ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಸುಜುಕಿ ಇಂಡೋನೇಷ್ಯಾದಲ್ಲಿ ತನ್ನ ಎಕ್ಸ್‌ಎಲ್7 ಎಂಪಿವಿಯ ಟಾಪ್-ಆಫ್-ಲೈನ್ ಆಲ್ಫಾ ಎಫ್ಎಫ್ ರೂಪಾಂತರವನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಮಾದರಿಯು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಇಂಡೋನೇಷ್ಯಾದಲ್ಲಿ ಎಫ್ಎಫ್ ಎಂದರೆ 'ಫೈನಾಸ್ಟ್ ಫಾರ್ಮ್' ಎಂದರ್ಥವಾಗಿದೆ, ಇಂಡೋನೇಷ್ಯಾದಲ್ಲಿ ಜಕಾರ್ತಾದಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಮೋಟಾರ್ ಶೋ (IIMS) ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ತನ್ನ ಚೊಚ್ಚಲ ಪ್ರವೇಶವನ್ನು ಮಾಡಿದೆ.ಕೆಲವು ತಿಂಗಳ ಹಿಂದೆ 2021 GIIAS ನಲ್ಲಿ ಪ್ರದರ್ಶಿಸಲಾದ ಸುಜುಕಿ ಎರ್ಟಿಗಾ ಸ್ಪೋರ್ಟ್ ಎಫ್ಎಫ್ ನಂತಹ ನವೀಕರಣಗಳ ಸೆಟ್ ಅನ್ನು ಇದು ಪಡೆಯುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಟಾಪ್-ಸ್ಪೆಕ್ ಆಲ್ಫಾ ಎಫ್‌ಎಫ್ ಟ್ರಿಮ್‌ನ ಬೆಲೆಗಳು, ಇದರ ಮ್ಯಾನುವಲ್ ರೂಪಾಂತರಕ್ಕಾಗಿ ಐಡಿಆರ್ 294.2 ಮಿಲಿಯನ್ (ರೂ.15.52 ಲಕ್ಷ) ದಿಂದ ಪ್ರಾರಂಭವಾಗುತ್ತವೆ ಮತ್ತು ಆಟೋಮ್ಯಾಟಿಕ್ ರೂಪಾಂತರಕ್ಕಾಗಿ ಐಡಿಆರ್ 305.2 ಮಿಲಿಯನ್ (ರೂ.16.10 ಲಕ್ಷ) ಆಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಹೊಸ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕ್ಯಾಬಿನ್‌ನ ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ನವೀಕರಣಗಳೊಂದಿಗೆ ಸ್ಪೋರ್ಟಿಸ್ಟ್ ಆಗಿ ಕಾಣುತ್ತದೆ.ಒಟ್ಟಾರೆ ವಿನ್ಯಾಸವು ಪ್ರಸ್ತುತ ಮಾದರಿಯಂತೆಯೇ ಉಳಿದಿದೆಯಾದರೂ, ಮುಂಭಾಗದ ಗ್ರಿಲ್, ಕೆಳಗಿನ ಮುಂಭಾಗದ ಬಂಪರ್, ಫಾಗ್ ಲ್ಯಾಂಪ್, ವ್ಹೀಲ್ ಅರ್ಚಾರ್ ಮತ್ತು ಡೋರ್ ಸಿಲ್‌ಗಳ ಮೇಲಿನ ಕ್ಲಾಡಿಂಗ್‌ಗಳನ್ನು ಹೊಂದಿವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಇದರೊಂದಿಗೆ ORVM ಗಳು ಮತ್ತು ಪಿಲ್ಲರ್‌ಗಳಿಗೆ ಬ್ಲ್ಯಾಕ್ಡ್-ಔಟ್ ಪ್ಯಾನೆಲ್‌ಗಳ ರೂಪದಲ್ಲಿ ಸ್ಪೋರ್ಟಿ ಸ್ಪರ್ಶವನ್ನು ಪಡೆಯುತ್ತದೆ. ಇದು ಸಂಪೂರ್ಣ ಬ್ಲ್ಯಾಕ್-ಔಟ್ ರೂಫ್ ಮತ್ತು ರೂಫ್-ಮೌಂಟೆಡ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ, ಇದು ಅದರ ಸ್ಪೋರ್ಟಿ ಆಕರ್ಷಣೆಯನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಈ ಸ್ಪೋರ್ಟಿ ಬ್ಲ್ಯಾಕ್ಡ್-ಔಟ್ ಬಿಟ್‌ಗಳು