ಪೆಟ್ರೋಲ್ ಬೆಲೆ ಏರಿಕೆ ಮರೆತುಬಿಡಿ: ಇಲ್ಲಿದೆ ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಆಲ್ಟೋ ಕೆ10 ಸಿಎನ್‌ಜಿ ಕಾರು

ಜನಪ್ರಿಯ ಮತ್ತು ದೇಶದ ಅತಿ ದೊಡ್ದ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಹೊಸ ಆಲ್ಟೋ ಕೆ10 ಎಸ್-ಸಿಎನ್‌ಜಿ ಕಾರನ್ನು ಇತ್ತೀಚೆಗೆ ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಹೊಸದಾಗಿ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ ಕೆ10 ಎಸ್-ಸಿಎನ್‌ಜಿ ಮಾರುತಿ ಸುಜುಕಿ ಕಂಪನಿ ಕಾರುಗಳ ಸರಣಿಯಲ್ಲಿ 13ನೇ ಸಿಎನ್‌ಜಿ ಚಾಲಿತ ಮಾದರಿಯಾಗಿದೆ. ಆಲ್ಟೋ ಕೆ10 ಸಿಎನ್‌ಜಿ ಕಾರಿನ ಬಗ್ಗೆ ಟಾಪ್ 5 ವಿಷಯಗಳು ಇಲ್ಲಿದೆ.

ಇಲ್ಲಿದೆ ಅತಿ ಹೆಚ್ಚು ಮೈಲೇಜ್ ನೀಡುವ ಮಾರುತಿ ಆಲ್ಟೋ ಕೆ10 ಸಿಎನ್‌ಜಿ

ಬೆಲೆ ಮತ್ತು ರೂಪಾಂತರಗಳು
ಮಾರುತಿ ಆಲ್ಟೋ ಕೆ10 ಎಸ್-ಸಿಎನ್‌ಜಿ ಹ್ಯಾಚ್‌ಬ್ಯಾಕ್‌ನ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ ಭಿನ್ನವಾಗಿ, ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯು ಕೇವಲ VXi ಎಂಬ ಒಂದು ರೂಪಾಂತರದಲ್ಲಿ ಲಭ್ಯವಿದೆ. ಇದಲ್ಲದೆ, ಮಾರುತಿ ಆಲ್ಟೋ ಕೆ10 ಎಸ್-ಸಿಎನ್‌ಜಿ ಹ್ಯಾಚ್‌ಬ್ಯಾಕ್‌ನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.5.95 ಲಕ್ಷವಾಗಿದೆ. ಇದು ಪೆಟ್ರೋಲ್ ಚಾಲಿತ ಆಲ್ಟೋ ಕೆ10 ವಿಎಕ್ಸ್‌ಐ ಹ್ಯಾಚ್‌ಬ್ಯಾಕ್‌ಗಿಂತ ದುಬಾರಿಯಾಗಿದೆ.

ಎಂಜಿನ್
ಆಲ್ಟೋ ಕೆ10 ಎಸ್-ಸಿಎನ್‌ಜಿ 1.0-ಲೀಟರ್, ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸಿಎನ್‌ಜಿ ಎಂಜಿನ್ 5,300rpm ನಲ್ಲಿ 56bhp ಪವರ್ ಮತ್ತು 3,400 rpm ನಲ್ಲಿ 82.1Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನು ಹೊಂದಿದೆ. ಪೆಟ್ರೋಲ್ ಎಂಜಿನ್ 64.3 bhp ಪವರ್ ಮತ್ತು 89 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಸಿಎನ್‌ಜಿ ಮಾದರಿಯು ಪ್ರತ್ಯೇಕವಾಗಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಬರುತ್ತದೆ.

