ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ಹಲವು ಹೊಸ ಕಾರು ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಮಾದರಿಗಳು ರಸ್ತೆಗಿಳಿಯಲು ಸಜ್ಜಾಗಿವೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಹೊಸ ಕಾರು ಮಾದರಿಗಳು ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಮಾದರಿಗಳು ಬಿಡುಗಡೆಗಾಗಿ ಸಿದ್ದಗೊಂಡಿವೆ. ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಲ್ಲಿ ಸಾಮಾನ್ಯ ಕಾರುಗಳ ಜೊತೆಗೆ ಹೈಬ್ರಿಡ್ ಮಾದರಿಗಳು ಸಹ ಮಾರುಕಟ್ಟೆ ಪ್ರವೇಶಿಸುತ್ತಿವೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಆಡಿ ಎ8 ಎಲ್ ಫೇಸ್‌ಲಿಫ್ಟ್

ಜುಲೈ 12ರಂದು ಆಡಿ ಹೊಸ ಐಷಾರಾಮಿ ಸೆಡಾನ್ ಮಾದರಿಯಾದ ಎ8 ಎಲ್ ಫೇಸ್‌ಲಿಫ್ಟ್ ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಮಾದರಿಯು ಅತ್ಯುತ್ತಮವಾದ ಸ್ಟೈಲಿಂಗ್ ಮತ್ತು ಹಲವಾರು ವೈಶಿಷ್ಟ್ಯಗಳೊಂದಿಗೆ ಬರಲಿದ್ದು, ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಹೊಸ ಮಾದರಿಯಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ಡಿಜಿಟಲ್ ಮೆಟ್ರಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಪರಿಷ್ಕೃತ ಕ್ರೋಮ್ ಸ್ಟ್ರಿಪ್‌ನೊಂದಿಗೆ ಫಾಗ್ ಲ್ಯಾಂಪ್ ಡಿಜಿಟಲ್ ಒಎಲ್ಇಡಿ ಬ್ರೇಕ್ ಲ್ಯಾಂಪ್ಸ್ ಮತ್ತು ಹೊಸ ಬಣ್ಣದ ಆಯ್ಕೆಗಳು, ಹೆಚ್ಚುವರಿಯಾಗಿ 10.1-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಹಿಂದಿನ ಸೀಟಿನ ಪ್ರಯಾಣಿಕರಿಗೆ ನವೀಕರಿಸಿದ ಎಂಐಬಿ3 ಸಾಫ್ಟ್‌ವೇರ್ ಸೌಲಭ್ಯವನ್ನು ಒದಗಿಸಲಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

2022ರ ಹ್ಯುಂಡೈ ಟ್ಯುಸಾನ್

ಹ್ಯುಂಡೈ ಹೊಸ ಟ್ಯುಸಾನ್ ಎಸ್‍ಯುವಿಯು ಜುಲೈ 13 ರಂದು ಬಿಡುಗಡೆಯಾಗಲಿದ್ದು, ಹೊಸ ಎಸ್‍ಯುವಿಯ ಖರೀದಿಗಾಗಿ ಈಗಾಗಲೇ ಅಧಿಕೃತ ಬುಕಿಂಗ್ ಕೂಡಾ ಆರಂಭವಾಗಿದೆ. ಈ ಹೊಸ ಟ್ಯೂಸಾನ್ ಎಸ್‍ಯುವಿಯು ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದ್ದು, ಗಮನಾರ್ಹ ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಪಡೆದುಕೊಳ್ಳಲಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಈ ಹೊಸ ಟ್ಯೂಸಾನ್ ಎಸ್‍ಯುವಿಯು ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 25 ಲಕ್ಷದಿಂದ ರೂ. 35 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದ್ದು, ಈ ಎಸ್‍ಯುವಿಯನ್ನು ಕಂಪನಿಯು ಸಿಕೆಡಿ (ಸಂಪೂರ್ಣವಾಗಿ ನಾಕ್ಡ್ ಡೌನ್) ಯುನಿಟ್ ಆಗಿ ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಸಿಟ್ರನ್ ಸಿ3

ಜುಲೈ 20 ರಂದು ಸಿಟ್ರನ್ ಹೊಸ ಸಿ3 ಕಾರು ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರು ಲೈವ್ ಮತ್ತು ಫೀಲ್ ವೆರಿಯೆಂಟ್‌ಗಳೊಂದಿಗೆ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ. ಹೊಸ ಕಾರಿನಲ್ಲಿ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದ್ದು, ಹೊಸ ಕಾರು ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಸಬ್ ಫೋರ್ ಮೀಟರ್ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಂಡಿರುವ ಹೊಸ ಕಾರು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗುವ ನೀರಿಕ್ಷೆಯಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಮಹೀಂದ್ರಾ ಸ್ಕಾರ್ಪಿಯೋ-ಎನ್ ಆಟೋಮ್ಯಾಟಿಕ್

