ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಜಪಾನಿನ ಪ್ರಮುಖ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಮೂರು ಮಾದರಿಗಳಾದ ಜಾಝ್, ಡಬ್ಲ್ಯುಆರ್-ವಿ ಮತ್ತು ನಾಲ್ಕನೇ ತಲೆಮಾರಿನ ಸಿಟಿಯನ್ನು ಮುಂದಿನ ವರ್ಷ ಮಾರ್ಚ್ ವೇಳೆಗೆ ಭಾರತದಲ್ಲಿ ಸ್ಥಗಿತಗೊಳಿಸಲು ಯೋಜಿಸಿರುವುದಾಗಿ ಉದ್ಯಮ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಹೋಂಡಾ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಭಾರತೀಯ ಮಾರುಕಟ್ಟೆಯಲ್ಲಿ ನೆಲೆಯನ್ನು ಬಲಪಡಿಸಲು ಹೆಣಗಾಡುತ್ತಿರುವ ಹೋಂಡಾ, ಡಿಸೆಂಬರ್ 2020 ರಲ್ಲಿ ತನ್ನ ಗ್ರೇಟರ್ ನೋಯ್ಡಾ ಸ್ಥಾವರವನ್ನು ಮುಚ್ಚುವುದರೊಂದಿಗೆ ಸಿವಿಕ್ ಮತ್ತು ಸಿಆರ್-ವಿ ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು. ಇನ್ನು ಭಾರತದಲ್ಲಿ ಎಸ್‌ಯುವಿಗಳ ಪ್ರಭಾವ ಹೆಚ್ಚಾಗಿರುವುದರಿಂದ ಹೋಂಡಾ ತನ್ನ ಸೆಡಾನ್‌ಗಳ ಸ್ಥಗಿತಕ್ಕೆ ಚಿಂತಿಸುತ್ತಿದೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಪ್ರಸ್ತುತ, ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಅಮೇಜ್, 4 ನೇ ತಲೆಮಾರಿನ ಸಿಟಿ, 5 ನೇ ತಲೆಮಾರಿನ ಸಿಟಿ, ಸಿಟಿ E:HEV, WR-V ಮತ್ತು ಜಾಝ್ ಎಂಬ ಆರು ಕಾರು ಮಾದರಿಗಳನ್ನು ನೀಡುತ್ತಿದೆ. ಇವುಗಳಲ್ಲಿ ಅಮೇಜ್, ಐದನೇ ತಲೆಮಾರಿನ ಸಿಟಿ ಮತ್ತು ಸಿಟಿ ಇ:ಹೆಚ್ಇವಿಗಳನ್ನು ಹಾಗೇ ಉಳಿಸಿಕೊಂಡು, ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗಿಸಲು ಹೋಂಡಾ ಯೋಜಿಸಿದೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ವರದಿಗಳ ಪ್ರಕಾರ, ಹೋಂಡಾ ತನ್ನ ಮೂರು ಮಾದರಿಗಳಾದ ಜಾಝ್, ಡಬ್ಲ್ಯುಆರ್-ವಿ ಮತ್ತು ನಾಲ್ಕನೇ ತಲೆಮಾರಿನ ಸಿಟಿಯನ್ನು ಹಿಂತೆಗೆದುಕೊಂಡ ನಂತರ ಕೆಲವು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಪ್ರಸ್ತುತ, ಭಾರತೀಯ ಮಾರುಕಟ್ಟೆಯಲ್ಲಿ SUV ಗಳಿಗೆ ಹೆಚ್ಚಿನ ಬೇಡಿಕೆಯಿರುವ ಕಾರಣ ಈ ಬೇಡಿಕೆಯನ್ನು ಆಕರ್ಷಿಸುವ ರೀತಿಯಲ್ಲಿ ಕಂಪನಿಯ ಹೊಸ ಕಾರುಗಳು ಬಿಡುಗಡೆಯಾಗಲಿವೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಹೌದು, ಕಂಪನಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಹಾಗಾಗಿಯೇ ಈ ಮೂರು ಮಾದರಿಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿರುವ ಹೋಂಡಾ ಕಾರ್ಸ್ ಇಂಡಿಯಾ "ಕಂಪನಿಯು ಮಾರುಕಟ್ಟೆಯ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಮುಂದಿನ ವರ್ಷ ದೇಶದಲ್ಲಿ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಯೋಜಿಸುತ್ತಿರುವುದಾಗಿ ವಾಹನ ತಯಾರಕರು ಈ ವರ್ಷದ ಆರಂಭದಲ್ಲೇ ಘೋಷಿಸಿದ್ದರು. ಪ್ರಸ್ತುತ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿರುವುದಾಗಿ ಕಂಪನಿ ಹೇಳಿದೆ. ಆದ್ದರಿಂದ, ಸಾಧ್ಯವಾದಷ್ಟು ಬೇಗ ಭಾರತದಲ್ಲಿ ಹೊಸ ಕಾರುಗಳನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಈ ಬಗ್ಗೆ ಅಧಿಕೃತ ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿರುವುದಾಗಿ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ಮೂರು ನಿರ್ದಿಷ್ಟ ಕಾರು ಮಾದರಿಗಳನ್ನು ಹೋಂಡಾ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಡಿಸೆಂಬರ್ 2020 ರಲ್ಲಿ, ಹೋಂಡಾ ತನ್ನ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಸೌಲಭ್ಯದಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಮುಚ್ಚುವುದಾಗಿ ಘೋಷಿಸಿತ್ತು, ಹೀಗಾಗಿ ರಾಜಸ್ಥಾನದ ತಪುಕರದಲ್ಲಿರುವ ತನ್ನ ಎರಡನೇ ಸ್ಥಾವರದಲ್ಲಿ ತನ್ನ ಉತ್ಪಾದನಾ ಚಟುವಟಿಕೆಗಳನ್ನು ಏಕೀಕರಿಸಿತು. ವ್ಯಾಪಾರ ದಕ್ಷತೆಯನ್ನು ಸುಧಾರಿಸುವ ಗುರಿಯೊಂದಿಗೆ ತನ್ನ ಉತ್ಪಾದನಾ ಕಾರ್ಯಾಚರಣೆಗಳನ್ನು ಮರುಹೊಂದಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಜಪಾನಿನ ಕಾರು ತಯಾರಕರು ತಿಳಿಸಿದ್ದಾರೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಸೋನಿ ಜೊತೆಗೂಡಿ ಇವಿ ವಾಹನ ತಯಾರಿ

