರೆಯಾಗಿ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ನೊಂದಿಗೆ ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ. ಈ ಸುಜುಕಿ ಜಿಮ್ನಿ ಎಸ್‍ಯುವಿಯು ಯುರೋಪಿಯನ್ ದೇಶಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ, ಅಲ್ಲದೇ ಸುಜುಕಿ ಜಿಮ್ನಿ ತವರು ಜಪಾನ್ ನಲ್ಲಿಯು ಬೇಡಿಕೆ ಹೆಚ್ಚಾಗಿದೆ.

Most Read Articles

Kannada
English summary
Suzuki introduced new jimny 4sport limited edition details
Story first published: Wednesday, July 27, 2022, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X