ಮುಂಭಾಗದ ಬಂಪರ್, ವಿಂಗ್ ಮಿರರ್‌ಗಳು, ಡೋರ್ ಸಿಲ್ ಕ್ಲಾಡಿಂಗ್‌ಗಳು ಮತ್ತು ಸ್ಪಾಯ್ಲರ್ ಲಿಪ್‌ನೊಳಗೆ ಇರುವ ಏರ್ ಡ್ಯಾಮ್‌ನಲ್ಲಿ ಕೆಂಪು ಅಸ್ಸೆಂಟ್ ಗಳನ್ನು ಹೊಂದಿವೆ. ಇತರ ಬಾಹ್ಯ ಮುಖ್ಯಾಂಶಗಳು ರೂಫ್ ರೈಲ್ ಗಳು, ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳು ಸ್ಟಾರ್-ಸ್ಟಡ್ಡ್ ಪ್ಯಾಟರ್ನ್ ಮತ್ತು ಎಲ್-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಗ್ಲಾಸ್ ಬ್ಲ್ಯಾಕ್‌ನ ಸ್ಪೋರ್ಟಿ ಟಚ್‌ಗಳನ್ನು ಸೇರಿಸುವುದರ ಹೊರತಾಗಿಯೂ, ಸುಜುಕಿಯು ಡೋರ್ ಹ್ಯಾಂಡಲ್‌ಗಳು, ಫ್ರಂಟ್ ಗ್ರಿಲ್ ಲೋಗೋ ಮತ್ತು ಕ್ಯಾರೆಕ್ಟರ್ ಲೈನ್, ಟೈಲ್‌ಗೇಟ್‌ನಲ್ಲಿ ಪರವಾನಗಿ ಪ್ಲೇಟ್ ಸುತ್ತುವರೆದಿರುವ ಮತ್ತು ಎಕ್ಸ್‌ಎಲ್7 ಬ್ರ್ಯಾಂಡಿಂಗ್‌ನಂತಹ ಭಾಗಗಳಲ್ಲಿ ಸಾಕಷ್ಟು ಪ್ರಮಾಣದ ಕ್ರೋಮ್ ಅನ್ನು ಒದಗಿಸಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಟೈಲ್‌ಗೇಟ್ ಕ್ರೋಮ್‌ನಲ್ಲಿ ಅಲಂಕೃತವಾದ ಸೀಮಿತ ಬ್ಯಾಡ್ಜಿಂಗ್ ಅನ್ನು ಸಹ ಹೊಂದಿದೆ, ಇದು ಇಂಡೋನೇಷ್ಯಾದಲ್ಲಿ ಕೇವಲ 150 ಯೂನಿಟ್ ಎಂಪಿವಿಗಳನ್ನು ಮಾರಾಟ ಮಾಡುವುದರೊಂದಿಗೆ ಸೀಮಿತ ಆವೃತ್ತಿಯ ಮಾದರಿಯಾಗಿದೆ ಎಂದು ಸೂಚಿಸುತ್ತದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಹೊಸ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಒಳಭಾಗದಲ್ಲಿ, ಕ್ಯಾಬಿನ್ ಒಂದು ಸ್ಪೋರ್ಟಿ ಆಲ್-ಬ್ಲ್ಯಾಕ್ ಕ್ಯಾಬಿನ್ ಅನ್ನು ಪಡೆಯುತ್ತದೆ, ಇದು ಸೀಟ್ ಅಪ್ಹೋಲ್ಸ್ಟರಿ ಮತ್ತು ನಾಬ್ ಎನ್ಕೇಸಿಂಗ್‌ಗಳ ಮೇಲೆ ಕೆಂಪು ಅಸ್ಸೆಂತ್ ಗಳೊಂದಿಗೆ ಅಲಂಕರಿಸಲ್ಪಟ್ಟಿದೆ. ಸೀಟುಗಳನ್ನು ಇಕೋ ಲೆದರ್ ಅಂಶಗಳಿಂದ ಕೂಡಿದೆ, ಸೌಂಡ್‌ಸ್ಟ್ರೀಮ್‌ನಿಂದ ಡಿಜಿಟಲ್ ಸೌಂಡ್ ಪ್ರೊಸೆಸರ್ ಹೊಂದಿರುವ ಹೊಸ ಸೌಂಡ್ ಸಿಸ್ಟಮ್, ಸ್ಮಾರ್ಟ್ ಡಿಜಿಟಲ್ ಕ್ಲೈಮೇಟ್ ಕಂಟ್ರೋಲ್ ಮತ್ತು ಲೆದರ್ ಸುತ್ತಿದ ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಪ್ಯಾಕೇಜ್‌ನಲ್ಲಿ ಒಳಗೊಂಡಿರುವ ಇತರ ಗಮನಾರ್ಹ ವೈಶಿಷ್ಟ್ಯಗಳಾಗಿವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಈ ಎಕ್ಸ್‌ಎಲ್7 ಪವರ್‌ಟ್ರೇನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆಯ ಕುರಿತು ಮಾಹಿತಿ ಇಲ್ಲ. ಮಾರುತಿ ಸುಜುಕಿ ಎಕ್ಸ್‌ಎಲ್6 ಎಂಪಿವಿಯಲ್ಲಿ ಅದೇ 1.5-ಲೀಟರ್ 4-ಸಿಲಿಂಡರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್‌ ಅನ್ನು ಎಕ್ಸ್‌ಎಲ್7 ಹೊಂದಿರಲಿದೆ. ಈ ಎಂಜಿನ್ 103 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಇದರಲ್ಲಿ ಫೇಸ್‌ಲಿಫ್ಟ್‌ಗಳು, ಹೊಸ ತಲೆಮಾರಿನ ಆವೃತ್ತಿಗಳು ಮತ್ತು ಹೊಸ ಕಾರುಗಳನ್ನು ಒಳಗೊಂಡಿದೆ. ಇದರಲ್ಲಿ ಎಕ್ಸ್‌ಎಲ್6 ಎಂಪಿವಿ ಮಾದರಿಯು ಕೂಡ ಒಳಗೊಂಡಿದೆ. ಈ ಮಾರುತಿ ಸುಜುಕಿ ಎಕ್ಸ್‌ಎಲ್6 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಂಪಿವಿ ಮಾದರಿಗಳಲ್ಲಿ ಒಂದಾಗಿದೆ. ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರನ್ನು 2022ರ ಏಪ್ರಿಲ್ ತಿಂಗಳ 3ನೇ ಅಥವಾ 4ನೇ ವಾರದಲ್ಲಿ ಬಿಡುಗಡೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ನವೀಕರಿಸಿದ ಮಾದರಿಯನ್ನು ನೆಕ್ಸಾ ಪ್ರೀಮಿಯಂ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡುವುದನ್ನು ಮುಂದುವರಿಸಲಾಗುತ್ತದೆ. ಸುಜುಕಿಯು 2019 ರಲ್ಲಿ ಹೊಸ ಎಕ್ಸ್‌ಎಲ್6 ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿತ್ತು. ಇದು ಮೂಲತಃ ಎರ್ಟಿಗಾದ ಪ್ರೀಮಿಯಂ ಮತ್ತು ಹೆಚ್ಚು ಒರಟಾದ 6-ಸೀಟರ್ ಆವೃತ್ತಿಯಾಗಿದೆ. 2022ರ ಮಾರುತಿ ಸುಜುಕಿ ಎಕ್ಸ್‌ಎಲ್6 ಫೇಸ್‌ಲಿಫ್ಟ್ಸಣ್ಣ ನವೀಕರಣಗಳನ್ನು ಮಾತ್ರ ಹೊಂದಿದೆ. ಈ ನವೀಕರಣಗಳು ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಸ್ವಲ್ಪ ರಿಫ್ರೆಶ್ ಮಾಡಿದ ಮುಂಭಾಗದ ಗ್ರಿಲ್ ಮತ್ತು ಹೊಸ ಅಲಾಯ್ ವ್ಹೀಲ್ ಗಳಿಗೆ ಸೀಮಿತವಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪೋರ್ಟಿ ಲುಕ್‍‍‍ನಲ್ಲಿ ಸುಜುಕಿ ಎಕ್ಸ್‌ಎಲ್7 ಆಲ್ಫಾ ಎಫ್ಎಫ್ ಕಾರು ಬಿಡುಗಡೆ

ಹೊಸ ಮಾರುತಿ ಸುಜುಕಿ ಎಕ್ಸ್‌ಎಲ್6 2022 ರ ಮಧ್ಯದಲ್ಲಿ ಆರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಮಾರುತಿ ಸುಜುಕಿಯ ಯೋಜನೆಯ ಭಾಗವಾಗಿದೆ. ಇತ್ತೀಚಿನ ನವೀಕರಣವು ಮಾರುತಿ ಸುಜುಕಿ ಎಕ್ಸ್‌ಎಲ್6ಗೆ ಎಂಪಿವಿಯು ಹೊಸ ಪ್ರತಿಸ್ಪರ್ಧಿಗಳ ವಿರುದ್ಧ ಉತ್ತಮ ಪೈಪೋಟಿ ನೀಡಲು ಅವಕಾಶವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

Most Read Articles

Kannada
English summary
Suzuki launched maruti ertiga xl6 based new xl7 alpha ff details
Story first published: Monday, April 4, 2022, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X