ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸುಜುಕಿ ತನ್ನ ನ್ಯೂ ಜನರೇಷನ್ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿಯನ್ನು ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಮಾರುತಿ ಸುಜುಕಿ ಇತ್ತೀಚೆಗೆ ಭಾರತದಲ್ಲಿ ಈ ಎಸ್-ಕ್ರಾಸ್ ಉತ್ಪಾದನೆ ಮತ್ತು ಮಾರಾಟವನ್ನು ನಿಲ್ಲಿಸಿದೆ. ಆದರೆ ಇನ್ನೂ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಈ ಕ್ರಾಸ್‌ಒವರ್‌ಗೆ 2021 ರಲ್ಲಿ ಪ್ರಮುಖ ಫೇಸ್‌ಲಿಫ್ಟ್ ನೀಡಲಾಯಿತಾದರೂ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರಲಿಲ್ಲ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಈ ಹಿಂದೆ ಸುಜುಕಿ S-ಕ್ರಾಸ್ ಅನ್ನು ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ನೀಡಲಾಗುತ್ತಿತ್ತು. ಇದೀಗ ಸಂಪೂರ್ಣ ಹೈಬ್ರಿಡ್ ಎಂಜಿನ್ ಅನ್ನು ಆಟೋ ಗೇರ್ ಶಿಫ್ಟ್‌ನೊಂದಿಗೆ ನೀಡಲಾಗುತ್ತದೆ. ಆದರೆ ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿರುತ್ತದೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಸುಜುಕಿಯು ಆಟೋ, ಸ್ಪೋರ್ಟ್, ಸ್ನೋ ಮತ್ತು ಲಾಕ್ ಮೋಡ್‌ಗಳನ್ನು ನೀಡುವ ಆಲ್‌ಗ್ರಿಪ್ ಫೋರ್-ವೀಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಕಾರನ್ನು ಸಜ್ಜುಗೊಳಿಸಿದೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