ಸ್ಕಾರ್ಪಿಯೋ-ಎನ್ ಹೊಸ ಮಾದರಿಯನ್ನು ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಸದ್ಯ ಹೊಸ ಕಾರಿನ ಮ್ಯಾನುವಲ್ ಮಾದರಿಗಳ ಬೆಲೆ ಮಾತ್ರ ಘೋಷಣೆ ಮಾಡಿದ್ದು, ಕಂಪನಿಯು ಜುಲೈ 21ರಂದು ಆಟೋಮ್ಯಾಟಿಕ್ ಆವೃತ್ತಿಯ ಬೆಲೆ ಮಾಹಿತಿ ಹಂಚಿಕೊಳ್ಳಲಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಹೊಸ ಮಾದರಿಯು 4X4 ಸೌಲಭ್ಯದೊಂದಿಗೆ ಸ್ಕಾರ್ಪಿಯೋ-ಎನ್ 4 ಎಕ್ಸ್‌ಪ್ಲೋರರ್ ಹೆಸರಿನಲ್ಲಿ ಮಾರಾಟಗೊಳ್ಳಲಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ. 21 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದುದಾಗಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ನಿಸ್ಸಾನ್ ಮಾಗ್ನೈಟ್ ರೆಡ್ ಎಡಿಷನ್

ನಿಸ್ಸಾನ್ ಮ್ಯಾಗ್ನೈಟ್ ರೆಡ್ ಎಡಿಷನ್ ಆಕರ್ಷಕ ನೋಟದೊಂದಿಗೆ ವಿಭಿನ್ನ ಅವತಾರವನ್ನು ಹೊಂದಿರಲಿದ್ದು, ವಿಶೇಷ ಮಾದರಿಯು ಇದೇ ತಿಂಗಳು 18ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದಕ್ಕಾಗಿ ಕಂಪನಿಯು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬುಕಿಂಗ್ ಆರಂಭಿಸಿದ್ದು, ವಿಶೇಷ ಮಾದರಿಯು ಎಕ್ಸ್‌ವಿ ವೆರಿಯೆಂಟ್ ಆಧರಿಸಿ ನಿರ್ಮಾಣಗೊಂಡಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಮ್ಯಾಗ್ನೈಟ್ ರೆಡ್ ಎಡಿಷನ್ ಅನ್ನು ನಿಸ್ಸಾನ್ ಕಂಪನಿಯು ಪ್ರಮುಖ ಮೂರು ರೂಪಾಂತರಗಳಲ್ಲಿ ಪರಿಚಯಿಸಲಾಗುತ್ತಿದ್ದು, ಎಕ್ಸ್‌ವಿ ಮ್ಯಾನುವಲ್, ಟರ್ಬೊ ಎಕ್ಸ್‌ವಿ ಮ್ಯಾನುವಲ್ ಮತ್ತು ಟರ್ಬೊ ಎಕ್ಸ್‌ವಿ ಸಿವಿಟಿ ರೂಪಾಂತರಗಳನ್ನು ಹೊಂದಿರಲಿದೆ. ಇದರೊಂದಿಗೆ ಹೊಸ ಕಾರು ಮಾದರಿಯ ಮುಂಭಾಗದ ಗ್ರಿಲ್, ಮುಂಭಾಗದ ಬಂಪರ್ ಕ್ಲಾಡಿಂಗ್, ವೀಲ್ಹ್ ಆರ್ಚ್‌ ಮತ್ತು ಬಾಡಿ ಸೈಡ್ ಕ್ಲಾಡಿಂಗ್‌ನಲ್ಲಿ ರೆಡ್ ಕ್ಲಾಡಿಂಗ್ ಪಡೆಯುತ್ತದೆ. ಅದೇ ಸಮಯದಲ್ಲಿ ಕಾರಿನ ಮೇಲೆ ಬೋಲ್ಡ್ ಗ್ರಾಫಿಕ್ಸ್, ಟೈಲ್ ಡೋರ್ ಗಾರ್ನಿಶ್, ಎಲ್ಇಡಿ ಸ್ಕಫ್ ಪ್ಲೇಟ್ ಮತ್ತು ರೆಡ್ ಎಡಿಷನ್ ಬ್ಯಾಡ್ಜ್ ಅನ್ನು ನೀಡಲಾಗುತ್ತದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಮಾರುತಿ ವಿಟಾರಾ ಹೈಬ್ರಿಡ್

ಟೊಯೊಟಾ ಕಂಪನಿಯು ಹೈರೈಡರ್ ಎಸ್‍ಯುವಿಯನ್ನು ಕಳೆದ ವಾರ ಜಾಗತಿಕವಾಗಿ ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಇದೀಗ ಮಾರುತಿ ಸುಜುಕಿ ಕಂಪನಿಯು ಹೈರೈಡರ್ ಮಾದರಿಯನ್ನು ಆಧರಿಸಿ ತನ್ನ ಹೊಸ ವಿಟಾರಾ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ.

ಭಾರತದಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಗಳಿವು!

ಹೊಸ ಹೈಬ್ರಿಡ್ ಕಾರು ಮಾದರಿಯು ಜುಲೈ 20 ರಂದು ಅನಾವರಣಗೊಳ್ಳುವುದು ಖಚಿತವಾಗಿದ್ದು, ಇದು ಕ್ರೆಟಾ ಮಾದರಿಗೆ ಪ್ರಬಲ ಪ್ರತಿಸ್ಪರ್ಧಿ ಎಸ್‍ಯುವಿ ಆವೃತ್ತಿಯಾಗಿದೆ. ಇದು ಟೊಯೋಟಾ ಹೈರೈಡರ್ ಅನ್ನು ಆಧರಿಸಿದ್ದು, ಪ್ರಮುಖ ಬಿಡಿಭಾಗಗಳು, ಎಂಜಿನ್ ಮತ್ತು ಇಂಟೀರಿಯರ್‌ ಸೌಲಭ್ಯಗಳನ್ನು ಹೈರೈಡರ್ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ.

Most Read Articles

Kannada
English summary
Upcoming cars launches and one suv unveil this month
Story first published: Friday, July 8, 2022, 20:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X