ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಭಾರತ ಸರ್ಕಾರವು ಭಾರತದಲ್ಲಿ ಪರ್ಯಾಯ ಇಂಧನ ಆಯ್ಕೆಗಳನ್ನು ಉತ್ತೇಜಿಸುವುದರೊಂದಿಗೆ, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಹೈಡ್ರೋಜನ್-ಚಾಲಿತ ಟೊಯೊಟಾ ಮಿರಾಯ್ ಕಾರಿನಲ್ಲಿ ಸಂಚರಿಸಲು ಪ್ರಾರಂಭಿಸಿದ್ದಾರೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಅಧಿಕಾರಿಗಳು ಇತ್ತೀಚೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವರು ಅಧಿಕಾರಿಗಳನ್ನು ಭೇಟಿ ಮಾಡುವುದರ ಹೊರತಾಗಿ ಕಂಪನಿಯ ಇತ್ತೀಚಿನ ಬಿಡುಗಡೆಯಾದ ಹೊಸ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಅನ್ನು ಪರಿಶೀಲಿಸಿದ್ದಾರೆ ಎಂದು ಕಂಪನಿಯು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಕಂಪನಿಯು ಟ್ವೀಟ್‌ನಲ್ಲಿ, ಇದು ನಮಗೆ ಹೆಮ್ಮೆಯ ಕ್ಷಣವಾಗಿದೆ, ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ತಮ್ಮ ಬಿಡುವಿಲ್ಲದ ಸಮಯದ ನಡುವೆ ಇದಕ್ಕೆ ಸಮಯ ಮೀಸಲಿಟ್ಟು ಹೋಂಡಾ ಸಿಟಿ ಹೈಬ್ರಿಡ್ ಅನ್ನು ಪರಿಶೀಲಿಸಿದರು ಎಂದು ತಿಳಿಸಿದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೋಂಡಾ ಕಂಪನಿಯು ಸಾಮಾಜಿಕ ಮಾಧ್ಯಮಗಳಲ್ಲಿ ನಿತಿನ್ ಗಡ್ಕರಿ ಹೊಚ್ಚ ಹೊಸ ಹೋಂಡಾ ಸಿಟಿ ಇ:ಎಚ್‌ಇವಿಯನ್ನು ಪರಿಶೀಲಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದೆ. ಹೋಂಡಾ ಕಾರ್ಸ್ ಇಂಡಿಯಾದ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ವಿಪಿ, ಕುನಾಲ್ ಬೆಹ್ಲ್ ತಮ್ಮ ಸಹೋದ್ಯೋಗಿಗಳೊಂದಿಗೆ ಉಪಸ್ಥಿತರಿದ್ದರು.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಚಿತ್ರದಲ್ಲಿ ಬಿಳಿ ಬಣ್ಣದ ಹೋಂಡಾ ಸಿಟಿ ಇ:ಹೆಚ್‌ಇವಿ ಅನ್ನು ನಾವು ನೋಡಬಹುದು. ಹೊಸ ಹೋಂಡಾ ಸಿಟಿಯು ಪೆಟ್ರೋಲ್ ವೇರಿಯಂಟ್‌ನಂತೆಯೇ ಕಾಣುತ್ತಿದೆಯಾದರೂ, ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲಿಸಿದರೆ ಸ್ಪೋರ್ಟಿಯರ್ ಆಗಿ ಕಾಣುವ ಕೆಲವು ಸೂಕ್ಷ್ಮ ಬದಲಾವಣೆಗಳಿವೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೋಂಡಾ ಕಾರ್ಸ್ ಇಂಡಿಯಾ ತನ್ನ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಸೆಡಾನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.19.50 ಲಕ್ಷವಾಗಿದೆ. ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಸೆಡಾನ್ ತನ್ನ ಹೋಂಡಾ ಸೆನ್ಸಿಂಗ್ ತಂತ್ರಜ್ಞಾನ ಅಥವಾ ADAS ವೈಶಿಷ್ಟ್ಯಗಳನ್ನು ಭಾರತಕ್ಕೆ ತಂದ ಮೊದಲ ಹೋಂಡಾ ಕಾರು.