1.4-ಲೀಟರ್ ಬೂಸ್ಟರ್‌ಜೆಟ್ ಮೈಲ್ಡ್ ಹೈಬ್ರಿಡ್ ಎಂಜಿನ್ 129 bhp ಗರಿಷ್ಠ ಪವರ್ ಮತ್ತು 235 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 195 ಕಿಮೀ. ಇದ್ದು, 9.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ ಆಗಿದೆ. ಇದು ಗರಿಷ್ಠ 115 bhp ಪವರ್ ಮತ್ತು 138 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಗೇರ್‌ಬಾಕ್ಸ್‌ನ ಮ್ಯಾನುವಲ್ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ಯಾಡಲ್ ಶಿಫ್ಟರ್‌ಗಳೂ ಇವೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಇದರ ಗರಿಷ್ಠ ವೇಗ ಗಂಟೆಗೆ 175 ಕಿ.ಮೀ. ಇದ್ದು, 12.7 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗವನ್ನು ತಲುಪಲಿದೆ. ಕಾರು 17-ಇಂಚಿನ ಅಲಾಯ್ ವೀಲ್‌ಗಳು, ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್, ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಕೀಲೆಸ್ ಎಂಟ್ರಿ, ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಮತ್ತು ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ವೈಶಿಷ್ಟ್ಯಗಳನ್ನು ಪಡೆದಿದೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಆಫರ್‌ನಲ್ಲಿರುವ ಇತರ ವೈಶಿಷ್ಟ್ಯಗಳನ್ನು ನೊಡುವುದಾದರೆ ಹೀಟಿಂಗ್ ಫ್ರಂಟ್ ಸೀಟ್‌ಗಳು, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿವೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಉಳಿದಂತೆ ಸೇಫ್ಟಿ ಫೀಚರ್ಸ್ ವಿಷಯಕ್ಕೆ ಬಂದರೆ ಏಳು ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಸ್ಪೀಡ್ ಲಿಮಿಟರ್‌ನೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಟ್ರಾಫಿಕ್ ಸೈನ್ ರೆಕಗ್ನಿಷನ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸುಜುಕಿ ಎಸ್-ಕ್ರಾಸ್ ಒಳಗೊಂಡಿದೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಅಲ್ಟ್ರಾ ಟ್ರಿಮ್ ಆಲ್‌ಗ್ರಿಪ್ ಸೆಲೆಕ್ಟ್ ಫೋರ್-ವೀಲ್ ಡ್ರೈವ್, 17-ಇಂಚಿನ ಪಾಲಿಶ್ ಮಾಡಿದ ಅಲಾಯ್ ವೀಲ್‌ಗಳು, ಲೆದರ್ ಸೀಟ್ ಅಪ್ಹೋಲ್ಸ್ಟರಿ, 9-ಇಂಚಿನ ಸ್ಕ್ರೀನ್‌ನೊಂದಿಗೆ ಸಂಯೋಜಿತ ಆನ್-ಬೋರ್ಡ್ ನ್ಯಾವಿಗೇಷನ್, ಪನೋರಮಿಕ್ ಸ್ಲೈಡಿಂಗ್ ಸನ್‌ರೂಫ್, ಹೆಚ್ಚಿನ ಡ್ರೈವರ್ ಸುರಕ್ಷತಾ ವೈಶಿಷ್ಟ್ಯಗಳು ಮತ್ತು 360-ವೀವ್ ಕ್ಯಾಮೆರಾವನ್ನು ಸಹ ಪಡೆದಿದೆ.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಮಾರುತಿ ಸುಜುಕಿ ಇತ್ತೀಚೆಗಷ್ಟೇ ಸದ್ದು ಮಾಡದೆ ಎಸ್‌-ಕ್ರಾಸ್ ಅನ್ನು ಸ್ಥಗಿತಗೊಳಿಸಿದೆ. ಇದನ್ನು 2015 ರಲ್ಲಿ ಮಾರುತಿ ತನ್ನ ಮೊದಲ ಪ್ರೀಮಿಯಂ ಕ್ರಾಸ್ಒವರ್ ಆಗಿ ಭಾರತದಲ್ಲಿ ಪರಿಚಯಿಸಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಮೊದಲು ಎಸ್-ಕ್ರಾಸ್ ಬಿಎಸ್-4 ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದ್ದರಿಂದ, ಬಿಎಸ್-6 ಮಾಲಿನ್ಯ ನಿಯಮ ಜಾರಿಯಾದ ವೇಳೆ ಸ್ಥಗಿತಗೊಳಿಸಲಾಗಿತ್ತು.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಪೆಟ್ರೋಲ್ ಎಂಜಿನ್ ಬಿಎಸ್-6 ಮಾರುತಿ ಸುಜುಕಿ ಎಎಸ್‌-ಕ್ರಾಸ್‌ನಲ್ಲಿ s-cros ಫೀಚರ್ ಲೋಡ್ ಆಗಿದ್ದರೂ ಮಾರಾಟದಲ್ಲಿ ವಿಫಲವಾಯಿತು. ಈ ಮಾರುತಿ ಸುಜುಕಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿಯನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ಬಿಎಸ್-6 ಮಾರುತಿ ಎಸ್-ಕ್ರಾಸ್ ಕಾರಿನಲ್ಲಿ ಹೊಸ ಎಂಜಿನ್ ಆಯ್ಕೆಯ ಜೊತೆ ವಿನ್ಯಾಸದಲ್ಲಿ ಮತ್ತು ಫೀಚರ್ ಗಳನ್ನು ಕೂಡ ಅಪ್ದೇಟ್ ಮಾಡಿ ಬಿಡುಗಡೆಗೊಳಿಸಿತ್ತು. ಇದೀಗ ಮಾರುತಿ ಸುಜುಕಿ ಎಕ್ರಾಸ್‌ಗೆ ಬದಲಿಯಾಗಿ ಗ್ರ್ಯಾಂಡ್ ವಿಟಾರಾವನ್ನು ಪರಿಚಯಿಸಿತು.

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸುಜುಕಿ ಎಸ್-ಕ್ರಾಸ್‌ನ ಸಂಪೂರ್ಣ ಹೈಬ್ರಿಡ್ ಆವೃತ್ತಿ ಬಿಡುಗಡೆ

ವಿಟಾರಾ ಬಿಡುಗಡೆಯ ನಂತರ, ಮಾರುತಿ ತನ್ನ ಪ್ರೀಮಿಯಂ ನೆಕ್ಸಾ ಶ್ರೇಣಿಯಿಂದ ಎಸ್‌-ಕ್ರಾಸ್ ಅನ್ನು ಕೈಬಿಟ್ಟಿದೆ. ಇದರೊಂದಿಗೆ ನೆಕ್ಸಾ ಮೂಲಕ ಮಾರಾಟವಾಗುವ ವಾಹನಗಳ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಅವುಗಳೆಂದರೆ ಇಗ್ನಿಸ್, ಬಲೆನೊ, ಸಿಯಾಜ್, XL6 ಮತ್ತು ಗ್ರಾಂಡ್ ವಿಟಾರಾ.

Most Read Articles

Kannada
English summary
The launch of the full hybrid version of the Suzuki s cross in the international market
Story first published: Thursday, October 27, 2022, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X