ಇತ್ತೀಚೆಗೆ, ಹೋಂಡಾ ಮತ್ತು ಸೋನಿ ಜಂಟಿಯಾಗಿ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಕೆಲವು ವರದಿಯಾಗಿತ್ತು. ಜಾಗತಿಕ ಮಾರುಕಟ್ಟೆಗೆ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸಲು ಎರಡು ಕಂಪನಿಗಳು ಕೈಜೋಡಿಸುತ್ತಿವೆ. ಸೋನಿ ಈಗಾಗಲೇ ವಿಷನ್ 01 (ಸೆಡಾನ್) ಮತ್ತು ವಿಷನ್ 02 (ಎಸ್‌ಯುವಿ) ಎಲೆಕ್ಟ್ರಿಕ್ ಕಾರುಗಳಲ್ಲಿ ಕೆಲಸ ಮಾಡುತ್ತಿದೆ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಈ ಹಂತದಲ್ಲಿ ಎರಡು ಕಂಪನಿಗಳು ಇತ್ತೀಚೆಗೆ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಲು ಕೈಜೋಡಿಸಿವೆ. ವರದಿಗಳ ಪ್ರಕಾರ, ಮೈತ್ರಿಯ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗುತ್ತಿರುವ ಈ ಎಲೆಕ್ಟ್ರಿಕ್ ಕಾರು 2025 ರ ವೇಳೆಗೆ ಬಿಡುಗಡೆಯಾಗಲಿದೆ. ವಾಹನ ಅಭಿವೃದ್ಧಿ ಮತ್ತು ತಂತ್ರಜ್ಞಾನ ಹಂಚಿಕೆಯಂತಹ ಪ್ರಮುಖ ಚಟುವಟಿಕೆಗಳಿಗೆ ಎರಡು ಕಂಪನಿಗಳು ಸೇರಿಕೊಂಡಿವೆ. ಎಲೆಕ್ಟ್ರಾನಿಕ್ಸ್ ದೈತ್ಯ ಸೋನಿ ಮತ್ತು ಆಟೋಮೋಟಿವ್ ದೈತ್ಯ ಹೋಂಡಾ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಕೈಜೋಡಿಸಿರುವುದು ಎಲ್ಲಾ ಆಟೋ ಪ್ರೇಮಿಗಳನ್ನು ಆಕರ್ಷಿಸುವುದು ಖಚಿತ.

ಹೋಂಡಾದಿಂದ ಕಣ್ಮರೆಯಾಗಲಿವೆ 4ನೇ ತಲೆಮಾರಿನ ಸಿಟಿ ಸೆಡಾನ್ ಸೇರಿದಂತೆ ಮತ್ತೆರಡು ಕಾರುಗಳು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಒಂದು ವೇಳೆ ಹೋಂಡಾ ಕಾರ್ಸ್ ಇಂಡಿಯಾ ತನ್ನ ಜಾಝ್, ಡಬ್ಲ್ಯುಆರ್-ವಿ ಮತ್ತು ನಾಲ್ಕನೇ ತಲೆಮಾರಿನ ಸಿಟಿ ಕಾರುಗಳನ್ನು ಸ್ಥಗಿತಗೊಳಿಸಿದ ನಂತರ ಅದರ ಸಾಲಿನಲ್ಲಿ ಉಳಿಯಲಿರುವ ಸಿಟಿ ಹೈಬ್ರಿಡ್, ಐದನೇ ತಲೆಮಾರಿನ ಸಿಟಿ ಮತ್ತು ಪ್ರವೇಶ ಮಟ್ಟದ ಸೆಡಾನ್ ಅಮೇಜ್‌ಗಳು ಮಾತ್ರ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಲಿವೆ.

Most Read Articles

Kannada
Read more on ಹೋಂಡಾ honda
English summary
Two more cars including the 4th gen city sedan are going to disappear from Honda
Story first published: Friday, July 29, 2022, 19:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X