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಈ ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ ಸೆಡಾನ್ ಅನ್ನು ಭಾರತದಲ್ಲಿ ರಾಜಸ್ಥಾನದಲ್ಲಿರುವ ಹೋಂಡಾದ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು. ಹೈಬ್ರಿಡ್ ಮಾದರಿಯು ಸಿಟಿ ಸೆಡಾನ್‌ನ ಟಾಪ್-ಸ್ಪೆಕ್ 'ZX' ಟ್ರಿಮ್ ಅನ್ನು ಆಧರಿಸಿದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಈ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ 1.5 ಲೀಟರ್, ನಾಲ್ಕು-ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿದೆ. ಇವುಗಳು 124 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಸಿಟಿ ಹೈಬ್ರಿಡ್ ತನ್ನ ಪೆಟ್ರೋಲ್ ಪ್ರತಿರೂಪಕ್ಕಿಂತ 40 ಪ್ರತಿಶತ ಹೆಚ್ಚು ಇಂಧನ-ಸಮರ್ಥವಾಗಿದೆ ಮತ್ತು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ. ಹೈಬ್ರಿಡ್ ಸಿಟಿಯು ತನ್ನ ಪೆಟ್ರೋಲ್ ಚಾಲಿತ ಆವೃತ್ತಿಗಿಂತ 110 ಕೆಜಿ ಭಾರವಾಗಿದೆ. ಈ ಕಾರಿನಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ ಅನ್ನು ಹೊಂದಿದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ ಸೆಡಾನ್ ಇವಿ, ಹೈಬ್ರಿಡ್ ಮತ್ತು ಪೆಟ್ರೋಲ್ ಎಂಬ ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ. ಈ ಡ್ರೈವಿಂಗ್ ಮೋಡ್‌ಗಳನ್ನು ಸಿಟಿ ಇಹೆಚ್‌ಇವಿಯ ಆನ್‌ಬೋರ್ಡ್ ಎಲೆಕ್ಟ್ರಾನಿಕ್ಸ್ ಸೂಟ್‌ನಿಂದ ಆಟೋಮ್ಯಾಟಿಕ್ ಆಗಿ ನಿಯಂತ್ರಿಸಲಾಗುತ್ತದೆ. ಈ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಸೆಡಾನ್‌ನ ಸುರಕ್ಷತೆಯನ್ನು ಹೆಚ್ಚಿಸುವುದರ ಮೇಲೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಈ ಕಾರಿನ ಸುರಕ್ಷತಾ ಫೀಚರ್ಸ್ ಗಳಲ್ಲಿ ಕಾಲಿಷನ್ ಮೆಟಿಗೇಷನ್ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ರೋಡ್ ಡಿಪರ್ಚರ್ ಮೆಟಿಗೇಷನ್ ಒಳಗೊಂಡಿವೆ. ಹೋಂಡಾ ಸೆನ್ಸಿಂಗ್ ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹೈ ಬೀಮ್ ಅಸಿಸ್ಟ್ ಹೊಂದಿದೆ.ಇದರೊಂದಿಗೆ ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಅಗೈಲ್ ಹ್ಯಾಂಡ್ಲಿಂಗ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಸೇರಿವೆ. ಸಿಟಿ ಇಹೆಚ್‌ಇವಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಈ ಹೋಂಡಾ ಹೈಬ್ರಿಡ್ ಕಾರಿನ ಒಳಭಾಗದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ, ಇದು