ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ಭಾರತದಲ್ಲಿ ತನ್ನ ಹೊಸ ಸೆಲೆರಿಯೊ (Celerio) ಹ್ಯಾಚ್‌ಬ್ಯಾಕ್ ಕಾರ್ ಅನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ, ಕಾರು ತಯಾರಕರು ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಬಜೆಟ್ ಹ್ಯಾಚ್‌ಬ್ಯಾಕ್ ಸೆಲೆರಿಯೊವನ್ನು ಬಿಡುಗಡೆಗೊಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಹೊಸ ಸೆಲೆರಿಯೊವನ್ನು ಭಾರತದಲ್ಲಿ ಬ್ರ್ಯಾಂಡ್‌ನ ಉತ್ಪಾದನಾ ಕೇಂದ್ರದಿಂದ ತಯಾರಿಸಲಾಗಿದೆ ಮತ್ತು ರಫ್ತು ಮಾಡಲಾಗುತ್ತದೆ. ಈ ಸೆಲೆರಿಯೊ ಕಾರಿನಲ್ಲಿ 1.0 ಲೀಟರ್ ಕೆ 10ಸಿ ಸರಣಿಯ 3 ಸಿಲಿಂಡರ್ ಡ್ಯೂಯಲ್ ಜೆಟ್ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ ಗರಿಷ್ಠ 66b ಬಿ‌ಹೆಚ್‌ಪಿ ಪವರ್ ಹಾಗೂ 89 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸೆಲೆರಿಯೊ ಐದು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಹೊಸ ಸೆಲೆರಿಯೊ ಕಾರು ಸಹ ಸ್ವಿಫ್ಟ್ ಹಾಗೂ ಬಲೆನೊ ಕಾರುಗಳಂತೆ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರಂ ಅನ್ನು ಆಧರಿಸಿದೆ. ಹೊಸ ಮಾದರಿಯು ಹಳೆಯ ಮಾದರಿಗಿಂತ ಹೆಚ್ಚು ಉದ್ದ ಹಾಗೂ ಅಗಲವಾಗಿದೆ. ಇದರ ವ್ಹೀಲ್‌ಬೇಸ್ ಸಹ ಮೊದಲಿಗಿಂತ ಉದ್ದವಾಗಿದ್ದು, ಕಾರಿನೊಳಗೆ ಮೊದಲಿಗಿಂತ ಹೆಚ್ಚು ಸ್ಪೇಸ್ ಅನ್ನು ಹೊಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಹೊಸ ಕಾರು ಒಟ್ಟು ಏಳು ವೆರಿಯೆಂಟ್‌‌ಗಳೊಂದಿಗೆ ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ, ಆಕರ್ಷಕವಾದ ಗ್ರಿಲ್, ರಿಫ್ರೆಶ್‌ ಫ್ರಂಟ್ ಫಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರವಾದ ಹೆಡ್‌ಲ್ಯಾಂಪ್‌ಗಳು, ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದುವ ಸಿಗ್ನೇಚರ್ ಲೋಗೋ ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಹೊಸ ಸೆಲೆರಿಯೊ ಕಾರಿನ ಲೋ ಟ್ರಿಮ್‌ಗಳು ಸಾಧಾರಣ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದ್ದು, ಉನ್ನತ ರೂಪಾಂತರಗಳು ಬ್ಲ್ಯಾಕ್ ಬಣ್ಣದ 15-ಇಂಚಿನ ಅಲಾಯ್ ವ್ಹೀಲ್ ಜೋಡಣೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಇಂಟಿರಿಯರ್ ಒಳಗೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಇನ್ನು ಈ ಹೊಸ ಕಾರಿನ ಇಂಟಿರಿಯರ್ ನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಕಾಲ್ ಹಾಗೂ ಮ್ಯೂಸಿಕ್ ಅಸಿಸ್ಟ್‌ ಹೊಂದಿರುವ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಸಿಂಗಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸರ್ಕ್ಯುಲರ್ ಡಿಜಿಟಲ್ ಸ್ಕ್ರೀನ್ ಅನ್ನು ಒಳಗೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಈ ಕಾರಿನ ಹೆಡ್‌ಲೈಟ್‌ ವಿನ್ಯಾಸವನ್ನು ಅಪ್ ಡೇಟ್ ಮಾಡಲಾಗಿದೆ. ಇದರ ಜೊತೆಗೆ ಈ ಕಾರು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕ ಹೊಂದಿರುವ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನಂತಹ ಹಲವಾರು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳನ್ನು ಪಡೆದುಕೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಇದರ ಹೊರತಾಗಿ ಈ ಕಾರಿನಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಜೊತೆಗೆ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ ಸಹ ನೀಡಲಾಗಿದೆ. ಸುಜುಕಿ ಸೆಲೆರಿಯೊದಲ್ಲಿ ಡೋರ್ ರಿಕ್ವೆಸ್ಟ್ ಸ್ವಿಚ್ ಕೂಡ ನೀಡಲಾಗಿದೆ. ಹೊಸ ಮಾರುತಿ ಸೆಲೆರಿಯೊದಲ್ಲಿ ಬೂಟ್ ಸ್ಪೇಸ್ ಅನ್ನು ಈಗ 313 ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಕಂಪನಿಯು ಹೊಸ ಸೆಲೆರಿಯೊ ಕಾರಿನಲ್ಲಿ ಸುರಕ್ಷತಾ ಫೀಚರ್ ಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಹೊಸ ಸೆಲೆರಿಯೊ ಕಾರಿನಲ್ಲಿ ಡ್ರೈವರ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್-ಇಬಿಡಿ, ಇಂಜಿನ್ ಇಮೊಬಿಲೈಜರ್, ಹಿಂಭಾಗದ ಬಾಗಿಲುಗಳಲ್ಲಿ ಚೈಲ್ಡ್ ಪ್ರೂಫ್ ಲಾಕ್, ಸ್ಪೀಡ್ ಅಲರ್ಟ್ ಸಿಸ್ಟಂ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ಕೂಡ ಒಳಗೊಂಡಿದೆ,