ಮೈಲೇಜ್
ಪ್ರಸ್ತುತ, ದೇಶದಲ್ಲಿ ಪೆಟ್ರೋಲ್ ಬೆಲೆಯು ದುಬಾರಿಯಾಗಿದೆ. ಸಿಎನ್‌ಜಿ ಇಂಧನವು ಹೆಚ್ಚು ಕೈಗೆಟುಕುವ ಬೆಲೆಯಲ್ಲದೇ CNG-ಚಾಲಿತ ಕಾರುಗಳು ಉತ್ತಮ ಇಂಧನ ದಕ್ಷತೆಯನ್ನು ಸಹ ನೀಡುವುದರಿಂದ CNG-ಚಾಲಿತ ಕಾರುಗಳ ಬೇಡಿಕೆಯು ದೇಶಾದ್ಯಂತ ಹೆಚ್ಚಾಗಿದೆ. ಸ್ಟ್ಯಾಂಡರ್ಡ್ ಟ್ರೋಲ್ ಚಾಲಿತ ಮಾರುತಿ ಆಲ್ಟೋ 24.9 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆಲ್ಟೋ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯು 33.85 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಫೀಚರ್ಸ್
ಈ ಎಸ್-ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮಿಡ್-ಸ್ಪೆಕ್ 'ವಿಎಕ್ಸ್‌ಐ' ಟ್ರಿಮ್ ಮಟ್ಟದಲ್ಲಿ ಮಾತ್ರ ಲಭ್ಯವಿರುವುದರಿಂದ, 2 ಸ್ಪೀಕರ್‌ಗಳೊಂದಿಗೆ ಮೂಲ ಆಡಿಯೊ ಸಿಸ್ಟಮ್ ಮತ್ತು ಎಫ್‌ಎಂ, ಆಕ್ಸ್‌ನಂತಹ ಕನೆಕ್ಟಿವಿಟಿ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. USB ಪೋರ್ಟ್, ಮತ್ತು ಬ್ಲೂಟೂತ್. ಅದರ ಜೊತೆಗೆ, ಮಾದರಿಯು ಡಿಜಿಟಲ್ ಸ್ಪೀಡೋಮೀಟರ್, ಮುಂಭಾಗದ ಪವರ್ ವಿಂಡೋಗಳು ಹೊಂದಾಣಿಕೆ ಮಾಡಬಹುದಾದ ORVM ಗಳು ರೂಫ್ ಆಂಟೆನಾ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಸುರಕ್ಷತಾ ಫೀಚರ್ಸ್
ಸುರಕ್ಷತೆಗಾಗಿ ಮಾರುತಿ ಸುಜುಕಿ ಆಲ್ಟೋ ಕೆ10 ಎಸ್-ಸಿಎನ್‌ಜಿ ಕಾರಿನಲ್ಲಿ, ಹ್ಯಾಚ್‌ಬ್ಯಾಕ್ ಎಂಜಿನ್ ಇಮೊಬಿಲೈಸರ್, ಎಬಿಎಸ್ ಜೊತೆಗೆ ಇಬಿಡಿ, ಡ್ಯುಯಲ್ ಏರ್‌ಬ್ಯಾಗ್‌ಗಳು, ಸೆಂಟ್ರಲ್ ಡೋರ್ ಲಾಕಿಂಗ್, ರಿಯರ್ ಸೀಟ್ ಬೆಲ್ಟ್‌ಗಳು, ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್ ಮತ್ತು ಹೆಚ್ಚಿನವುಗಳಂತಹ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ಮಾರುತಿ ಸುಜುಕಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್ ಅನ್ನು ಹೊಸ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಮಾರುತಿ ಸುಜುಕಿ ಆಲ್ಟೋ ಕೆ10 ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡುವುದರೊಂದಿಗೆ, ಇಂಡೋ-ಜಪಾನೀಸ್ ವಾಹನ ತಯಾರಕ ಸಂಸ್ಥೆಯು ಸಿಎನ್‌ಜಿ ವಿಭಾಗದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಮತ್ತಷ್ಟು ವಿಸ್ತರಿಸಿದೆ. ಇದಲ್ಲದೆ, ಮಾರುತಿ ಸುಜುಕಿ ಆಲ್ಟೋ ಕೆ10 ಎಸ್-ಸಿಎನ್‌ಜಿ ಹ್ಯಾಚ್‌ಬ್ಯಾಕ್ ಅದರ ಅತ್ಯಂತ ಕೈಗೆಟುಕುವ ಚಾಲನೆಯ ವೆಚ್ಚ ಮತ್ತು ಹೆಚ್ಚಿನ ಮೈಲೇಜ್ ನಿಂದ ಅನೇಕ ನಗರ ಕಾರು ಖರೀದಿದಾರರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Top things about maruti suzuki alto k10 s cng hatchback
Story first published: Tuesday, November 22, 2022, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X