ಕೈಗೆಟುಕುವ ಬೆಲೆಗೆ ಬಹುನಿರೀಕ್ಷಿತ ಮಾರುತಿ ಸುಜುಕಿ ಬಲೆನೊ ಕ್ರಾಸ್ ಎಸ್‌ಯುವಿ ಸಿಗುತ್ತೆ..!

ಮುಂಬರಲಿರುವ ಆಟೋ ಎಕ್ಸ್‌ಪೋ 2023 ನಿಜಕ್ಕೂ ದೇಶದ ಅತಿದೊಡ್ಡ ಆಟೋಮೊಬೈಲ್ ಈವೆಂಟ್‌ಗಳಲ್ಲಿ ಒಂದಾಗಿದೆ. ದೇಶ - ವಿದೇಶದ ವಿವಿಧ ವಾಹನ ತಯಾರಿಕ ಕಂಪನಿಗಳು ತಮ್ಮ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಅನಾವರಣಗೊಳಿಸಲಿದ್ದಾರೆ. ಮಾರುತಿ ಸುಜುಕಿ 15ಕ್ಕೂ ಹೆಚ್ಚು ಕಾರುಗಳನ್ನು ಪ್ರದರ್ಶಿಸುತ್ತದೆ ಎಂದು ಹೇಳಲಾಗಿದೆ.

ಮಾರುತಿ ಸುಜುಕಿ ಬಲೆನೊ ಆಧಾರಿತ ಕ್ರಾಸ್‌ಒವರ್ ಎಸ್‌ಯುವಿ, ಬಲೆನೊ 'ಕ್ರಾಸ್' ಅನ್ನು ಆಟೋ ಎಕ್ಸ್‌ಪೋದಲ್ಲಿ ಜಿಮ್ನಿ 5-ಡೋರ್ ಎಸ್‌ಯುವಿ ಜೊತೆಗೆ ಅನಾವರಣ ಮಾಡಬಹುದು. ಮಾರುತಿ ಸುಜುಕಿ ಬಲೆನೊ ಕ್ರಾಸ್ ಬಗ್ಗೆ ಹೇಳುವುದಾದರೆ, ಈ ಕಾರು, YTB ಎಂಬ ಕೋಡ್ ನೇಮ್ ಹೊಂದಿದ್ದು, ಹಲವಾರು ಬಾರಿ ರಸ್ತೆಯಲ್ಲಿ ಪರೀಕ್ಷೆ ನಡೆಸುವಾಗ ಕಂಡು ಬಂದಿದೆ. ಇದಲ್ಲದೆ, ಮಾರುಕಟ್ಟೆಗೆ ಬರಲಿರುವ ಬಲೆನೊ ಕ್ರಾಸ್, ಇತ್ತೀಚೆಗೆ ನವೀಕರಿಸಿದ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಗಿಂತ ಸ್ವಲ್ಪ ಕಡಿಮೆ ಬೆಲೆಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಕೈಗೆಟುಕುವ ಬೆಲೆಗೆ ಬಹುನಿರೀಕ್ಷಿತ ಮಾರುತಿ ಸುಜುಕಿ ಬಲೆನೊ ಕ್ರಾಸ್ ಎಸ್‌ಯುವಿ ಸಿಗುತ್ತೆ..!

ಹೊರಭಾಗ:
ಮುಂಬರುವ ಮಾರುತಿ ಸುಜುಕಿ ಬಲೆನೊ ಕ್ರಾಸ್‌ನ ಸ್ಪೈಡ್ ಚಿತ್ರಗಳನ್ನು ಗಮನಿಸಿದಾಗ, ಈ ಕ್ರಾಸ್‌ಒವರ್ ಎಸ್‌ಯುವಿ ಅಂತಿಮ ಉತ್ಪಾದನಾ ಹಂತದಲ್ಲಿದೆ. ಇದಲ್ಲದೆ, ಮುಂಬರುವ ಬಲೆನೊ ಕ್ರಾಸ್‌ ಕೆಲವು ಗಮನಾರ್ಹ ವಿನ್ಯಾಸದ ವೈಶಿಷ್ಟ್ಯಗಳನ್ನು ಪಡೆಯಲಿದೆ. ರೇಕ್ಡ್ ರೇರ್ ವಿಂಡ್‌ಶೀಲ್ಡ್, ಹೊಸ ಅಲಾಯ್ ವೀಲ್ಸ್, 2 -ಪೀಸ್ ಟೈಲ್ ಲ್ಯಾಂಪ್‌ಗಳು, LED ಹೆಡ್‌ಲ್ಯಾಂಪ್‌ಗಳು, ಹೈ-ಮೌಂಟ್ ಸ್ಟಾಪ್ ಲೈಟ್‌ನೊಂದಿಗೆ ದೊಡ್ಡ ರೇರ್ ಸ್ಪಾಯ್ಲರ್, ಮತ್ತು ದೊಡ್ಡ ಡೋರ್-ಮೌಂಟೆಡ್ ORVMಗಳನ್ನು ಹೊಂದಿರಲಿದೆಯಂತೆ.