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಹೊಸ ಸೆಲೆರಿಯೊದಲ್ಲಿ ಕಾರು 3,695 ಎಂಎಂ ಉದ್ದ, 1,655 ಎಂಎಂ ಅಗಲ, 1,555 ಎಂಎಂ ಎತ್ತರ ಮತ್ತು 2,435 ಎಂಎಂ ವ್ಹೀಲ್ ಬೆಸ್ ಹೊಂದಿದ್ದು, ಹಳೆಯ ಮಾದರಿಗಿಂತ ಹೊಸ ಕಾರು 55 ಎಂಎಂ ಅಗಲ ಮತ್ತು 10 ಎಂಎಂ ವ್ಹೀಲ್ ಬೆಸ್ ಮತ್ತು 5 ಎಂಎಂ ಹೆಚ್ಚುವರಿ ಎತ್ತರದೊಂದಿಗೆ 170 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಮಾರುತಿ ಸುಜುಕಿ ಇಂಡಿಯಾ 2022ರ ಫೆಬ್ರವರಿ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ಇದರ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು 164,056 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 164,469 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸ್ಥಿರವಾಗಿದೆ. 2022ರ ಜನವರಿ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 154,379 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ. 6.2 ಪ್ರತಿಶತದಷ್ಟು ತಿಂಗಳ-ಮಾಸಿಕ ಬೆಳವಣಿಗೆಯನ್ನು ಕಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮೇಡ್ ಇನ್ ಇಂಡಿಯಾ ಸುಜುಕಿ ಸೆಲೆರಿಯೊ ಕಾರು ಬಿಡುಗಡೆ

ಇನ್ನು ಎಲೆಕ್ಟ್ರಾನಿಕ್ ಯುನಿಟ್ ಗಳ ಕೊರತೆಯು ಉತ್ಪಾದನೆಯ ಮೇಲೆ ಅಲ್ಪ ಪರಿಣಾಮ ಬೀರುತ್ತಿದೆ ಎಂದು ಕಾರು ತಯಾರಕರು ಹೇಳಿದರು. ದೇಶೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಕಳೆದ ತಿಂಗಳು ಭಾರತದಲ್ಲಿ ಮಾರುತಿ ಸುಜುಕಿಯ ಒಟ್ಟು ಮಾರಾಟ, ಪಿವಿ ಮತ್ತು ಎಲ್ಸಿವಿ ವಿಭಾಗದಲ್ಲಿ ಮಾರಾಟವು 137,607 ಯುನಿಟ್‌ಗಳಷ್ಟಿದೆ.

Most Read Articles

Kannada
English summary
Suzuki launched made in india celerio hatchback in south africa market details
Story first published: Friday, March 11, 2022, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X