Apple CarPlay ಮತ್ತು Android Auto ಅನ್ನು ಕನೆಕ್ಟಿವಿಟಿಯನ್ನು ಹೊಂದಿದೆ. ಇನ್ನು ಸರೌಂಡ್ ಸೌಂಡ್ ಸ್ಪೀಕರ್ ಸಿಸ್ಟಂ ಅನ್ನು ಸಹ ಹೊಂದಿದೆ. ಇತರ ವೈಶಿಷ್ಟ್ಯಗಳು ಸ್ಮಾರ್ಟ್ ಕೀ ಸಿಸ್ಟಮ್ ಅನ್ನು ಹೊಂದಿದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಈ ಹೊಸ ಹೋಂಡಾ ಸಿಟಿ ಇ:ಹೆಚ್‌ಇವಿ ಹೈಬ್ರಿಡ್ ಕಾರು ಮೊದಲ ನೋಟದಲ್ಲಿ, ಸ್ಟ್ಯಾಂಡರ್ಡ್ ಮಾದರಿಯ ವಿನ್ಯಾಸ ಮತ್ತು ಶೈಲಿಯನ್ನು ಹೈಬ್ರಿಡ್ ನಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ ಹತ್ತಿರದ ನೋಡುವಾಗ ಇ:ಹೆಚ್‌ಇವಿ ಸಣ್ಣ ಬದಲಾವಣೆಗಳನ್ನು ಬಹಿರಂಗಪಡಿಸುತ್ತದೆ .ಗ್ರಿಲ್‌ನ ಮೇಲ್ಭಾಗದಲ್ಲಿ ದಪ್ಪವಾದ ಕ್ರೋಮ್ ಸ್ಟ್ರಿಪ್ ನೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸ್ಟ್ಯಾಂಡರ್ಡ್ ಮಾದರಿಯಿಂದ ಉಳಿಸಿಕೊಳ್ಳಲಾಗಿದೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಇದು ಗ್ರಿಲ್ ಕೂಡ ಒಂದೇ ಎಂದು ನೀವು ನಂಬುವಂತೆ ಮಾಡುತ್ತದೆ. ಆದರೆ ಗ್ರಿಲ್ ಈಗ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಕಂಡುಬರುವ ಸಮತಲ ಸ್ಲ್ಯಾಟ್‌ಗಳಿಗೆ ವಿರುದ್ಧವಾಗಿ ಹನಿಕಾಂಬ್ ಮಾದರಿಯನ್ನು ಹೊಂದಿದೆ. ಫಾಗ್ ಲ್ಯಾಂಪ್ ಹೌಸಿಂಗ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಇನ್ನು ಎರಡು-ಟೋನ್ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು, ಪರಿಷ್ಕೃತ ಗ್ರಿಲ್ ಮತ್ತು ಬೂಟ್ ಲಿಪ್ ಸ್ಪಾಯ್ಲರ್ ಅನ್ನು ಒಳಗೊಂಡಿವೆ.

ಅಧಿಕ ಮೈಲೇಜ್ ನೀಡುವ ಹೊಸ ಹೋಂಡಾ ಸಿಟಿ ಹೈಬ್ರಿಡ್‌ ಕಾರನ್ನು ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸ ಸಿಟಿ ಹೈಬ್ರಿಡ್ ಸೆಡಾನ್ ಕ್ರೋಮ್‌ನೊಂದಿಗೆ ಡೋರ್ ವೈಸರ್, ಸ್ಟೆಪ್ ಇಲ್ಯುಮಿನೇಷನ್ ಲೈಟ್‌ಗಳು, ವಿಂಡೋ ಕ್ರೋಮ್ ಮೋಲ್ಡಿಂಗ್, ರೂಫ್ ಎಂಡ್ ವೈಸರ್ ಮತ್ತು ಸ್ಮಾರ್ಟ್‌ಫೋನ್ ಹೋಲ್ಡರ್‌ನೊಂದಿಗೆ ವೈರ್‌ಲೆಸ್ ಚಾರ್ಜರ್‌ನಂತಹ ಕಸ್ಟಮೈಸ್ ಆಯ್ಕೆಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಕಂಪನಿಯು ಮೂರು ವಿಭಾಗಗಳಲ್ಲಿ ಅಕ್ಸೆಸರೀಸ್ ಗಳನ್ನು ನೀಡುತ್ತದೆ. ಇದು ಬೆಸಿಕ್ ಕಿಟ್, ಕ್ರೋಮ್ ಪ್ಯಾಕೇಜ್ ಮತ್ತು ಯುಟಿಲಿಟಿ ಪ್ಯಾಕೇಜ್ ಆಗಿದೆ.

Article Published On: Wednesday, May 11, 2022, 19:41 [IST]
English summary
Union minister nitin gadkari checked out new honda city ehev hybrid details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+