ಅಲ್ಲದೆ, ಮಾರುತಿ ಸುಜುಕಿ ವಿನ್ಯಾಸಕರು ಕ್ರಾಸ್‌ಒವರ್‌ನ ರಗಡ್ ಲುಕ್ ಹೆಚ್ಚಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಕಾರಿನ ವಿನ್ಯಾಸದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಮಾರುತಿ ಸುಜುಕಿಯು ಹೊಸ ಬಲೆನೊ ಕ್ರಾಸ್ ಎಸ್‌ಯುವಿಯನ್ನು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಸ್ವಲ್ಪ ಚೌಕಾಕಾರದ ವೀಲ್ ಅರ್ಚೆಸ್ ನೊಂದಿಗೆ ರೆಡಿ ಮಾಡುತ್ತಿದೆ. ಅದರ ಹೊರತಾಗಿ, ಈ ಕಾರು ರಗಡ್ ಲುಕ್ ಹೊಂದಲು ಸುತ್ತಲೂ ಕಪ್ಪು ಕ್ಲಾಡ್ಡಿಂಗ್ ಅನ್ನು ಪಡೆಯಬಹುದು ಎಂದು ನಿರಿಕ್ಷಿಸಲಾಗಿದೆ.

ಒಳಭಾಗ:
ಮುಂಬರುವ ಮಾರುತಿ ಸುಜುಕಿ ಬಲೆನೊ ಕ್ರಾಸ್ ಸ್ವಲ್ಪ ವಿಭಿನ್ನವಾದ ಒಳಾಂಗಣ ವಿನ್ಯಾಸವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ವಾಸ್ತವವಾಗಿ, ಹೊಸ ಮಾರುತಿ ಸುಜುಕಿ ಬಲೆನೊ ಕ್ರಾಸ್ ಸ್ಪೋರ್ಟಿಯರ್ ವೈಬ್‌ಗಾಗಿ ಸಂಪೂರ್ಣ ಬ್ಲಾಕ್ ಇಂಟೆರೀರ್ ಥೀಮ್ ಅನ್ನು ಪಡೆಯಬಹುದು. ಇದಲ್ಲದೆ, ಮಾರುತಿ ಸುಜುಕಿ ಮುಂಬರುವ ಬಲೆನೊ ಕ್ರಾಸ್ ಕಾರಿನ ರಗಡ್ ಲುಕ್ ಹೆಚ್ಚಿಸಲು ಇನ್ಕ್ಲಿನೋಮೀಟರ್ ಮತ್ತು ಕಾಂಪಸ್ಸ್ ಅಳವಡಿಸಬಹುದು. ಇದು ಬಲೆನೊ ಕ್ರಾಸ್ ಖರೀದಿಸುವ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಹೇಳಬಹುದು.

ವೈಶಿಷ್ಟ್ಯಗಳು:
ಮಾರುತಿ ಸುಜುಕಿ ಬಲೆನೊ ಕ್ರಾಸ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಮುಂಬರುವ ಬಲೆನೊ ಕ್ರಾಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ದೊಡ್ಡ 9.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಕನೆಕ್ಟ್ದ್ ಕಾರ್ ಟೆಕ್ ವೈಶಿಷ್ಟ್ಯಗಳೊಂದಿಗೆ ಸ್ಟ್ಯಾಂಡರ್ಡ್ ಬಲೆನೊ ಹ್ಯಾಚ್‌ಬ್ಯಾಕ್‌ನ ಫೀಚರ್ಸ್ ಅನ್ನು ಈ ಕಾರು ಹೊಂದಿರುವ ಸಾಧ್ಯತೆಯಿದೆ. ಇದ್ದಲ್ಲದೆ, 360 ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ, ಕ್ಲೈಮೇಟ್ ಕಂಟ್ರೋಲ್, ಟರ್ನ್ ಇಂಡಿಕೇಟರ್‌ ORVMಗಳನ್ನು ಹೊಂದಿರಬಹುದು.

ಎಂಜಿನ್ ಮತ್ತು ಗೇರ್ ಬಾಕ್ಸ್:
ಮುಂಬರುವ ಬಲೆನೊ ಕ್ರಾಸ್, ಹಿಂದಿನ ಮಾದರಿ ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್‌ ರೀತಿಯೇ 1.2-ಲೀಟರ್, 4-ಸಿಲಿಂಡರ್, ನ್ಯಾಚುರಲ್- ಆಸ್ಪಿರೇಟೆಡ್, ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 88 bhp ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಹೊಸ ಬಲೆನೊ ಕ್ರಾಸ್, ಸ್ಟ್ಯಾಂಡರ್ಡ್ ಬಲೆನೊ ಹ್ಯಾಚ್‌ಬ್ಯಾಕ್‌ನಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ.

ಮುಂಬರುವ ಮಾರುತಿ ಸುಜುಕಿ ಬಲೆನೊ ಕ್ರಾಸ್, ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮತ್ತು ಮಾರುತಿ ಸುಜುಕಿ ಬ್ರೆಝಾ ಸಬ್-4m ಎಸ್‌ಯುವಿ ನಡುವಿನ ಬೆಲೆಯನ್ನು ಹೊಂದಿರಬಹದು. ಅಂದರೇ ಸುಮಾರು 7.5 ಲಕ್ಷ ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆ ಹೊಂದುವ ಸಾಧ್ಯತೆಯಿದೆ. ಈ ಹೊಸ ಮಾದರಿಯು ಇನ್ನೂ ಹೆಚ್ಚಿನ ಎಸ್‌ಯುವಿ ಖರೀದಿದಾರರನ್ನು ಆಕರ್ಷಿಸುತ್ತದೆ. ಇಷ್ಟೇ ಅಲ್ಲದೆ, ಮಾರುತಿ ಸುಜುಕಿ ತನ್ನ ವಿವಿಧ ಕಾರುಗಳ ಮಾದರಿಯಲ್ಲೇ ಗ್ರಾಹಕರಿಗೆ ಇನ್ನೂ ಹೆಚ್ಚಿನ ಆಯ್ಕೆ ನೀಡಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
The much awaited maruti suzuki baleno cross suv will be available affordable price
Story first published: Tuesday, December 27, 2022, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X